ಸ್ಪರ್ಶಮಣಿ ಯಾವುದೇ ಕ್ಷಣ ಎದುರಾದೀತು!
Team Udayavani, Jan 2, 2021, 5:48 AM IST
ಒಂದಾನೊಂದು ಕಾಲದಲ್ಲಿ ಒಂದು ರಾಜ್ಯದ ರಾಜಧಾನಿಯಲ್ಲಿ ಅಮೂಲ್ಯ ಗ್ರಂಥಗಳಿದ್ದ ಶ್ರೇಷ್ಠ ಗ್ರಂಥಾಲಯವೊಂದಿತ್ತು. ಉತ್ಕೃಷ್ಟ ಗ್ರಂಥಗಳು ಅಲ್ಲಿದ್ದವು. ಜ್ಞಾನಭಂಡಾರವೇ ಆಗಿತ್ತು ಆ ಗ್ರಂಥಾಲಯ. ಆದರೆ ಏನು ಮಾಡೋಣ, ಒಂದು ದುರದೃಷ್ಟಕರ ದಿನ ಬೆಂಕಿ ಬಿದ್ದು ಗ್ರಂಥಾಲಯ ಸಂಪೂರ್ಣವಾಗಿ ಉರಿದು ಹೋಯಿತು.
ಉಳಿದುಕೊಂಡದ್ದು ಒಂದೇ ಒಂದು ಹೊತ್ತಗೆ. ಅದೇನೂ ಅಷ್ಟು ಮಹತ್ವದ್ದಲ್ಲ. ಹೆಚ್ಚು ಪುಟಗಳೂ ಅದರಲ್ಲಿ ಇರಲಿಲ್ಲ. ಬೆಂಕಿ ನಂದಿಸುವ ಕೆಲಸ ಮಾಡಿದವರಲ್ಲಿ ಯಾರೋ ಒಬ್ಬರು ಅದನ್ನು ಹಳೆಯ ಪುಸ್ತಕಗಳ ಅಂಗಡಿಗೆ ಮಾರಿದರು. ಸ್ವಲ್ಪ ಕಾಲದ ಬಳಿಕ ಆ ಗ್ರಂಥವನ್ನು ಒಬ್ಬ ದಾರಿಹೋಕ ಕೆಲವು ತಾಮ್ರದ ನಾಣ್ಯಗಳಿಗೆ ಖರೀದಿಸಿದ.
ಮನೆಗೆ ಹೋಗಿ ಗ್ರಂಥ ವನ್ನು ಕುತೂಹಲದಿಂದ ತೆರೆದು ಓದುವಾಗ ಅದರ ನಡುವಣ ಪುಟದಲ್ಲಿ ಆಶ್ಚರ್ಯಕರ ರಹಸ್ಯ ವೊಂದನ್ನು ಬರೆದಿದ್ದುದು ಅವನಿಗೆ ಕಾಣಿಸಿತು. ಸ್ಪರ್ಶಿಸಿ ದ್ದೆಲ್ಲವನ್ನೂ ಚಿನ್ನವಾಗಿಸುವ ಅದ್ಭುತ ಸ್ಪರ್ಶ ಮಣಿಯ ಬಗ್ಗೆ ಅದರಲ್ಲಿ ವಿವರಗಳು ಇದ್ದವು, ಅದು ಎಲ್ಲಿ ಸಿಗುತ್ತದೆ ಎಂಬ ಬಗ್ಗೆ ಸೂಚನೆಗಳಿದ್ದವು.
ಗ್ರಂಥ ಖರೀದಿಸಿದಾತ ಆಸ್ಥೆಯಿಂದ ಅದನ್ನು ಓದಿ ಎಲ್ಲವನ್ನೂ ಮನನ ಮಾಡಿ ಕೊಂಡ. ಟಿಪ್ಪಣಿಗಳನ್ನೂ ಮಾಡಿಟ್ಟುಕೊಂಡ. “ಸಾವಿರಾರು ಮೈಲು ದೂರದ ಕಪ್ಪು ಸಮುದ್ರದ ಒಂದು ಕಡಲ ಕಿನಾರೆಯಲ್ಲಿ ಆ ಸ್ಪರ್ಶಮಣಿ ಬಿದ್ದಿರುತ್ತದೆ. ಅಲ್ಲಿ ಅದ ರಂತೆಯೇ ಇರುವ ಕೋಟ್ಯಂತರ ಕಲ್ಲುಗಳು ಕೂಡ ಇರುತ್ತವೆ. ಎಲ್ಲ ಕಲ್ಲುಗಳು ಶೀತಲ ವಾಗಿದ್ದರೆ ಸ್ಪರ್ಶಮಣಿ ಮಾತ್ರ ಬಿಸಿಯಾಗಿರು ತ್ತದೆ. ಅದನ್ನು ಗುರುತಿಸುವುದಕ್ಕೆ ಇದೇ ದಾರಿ’ ಎಂದು ಆ ಗ್ರಂಥದಲ್ಲಿ ಬರೆದಿತ್ತು.
ಸ್ಪರ್ಶಮಣಿಯನ್ನು ಹೇಗಾದರೂ ಮಾಡಿ ಪತ್ತೆ ಹಚ್ಚಬೇಕು ಎಂದು ಆತ ಆಲೋಚಿಸಿದ. ತನ್ನದಾಗಿದ್ದ ಎಲ್ಲವನ್ನೂ ಮಾರಾಟ ಮಾಡಿ ಕಪ್ಪು ಸಮುದ್ರದ ಕಿನಾರೆಗೆ ಹೋಗುವುದಕ್ಕೆ ಬೇಕಾದ ಹಣವನ್ನು ಹೊಂಚಿಕೊಂಡ. ನಿಜ, ಗ್ರಂಥದಲ್ಲಿ ಹೇಳಿದ್ದಂತೆಯೇ ಅಲ್ಲಿ ಕೋಟ್ಯಂತರ ಕಲ್ಲುಗಳಿದ್ದವು. ಒಂದೊಂದನ್ನೇ ಮುಟ್ಟಿ ನೋಡುವುದಷ್ಟೇ ದಾರಿ. ಆದರೆ ಒಮ್ಮೆ ಪರೀಕ್ಷಿಸಿದ್ದನ್ನು ಮತ್ತೆ ಮತ್ತೆ ಪರೀಕ್ಷಿಸು ವಂತಾಗಬಾರದಲ್ಲ. ಹಾಗಾಗಿ ಒಮ್ಮೆ ಎತ್ತಿ ಮುಟ್ಟಿನೋಡಿದ ಕಲ್ಲನ್ನು ಸಮುದ್ರಕ್ಕೆ ಎಸೆದು ಬಿಡುವ ಉಪಾಯ ಅನುಸರಿಸಿದ.
ಕಡಲಿನ ಕಿನಾರೆಯಿಂದ ಕಲ್ಲನ್ನು ಎತ್ತು ವುದು, ಮುಟ್ಟಿ ನೋಡುವುದು, ಸಮುದ್ರಕ್ಕೆ ಎಸೆಯುವುದು; ಕಲ್ಲನ್ನು ಎತ್ತುವುದು, ಮುಟ್ಟುವುದು, ಎಸೆಯುವುದು… ಹೀಗೆ ದಿನಚರಿ ಆರಂಭವಾಯಿತು. ಬೆಳಗ್ಗಿ ನಿಂದ ಸಂಜೆಯ ತನಕ ನಡೆಯಿತು. ದಿನಗಳು, ವಾರಗಳು, ತಿಂಗಳುಗಳು, ವರ್ಷಗಳು ಕಳೆಯುತ್ತ ಸಾಗಿದವು. ಎಷ್ಟೋ ಕಾಲದವರೆಗೆ ಸ್ಪರ್ಶಮಣಿ ಸಿಗಲೇ ಇಲ್ಲ. ಆತ ಪ್ರಯತ್ನವನ್ನು ಬಿಡಲಿಲ್ಲ. ಕಲ್ಲು ಎತ್ತಿಕೊ ಳ್ಳುವುದು, ಮುಟ್ಟಿನೋಡುವುದು, ಸಮುದ್ರಕ್ಕೆ ಎಸೆಯುವುದು ಸಾಗುತ್ತಲೇ ಇತ್ತು.
ಕೊನೆಗೊಂದು ದಿನ ಎತ್ತಿಕೊಂಡು ಒಂದು ಕಲ್ಲು ಬಿಸಿಯಾಗಿತ್ತು. ಹೌದು, ಅದೇ ಸ್ಪರ್ಶಮಣಿ! ಆದರೆ ವರ್ಷಗಟ್ಟಲೆಯಿಂದ ಕಲ್ಲು ಎತ್ತಿ, ಮುಟ್ಟಿ, ಶೀತಲವಾಗಿರುವುದನ್ನು ಸಮುದ್ರಕ್ಕೆ ಎಸೆಯುವ ಯಾಂತ್ರಿಕ ಕ್ರಿಯೆ ಯಲ್ಲಿ ಆತ ಎಷ್ಟು ಮಗ್ನನಾಗಿದ್ದ ಎಂದರೆ, ಈಗ ಎತ್ತಿಕೊಂಡದ್ದು ಸ್ಪರ್ಶಮಣಿ ಎಂದು ತಿಳಿಯುವಷ್ಟರಲ್ಲಿ ಆತ ಅದನ್ನು ಸಮುದ್ರಕ್ಕೆ ಎಸೆದಾಗಿತ್ತು!
ದಿನನಿತ್ಯ ನಮಗೆ ಎದುರಾಗುವ ಜನರು, ಸನ್ನಿವೇಶಗಳು, ಸಂದರ್ಭಗಳಲ್ಲಿಯೂ ಇಂಥ ಅಪೂರ್ವ ಸ್ಪರ್ಶಮಣಿಗಳು ಇರಬಹುದು. ಆದರೆ ಎಲ್ಲರು, ಎಲ್ಲವುಗಳ ಬಗೆಗೆ ಅಭೇದವಾಗಿ ಇರುವುದು ನಮಗೆ ರೂಢಿಯಾಗಿದೆ. ಸದಾ ಯಾಂತ್ರಿಕವಾಗಿ ಇರದಿರೋಣ. ಇಲ್ಲವಾದರೆ ಸ್ಪರ್ಶಮಣಿ ಕೈತಪ್ಪಿಹೋಗಬಹುದು.
(ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.