ಸಂಬಂಧಗಳಿಗೆ ಸ್ವಲ್ಪ ಸೈಕಾಲಜಿ ಟಚ್

ಫರ್ಸ್ಟ್ ಇಂಪ್ರೆಷನ್ ಗೆ ಸೆಂಕೆಂಡ್ ಚಾನ್ಸ್ ಇಲ್ಲ

Team Udayavani, Jan 31, 2021, 6:28 PM IST

Psychology Guidelines To Good Relationship

ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಎಲ್ಲರಿಗಿಂತ ಚೆನ್ನಾಗಿರಬೇಕೆಂದು ಬಯಸುವುದು, ಎಲ್ಲರೊಂದಿಗೆ ಪ್ರೀತಿ ಬಾಂಧವ್ಯದಿಂದ ಕೂಡಿರಬೇಕು ಸಹಜ. ಹಾಗೆ ಅಂದುಕೊಂಡ ಎಲ್ಲರಲ್ಲಿಯೂ ಇನ್ನೊಬ್ಬರೊಂದಿಗೆ ಒಳ್ಳೆಯ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅದು ಅವರ ವ್ಯಕ್ತಿತ್ವದಲ್ಲಿರುವ ಲೋಪ ದೋಷಗಳಿಂದ ಸಾಧ್ಯವಾಗದೇ ಇರಬಹುದು‌. ಖಂಡಿತ ಆ ವ್ಯಕ್ತಿತ್ವವನ್ನು ತಿದ್ದಿಕೊಂಡು ನಮ್ಮ ವ್ಯಕ್ತಿತ್ವವನ್ನು ವಿಕಸಿಸಿಕೊಳ್ಳಬಹುದು‌. ಅದಕ್ಕೆ ಒಂದಿಷ್ಟು ಸೈಕಾಲಜಿ ಟಚ್ ಆಗಬೇಕಷ್ಟೇ‌.

ಓದಿ : ತ.ನಾಡಿನಲ್ಲಿ ಆನೆ ಹತ್ಯೆ ಖಂಡಿಸಿ ಮೈಸೂರು ಕನ್ನಡ ವೇದಿಕೆ ಧರಣಿ

ಸಂಬಂಧಗಳ ಅಡಿಪಾಯ ಅಂದರೇ ಅದು ಸ್ನೇಹ. ಏನನ್ನಾದರೂ ಮುಕ್ತ ಮನಸ್ಸಿನಿಂದ ಹೇಳುವ ಮತ್ತು ಕೇಳುವ ಅಭ್ಯಾಸವನ್ನು ಮೊದಲು ನಾವು ರೂಢಿಸಿಕೊಳ್ಳಬೇಕು‌. ಆಗ ಸಂಬಂಧ ಗಟ್ಟಿಯಾಗಿ ಉಳಿಯಲು ಸಾಧ್ಯವಾಗುತ್ತದೆ.

ನಮ್ಮ ಸುತ್ತಲ್ಲಿರುವ ನಮ್ಮವರು ನಮ್ಮನ್ನು ಇಷ್ಟಪಡುವಂತೆ ಮಾಡುವುದು, ನಮ್ಮ ಬಗ್ಗೆ ಒಂದು ಮೆಚ್ಚುಗೆಯ ಅಭಿಪ್ರಾಯವನ್ನು ಇರಿಸಿಕೊಳ್ಳುವಂತೆ ಮಾಡುವುದು ನಮ್ಮಲ್ಲೇ ಇದೆ‌.

ಇನ್ನೊಬ್ಬರು ನಮ್ಮ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನಾಡುವುದಕ್ಕೆ ದೊಡ್ಡ ದೊಡ್ಡ ಸಾಧನೆ ಮಾಡಬೇಕಾಗಿಲ್ಲ. ನಮ್ಮ ನಯ ವಿನಯದ ಮಾತುಕತೆ, ಚರ್ಯೆಗಳು ಉತ್ತಮವಾಗಿದ್ದು, ಆಕರ್ಷಕವಾಗಿದ್ದರೇ, ಅದು ಸಂಬಂಧವನ್ನು ಬೆಳೆಯುವಂತೆ ಮಾಡುತ್ತದೆ‌.

ಓದಿ : ಪಲ್ಸ್‌ ಪೋಲಿಯೋ ಯಶಸ್ಸಿಗೆ ಮನವಿ

ಫರ್ಸ್ಟ್ ಇಂಪ್ರೆಷನ್ ಗೆ ಸೆಂಕೆಂಡ್ ಚಾನ್ಸ್ ಇಲ್ಲ  : ಒಬ್ಬ ವ್ಯಕ್ತಿಯನ್ನು ಪ್ರಥಮವಾಗಿ ನೋಡಿದ ಕೂಡಲೇ ಅವನ ಮೇಲೆ ನಮಗೆ ಒಂದು ಅಭಿಪ್ರಾಯ ಉಂಟಾಗುತ್ತದೆ‌. ಆ ಅಭಿಪ್ರಾಯ ಎಷ್ಟೋ ಭಾರಿ ಆತನನ್ನು/ಆಕೆಯನ್ನು ನೋಡಿದರೂ ಬದಲಾಗುವುದಿಲ್ಲ. ಯಾರನ್ನಾದರೂ ನೋಡಿದ ತಕ್ಷಣ ನಾವು ಇಂಗ್ಲಿಷ್ ಅಲ್ಲಿ ಹೆಲೋ ಅಥವಾ ಕನ್ನಡದಲ್ಲಿ ನಮಸ್ತೆ ಎಂದು ಹೇಳುತ್ತೇವೆ. ಅದು ನಮ್ಮ ಎದುರಿರುವವರಲ್ಲಿ ಪಾಸಿಟಿವ್ ಅಥವಾ ನೆಗೆಟಿವ್ ಅಭಿಪ್ರಾಯ ಹುಟ್ಟಿಸುತ್ತದೆ‌. ಇದಕ್ಕೆ ಮನೋ ತಜ್ಞರ ಪ್ರಕಾರ ಸರಿಸುಮಾರು 30 ಸೆಕೆಂಡುಗಳು ಸಾಕಂತೆ‌. ಅದು ಸರಿಯಾದ ಅಥವಾ ತಪ್ಪಾದ ಅಭಿಪ್ರಾಯ ಆಗಿರಬಹುದು‌‌. ಅದು ನಮ್ಮ ಮುಂದಿನ ಆಲೋಚನೆಗಳು ಈ ಫರ್ಸ್ಟ ಇಂಪ್ರೆಷನ್ ಮೇಲೆ ಆಧಾರವಾಗಿರುತ್ತದೆ ಎನ್ನುವುದರ ಬಗ್ಗೆ ಅನುಮಾನ ಬೇಕಿಲ್ಲ. ಅದಕ್ಕಾಗಿಯೇ ‘ಫರ್ಸ್ಟ್ ಇಂಪ್ರೆಷನ್ ಈಸ್ ದಿ ಬೆಸ್ ಇಂಪ್ರೆಷನ್’ ಎನ್ನುವುದು. ನಮ್ಮ ಮೊದಲ ವರ್ತನೆ ಯಾವಾಗಲೂ ಬೆಸ್ಟ್ ಆಗಿರಲಿ. ಯಾಕೆಂದರೆ ಅದಕ್ಕೆ ಸೆಕೆಂಡ್ ಚಾನ್ಸ್ ಇಲ್ಲ.

ಸ್ನೇಹ ಸಂಬಂಧದ ಕೊಂಡಿ : ಯಾವುದೇ ಸಂಬಂಧದ ತಳಹದಿ ಅಂದರೇ ಅದು ಸ್ನೇಹ. ಮೊದಲಿಗೆ ನೀವು ಬಯಸುವ ವ್ಯಕ್ತಿತ್ವದೊಂದಿಗೆ ಸ್ನೇಹ ಬೆಳೆಸಿಕೊಳ್ಳಿ. ನಿಮ್ಮ ಸ್ನೇಹ ಒಳಗೂ ಹೊರಗೂ ಒಂದೇ ಆಗಿರಬೇಕು. ಸ್ನೇಹ ಗಟ್ಟಿ ಆಗಿದ್ದರೇ, ಮುಂದೆ ಬೆಳೆಯುವ ಸಂಬಂಧವೂ ಗಟ್ಟಿಯಾಗಿರುತ್ತದೆ.

ಪ್ರೀತಿಯ ಸ್ಪರ್ಶ : ಸಂಬಂಧಗಳಿಗೆ ಇದೊಂದು ಉತ್ತಮ ಸ್ಪರ್ಶ. ನಮ್ಮ ಪ್ರೀತಿ ಪಾತ್ರರ ಜೊತೆಗಿರುವುದು ಸಂತೋಷದ ಅನುಭವ. ಇನ್ನು, ಅವರ ಸನಿಹ ಸ್ಪರ್ಶ ಒಂದು ಹಿತವಾದ ಅನುಭೂತಿ. ನೋವನ್ನೆಲ್ಲಾ ದೂರ ಮಾಡಿ ಧೈರ್ಯ, ವಿಶ್ವಾಸ, ಭರವಸೆ ತುಂಬಿಸುವ ಶಕ್ತಿ ಈ ಸ್ಪರ್ಶಕ್ಕಿದೆ‌. ಕಾಲಕಾಲಕ್ಕೆ ಭಾವನಾತ್ಮಕವಾಗಿ ಪ್ರೀತಿಯ ಒಡನಾಟವಿದ್ದರೇ, ಸಂಬಂಧದ ಗಾಢತೆ ಸಹಾಯ ಮಾಡುತ್ತದೆ.

ಆತ್ಮೀಯತೆ : ಸಂಬಂಧಗಳಿಗೆ ಇದೊಂದು ಉತ್ತಮ ಸೈಕಾಲಜಿ ಟಚ್. ಒಂದು ಆತ್ಮೀಯ ಮಾತು ಅಥವಾ ಹಿತವಾದ ನಗು ಸಂಬಂಧಕ್ಕೆ ತುಂಬಾ ಪ್ರಭಾವ ಬೀರುತ್ತದೆ‌. ಪೂರ್ತಿಯಾಗಿ ಹೇಳಲಾಗದ ಒಂದು ಸಣ್ಣ ನಗು ಅಥವಾ ಒಂದು ತೊದಲು ಮಾತು ಸಾವಿರ ಪಟ್ಟು ಆತ್ಮೀಯತೆಯನ್ನು ಹೆಚ್ಚಿಸುತ್ತದೆ‌. ಹಾಗಾಗಿ ಸಂಬಂಧ ಬೆಳೆಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ‘ಆತ್ಮೀಯತೆ’ ನಿಮ್ಮ ಬತ್ತಳಿಕೆಯಲ್ಲಿರಲಿ.

ಸಂಬಂಧಗಳಿಗೆ ಗೌರವದ ಟಚ್ : ಸಂಬಂಧಗಳು ಹೇಗೆ ಇದ್ದರೂ ನಿಮ್ಮೊಳಗಿನ ನಿಮ್ಮವರಿಗೆ ಗೌರವ ನೀಡುವುದನ್ನು ಮರೆಯದಿರಿ. ಸಂಬಂಧಗಳಿಗೆ ‘ಗೌರವ’ ಬಹಳ ಪ್ರಮುಖ.

Show respect to people even,

when they don’t deserve it…!

Respect is a reflection of your character, not theirs ಎಂಬ ಮಾತಿನಂತೆ, ಗೌರವಕ್ಕೆ ಅವರು ಅರ್ಹರಲ್ಲದಿದ್ದರೂ ಅಥವಾ ಅವರ ವ್ಯಕ್ತಿತ್ವ ನಿಮಗೆ ಇಷ್ಟವಿಲ್ಲದಿದ್ದರೂ ಸಹ ಮೇಲ್ನೋಟಕ್ಕಾದರೂ ಗೌರವ ನೀಡಿ. ಅದು ನಿಮ್ಮ ಬಗ್ಗೆ ಪ್ರಪಂಚಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತದೆ‌.

ಓದಿ : ಸೋದರಳಿಯನ ಪ್ರಗತಿಗೆ ಶ್ರಮಿಸುತ್ತಿರುವ ಮಮತಾ ಬ್ಯಾನರ್ಜಿ ಇನ್ಮುಂದೆ ಏಕಾಂಗಿ: ಶಾ ಆಕ್ರೋಶ

ಅಭಿವ್ಯಕ್ತಿ : ಇನ್ನೊಬ್ಬರ ಅಭಿವ್ಯಕ್ತಿಗೆ ಪ್ರತಿಕ್ರಿಯಿಸುವ ಅಥವಾ ಸ್ಪಂದಿಸುವ ಮನಸ್ಸು ಮೊದಲು ನಮ್ಮದಾಗಬೇಕು. ಭಾವಾಭಿವ್ಯಕ್ತಿಗೆ ತಕ್ಕದಾದ ಸ್ಪಂದನೆ ಇರಲಿ‌. ಅದು ಸಂಬಂಧವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ‌. ‘ಅಭಿವ್ಯಕ್ತಿ’ ಸಂಬಂಧಗಳಿಗೆ ಒಂದು ಉತ್ತಮ ಟಾನಿಕ್‌.

ಸಣ್ಣ ಪ್ರೀತಿಯ ಹೊಗಳಿಕೆ ನಿಮ್ಮ ಸಂಬಂಧದ ನಡುವೆ ಇರಲಿ : ನೀವು ನಿಮ್ಮ ಸಂಬಂಧಗಳಿಗೆ ಸೂಸುವ ಒಂದು ಮೆಚ್ಚುಗೆಯ ನೋಟ, ನೀಡುವ ಸಣ್ಣ ಹೊಗಳಿಕೆ ಸಂಬಂಧವನ್ನು ಗಟ್ಟಿ ಮಾಡುವಲ್ಲಿ ಕಾರ್ಯ ನಿರ್ವಹಿಸುತ್ತದೆ.

ಸಂಬಂಧಗಳನ್ನು ಉಳಿಸಿಕೊಳ್ಳುವುದಕ್ಕೆ ಗುಡ್ಡೆ ಕಡಿದು ಹಾಕಿ ಹಾರ ತುರಾಯಿ ಹಾಕಿಕೊಂಡು ಮೆರೆಯಬೇಕಂತೇನಿಲ್ಲ. ನಮ್ಮವರ ಮನಃಶಾಸ್ತ್ರವನ್ನು ಸ್ವಲ್ಪ ತಿಳಿದುಕೊಂಡರೇ ಸಾಕು, ಖಂಡಿತ ಒಂದು ಒಳ್ಳೆಯ ಸಂಬಂಧ ನಮ್ಮ ಕೈವಶವಾಗುತ್ತದೆ. ಒಂಟಿತನದಲ್ಲಿ ಬದುಕಲು ಸಾಧ್ಯವೇ ಇಲ್ಲ. ನಮ್ಮ ಮನಸ್ಸು ಅನೇಕಾಂತವನ್ನು ಬಯಸಿಯೇ ಬಯಸುತ್ತದೆ‌. ಅದಕ್ಕೆ ಸ್ವಲ್ಪ ಸೈಕಾಲಜಿ ಟಚ್ ಬೇಕಷ್ಟೆ.

 

ಶ್ರೀರಾಜ್ ವಕ್ವಾಡಿ

 

ಓದಿ : ಬನಶಂಕರಿ ದೇಗುಲದಲ್ಲಿ ಪಲ್ಲಕ್ಕಿ ಉತ್ಸವ

ಟಾಪ್ ನ್ಯೂಸ್

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.