ನಾನಾ ವಿಧಾನ, ಸತ್ಯ ದರ್ಶನ


Team Udayavani, Feb 4, 2021, 6:05 AM IST

Nana Method, Truth Darshan

ಭಾರತದಂತೆ ಅಧ್ಯಾತ್ಮವು ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವ ಇನ್ನೊಂದು ನಾಡು ಇಲ್ಲ. ನಮ್ಮ ನಿಮ್ಮ ಹಾಗೆ ಇಲ್ಲಿನ ಪ್ರತಿಯೊಬ್ಬನೂ ತನ್ನದೇ ಆದ ಆಧ್ಯಾತ್ಮಿಕ ಒಳನೋಟ, ಚಿಂತನೆ ಗಳನ್ನು ಹೊಂದಿದವನೇ ಆಗಿರುತ್ತಾನೆ. ಇಲ್ಲಿನ ಯೋಗ – ಅಧ್ಯಾತ್ಮ ಸಾಧಕರ ಪರಂಪರೆ ಎಂಬುದು ಕೋಟ್ಯಂತರ ನಕ್ಷತ್ರಗಳು ಬೆಳಗುವ ತಾರಾಪಥ ಇದ್ದ ಹಾಗೆ. ಈ ಸಾಧಕರು, ಗುರುಗಳು ತಮ್ಮ ಶಿಷ್ಯರನ್ನು ಜ್ಞಾನೋದಯದ ಮುನ್ನಡೆ ಸುವ ನವೀನ ಮಾರ್ಗಗಳನ್ನು ಅನು ಸರಿಸುತ್ತಾರೆ. ಪ್ರತಿ ಯೊಬ್ಬರ ವಿಧಾನವೂ ವಿಶಿಷ್ಟ, ವಿನೂತನ.

ವಾಸ್ತವದಲ್ಲಿ ಅಧ್ಯಾತ್ಮ, ಯೌಗಿಕ ಪ್ರಕ್ರಿಯೆ ಎನ್ನು ವುದು ತಾನು ಎಂದರೇನು ಎಂಬುದನ್ನು ತಿಳಿದುಕೊಳ್ಳುವುದು. ಇದನ್ನು ಹೊಳೆಯಿಸು ವುದಕ್ಕೆ ಪ್ರತೀ ಗುರುವೂ ಅನುಸರಿಸಿದ ಮಾರ್ಗ ವಿಭಿನ್ನ, ಅನೂಹ್ಯ. ಸಾವಿರಾರು ವರ್ಷಗಳ ಹಿಂದೆ ರಿಭು ಎಂಬೊಬ್ಬ ಮಹರ್ಷಿ ಇದ್ದರು. ಅವರಲ್ಲಿ ಅನೇಕ ಶಿಷ್ಯರು ವಿದ್ಯಾಭ್ಯಾಸ ಮಾಡು ತ್ತಿದ್ದರೂ ನಿಧಗ ಎಂಬೊಬ್ಬ ಶಿಷ್ಯನ ಮೇಲೆ ಅವರಿಗೆ ಅಪರಿಮಿತ ಪ್ರೀತಿ, ಶ್ರದ್ಧೆ ಇತ್ತು. ನಿಧಗ ಉಳಿದ ಶಿಷ್ಯರಷ್ಟು ಬುದ್ಧಿವಂತನೂ ಅಲ್ಲ, ವಿದ್ಯೆಯ ಕಡೆಗೆ ಆಸಕ್ತನೂ ಆಗಿರಲಿಲ್ಲ. ನಿಜ ಹೇಳಬೇಕೆಂದರೆ, ಗುರುಕುಲದಿಂದ ಯಾವತ್ತು ಪಾರಾ ದೇನು ಎಂದು ಕನಸು ಕಟ್ಟುತ್ತಿದ್ದವ ಆತ. ಆದರೂ ರಿಭು ಮಹರ್ಷಿಗಳಿಗೆ ಆತ ನೆಂದರೆ ವಿಶೇಷ ಒಲುಮೆ. ಇದರಿಂದ ಇತರ ಜ್ಞಾನಾರ್ಥಿಗಳಿಗೆ ನಿಧಗನ ಬಗ್ಗೆ ಅಸೂಯೆ ಉಂಟಾಗಿತ್ತು. ಅದು ಸಹಜ. “ಈತನ ಬಗ್ಗೆ ಗುರುಗಳಿಗೇಕೆ ಇಷ್ಟು ಆಸ್ಥೆ’ ಎಂಬುದು ಉಳಿದ ಶಿಷ್ಯರ ಪ್ರಶ್ನೆ.

ಸಾಮಾನ್ಯವಾಗಿ ರಿಭುವಿನಂತಹ ಮಹರ್ಷಿಗಳು, ಸಾಧಕರು ತಮ್ಮ ಶಿಷ್ಯರು ಇಂದು ಹೇಗಿದ್ದಾರೆ ಎಂಬುದರ ಆಧಾರ ದಲ್ಲಿ ಅವರನ್ನು ಪರಿಗ್ರಹಿಸುವುದಿಲ್ಲ. ಅವರ ಭವಿಷ್ಯದ ಸಾಮರ್ಥ್ಯವೇನು, ನಾಳೆ ಅವರು ಏನಾಗಬಲ್ಲವರು ಎಂಬುದನ್ನು ಮುಂಗಂಡು ಅವರನ್ನು ಮುನ್ನಡೆಸುತ್ತಾರೆ.

ಒಂದು ದಿನ ಇದ್ದಕ್ಕಿದ್ದಂತೆ ನಿಧಗ ಗುರುಕುಲದಿಂದ ಮಾಯವಾದ. ವಿದ್ಯೆಯ ಸಹವಾಸ ಸಾಕು ಎನ್ನುವುದು ಅವನ ನಿಲುವಾಗಿತ್ತು. ಆದರೆ ರಿಭು ಮಹರ್ಷಿಗಳು ಅವನನ್ನು ಬಿಡಲೊಲ್ಲರು. ಅವನು ಎಲ್ಲಿದ್ದಾನೆ ಎಂಬುದನ್ನು ಕಂಡುಹಿಡಿದರು. ಆ ಬಳಿಕ ಮಾರು ವೇಷದಲ್ಲಿ ಅವನನ್ನು ಸಂಧಿಸಿ ಉಪಾಯ ವಾಗಿ ಹೇಳಿಕೊಡತೊಡಗಿದರು.
ಒಂದು ದಿನ ರಿಭು ಮಹರ್ಷಿ ವೃದ್ಧ ಹಳ್ಳಿಗನ ವೇಷದಲ್ಲಿ ನಿಧಗನನ್ನು ಸಂಧಿಸಿ ದರು. ಆ ಹೊತ್ತಿಗೆ ರಾಜನ ಮೆರವಣಿಗೆ ಆ ದಾರಿಯಾಗಿ ಸಾಗುತ್ತಿತ್ತು. ನಿಧಗ ತದೇಕ ಚಿತ್ತದಿಂದ ಅದನ್ನು ನೋಡುತ್ತಿದ್ದ.

“ನೀನು ನೋಡು ತ್ತಿರುವುದು ಏನನ್ನು?’ ಎಂದು ಮಾರು ವೇಷಧಾರಿ ರಿಭು ಪ್ರಶ್ನಿಸಿದರು. ನಿಧಗನಿಗೆ ಕೊಂಚ ಕಿರಿಕಿರಿ ಯಾಯಿತು. ನೂರಾರು ಮಂದಿ ಮೆರವಣಿಗೆಯನ್ನು ನೋಡು ತ್ತಿದ್ದಾರೆ, ಈತನಿಗೆ ಅಷ್ಟೂ ತಿಳಿಯುವು ದಿಲ್ಲವೇ ಎಂದುಕೊಂಡು, “ದೊರೆಯ ಮೆರವಣಿಗೆಯನ್ನು’ ಎಂದ.

“ದೊರೆ ಎಲ್ಲಿದ್ದಾನೆ?’ ರಿಭುವಿನ ಮರುಪ್ರಶ್ನೆ. ನಿಧಗ ಉತ್ತರಿಸಿದ, “ಕಾಣು ವುದಿಲ್ಲವೇ, ಆನೆಯ ಮೇಲೆ ಕುಳಿತಿ ರುವುದು ಅರಸ, ಕೆಳಗಿರುವುದು ಆನೆ.’
“ಓಹ್‌, ಆದರೆ ಈ ಮೇಲೆ ಮತ್ತು ಕೆಳಗೆ ಅಂದರೆ ಏನು?’ ರಿಭುವಿನ ಮತ್ತೂಂದು ಪ್ರಶ್ನೆ. ನಿಧಗನಿಗೆ ತಡೆಯ ಲಾಗದಷ್ಟು ಸಿಟ್ಟು ಬಂತು. ಆತ ಮಾರು ವೇಷದಲ್ಲಿದ್ದ ರಿಭುವನ್ನು ಬಗ್ಗಿಸಿ ಅವನ ಬೆನ್ನಿನ ಮೇಲೆ ಹಾರಿ ಕುಳಿತುಕೊಂಡ ಮತ್ತು “ಮೇಲಿರುವುದು ನಾನು, ಕೆಳಗಿರುವುದು ನೀನು’ ಎಂದ.

“ಈಗಲೂ ನನಗೆ ಸರಿಯಾಗಿ ಅರ್ಥವಾಗಲಿಲ್ಲ. ಮನುಷ್ಯ ಮತ್ತು ಆನೆ, ಮೇಲೆ, ಕೆಳಗೆ ಇದೆಲ್ಲ ತಿಳಿಯಿತು. ಆದರೆ ನಾನು ಮತ್ತು ನೀನು ಎಂದರೆ ಏನು?’ ಎಂದು ರಿಭು ಮರಳಿ ಪ್ರಶ್ನಿಸಿದ. ಇದನ್ನು ಕೇಳಿದ ಒಡನೆಯೇ ನಿಧಗನಿಗೆ ಕೋಲ್ಮಿಂಚು ತಾಕಿದಂತಾ ಯಿತು. “ನಾನು’ ಎಂದರೆ ಏನು ಎಂಬ ಪ್ರಶ್ನೆ ಮನಸ್ಸಿನಲ್ಲಿ ನಾಟಿತು. ಹಳ್ಳಿಗ ವೃದ್ಧ ಮಾರುವೇಷಧಾರಿ ಗುರು ರಿಭು ಮಹರ್ಷಿ ಎಂಬುದೂ ಅರಿವಾಯಿತು. ಅವರ ಬೆನ್ನ ಮೇಲಿಂದ ಹಾರಿ ಇಳಿದ ನಿಧಗ ಅವರ ಪದತಲದಲ್ಲಿ ತಲೆಯಿರಿಸಿದ. ಆ ಕ್ಷಣದಲ್ಲಿ ಅವನಿಗೆ ಜ್ಞಾನದರ್ಶನವೂ ಆಯಿತು.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.