ಸುಖ-ಸಂತೋಷಗಳು ನಮ್ಮೊಳಗೆಯೇ ಉದಯಿಸಲಿ


Team Udayavani, Nov 27, 2020, 6:11 AM IST

ಸುಖ-ಸಂತೋಷಗಳು ನಮ್ಮೊಳಗೆಯೇ ಉದಯಿಸಲಿ

ಸಾಂದರ್ಭಿಕ ಚಿತ್ರ

ಕೊಲೆ, ಯುದ್ಧ, ಕಾಪಟ್ಯ – ನಾವು ಕೆಟ್ಟದು ಎಂದು ಕರೆಯುವಂಥವು. ನಿಜಕ್ಕೂ ಹಾಗೆ ಭಾವಿಸುವುದು ನಾವು ಯಾವ ದಡದಲ್ಲಿ ನಿಂತಿದ್ದೇವೆ ಎಂಬುದನ್ನು ಆಧರಿಸಿರುತ್ತದೆ. ನದಿಯ ಈ ದಡದಲ್ಲಿ ನಿಂತು ನೋಡುವವರಿಗೆ ಕಾಣಿಸುವ ದೃಶ್ಯ ಬೇರೆ, ಆಚೆಯ ದಡದಲ್ಲಿರುವವರಿಗೆ ಕಾಣಿಸುವುದು ಬೇರೆ.

ಈ ಭೂಮಿಯ ಮೇಲೆ ಕೆಡುಕು ಎನ್ನುವುದೆಲ್ಲವೂ ನಾವು ಸುಖ -ಸಂತೋಷ ಗಳನ್ನು ಗಳಿಸುವ ಪ್ರಯತ್ನದಲ್ಲಿ ಹುಟ್ಟಿ ಕೊಂಡಂಥವು. ನಾವು ನಮಗಾಗಿ ಸುಖ – ಸಂತೋಷಗಳನ್ನು ಪಡೆಯಲು ನಡೆಸುವ ಪ್ರಯತ್ನವೇ ಅತ್ಯಂತ ದೊಡ್ಡ ಕೆಡುಕು. ಸುಖವನ್ನು, ಸಂತೋಷಕ್ಕಾಗಿ ನಮ್ಮಷ್ಟಕ್ಕೆ ನಾವು “ಇದು ಸರಿ’ ಎಂದುಕೊಂಡು ಅನೇಕ ಪ್ರಯತ್ನಗಳನ್ನು ನಡೆಸುತ್ತೇವೆ. ಅವು ಇನ್ನೊಬ್ಬರಿಗೆ ತಪ್ಪಾಗಿರಬಹುದು, ಕೆಡುಕಾ ಗಿರಬಹುದು. ಅಪರಾಧಿ ಎಂದು ನಾವು ಕರೆಯುವ ಮನುಷ್ಯನೂ ಆ ಕೃತ್ಯಗಳನ್ನು ನಡೆಸುವುದು ಸುಖ – ಸಂತೋಷಗಳ ಗಳಿಕೆಗಾಗಿಯೇ. ಆತ ಅತ್ಯಂತ ಕ್ಷಿಪ್ರವಾಗಿ ಸುಖ ಪಡೆಯಲು ಬಯಸಿದ್ದಾನೆ. ಹಾಗಾಗಿ ಅಸಂತೋಷ ದಾಯಕ ಪರಿಣಾಮಗಳು ಉಂಟಾಗಿವೆ. ನಾವು 30 ದಿನ ಕೆಲಸ ಮಾಡಿ ವೇತನ ಪಡೆಯುತ್ತೇವೆ. ಆದರೆ ನಾವು ಅಪರಾಧಿ ಎಂದು ಕರೆಯುವ ವ್ಯಕ್ತಿ ಅಷ್ಟು ಹಣವನ್ನು ಹತ್ತೇ ನಿಮಿಷಗಳಲ್ಲಿ ಗಳಿಸಲು ಉದ್ದೇಶಿಸಿರುತ್ತಾನೆ. ಸುಖಕ್ಕಾಗಿ ಅವನ ಹಂಬಲ 30 ದಿನ ಕಾಯಲು ಅಸಾಧ್ಯವೆನಿಸುವಂಥದ್ದು – ಇದನ್ನು ಅಪರಾಧ ಎಂದು ಕರೆಯುತ್ತೇವೆ.

ಸುಖ – ಸಂತೋಷಗಳನ್ನು ಪಡೆಯುವ ಹಾದಿಯಲ್ಲಿ ಒಂದಲ್ಲ ಒಂದು ಬಗೆಯಲ್ಲಿ ನಾವು ನೋವನ್ನು, ಕೆಡುಕನ್ನು ಉಂಟು ಮಾಡುತ್ತಿರುತ್ತೇವೆ. ಕ್ರಿಮಿಕೀಟಗಳು, ಹುಳ ಗಳನ್ನು ಕೇಳಿದರೆ ಮನುಷ್ಯ ಕುಲವೇ ಅತ್ಯಂತ ದೊಡ್ಡ ಅಪರಾಧಿ ಎನ್ನಬಹುದು!

ನಾವು ಒಂದು ಹುಳದ ಬಗ್ಗೆ “ಅದೊಂದು ಕ್ಷುಲ್ಲಕ ಹುಳವಲ್ಲವೇ’ ಎಂದು ಭಾವಿಸ ಬಹುದು. ಆದರೆ ಹುಳ ಹಾಗೆ ಯೋಚಿಸು ವುದಿಲ್ಲ. ಅದರ ಪಾಲಿಗೆ ಅದರ ಜೀವನವೇ ಪ್ರಮುಖ. ನಾವು ಒಂದು ಇರುವೆಯನ್ನು ಒರೆಸಿ ಹಾಕಲು ಪ್ರಯತ್ನಿ ಸಿದರೆ ಅದು ಬದುಕುಳಿಯಲು ತನ್ನಿಂದ ಎಷ್ಟು ಸಾಧ್ಯವೋ ಅಷ್ಟೂ ಪ್ರಯತ್ನಗಳನ್ನು ಮಾಡುವುದಿಲ್ಲವೇ? ಅದು ಖಂಡಿತವಾಗಿ “ನಾನೊಂದು ಕ್ಷುಲ್ಲಕ ಇರುವೆ, ತಗೋ ನನ್ನ ಜೀವವನ್ನು’ ಎಂದು ಪ್ರಾಣಾರ್ಪಣೆ ಮಾಡುವುದಿಲ್ಲ. ನಾವು ನಮ್ಮ ಬದುಕಿಗೆ ಎಷ್ಟು ಬೆಲೆಯನ್ನು ಕೊಡುತ್ತೇವೆಯೋ ಅಷ್ಟೇ ಬೆಲೆ ಈ ಭೂಮಿಯಲ್ಲಿರುವ ಪ್ರತೀ ಜೀವಿಗೂ ಇದೆ.

ನಾವು ಏನನ್ನೂ ಮಾಡದೆ ಸುಮ್ಮನೆ ಕುಳಿತಿದ್ದರೂ ಈ “ಕೆಟ್ಟದು’, “ಅಪರಾಧ’ ಆಗುತ್ತಿರುತ್ತದೆ. ನಮ್ಮ ಉಸಿರು ಒಳಗೆಳೆದು ಕೊಳ್ಳುವ – ಹೊರಬಿಡುವ ಕ್ರಿಯೆಯಿಂದ ಅದೆಷ್ಟು ಸೂಕ್ಷ್ಮಜೀವಿಗಳು ನಾಶ ವಾಗುತ್ತಿರಬಹುದು! ಅದನ್ನು ನಿಲ್ಲಿಸಿದರೆ ನಮ್ಮ ಜೀವವೇ ಹೋಗಿ ಬಿಡು ತ್ತದೆ. ಈ ಆಯಾಮ ದಿಂದ ನೋಡಿದರೆ ನಮ್ಮ ಅಸ್ತಿತ್ವವೇ “ಅಪರಾಧ’!

ಸಮಸ್ಯೆ ಏನು ಎಂದರೆ, ನಮಗೆ ಗೊತ್ತಿಲ್ಲದೆಯೇ ಇರುವ ಎಷ್ಟೋ ಸಂಗತಿ ಗಳನ್ನು ನಾವು ನಂಬಿ ಬಿಡುತ್ತೇವೆ. “ನನಗೆ ಗೊತ್ತಿರುವುದು ಮಾತ್ರ ನನಗೆ ಗೊತ್ತಿದೆ, ನನಗೆ ಗೊತ್ತಿಲ್ಲದೆ ಇರುವುದು ಗೊತ್ತಿಲ್ಲ’ ಎಂಬ ಪ್ರಾಂಜಲ ಮನಃಸ್ಥಿತಿ ಉಂಟಾದರೆ ಯಾರ ಜತೆಗೂ ಹೋರಾಟ ಇರುವುದಿಲ್ಲ. ಅದು ಬಿಟ್ಟು ಯಾವುದೋ ಒಂದನ್ನು ಸರಿ ಎಂದು ಕೊಂಡರೆ ಇನ್ನೊಬ್ಬರು ಅದು ತಪ್ಪು ಎನ್ನುತ್ತಾರೆ. ಈ ಜಗಳಕ್ಕೆ ಕೊನೆಯೇ ಇರುವುದಿಲ್ಲ.

ಯುದ್ಧ, ಜಗಳ, ಹಿಂಸೆ ತಾನಾಗಿ ಜನ್ಮ ತಾಳುವುದಿಲ್ಲ; ಯಾರಧ್ದೋ ಸುಖ – ಸಂತೋಷಕ್ಕಾಗಿ ಆರಂಭವಾಗುತ್ತವೆ. ಸುಖ – ಸಂತೋಷಗಳನ್ನು ಹೊರಗೆ ಹುಡು ಕಾಡದೆ ಅವು ನಮ್ಮೊಳಗೆಯೇ ಉದಿಸು ವಂತಾದರೆ “ಅಪರಾಧ’ ಯಾವುದೇ ರೂಪ ದಲ್ಲಿ ನಮ್ಮಿಂದ ಘಟಿಸಲಾರದು.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.