ಜೀವಯಾನ : ಮೂರು ಮೂಲಾಧಾರಗಳು
Team Udayavani, Aug 24, 2020, 11:45 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಅಪ್ಪ ಮತ್ತು ಮಗ ಪೇಟೆಯಲ್ಲಿ ನಡೆಯುತ್ತಿದ್ದರು.
ಸ್ವಲ್ಪ ದೂರ ಹೋಗುವಷ್ಟರಲ್ಲಿ ನಾಲ್ವರು ಪೊಲೀಸರು ವ್ಯಕ್ತಿಯೊಬ್ಬನನ್ನು ನಡೆಸಿಕೊಂಡು ಹೋಗುತ್ತಿದ್ದುದು ಕಾಣಿಸಿತು.
‘ಅದ್ಯಾರಪ್ಪಾ’ ಎಂದು ಪ್ರಶ್ನಿಸಿದ ಮಗ. ‘ಅವನೊಬ್ಬ ಅಪರಾಧಿ, ಸೈನಿಕರು ಅವನನ್ನು ಸೆರೆಮನೆಗೆ ಒಯ್ಯುತ್ತಿದ್ದಾರೆ’ ಎಂದು ಅಪ್ಪ ಉತ್ತರಿಸಿದ.
ಇನ್ನೊಂದಷ್ಟು ದೂರ ಹೋಗುವಷ್ಟರಲ್ಲಿ ಮೆರವಣಿಗೆಯೊಂದು ಎದುರಾಯಿತು. ಅಲ್ಲೂ ಹತ್ತಾರು ಪೊಲೀಸರ ನಡುವೆ ತೆರೆದ ವಾಹನದಲ್ಲಿ ವ್ಯಕ್ತಿಯೊಬ್ಬರಿದ್ದರು.
‘ಅವನು ಇನ್ನಷ್ಟು ದೊಡ್ಡ ಅಪರಾಧಿ ಇರಬೇಕಲ್ಲವೇ’ ಎಂದು ಮಗ ಕೇಳಿದ. ಅಪ್ಪ ಅವನ ಬಾಯಿಗೆ ಕೈಯಡ್ಡ ಹಿಡಿದು, ‘ಸುಮ್ಮನಿರು ಮಗನೇ, ಅವರು ಈ ಊರಿನ ಪ್ರಮುಖರು. ಅವರಿಗೆ ಪೊಲೀಸರು ರಕ್ಷಣೆ ಒದಗಿಸಿ, ಗೌರವದಿಂದ ಕರೆದೊಯ್ಯುತ್ತಿದ್ದಾರೆ’ ಎಂದ.
ಅಪರಾಧಿ ಮತ್ತು ಊರಿನ ಪ್ರಮುಖ – ಇಬ್ಬರಿಗೂ ಪೊಲೀಸರು ಸಾಥಿಯಾಗಿದ್ದಾರೆ, ಒಬ್ಬರಿಗೆ ಅಧಿಕಾರಿಗಳಾಗಿ, ಇನ್ನೊಬ್ಬರ ಆಜ್ಞಾನುಧಾರಿಗಳಾಗಿ.
ನಮ್ಮ ಇಂದ್ರಿಯಗಳು, ಆಸೆ- ಆಕಾಂಕ್ಷೆಗಳು, ನಡವಳಿಕೆಗಳು ನಮ್ಮ ಆಜ್ಞಾವರ್ತಿಗಳಾಗಿರಬೇಕು, ನಾವು ಅವುಗಳ ಅಡಿಯಾಳುಗಳು ಆಗಿರಬಾರದು ಎನ್ನುತ್ತಾರೆ ಸ್ವಾಮಿ ಚಿನ್ಮಯಾನಂದರು.
ಬದುಕಿನ ಪೂರ್ಣತೆಯನ್ನು ಅನುಭವಿಸುವುದರಿಂದ ನಮ್ಮೊಳಗನ್ನು ಕಂಡುಕೊಳ್ಳಲು ಸಾಧ್ಯ. ಇದು ಸಾಧ್ಯವಾಗದಿರುವಷ್ಟು ಕಾಲ ನಮ್ಮ ಅ-ಪರಿಪೂರ್ಣತೆಯನ್ನು ಮೀರುವುದಕ್ಕಾಗಿ ಬುದ್ಧಿಯು ಅಡ್ಡದಾರಿಗಳನ್ನು ಹುಡುಕುತ್ತ ಇರುತ್ತದೆ.
ಇವೇ ಆಸೆ- ಆಕಾಂಕ್ಷೆಗಳು. ನಮ್ಮ ಬ್ರಹ್ಮಸ್ವರೂಪದ ಕುರಿತಾಗಿ ನಮಗಿರುವ ಅಜ್ಞಾನದ ಅಭಿವ್ಯಕ್ತಿಗಳೇ ಆಸೆಗಳು. ಈ ಅಜ್ಞಾನದಿಂದಲೇ ನಾವು ನಮ್ಮ ದೇಹ, ಬುದ್ಧಿ ಮತ್ತು ಮನಸ್ಸಿಗೆ ಅಂಟಿಕೊಂಡಿರುತ್ತೇವೆ. ನಾವು ನೋವು ಅನುಭವಿಸುವುದು, ದುಃಖೀ ತರಾಗುವುದು ಮತ್ತು ಅಹಂಭಾವಿಗಳಾಗಿರುವುದಕ್ಕೂ ಮೂಲಕಾರಣ ಈ ಅಜ್ಞಾನ. ಸೀಮಾತೀತ, ಅನಂತ ಬ್ರಹ್ಮ ಸ್ವರೂಪದ ಅರಿವನ್ನು ಹೊಂದುವುದೇ ಅತೀ ದೊಡ್ಡ ಆಧ್ಯಾತ್ಮಿಕ ಸಾಧನೆ ಎನ್ನುತ್ತಾರೆ ಸ್ವಾಮಿ ಚಿನ್ಮಯಾನಂದರು.
ಎಲ್ಲ ಧರ್ಮಗಳ ಮೂಲ ಉದ್ದೇಶ ಆಧ್ಯಾತ್ಮಿಕ ಸಾಧನೆಗಳ ಮೂಲಕ ಈ ಸುಜ್ಞಾನವನ್ನು ಹೊಂದುವುದು. ನಮ್ಮೊಳಗಿನ ಅಜ್ಞಾನವು ನಮ್ಮ ವಿವಿಧ ಕ್ರಿಯೆಗಳಾಗಿ ಪ್ರತಿ ಫಲಿಸುತ್ತವೆ. ಆದ್ದರಿಂದ ನಮ್ಮ ಕ್ರಿಯೆಗಳನ್ನು ವಿವೇಕಪೂರ್ವಕವಾಗಿ ನಿಯಂತ್ರಿಸುವುದೇ ಅಜ್ಞಾನವನ್ನು ಮೀರುವ ಅತ್ಯಂತ ಪ್ರಾಯೋಗಿಕ ವಿಧಾನ.
ನಾವು ಪರಿಶುದ್ಧರಾಗಬೇಕು ಮತ್ತು ಆ ಮೂಲಕ ನಮ್ಮ ಕ್ರಿಯೆಗಳನ್ನು, ವರ್ತನೆಯನ್ನು, ನಡವಳಿಕೆಯನ್ನು ನಿಯಂತ್ರಿಸಬೇಕು. ಕಾರುಣ್ಯ, ಸಹಿಷ್ಣುತೆ, ನಿಸ್ವಾರ್ಥ ಬುದ್ಧಿ, ಸತ್ಯಪರತೆ – ಇವೇ ಎಲ್ಲ ಧರ್ಮಗಳು ಉಪದೇಶಿಸುವ ನೈತಿಕ ಪರಿಪೂರ್ಣತೆ. ಆಧ್ಯಾತ್ಮಿಕ ವಿಕಸನಕ್ಕೆ ಅಡಿಪಾಯವಾಗಿರುವುದು ಈ ಸದ್ಗುಣಗಳೇ.
ಹಿಂದೂ ಜೀವನಪದ್ಧತಿ ಬೆಳೆದು ನಿಂತಿರುವುದು ಸಂಯಮ, ಅಹಿಂಸೆ ಮತ್ತು ಸತ್ಯಪರತೆ ಎಂಬ ಮೂರು ಸ್ತಂಭಗಳ ಆಧಾರದಲ್ಲಿ. ನಮ್ಮ ಪೂರ್ವಜರು ಈ ಮೂರನ್ನು ತಮ್ಮ ವೈಯಕ್ತಿಕ, ಸಾಮುದಾಯಿಕ ಮತ್ತು ರಾಷ್ಟ್ರೀಯ ಬದುಕಿನ ಅಡಿಪಾಯವನ್ನಾಗಿಸಿಕೊಂಡು ಬಾಳಿದ್ದರು. ಈ ಮೂರು ಗುಣಗಳನ್ನು ಸಂಪೂರ್ಣವಾಗಿ ಅವುಗಳ ನಿಜಾರ್ಥದಲ್ಲಿ ಅಳವಡಿಸಿಕೊಂಡು ಬದುಕುವುದರಿಂದ ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ. ಬ್ರಹ್ಮಚರ್ಯ ಅಥವಾ ಸಂಯಮ, ಅಹಿಂಸೆ ಮತ್ತು ಸತ್ಯ – ಎಲ್ಲ ಸದ್ಗುಣಗಳ ಮೂಲ ಇವು; ದೈಹಿಕ, ಭಾವನಾತ್ಮಕ ಮತ್ತು ವೈಚಾರಿಕವೆಂಬ ನಮ್ಮ ವ್ಯಕ್ತಿತ್ವದ ಮೂರು ಆಯಾಮಗಳ ತಿರುಳು ಕೂಡ ಇವೇ.
ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ
ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು [email protected]ಗೆ ಕಳುಹಿಸಬಹುದು. ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.