ಸತ್ಯಕ್ಕಾಗಿ ನೇಣು, ಸುಳ್ಳಿಗಾಗಿ ಪಾರು!


Team Udayavani, Jan 19, 2021, 5:50 AM IST

ಸತ್ಯಕ್ಕಾಗಿ ನೇಣು, ಸುಳ್ಳಿಗಾಗಿ ಪಾರು!

ಒಂದಾನೊಂದು ಕಾಲದಲ್ಲಿ ಒಂದು ರಾಜ್ಯದಲ್ಲಿ ಒಬ್ಬ ಅರಸನಿದ್ದ. ಎಲ್ಲ ರಾಜರ ಹಾಗೆ ಅವನ ಆಸ್ಥಾನದಲ್ಲಿಯೂ ಘನ ವಿದ್ವಾಂಸರು, ಮೇಧಾವಿ ಮಂತ್ರಿಗಳಿ ದ್ದರು. ಒಂದು ಶುಭ ಮುಂಜಾನೆ ಅರಸನಿಗೆ ಒಂದು ಆಲೋಚನೆ ಬಂತು – ರಾಜ್ಯದಲ್ಲಿಡೀ ಸತ್ಯ ಮಾತ್ರವೇ ಇರ ಬೇಕು; ಸುಳ್ಳು, ಅನೈತಿಕ, ನಕಲಿಗಳನ್ನೆಲ್ಲ ನಿಷೇಧಿಸಬೇಕು.

ಆ ದಿನ ರಾಜ ಆಸ್ಥಾನ ವಿದ್ವಾಂಸರ ಎದುರು ತನ್ನ ಆಲೋಚನೆಯನ್ನು ಮಂಡಿಸಿದ. ಅವರೆಲ್ಲರೂ ತತ್‌ಕ್ಷಣ ಒಪ್ಪಿದರು. ಅನೇಕ ರಾಜರು ಕೆಡುವುದು ಇಂತಹ ವಿದ್ವಾಂಸರು, ಮಂತ್ರಿಗಳಿಂದ. ರಾಜ ಏನು ಹೇಳುತ್ತಾನೆಯೋ ಅದನ್ನು ಹಿಂದೆಮುಂದೆ ನೋಡದೆ ಒಪ್ಪಿಕೊಳ್ಳು ವುದು, ಎಲ್ಲದಕ್ಕೂ ಉಘೇ ಉಘೇ ಎನ್ನು ವುದು ಇಂಥವರ ಹವ್ಯಾಸ. ನಿಜವಾದ ಮೇಧಾವಿಗಳು, ಮುತ್ಸದ್ದಿಗಳು, ಹಿತ ಚಿಂತಕರು ಯಾವುದು ಹಿತವೋ ಅದನ್ನು ಮಾತ್ರ ಬೆಂಬಲಿಸಬೇಕು, ಅಹಿತವಾದವು ಗಳನ್ನು ನಿರಾಕರಿಸಬೇಕು. ದುರದೃಷ್ಟವ ಶಾತ್‌ ನಮ್ಮ ಕಥಾನಾಯಕ ರಾಜನ ಆಸ್ಥಾನದ ವಿದ್ವಾಂಸರು, ಮಂತ್ರಿಗಳು ಹೊಗಳುಭಟರಷ್ಟೇ ಆಗಿದ್ದರು. ರಾಜನ ಆಲೋಚನೆಗೆ ಅವರೆಲ್ಲರಿಂದಲೂ ತತ್‌ಕ್ಷಣದ ಬೆಂಬಲ ಸಿಕ್ಕಿತು.

ಅವರಲ್ಲೊಬ್ಬ ಮಂತ್ರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದ. “ನಾಳೆಯಿಂದ ಯಾರು ಸುಳ್ಳನ್ನಾಡುತ್ತಾರೆಯೋ ಅವ ನನ್ನು ಪೇಟೆ ಮಧ್ಯದ ಸಾರ್ವಜನಿಕ ಸ್ಥಳದಲ್ಲಿ ನೇಣು ಹಾಕಬೇಕು. ಅನೃತ ವನ್ನಾಡುವವರಿಗೆ ಇದೊಂದು ಕಠಿನ ಎಚ್ಚರಿಕೆಯಾಗಬೇಕು. ಈಗಲೇ ಡಂಗುರ ಸಾರಿಸಿಬಿಡಿ ದೊರೆಯೇ’ ಎಂದ ಆತ.

ವಿದ್ವಾಂಸರು, ಮಂತ್ರಿಗಳಿರುವ ಹಾಗೆ ಆಸ್ಥಾನದಲ್ಲಿ ಒಬ್ಬ ವಿದೂಷಕನೂ ಇದ್ದ. ಎಷ್ಟೋ ವಿದೂಷಕರು ನಿಜವಾಗಿ ಬಲು ಮೇಧಾವಿಗಳಾಗಿರುತ್ತಾರೆ. ತಮಾಶೆ ಮಾಡಿ ನಗಿಸುತ್ತಲೇ ವಿಹಿತವಾದುದನ್ನು ಹೃದಯಕ್ಕೆ ನಾಟಿಬಿಡುತ್ತಾರೆ. ಇವನೂ ಅಂಥವರಲ್ಲಿ ಒಬ್ಬ.

ವಿದೂಷಕ ಹೇಳಿದ, “ದೊರೆಯೇ, ನೇಣುಗಂಬ ಸಿದ್ಧವಾಗಲಿ. ನಾಳೆ ನೇಣಿಗೇರುವ ಮೊದಲನೆಯ ವ್ಯಕ್ತಿ ನಾನೇ ಆಗಿರುತ್ತೇನೆ. ಬೆಳಗ್ಗೆ ಎಲ್ಲರೂ ಸಿದ್ಧವಾಗಿರಿ.’

ಎಲ್ಲರಿಗೂ ಆಶ್ಚರ್ಯವಾಯಿತು. “ಏನಯ್ನಾ ಹೀಗೆ ಹೇಳುತ್ತಿದ್ದೀ’ ಎಂದು ಪ್ರಶ್ನಿಸಿದರು. “ನಾನೇ ನಾಳೆ ಮೊದಲ ನೆಯ ಸುಳ್ಳು ಹೇಳುತ್ತೇನೆ ಮತ್ತು ಅದಕ್ಕಾಗಿ ನಿಮ್ಮಿಂದ ವಧಿಸಲ್ಪಡುವ ಮೊದಲ ವ್ಯಕ್ತಿ ಆಗಿರುತ್ತೇನೆ’ ವಿದೂಷಕ ಪ್ರತ್ಯುತ್ತರಿಸಿದ.

“ಅರೆ ಹುಚ್ಚು ತಗಲಿ ದೆಯೇನಯ್ಯ’ ಎಂದು ಎಲ್ಲರೂ ಒಕ್ಕೊರಲಾಗಿ ಕೇಳಿದರು. “ಅದೇನೋ ನನಗೆ ಗೊತ್ತಿಲ್ಲ. ನಾಳೆ ಬೆಳಗ್ಗೆ ನೇಣುಗಂಬ ಮಾತ್ರ ಸಿದ್ಧವಾಗಿರಲಿ’ ಎಂದು ಹೇಳಿ ವಿದೂಷಕ ಹೊರಟುಹೋದ.

ಮರುದಿನ ಬೆಳಗಾಯಿತು. ಎಲ್ಲರೂ ಬೇಗನೆ ಎದ್ದು ಇದೇನು ವಿಚಿತ್ರ ನಡೆಯಲಿದೆ, ನೋಡಿಯೇ ಬಿಡೋಣ ಎಂದು ಪೇಟೆಯ ಮಧ್ಯದಲ್ಲಿ ಹಾಜ ರಾದರು. ನೇಣುಗಂಬ ಸಿದ್ಧವಾಗಿತ್ತು. ಊರಿನ ಹೆಬ್ಟಾಗಿಲು ತೆರೆದಾಗ ವಿದೂಷಕ ಒಂದು ಕತ್ತೆಯ ಮೇಲೇರಿ ಒಳಗೆ ಬಂದ. “ಎಲ್ಲಿಗೆ ಹೋಗುತ್ತಿದ್ದೀಯಯ್ಯ’ ಎಂದು ಅರಸ ಪ್ರಶ್ನಿಸಿದ.

“ನಾನು ನೇಣುಗಂಬದತ್ತ ಹೋಗುತ್ತಿ ದ್ದೇನೆ’ ಎಂದ ವಿದೂಷಕ.

ಎಲ್ಲರೂ ಅವಾಕ್ಕಾದರು. ವಿದೂಷಕ ವಿಚಿತ್ರ ಸಮಸ್ಯೆಯೊಂದನ್ನು ಸೃಷ್ಟಿಸಿದ್ದ. “ನಾನು ನೇಣುಗಂಬದತ್ತ ಹೋಗುತ್ತೇನೆ. ನನ್ನನ್ನು ನೇಣಿಗೇರಿಸಿ’ ಎನ್ನುವ ಅವನ ಮಾತು ನಿಜ. ಅವನನ್ನು ನೇಣಿಗೇರಿಸಿದರೆ ಸತ್ಯ ಹೇಳಿದ್ದಕ್ಕಾಗಿ ಕೊಂದಂತೆ ಆಗುತ್ತದೆ. ಕೊಲ್ಲದೆ ಇದ್ದರೆ ಅವನಾಡಿದ ಮಾತು ಸುಳ್ಳಾಗುತ್ತದೆ, ಸುಳ್ಳಾಡಿದವನಿಗೆ ಶಿಕ್ಷೆ ಕೊಡದ ಹಾಗಾಗುತ್ತದೆ!

ಅರಸನಿಂದಾದಿಯಾಗಿ ಎಲ್ಲೆಲ್ಲೂ ಮೌನ ತಾಂಡವವಾಡಿತು. ಈ ಸಮಸ್ಯೆಗೆ ಪರಿಹಾರ ಏನು ಎಂಬುದು ಹೊಳೆಯದೆ ಎಲ್ಲರೂ ನಿಬ್ಬೆರಗಾದರು. ವಾಸ್ತವದ ಚಾಟಿಯೇಟಿಗೆ ಅಸಹಾಯರಾದರು. ಈಗ ವಿದೂಷಕ ಗಹಗಹಿಸಿ ನಕ್ಕ. “ನೀವೆಲ್ಲರೂ ಮೂರ್ಖರು. ಸುಳ್ಳು, ಕಪಟ ಎಲ್ಲವೂ ಬದುಕಿನ ಅವಿಭಾಜ್ಯ ಅಂಗಗಳು. ಸತ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು’ ಎಂದು ಎಲ್ಲರ ಕಣ್ತೆರೆಸಿದ.

(ಸಾರ ಸಂಗ್ರಹ)

ಟಾಪ್ ನ್ಯೂಸ್

7-belagavi

Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Vitla: ಜಾತ್ರೆ ಸಂತೆ ಶುಲ್ಕ ಹರಾಜು ಮೊತ್ತ ಇಳಿಸಲು ಆಗ್ರಹ

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ  ಸೇವೆ

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ ಸೇವೆ

1

Puttur: ಜಲಸಿರಿ ನಂಬಿದರೆ ಬೇಸಗೆಯಲ್ಲಿ ಟ್ಯಾಂಕರೇ ಗತಿ; ಸದಸ್ಯರ ಆತಂಕ

ಅಪ್ಪಣ್ಣ ಹೆಗ್ಡೆ-90ರ ಸಂಭ್ರಮ-ಅಪ್ಪಣ್ಣ ಹೆಗ್ಡೆ ಆತ್ಮವಿಶ್ವಾಸದ ಪ್ರತೀಕ : ಡಾ| ಹೆಗ್ಗಡೆ

ಅಪ್ಪಣ್ಣ ಹೆಗ್ಡೆ-90ರ ಸಂಭ್ರಮ-ಅಪ್ಪಣ್ಣ ಹೆಗ್ಡೆ ಆತ್ಮವಿಶ್ವಾಸದ ಪ್ರತೀಕ : ಡಾ| ಹೆಗ್ಗಡೆ

7-belagavi

Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.