ಸವಾಲುಗಳ ಬದುಕು ಮತ್ತು ಹೊಸ ದಾರಿಯ ಪಯಣ


Team Udayavani, Oct 7, 2020, 6:26 AM IST

Challenge

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಜೀವನ ಬಹಳ ಅನಿಶ್ಚಿತವಾಗಿದೆ.

ಈ ಅನಿಶ್ಚಿತತೆಯೇ ಬದುಕಿನ ಸೌಂದರ್ಯ.

ಎಲ್ಲವೂ ಲೆಕ್ಕ ಹಾಕಿದಂತೆ, ಒಂದು ನಿಗದಿತ ವೇಳಾಪಟ್ಟಿಯಂತೆ, ಆಹ್ವಾನ ಪತ್ರಿಕೆಯಲ್ಲಿ ಅಚ್ಚಾದ ಕಾರ್ಯಕ್ರಮದಂತೆ ನಡೆದರೆ ಅದು ಯಾಂತ್ರಿಕವಾಗುತ್ತದೆ.

ದಿನವೂ ಉಣ್ಣುವ ಪಾಯಸ ಹೆಚ್ಚು ದಿನ ರುಚಿಸದು.

ಅನಿಶ್ಚಿತ ಎಂದರೆ ಬದಲಾಗುತ್ತಿರುವುದು ಎಂದೂ ಅರ್ಥ ಮಾಡಿಕೊಳ್ಳಲು ಸಾಧ್ಯ.

ಬದುಕು ಅನಿಶ್ಚಿತವಾಗಿರುವುದರಿಂದಲೇ ನಾವು ಬದುಕುತ್ತಿದ್ದೇವೆ.

ಅದು ಲೆಕ್ಕಾಚಾರದಂತೆ ಇಲ್ಲದಿರುವುದರಿಂದಲೇ ಜೀವನ ನಡೆಸುವುದು ಸವಾಲಾಗಿದೆ. ಹೊಸ ರಸ್ತೆಯಲ್ಲಿ ಬೈಕ್‌ ಚಲಾಯಿಸುತ್ತಿರುವಾಗ ಎಲ್ಲಿ ಹೊಂಡ ಇದೆ, ಎಲ್ಲಿ ಏರುತಗ್ಗು ಇರುವುದಿಲ್ಲ ಎಂಬುದು ಗೊತ್ತಿರುವುದಿಲ್ಲ. ಹಾಗಾಗಿ ಎಚ್ಚರಿಕೆಯಿಂದ ಇರುತ್ತೇವೆಯೇ ವಿನಾ ಆ ಮಾರ್ಗದಲ್ಲಿ ಹೋಗುವುದನ್ನೇ ಕೈಬಿಡುವುದಿಲ್ಲ.

ಅನಿಶ್ಚಿತವು ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವ ಅವಕಾಶ ಎಂದು ಪರಿಭಾವಿಸಿಕೊಂಡರೆ ಬದುಕಿಗೊಂದು ಹೊಸ ಉಲ್ಲಾಸ, ಅರ್ಥ ಬರುತ್ತದೆ. ದೂರದೃಷ್ಟಿ, ಮುಂಗಾಣ್ಕೆಯನ್ನು ಹೊಂದಿರುವವರು ಅನಿಶ್ಚಿತ ಜೀವನವನ್ನು ಅವಕಾಶವಾಗಿ ಕಾಣುತ್ತಾರೆ. ಇನ್ನುಳಿದವರಿಗೆ ಅದು ಸಮಸ್ಯೆಯಾಗಿ ಕಾಣುತ್ತದೆ. ಎಲ್ಲವೂ ಲೆಕ್ಕ ಹಾಕಿದಂತೆ ನಡೆಯುತ್ತಿದ್ದರೆ ಹೊಸತು ಆವಿರ್ಭವಿಸುವುದಿಲ್ಲ. ಜಡತ್ವವುಂಟಾಗುತ್ತದೆ. ಎಲ್ಲವೂ ನಿಂತ ನೀರಾಗುತ್ತದೆ. ಅದು ದುರ್ಗಂಧ ಬೀರುತ್ತದೆ. ಹುಳಗಳು ಹುಟ್ಟುವುದು ಕೂಡ ಆಗಲೇ. ಹರಿಯುವ ನೀರಿನಂತೆ ಬದುಕು ಬದಲಾಗುತ್ತದೆ, ಬದಲಾಗಲೇಬೇಕು. ಅದು ಲೋಕದ ನಿಯಮ.

ಲೋಕದ ನಿಯಮವೇ ಹಾಗಿದ್ದ ಮೇಲೆ ನನ್ನ ಪಾಲಿಗೆ ಎಲ್ಲವೂ ಸ್ಥಿರವಾಗಿರಬೇಕು, ಬದಲಾಗಬಾರದು ಎಂದು ಬಯಸು ವಂತಿದೆಯೇ? ಇಲ್ಲ. ಹಾಗಾಗಿ ಅನಿಶ್ಚಿತತೆ, ಬದಲಾವಣೆ ಎಂಬುದು ಲೋಕದ ತಪ್ಪಲ್ಲ. ಆದ್ದರಿಂದ ಅದನ್ನು ಪ್ರತಿಭಟಿಸುವ ಮನೋ ಭಾವವನ್ನು ನಾವು ತ್ಯಜಿಸಬೇಕು. ಧಿಕ್ಕರಿಸುವ ಮನೋವೃತ್ತಿಯಿಂದ ನಾವು ಇದ್ದಲ್ಲೇ ಇರುತ್ತೇವೆ, ಹೊಸತನ್ನು ಸ್ವೀಕರಿಸದಿರುವ ಮನೋಭಾವ ಹುಟ್ಟಿಕೊಳ್ಳುತ್ತದೆ. ಅದು ಅಪಾಯಕಾರಿ.

ಬದಲಾವಣೆಗಳನ್ನು ಸರಿಯಾಗಿ ಗ್ರಹಿಸಿ ಎದುರಿಸಲು ಸಾಧ್ಯವಾಗದಿರುವುದು ನಮ್ಮ ಅಸಾಮರ್ಥ್ಯ. ಬದಲಾಗುತ್ತಿರುವ ಬದುಕನ್ನು ನಮ್ಮ ಗರಿಷ್ಠ ಶಕ್ತಿ, ಅತ್ಯುತ್ತಮ ಸಾಮರ್ಥ್ಯಗಳನ್ನು ವಿನಿಯೋಗಿಸಿ ಎದುರಿಸೋಣ.
ಬದಲಾವಣೆಗಳಿಗೆ ತಕ್ಕುದಾಗಿ ನಾವೂ ಬದಲಾಗೋಣ, ಒಗ್ಗಿಕೊಳ್ಳೋಣ, ಹೊಸ ಹೊಸ ಸಾಧ್ಯತೆಗಳನ್ನು ಹುಡುಕೋಣ. ಇನ್ನೊಬ್ಬರಷ್ಟು ಚೆನ್ನಾಗಿ ನಮಗೆ ಸವಾಲನ್ನು ನಿಭಾಯಿಸಲು ಸಾಧ್ಯವಾಗದು; ಆದರೆ ನಮ್ಮ ಗರಿಷ್ಠ ಮಟ್ಟವನ್ನು ಮುಟ್ಟೋಣ.

ನಾವು ಈ ಭೂಮಿಗೆ ಬರುವಾಗ ಇನಿತೂ ಬಂಡವಾಳವನ್ನು ಹೊತ್ತು ತರಲಿಲ್ಲ. ಇಲ್ಲಿಂದ ತೆರಳುವಾಗ ಹೂಡಿಕೆಯನ್ನು ಒಯ್ಯುವುದಕ್ಕಿಲ್ಲ. ಹಾಗಾಗಿ ಇಲ್ಲಿ ಸಿಕ್ಕಿದ್ದೆಲ್ಲವೂ ಲಾಭವೇ. ಆದಿ-ಅಂತ್ಯಗಳ ನಡುವೆ ಆಗುವುದೆಲ್ಲವೂ ಲಾಭವೇ. ಬದುಕು ಇಡಿಯಾದ ಒಂದು ಅನುಭವ. ಅದನ್ನು ನಾವು ಹೇಗೆ ಅನುಭವಿಸುತ್ತೇವೆ ಎಂಬುದು ಬಹಳ ಪ್ರಾಮುಖ್ಯವಾದುದು.

ಬದುಕಿನ ಬದಲಾವಣೆಗಳನ್ನು, ಚಲನೆಯನ್ನು, ಗತಿಯನ್ನು ನಿರ್ಧರಿಸುವುದು ನಮ್ಮ ಕೈಯಲ್ಲಿಲ್ಲ. ಆದರೆ ಅದನ್ನು ಹೇಗೆ ಅನುಭವಿಸಬೇಕು ಎಂಬುದು ನೂರಕ್ಕೆ ನೂರು ನಮ್ಮ ಕೈಯಲ್ಲಿದೆ. ಬದಲಾವಣೆಗಳಿಗೆ ಒಡ್ಡಿಕೊಳ್ಳುತ್ತ, ಅವುಗಳನ್ನು ಹೊಸ ಸಾಧ್ಯತೆಗಳಾಗಿ ಪರಿಗಣಿಸಿ ಜೀವಿಸಲು ನಮ್ಮನ್ನು ನಾವು ಸಿದ್ಧಗೊಳಿಸಿಕೊಳ್ಳಬೇಕು. ಆಗ ನಾವೀನ್ಯಗಳು ಆವಿಷ್ಕಾರಗೊಳ್ಳಲು ಸಾಧ್ಯವಾಗುತ್ತದೆ. ನಾವೂ ನಮ್ಮ ಗರಿಷ್ಠ ಶಕ್ತಿ ಸಾಮರ್ಥ್ಯಗಳನ್ನು ಬಂಡವಾಳವಾಗಿ ಹೂಡಿ ಮುಂದಡಿಯಿಡೋಣ.

(ಸಂಗ್ರಹ)

ಟಾಪ್ ನ್ಯೂಸ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

kiran raj’s Megha movie

‌Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್‌ ರಾಜ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.