ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ


Team Udayavani, Jun 6, 2022, 6:15 AM IST

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವನಾಗಿ ಹುಟ್ಟಿದ ಮೇಲೆ ಯಾವುದೇ ಕಷ್ಟಗಳು ಬಂದರೂ ಅದನ್ನು ಎದುರಿಸಿ ಬದುಕಬೇಕು. ಸಾಯುವವರೆಗೆ ಬದುಕಬೇಕಾದುದು ಧರ್ಮ. ಯಾರ ಬಳಿಯಲ್ಲಿ ದೇವರು ಕರುಣಿಸಿದ ಎರಡು ಕೈಗಳಿವೆಯೇ ಅವರೇ ಸಿ¨ªಾರ್ಥರು. ಅಂಥವರು ಏನನ್ನೂ ಸಾಧಿಸಬಹುದು. ಕೈಗಳಿಂದ ದುಡಿದು ಬದುಕಬಹುದು. ಕೈಗಳನ್ನು ತಿನ್ನುವುದಕ್ಕಿಂತ ಹೆಚ್ಚಾಗಿ ದುಡಿಯಲು ಬಳಸಬೇಕು. ಯಾರೂ ದೀನರೂ ಅಲ್ಲ, ದುರ್ಬಲರೂ ಅಲ್ಲ. ಇಂದ್ರಿಯಗಳೇ ಎಲ್ಲ ಬಯಕೆಗಳಿಗೂ ಕರ್ಮ ಗಳಿಗೂ ಮೂಲವಾಗಿದೆ. ಆದರೆ ಮನಸನ್ನು ಹತೋಟಿಗೆ ತಂದು ಧರ್ಮದಲ್ಲಿ ನಡೆದರೆ ನಮ್ಮನ್ನು ಜುಗುಪ್ಸೆ ಕಾಡಲಾರದು. ಯಾವುದೇ ಸಮಸ್ಯೆ, ಜಂಜಾಟಗಳಿಗೆ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರವಲ್ಲ.

ನಮ್ಮ ಜೀವನದ ಯಾವುದಾದರೊಂದು ಕಾಲಘಟ್ಟದಲ್ಲಿ ನಿರಾಸೆ ಕಾಡಿದಾಗ ದೇವರನ್ನು ಧ್ಯಾನಿಸಿ. ಕಷ್ಟಗಳು ಮನುಷ್ಯರಿಗೆ ಬಾರದೆ ಇನ್ಯಾರಿಗೆ ಬರುತ್ತದೆ. ನಮ್ಮ ಜೀವನ ಸಂಜೀವನವಾದರೆ ಅದಕ್ಕಿಂತ ಸಂತೋಷ ಬೇರೆ ಇಲ್ಲ. ಸಂಜೀವನ ಆಗಬೇಕಾದರೆ ಜೀವನವನ್ನು ಸರಿಯಾದ ರೀತಿಯಲ್ಲಿ ನೋಡಬೇಕು. “ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಗಾದೆ ಸುಳ್ಳಲ್ಲ. ಹೆಚ್ಚು ಸಂಪಾದನೆ ಮಾಡಿದರೆ ಸ್ವಲ್ಪ ಕೂಡಿಸಿಡಿ. ಮುಂದೆ ಕಷ್ಟ ಕಾಲಕ್ಕೆ ಅದು ನೆರವಾಗಬಹುದು. ಮಿಕ್ಕಿದ್ದರೆ ದಾನ ಮಾಡಿ. ದಾನ ಮಾಡು ವಾಗ ಪ್ರಚಾರ ಸಲ್ಲದು. ಬಲ ಕೈಯಲ್ಲಿ ಕೊಟ್ಟರೆ ಅದು ಎಡ ಕೈಗೆ ಗೊತ್ತಾಗಬಾರದು.

ಇನ್ನು ಆತ್ಮಹತ್ಯೆ ಮಹಾಪಾಪ. ಯಾರು ಸಂತೋಷದಲ್ಲಿ ಮರಣಿಸುತ್ತಾನೋ ಅವನೇ ಧನ್ಯನು. ನಾವು ನಮ್ಮನ್ನು ಅಂಗವಿಕಲ ವ್ಯಕ್ತಿಗೆ ಹೋಲಿಸಿ ನೋಡಿದಾಗ ನಾವೇ ಪುಣ್ಯವಂತರು ಎಂದು ಭಾಸವಾಗಬಹುದು. ಅದೇ ಅಂಗವಿಕಲ ದುಡಿದು ತಿನ್ನುವಾಗ ನಮಗೆ ದುಡಿಯುವ ಮನಸ್ಸು ಬರಬಹುದು. ಅವನಿಗಿಂತ ನಾವೇ ಮೇಲು ಎಂದು ಭಾಸವಾಗಬಹುದು. ಸಂಸಾರದ ಜವಾಬ್ದಾರಿಯಲ್ಲಿ ನೋವು ಮರೆಯಬಹುದು ಇಲ್ಲವೇ ಸಾಧಿಸಬೇಕೆಂಬ ಛಲ ಮೂಡಬಹುದು. ಯಾರೊಬ್ಬರೂ ಒಂಟಿಯಾಗಿ ಇರಬಾರದು. ಸಂಗಾತಿ ಅಥವಾ ಸ್ನೇಹಿತರನ್ನು ಹೊಂದಿರಬೇಕು. ಆಗ ಕಷ್ಟ-ಸುಖಗಳನ್ನು ಅವರೊಂದಿಗೆ ಹಂಚಿಕೊಳ್ಳಬಹುದು. ಆಗ ಮನಸ್ಸಿನ ತುಮುಲಗಳಿಗೆ ಒಂದು ಪರಿಹಾರ ಸಿಕ್ಕೇ ಸಿಗುತ್ತದೆ. ಇದು ಬಿಟ್ಟು ಎಲ್ಲವನ್ನೂ ತಮ್ಮ ಮನಸ್ಸಿನೊಳಗೆ ಇರಿಸಿಕೊಂಡು ಒಂಟಿಯಾಗಿ ಮರುಗುತ್ತಾ ಕುಳಿತರೆ ನಮ್ಮನ್ನು ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಸಿಗಲು ಅಸಾಧ್ಯ.

ನಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಮೊದಲು ಮನಗಾಣ ಬೇಕು. ನಮ್ಮನ್ನು ನಮಗಿಂತ ಕೆಳಗಿನವರಿಗೆ ಹೋಲಿಸಿ ನೋಡಿ. ನಮಗಿಂತ ಮೇಲಿ ನವರನ್ನು ನೋಡಿ ಅದೇ ರೀತಿ ಆಗ ಬೇಕೆಂಬ ಕನಸು ಕಾಣಬೇಕು. ಮುಂದೆ ಆ ಕನಸು ನನಸಾಗಬಹುದು. ಜೀವನ ಶಾಶ್ವತವಲ್ಲ. ಅದಕ್ಕೆ ಅಳಿವಿದೆ. ಹುಟ್ಟು-ಸಾವುಗಳ ಮಧ್ಯೆ ಜೀವಿಸುವುದು ಮನುಷ್ಯನ ಧರ್ಮ. ನಾಳೆ ಏನಾಗುತ್ತದೆ ಎಂದು ಯಾರಿಗೂ ತಿಳಿಯುವುದಿಲ್ಲ. ಆದುದರಿಂದ ನಾಳೆ ಮಾಡುವ ಕೆಲಸವನ್ನು ಇವತ್ತೇ ಮಾಡುವ. ನಾವು ಮಾಡುವ ಕೆಲಸದ ಪ್ರತಿಫ‌ಲಕ್ಕಾಗಿ ಹಂಬಲಿಸದಿರೋಣ. ನಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಕ್ಕೇ ಸಿಗುತ್ತದೆ.

ನಾನು ನಿಷ್ಪ್ರಯೋಜಕ ಎಂಬುದನ್ನು ಮನಸ್ಸಿನಿಂದ ತೊಡೆದು ಹಾಕಬೇಕು. ಯಾರೂ ನಿಷ್ಪ್ರಯೋಜಕರಲ್ಲ. ಎಲ್ಲರೂ ಶಕ್ತರು. ಸಾಧಿಸಿ ತೋರಿಸಬೇಕು.ಆಗ ಯಶಸ್ಸು ತನ್ನಿಂತಾನೆ ಸಿಗುತ್ತದೆ. ಆಕಾಶಕ್ಕೆ ಏಣಿ ಹಾಕಲು ಪ್ರಯತ್ನಿಸುವುದರಲ್ಲಿ ತಪ್ಪೇನಿಲ್ಲ. ಹುಟ್ಟುವಾಗ ಯಾರು ಶಕ್ತರಲ್ಲ. ಬೆಳೆದಂತೆ ಮನಸ್ಸು ಗಟ್ಟಿಯಾಗುತ್ತದೆ. ಯುದ್ದದಲ್ಲಿ ಶಸ್ತ್ರ ತ್ಯಾಗ ಮಾಡಿದರೆ ಹೇಗೆ ಹೇಡಿಗಳಾಗುತ್ತಾರೆಯೋ ಹಾಗೆಯೇ ಜೀವನದಲ್ಲಿ ಉತ್ಸಾಹ ಕಳೆದುಕೊಂಡು ಆತ್ಮಹತ್ಯೆಯ ಹಾದಿ ತುಳಿದರೆ ಅದಕ್ಕಿಂತ ಮಹಾಪರಾಧ ಬೇರೊಂದಿಲ್ಲ. ಜೀವನ ವೆಂಬುದು ಸುಂದರ ಬೆಸುಗೆ. ಅದನ್ನು ಸ್ವೀಕಾರ ಮಾಡುವುದೇ ಉಲ್ಲಾಸ. ಮನಸ್ಸನ್ನು ಗಟ್ಟಿಮಾಡಿ ಬದುಕಬೇಕು. ಆಗ ಒಳ್ಳೆಯದಾಗುತ್ತದೆ. ಜೀವನ ಎಂದ ಮೇಲೆ ಅದಕ್ಕೊಂದು ಗುರಿ ಇರಬೇಕು. ಆ ಗುರಿಯನ್ನು ಸಾಧಿಸಲು ಪ್ರಯತ್ನ, ಪರಿಶ್ರಮಪಡಬೇಕಾದುದು ನಮ್ಮ ಕರ್ತವ್ಯ. ನಿರಂತರ ಪರಿಶ್ರಮ ನಮ್ಮನ್ನು ಗುರಿಯೆಡೆಗೆ ತಲುಪಿಸುತ್ತದೆ. ಆಗ ನಮ್ಮ ಜೀವನ ಸಾರ್ಥಕಗೊಳ್ಳುತ್ತದೆ.

– ಕೆ.ಪಿ.ಎ. ರಹೀಮ್‌, ಮಂಗಳೂರು

ಟಾಪ್ ನ್ಯೂಸ್

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

2-katapady

Katapady:ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

China Open 2024: ಒಲಿಂಪಿಕ್‌ ವಿಜೇತೆಗೆ ಮಾಳವಿಕಾ ಆಘಾತ

China Open 2024: ಒಲಿಂಪಿಕ್‌ ವಿಜೇತೆಗೆ ಮಾಳವಿಕಾ ಆಘಾತ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Nirashritha

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ಮಾರ್ಗ ಸುಗಮವಾದರೆ ಗುರಿ ಸಾಧನೆ ಸುಲಭ

ಮಾರ್ಗ ಸುಗಮವಾದರೆ ಗುರಿ ಸಾಧನೆ ಸುಲಭ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

2-katapady

Katapady:ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

China Open 2024: ಒಲಿಂಪಿಕ್‌ ವಿಜೇತೆಗೆ ಮಾಳವಿಕಾ ಆಘಾತ

China Open 2024: ಒಲಿಂಪಿಕ್‌ ವಿಜೇತೆಗೆ ಮಾಳವಿಕಾ ಆಘಾತ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.