ದೇಹ-ಮನಸ್ಸಿನ ಮಿತಿಗಳನ್ನು ಮೀರಿದ ಬದುಕಿನ ಆಯಾಮ
Team Udayavani, Nov 12, 2020, 6:16 AM IST
ಸಾಂದರ್ಭಿಕ ಚಿತ್ರ
ನಮ್ಮಲ್ಲಿ ಬಹುತೇಕರು ಬದುಕಿನ ಬಗ್ಗೆ ಭಯ, ಅಭದ್ರತೆಗಳನ್ನು ಅನುಭವಿಸುತ್ತಾರೆ. ನಾಳೆ ಏನಾಗುವುದೋ, ಉದ್ಯೋಗ ನಷ್ಟವಾದರೇನು ಗತಿ, ಅಪಘಾತ ಉಂಟಾ ದರೆ, ಹಣ ಇಲ್ಲವಾದರೆ… ಹೀಗೆ ಭೀತಿಗಳು ಹಲವಾರು. ಅಭದ್ರತೆಗಳೂ ಹೀಗೆಯೇ ಕಾಡುತ್ತವೆ. ಇದರ ಫಲವಾಗಿ ನಿದ್ದೆಯಿಲ್ಲದ ರಾತ್ರಿಗಳು, ದುಗುಡ-ದುಮ್ಮಾನ, ತಲ್ಲಣ.
ಅಭದ್ರತೆ, ಚಿಂತೆಗಳನ್ನು ಹಿಂದಕ್ಕೆ ಹಾಕಿ ಬದುಕಿನಲ್ಲಿ ಮುಂದೆ ಸಾಗುವುದು ಹೇಗೆ ಎಂಬುದು ಪ್ರಶ್ನೆ.
ಅವುಗಳನ್ನು ಹಿಂದೆ ಬಿಟ್ಟು ಮುಂದೆ ಸಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಏಕೆಂದರೆ ನಿಜವಾಗಿಯೂ ಅಭದ್ರತೆ ಮತ್ತು ಭೀತಿಗಳು ಅಸ್ತಿತ್ವದಲ್ಲಿ ಇಲ್ಲ. ಅವುಗಳನ್ನು ಅಪ್ರಜ್ಞಾಪೂರ್ವಕವಾಗಿ ನಾವೇ ಸೃಷ್ಟಿಸು ತ್ತಿದ್ದೇವೆ ಅಷ್ಟೇ. ನಾವು ಅವುಗಳನ್ನು ಹುಟ್ಟು ಹಾಕುವುದನ್ನು ನಿಲ್ಲಿಸೋಣ, ಆಗ ಅವುಗಳಿಗೆ ಅಸ್ತಿತ್ವವೇ ಇರುವುದಿಲ್ಲ.
ಈ ಪ್ರಶ್ನೆಯೆಂದರೆ, ಭೀತಿ ಮತ್ತು ಅಭದ್ರತೆ ಗಳನ್ನು ನಾವು ಯಾಕೆ ಹುಟ್ಟು ಹಾಕುತ್ತೇವೆ ಮತ್ತು ಅದನ್ನು ನಿಲ್ಲಿಸುವುದು ಹೇಗೆ? ಈ ವಿಶಾಲ ವಿಶ್ವದಲ್ಲಿ ನಾವು ಪ್ರತಿಯೊಬ್ಬರು ಧೂಳಿನ ಕಣಕ್ಕಿಂತಲೂ ಸಾವಿರಾರು ಪಟ್ಟು ಸೂಕ್ಷ್ಮರು. ನಮ್ಮ ಒಳಗೂ ಹೊರಗೂ ವ್ಯಾಪಿಸಿರುವ ವಿಶಾಲ ವಿಶ್ವವನ್ನು ಕಲ್ಪಿಸಿ ಕೊಳ್ಳಿ. ನಮ್ಮ ಜಿಲ್ಲೆ, ರಾಜ್ಯದ ಮಟ್ಟಿಗೆ ನಾವು ಹೆಸರು, ವಿಳಾಸ ಇರುವ ವ್ಯಕ್ತಿಗಳಾಗಿರುತ್ತೇವೆ. ದೇಶದ ನೂರು ಕೋಟಿಗಿಂತ ಅಧಿಕ ಜನಸಂಖ್ಯೆಯೆದುರು ನಾವು ತೃಣ ಸಮಾನರು. ಏಷ್ಯಾ ಖಂಡದಲ್ಲಿ ಇನ್ನೂ ಸೂಕ್ಷ್ಮರು. ಸೌರವ್ಯೂಹದಲ್ಲಿ ಒಂದು ಗ್ರಹ ವಾಗಿರುವ ಭೂಮಿಯಲ್ಲಿ ನಮ್ಮ ಅಸ್ತಿತ್ವ ಧೂಳಿಗಿಂತಲೂ ಸಣ್ಣದು. ಇನ್ನು ಸೌರವ್ಯೂಹ ವಿರುವ ಹಾಲು ಹಾದಿ ಗ್ಯಾಲಕ್ಸಿ, ಅದರ ಸಹಿತ ಸಾವಿರಾರು ಗ್ಯಾಲಕ್ಸಿಗಳನ್ನು ತನ್ನ ಗರ್ಭದಲ್ಲಿ ಇರಿಸಿಕೊಂಡಿರುವ ಈ ವಿಶ್ವ… ನಮ್ಮದೆಷ್ಟು ಪುಟ್ಟ ಗಾತ್ರ! ನಮ್ಮ ದೇಹದ ಒಳಗೂ ವಿವಿಧ ಅಂಗಾಂಗಗಳು, ಅವುಗಳನ್ನು ರೂಪಿಸಿರುವ ಕೋಟ್ಯಂತರ ಜೀವಕೋಶಗಳು, ಅವುಗಳ ಒಳಗಿರುವ ಎಲೆಕ್ಟ್ರಾನ್-ಪ್ರೋಟಾನ್… ಇವೆಲ್ಲದರ ಆದಿ ಎಲ್ಲಿ, ಅಂತ್ಯ ಎಲ್ಲಿ ಎಂಬುದು ನಮಗೆ ತಿಳಿದಿಲ್ಲ. ಹೀಗಾಗಿಯೇ ನಾಳೆ ಏನಾಗುತ್ತದೆಯೋ ಎಂಬ ಅಭದ್ರತೆ, ಕ್ಷುಲ್ಲಕತೆಯೇ ನಮ್ಮನ್ನು ಪ್ರತೀ ಕ್ಷಣವೂ ಹಿಂಡುತ್ತಿರುತ್ತದೆ.
ಎಲ್ಲಿಯ ವರೆಗೆ ನಾವು ಭೌತಿಕ ದೇಹ ಮತ್ತು ಮನಸ್ಸಿನ ಜತೆಗೆ ಗುರುತಿಸಿ ಕೊಂಡಿರುತ್ತೇವೆಯೋ ಅಲ್ಲಿಯ ವರೆಗೆ ಬದುಕಿನ ಬಗ್ಗೆ ಭಯ, ಕಳವಳ ತಪ್ಪಿದ್ದಲ್ಲ. ಅದು ಒಬ್ಬೊಬ್ಬರಲ್ಲಿ ಒಂದೊಂದು ಪ್ರಮಾಣ ದಲ್ಲಿರಬಹುದು, ಆದರೆ ಎಲ್ಲರಲ್ಲೂ ಇದೆ. ಇವತ್ತು ನಮ್ಮ ಬದುಕು ಚೆನ್ನಾಗಿ, ಸಂತೋಷ ಮಯವಾಗಿರಬಹುದು. ಆದರೆ ನಾಳೆ ಯಾವುದೋ ಒಂದು ಕೆಟ್ಟದ್ದು ಉಂಟಾದಾಗ ಭಯ, ಅಭದ್ರತೆ ಮತ್ತೆ ಹೆಡೆಯೆತ್ತುತ್ತದೆ.
ದೇಹ ಮತ್ತು ಮನಸ್ಸಿನ ಸೀಮಿತ ಚೌಕಟ್ಟುಗಳಿಂದ ಆಚೆಗಿನದ್ದನ್ನು ಅನುಭವಿ ಸಲು ಶಕ್ತರಾಗುವವರು ಮಾತ್ರ ಭಯ, ಅಭದ್ರತೆ ಗಳಿಂದಲೂ ಆಚೆಗೆ ನಿಲ್ಲ ಬಹುದು. ಆಧ್ಯಾತ್ಮಿಕ ಬದುಕು ಎಂದರೆ ಇದೇ. ಇಲ್ಲಿ ಆಧ್ಯಾತ್ಮಿಕ ಬದುಕು ಎಂದರೆ ದೇವಾಲಯಗಳಿಗೆ ಹೋಗಿ ಪ್ರಾರ್ಥಿಸುವುದಲ್ಲ. ಪ್ರಾರ್ಥನೆಗಳಲ್ಲಿ ನೂರಕ್ಕೆ ನೂರು ಬೇಡಿಕೆಗಳಿರುತ್ತವೆ. ಅವು ಅಸ್ತಿತ್ವಕ್ಕಾಗಿ ದೇವರಿಗೆ ಸಲ್ಲಿಸುವ ಬೇಡಿಕೆಗಳು. “ದೇವರೇ ಅದನ್ನು ಕೊಡು, ಇದನ್ನು ಅನುಗ್ರಹಿಸು’ ಎಂದು ಬೇಡುತ್ತೇವೆ. ಅದು ಅಧ್ಯಾತ್ಮವಲ್ಲ.
ಯಾವುದು ಭೌತಿಕವಾಗಿ ಅಸ್ತಿತ್ವದಲ್ಲಿ ಇಲ್ಲವೋ ಅದನ್ನು ತಿಳಿಯುವುದು, ಅನುಭವಿಸುವುದು ಅಧ್ಯಾತ್ಮ. ಬದುಕಿಗೆ ಈ ಆಯಾಮ ದಕ್ಕಲಾರಂಭವಾದರೆ, ನಮ್ಮ ದೇಹ ಮತ್ತು ಮನಸ್ಸಿನ ಮಿತಿಗಳನ್ನು ಮೀರಿದ ಅನುಭವ ನಮಗೆ ಉಂಟಾಗುವುದಕ್ಕೆ ಆರಂಭವಾದರೆ ಆಗ ಬದುಕಿನ ಬಗ್ಗೆ ನಮ್ಮಲ್ಲಿ ಭಯ, ಅಭದ್ರತೆ ಎಂಬುದು ಇರುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.