ನಾವು ಹಿಂದೆ ನಿಂತು ಅವರಿಗೆ ಅವಕಾಶ ಮಾಡಿ ಕೊಡೋಣ


Team Udayavani, Dec 5, 2020, 6:01 AM IST

ನಾವು ಹಿಂದೆ ನಿಂತು ಅವರಿಗೆ ಅವಕಾಶ ಮಾಡಿ ಕೊಡೋಣ

“ಜನರೇಶನ್‌ ಗ್ಯಾಪ್‌’ ಎಂಬುದು ನಾವು ಆಗೀಗ ಕೇಳುವ ಒಂದು ಪದಪುಂಜ. “ತಲೆಮಾರುಗಳ ಅಂತರ’ ಎಂದು ಕನ್ನಡದಲ್ಲಿ ಹೇಳಬಹುದೇನೋ. ಒಂದು ಮನೆಯನ್ನು ತೆಗೆದುಕೊಳ್ಳಿ. ಮಕ್ಕಳು ವಿದ್ಯಾಭ್ಯಾಸ ಪೂರೈಸಿ ಉದ್ಯೋಗ ಹಿಡಿದು, ಮದುವೆಯ ವಯಸ್ಸಿಗೆ ಬರುವ ಹೊತ್ತಿಗೆ ಅಪ್ಪ-ಅಮ್ಮನ ಜತೆ ಕಲಹ ಆರಂಭ.

ಇದು ಜನರೇಶನ್‌ ಗ್ಯಾಪ್‌ ಅಥವಾ ತಲೆಮಾರುಗಳ ಅಂತರ. ಇಲ್ಲಿ ಸಮಸ್ಯೆಯ ಮೂಲ ಎಂದರೆ, ಹಳೆಯ ತಲೆಮಾರು ಅಥವಾ ಅಪ್ಪ-ಅಮ್ಮ ತಮಗೆ ವಯಸ್ಸಾಗಿದೆ ಎಂಬುದನ್ನು ಅರ್ಥ ಮಾಡಿ ಕೊಳ್ಳುವುದಿಲ್ಲ; ಯುವ ಜನಾಂಗ ತಾನು ಪ್ರೌಢನಾಗಿದ್ದೇನೆ ಎಂದು ಕೊಳ್ಳುತ್ತದೆ. ಎರಡು ತಲೆಮಾರುಗಳ ನಡುವೆ ಕಿಡಿ ಹೊತ್ತಿಕೊಳ್ಳು ವುದಕ್ಕೆ ಮೂಲ ಕಾರಣ ಇದು. ಒಂದು ತಲೆಮಾರು ಇರುವ ಅವಕಾಶವನ್ನು ಇನ್ನೊಂದು ತಲೆಮಾರು ಆಕ್ರಮಿಸಿಕೊಳ್ಳಲು ಮುಂದಾ ಗುವುದರಿಂದ ಸಮಸ್ಯೆ ತಲೆದೋರುತ್ತದೆ.

ಇದು ನಮ್ಮಲ್ಲಿ ಅಂದರೆ ಬುದ್ಧಿವಂತ ಪ್ರಾಣಿಗಳಾದ ಮನುಷ್ಯರಲ್ಲಿ ಮಾತ್ರ ಇರುವ ಸಮಸ್ಯೆ ಅಲ್ಲ. ಆನೆಗಳ ಹಿಂಡಿನಲ್ಲಿ ಪುಂಡು ಸಲಗ ಪುಂಡಾಟ ನಡೆಸುವುದನ್ನು ನೀವು ಕಂಡಿರಬಹುದು. ನಾಯಕ ಸಲಗದ ಜತೆಗೆ ಅದು ಕಾದಾಡುತ್ತದೆ. ಪುಂಡು ಸಲಗಕ್ಕೆ ಹಿರಿಯಾನೆಯ ಸ್ಥಾನಮಾನ ಬೇಕು. ಹದಿಹರಯಕ್ಕೆ ಬಂದಾಗ ಉಂಟಾಗುವ ಈ ಸಮಸ್ಯೆ ನಮ್ಮ ಮನೆಗಳಲ್ಲೂ ತಪ್ಪಿದ್ದಲ್ಲ.

ವಾನಪ್ರಸ್ಥಾಶ್ರಮ ಇರುವುದು ಇದನ್ನು ತಪ್ಪಿಸಲೆಂದೇ. ಬಾಲ್ಯ, ಬ್ರಹ್ಮಚರ್ಯ, ಗೃಹ ಸ್ಥಾಶ್ರಮಗಳ ಬಳಿಕ ಪತಿ ಮತ್ತು ಪತ್ನಿ ಮಕ್ಕಳಿಗೆ ಮುಂದಿನ ಜವಾಬ್ದಾರಿ ಬಿಟ್ಟು ಕೊಟ್ಟು ವಾನಪ್ರಸ್ಥಕ್ಕೆ ನಡೆಯುತ್ತಾರೆ.

ಅದು ಹಿಂದಿನ ಕಾಲದ ಮಾತಾಯಿತು. ಇವತ್ತಿನ ಹೆತ್ತವರು ವಾನಪ್ರಸ್ಥಕ್ಕೆ ಹೋಗುವು ದಿಲ್ಲ. ಬದಲಾಗಿ ಮಕ್ಕಳೇ ಮನೆಯಿಂದ ಹೊರಗೆ ಹೋಗಬೇಕು ಎಂದು ಬಯಸು ತ್ತಾರೆ. ಮಕ್ಕಳಿಗೆ ರೆಕ್ಕೆಪುಕ್ಕ ಬಲಿತು, ಉದ್ಯೋಗ ವಿದ್ದು, ಸ್ವತಂತ್ರವಾಗಿ ಬದುಕಬಲ್ಲಷ್ಟು ಗಟ್ಟಿಗರಾಗಿದ್ದರೆ ಸರಿ. ಇಲ್ಲವಾದರೆ ಅವರು ಹೊರಹೋಗರು, ಇವರು ಇರಗೊಡರು – ಹೀಗೆ ಜಗಳ, ಕಚ್ಚಾಟ ಆರಂಭವಾಗುತ್ತದೆ.

ನಾವು ತಾಯ್ತಂದೆಯರು, ಅವರು ನಮ್ಮ ಮಕ್ಕಳು ಎಂಬುದು ಭಾವನೆಗಳ ವಿಚಾರ. ಆದರೆ ಬದುಕಿನ ಸ್ತರದಲ್ಲಿ ತಾಯಿ- ತಂದೆ ಹಿಂಡಿನ ಹಿರಿಯಾನೆಗಳಂತೆ, ಮಕ್ಕಳು ಪುಂಡಾನೆಗಳಂತೆ. ಅವರಿಗೆ ಅವಕಾಶ ಬೇಕು. ಹೆತ್ತವರಿಂದ ದೂರ ಇರುವ ಮಕ್ಕಳು ತಾಯಿ ತಂದೆಯರನ್ನು ಹೆಚ್ಚು ಪ್ರೀತಿ ಸುವುದು, ಜತೆಗೇ ಇರುವ ವರು ಜಗಳವಾಡು ವುದು ಇದೇ ಕಾರಣದಿಂದ. ನಾವು ಕೆಟ್ಟವರು ಅಥವಾ ನಮ್ಮ ಮಕ್ಕಳು ಕೆಟ್ಟವರು ಎನ್ನು ವುದು ಇದಕ್ಕೆ ಕಾರಣ ಅಲ್ಲ. ಅದು ಪ್ರಾಣಿಸಹಜ.

ಹಾಗಾದರೆ ಇದನ್ನು ನಿಭಾಯಿಸುವುದು ಹೇಗೆ? ಹಿರಿಯ ತಲೆ ಮಾರು ಒಂದು ನಿರ್ದಿಷ್ಟ ವಯೋಮಾನದಲ್ಲಿ ಒಂದು ಹೆಜ್ಜೆ ಹಿಂದಕ್ಕೆ ನಿಂತು, ಹೊಸ ತಲೆಮಾರಿಗೆ ಅವಕಾಶ ಮಾಡಿಕೊಡಬೇಕು. ಆಗ ನೀರಿನಂತೆ ಹಳೆಯದರ ಜಾಗವನ್ನು ಹೊಸದು ತುಂಬುತ್ತದೆ. ಒಂದು ಬಗೆಯ ಮಾಗಿದ ವಿವೇಕ ಮತ್ತು ಅನುಭವ ಪ್ರೌಢಿಮೆಯನ್ನು ಹಿರಿಯ ತಲೆಮಾರು ಪ್ರದರ್ಶಿಸಬೇಕು. ನಮಗೆ ವಯಸ್ಸಾದಂತೆ ನಾವು ಒಂದು ನಿರ್ದಿಷ್ಟ ಮಟ್ಟದ ಮಾಗು ವಿಕೆಯನ್ನು, ಅನುಭವಗಳನ್ನು ಗಳಿಸುತ್ತೇವೆ. ಕಿರಿಯ ತಲೆಮಾರು ಇನ್ನಷ್ಟೇ ಅದನ್ನು ಪಡೆಯಬೇಕಿದೆ; ಅದು ಆ ಮಾರ್ಗ ದರ್ಶನಕ್ಕಾಗಿ ನಮ್ಮತ್ತ ನೋಡುತ್ತದೆ. ಆ ಕೆಲಸ ನಮ್ಮಿಂದಾಗಬೇಕು.

ಇದು ಸಾಧ್ಯವಾದರೆ ಹೆಚ್ಚು ಕಮ್ಮಿ ಒಂದೇ ಅವಕಾಶದಲ್ಲಿ – ಮನೆಯ ಮೇಲಂತಸ್ತಿನಲ್ಲಿ ಹಿರಿಯರು, ಕೆಳ ಅಂತಸ್ತಿನಲ್ಲಿ ಕಿರಿಯರು ನೆಲೆಸಿ ಬದುಕಲು ಸಾಧ್ಯವಾಗುತ್ತದೆ!

(ಸಾರ ಸಂಗ್ರಹ)

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.