ನಮ್ಮೊಳಗಿನ ಅಹಂ ಮತ್ತು ಬುದ್ಧನಲ್ಲಿಗೆ ಬಂದ ಕಪಿ
Team Udayavani, Dec 29, 2020, 5:32 AM IST
ಸಾಂದರ್ಭಿಕ ಚಿತ್ರ
ನಮ್ಮೆಲ್ಲರೊಳಗೂ ಅಹಂ ಇದೆ. “ಅಹಂ’ ಎಂದರೆ ಅಕ್ಷರಾರ್ಥದಲ್ಲಿ “ನಾನು’. ಅಷ್ಟೇ ಆಗಿದ್ದರೆ ಸಮಸ್ಯೆ ಇಲ್ಲ. ಆದರೆ ಅಹಂ ನಾನೇ ಎಲ್ಲವೂ ಎಂದುಕೊಳ್ಳುತ್ತದೆ. ಅಂಥ ಒಂದು ಸುಳ್ಳಿಗೆ ಜೋತುಬಿದ್ದಿರು ತ್ತದೆ. “ನಾನು’ ಎಂಬುದು ತೃಣಮಾತ್ರ ವಾಗಿದ್ದರೂ “ನಾನೇ ಎಲ್ಲವೂ’ ಎಂಬ ಮಹಾಸುಳ್ಳು ಅದು.
ನಿಜವಾಗಿಯೂ ಅಹಂ ಎಂಬುದು ಬಲು ದೊಡ್ಡ ಮರುಳು. ನಮ್ಮೊಳ ಗಿರುವ ಅಹಮಿಕೆಯ ಹುಚ್ಚಾಟಗಳನ್ನು ಕೇಳ ಬಹುದು, ನೋಡ ಬಹುದು. ತನ್ನಿಂದ ಎಲ್ಲವೂ ಸಾಧ್ಯ ಎಂಬು ದಾಗಿ ಅಹಂ ಭಾವಿಸುತ್ತದೆ. ತಾನು ಪ್ರಕೃತಿ ಯನ್ನು, ಜಗತ್ತನ್ನು, ದೇವರನ್ನು ಕೂಡ ಗೆಲ್ಲಬಲ್ಲೆ ಎಂಬುದು ಅಹಮಿಕೆಯ ಭಾವನೆ. ಅದು ಅಸೀಮ ಮಹತ್ವಾ ಕಾಂಕ್ಷಿ, ಮಹತ್ವಾ ಕಾಂಕ್ಷೆ ಹೆಚ್ಚಿದಷ್ಟು ಅದರ ಹುಚ್ಚಾಟಗಳು ಕೂಡ ಹೆಚ್ಚುತ್ತವೆ.
ಚೀನೀ ತಣ್ತೀಶಾಸ್ತ್ರದಲ್ಲಿ ಅಹಮಿಕೆ ಯನ್ನು ಕಪಿಗೆ ಹೋಲಿಸಲಾಗುತ್ತದೆ. “ನಾನು’ ಎಂಬುದಕ್ಕೆ ಮರ್ಕಟವು ಪ್ರತೀಕ. ನಮ್ಮಲ್ಲೂ ಮನಸ್ಸನ್ನು ಮರ್ಕಟಕ್ಕೆ ಹೋಲಿಸು ವುದಿದೆ. ಅಹಂನ ಮೂಲ ಮನಸ್ಸು.
ಇಷ್ಟನ್ನು ಗಮನದಲ್ಲಿ ಇರಿಸಿಕೊಂಡು ಚೀನದ ಈ ಕಥೆಯನ್ನು ಓದಿ. ಒಮ್ಮೆ ಒಂದು ಕಪಿ ಬುದ್ಧನಲ್ಲಿಗೆ ಬಂತು. ತನ್ನಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದಾಗಿ ಅದು ಬುದ್ಧನಲ್ಲಿ ಕೊಚ್ಚಿ ಕೊಂಡಿತು. “ಅಸಾಧ್ಯ! ಹಾಗೊಂದು ಪದವೇ ನನ್ನ ಶಬ್ದಕೋಶ ದಲ್ಲಿಲ್ಲ’ ಎಂದಿತದು.
ಪ್ರಸನ್ನವದನದ ಬುದ್ಧ ಹೇಳಿದ, “ನೀನು ಬಹಳ ಸಾಮರ್ಥ್ಯವಂತನಿದ್ದೀ ಎಂಬುದು ನೋಡಿದ ಕೂಡಲೇ ತಿಳಿಯು ತ್ತದೆ. ಆದರೂ ಒಮ್ಮೆ ಪರೀಕ್ಷಿಸಬೇಕಲ್ಲ? ಈಗ ನಾನು ಬಲಗೈಯನ್ನು ಮುಂದೆ ಚಾಚುತ್ತೇನೆ. ನೀನು ನಿಂತಲ್ಲಿಂದ ಹಾರಿ ನನ್ನ ಹಸ್ತವನ್ನು ದಾಟಿ ಆಚೆ ಕಡೆ ಇಳಿಯಬೇಕು. ಗೆದ್ದೆಯಾದರೆ ಸ್ವರ್ಗದಲ್ಲಿ ಇಂದ್ರನ ಬದಿಯ ಪೀಠ ನಿನ್ನದಾಗುತ್ತದೆ. ವಿಫಲವಾದರೆ ಇನ್ನೊಂದು ಯುಗದ ವರೆಗೆ ನನ್ನ ಬಳಿಗೆ ಬರುವಂತಿಲ್ಲ.’ ಕಪಿ ಯೋಚಿಸಿತು, “ಈ ಬುದ್ಧ ಎಂಥ ಮೂರ್ಖ. ನಾನು ನೂರಾರು ಯೋಜನ ದೂರ ಹಾರಬಲ್ಲೆ. ಇವನ ಹಸ್ತ ಕೆಲವು ಇಂಚುಗಳನ್ನು ಮೀರದು…’
ಬುದ್ಧ ತನ್ನ ಬಲ ಹಸ್ತವನ್ನು ಮುಂದಕ್ಕೆ ಚಾಚಿದ. ಅದೊಂದು ಕಮಲದ ಎಲೆ ಯಂತೆ ಇತ್ತು. ಬುದ್ಧ ನೋಡುತ್ತಲೇ ಇದ್ದ; ಧನುಸ್ಸಿನಿಂದ ಬಿಟ್ಟ ಬಾಣದಂತೆ ಅತೀವ ವೇಗದಲ್ಲಿ ಮರ್ಕಟ ಆಕಾಶಕ್ಕೆ ನೆಗೆಯಿತು.
ಹಾರುತ್ತ ಹಾರುತ್ತ ಅದು ಆಕಾಶದ ಕೊನೆ ಎಂಬಷ್ಟು ಎತ್ತರಕ್ಕೆ ಸಾಗಿತು. ಅಲ್ಲಿ ಅದಕ್ಕೆ ಐದು ಗುಲಾಬಿ ವರ್ಣದ ಸ್ತಂಭಗಳು ಕಾಣಿಸಿದವು. “ಬಹುಷಃ ಸ್ವರ್ಗದ ದ್ವಾರ ಇದೇ ಇರಬಹುದು. ಇನ್ನು ಹಿಂದಕ್ಕೆ ಹಾರೋಣ’ ಎಂದು ಕೊಂಡ ಅದು ಇದ್ದುದರಲ್ಲಿ ಎತ್ತರದ ಸ್ತಂಭದ ತುದಿಯಲ್ಲಿ “ಕಪಿಗಳಲ್ಲಿಯೇ ಅತ್ಯಂತ ಸಾಮರ್ಥ್ಯಶಾಲಿ ಇಷ್ಟು ಎತ್ತರ ಹಾರಿದ್ದ’ ಎಂದು ಬರೆ ಯಿತು. ಅಷ್ಟೇ ಅಲ್ಲ, ತಿರಸ್ಕಾರ ಭಾವದಿಂದ ಅದೇ ಸ್ತಂಭದ ಬುಡದಲ್ಲಿ ಮೂತ್ರ ವಿಸರ್ಜಿ ಸಿತು. ಬಳಿಕ ಹಿಂದಕ್ಕೆ ಹಾರಿ ಬುದ್ಧನ ಬಲ ಹಸ್ತದ ಇನ್ನೊಂದು ಬದಿಯಲ್ಲಿ ಇಳಿಯಿತು.
“ನಾನು ಗೆದ್ದೆ ‘ ಎಂದಿತು ಕಪಿ. ಬುದ್ಧ ಮುಗುಳ್ನಗುತ್ತ ಹೇಳಿದ, “ನೀನು ನನ್ನ ಹಸ್ತ ದೊಳಗೆಯೇ ಇದ್ದೆ, ಎಲ್ಲೂ ಹೋಗಿರಲಿಲ್ಲ’.
ಕಪಿ ಹೇಳಿತು, “ಇಲ್ಲಪ್ಪ, ನಾನು ಬಹಳ ಎತ್ತರಕ್ಕೆ ಹಾರಿದ್ದೆ. ಸ್ವರ್ಗದ ಪ್ರವೇಶದ್ವಾರದ ಸ್ತಂಭಗಳನ್ನು ಕಂಡುಬಂದಿದ್ದೇನೆ. ಅಲ್ಲಿ ಅದನ್ನು ದಾಖಲಿಸಿದ್ದೇನೆ’.
ಬುದ್ಧ ನಗುತ್ತ ತನ್ನ ಬಲಹಸ್ತದ ನಡುಬೆರಳನ್ನು ತೋರಿಸಿದ. ಕಪಿ ಬರೆದ ಲೇಖ ಅದರ ತುದಿಯಲ್ಲಿತ್ತು, ಬುಡದಲ್ಲಿ ಮಂಗನ ಮೂತ್ರ ನಾತ ಬೀರುತ್ತಿತ್ತು.
ನಮ್ಮ ಅಹಮಿಕೆಯ ಪ್ರತೀಕ ಇದೇ ಮಂಗ. ತಾನು ಎಲ್ಲವನ್ನೂ ಮಾಡಬಲ್ಲೆ ಎಂಬ ಸುಳ್ಳು ಅದರ ಜೀವಾಳ. ನಿಜ ವಾಗಿಯೂ ಅದರ ಸಾಮರ್ಥ್ಯವೇನು ಎಂಬುದರ ಅರಿವು ನಮ್ಮೆಲ್ಲರಲ್ಲೂ ಇದ್ದರೆ ಚೆಂದ.
(ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್ ಪೊಲೀಸ್ ಠಾಣೆ ಬಂಟ್ವಾಳಕ್ಕೆ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.