ಸೃಷ್ಟಿಯ ಆಧಾರ ಶ್ರುತಿಯ ಜತೆಗೂಡಿದ ಬದುಕಿನ ಸ್ವರ

Team Udayavani, Oct 17, 2020, 6:15 AM IST

ಸೃಷ್ಟಿಯ ಆಧಾರ ಶ್ರುತಿಯ ಜತೆಗೂಡಿದ ಬದುಕಿನ ಸ್ವರ

ಸಾಂದರ್ಭಿಕ ಚಿತ್ರ

ಶ್ರುತಿಗೂಡುವುದು ಎಂಬುದು ಸಂಗೀತಕ್ಕೆ ಮಾತ್ರ ಅಲ್ಲ, ಬದುಕಿನ ಮಟ್ಟಿಗೂ ಬಹಳ ಮುಖ್ಯವಾದ ವಿಚಾರ. ಸಂಗೀತದಲ್ಲಿ ಆಧಾರ ಶ್ರುತಿಗೆ ನಮ್ಮ ಸ್ವರವನ್ನು ಕೂಡಿಸುತ್ತೇವೆ. ನಮ್ಮ ಬದುಕನ್ನು ಯಾವುದರ ಜತೆಗೆ ಶ್ರುತಿ ಗೂಡಿಸಬೇಕು ಎನ್ನುವುದು ಪ್ರಶ್ನೆ. ಸೃಷ್ಟಿಯ ಜತೆಗೆ ಎನ್ನುವುದು ಉತ್ತರ. ಸೃಷ್ಟಿಯ ಜತೆಗೆ ಸಮರಸ ಹೊಂದಿದ ಬದುಕು ಶ್ರೇಷ್ಠ ಮಟ್ಟಕ್ಕೇರುತ್ತದೆ.

ಈ ಸೃಷ್ಟಿಯಲ್ಲಿ ಪ್ರತಿಯೊಂದು ಕೂಡ ನಮಗೆ ಅನೂಹ್ಯವಾದ ಕಾರ್ಯಕಾರಣ ಸಂಬಂಧವನ್ನು ಹೊಂದಿರುತ್ತದೆ. ಲೋಕದ ನಿಯಮ ಅನ್ನುತ್ತಾರಲ್ಲ? ಪ್ರತಿಯೊಂದು ಕೂಡ ಅಂಥದೊಂದು ಕಾಣದ ನಿಯಮ ಪ್ರಕಾರ ನಡೆಯುತ್ತದೆ. ಸೃಷ್ಟಿಯಲ್ಲಿ ನಮ್ಮ ಬರಿಗಣ್ಣಿಗೆ ಕಾಣದ ವ್ಯವಸ್ಥೆಯೊಂದಿದೆ. ಅದನ್ನು ಅರ್ಥ ಮಾಡಿಕೊಂಡರೆ ನಮ್ಮ ಬದುಕನ್ನು ಸೃಷ್ಟಿಸಹಜವಾಗಿ ಮುನ್ನಡೆಸ ಬಹುದು. ಸೃಷ್ಟಿಯ ನಿಯಮಗಳನ್ನು, ಅದು ನಡೆಯುತ್ತಿರುವ ರೀತಿಯನ್ನು ಅರ್ಥ ಮಾಡಿಕೊಳ್ಳುವು ದಕ್ಕೆ ಬೇಕಾದದ್ದು ಪ್ರತಿ ಯೊಂದನ್ನು ಕೂಡ ಸಕಾರಾತ್ಮಕವಾಗಿ ಕಾಣುವ ದೃಷ್ಟಿ, ಎಲ್ಲವನ್ನೂ ಬೆರಗಿ ನಿಂದ ನೋಡುವ ಮುಗ್ಧತೆ ಮತ್ತು ಪ್ರತಿ ಯೊಂದನ್ನೂ ಪ್ರೀತಿಸುವ ಮನೋಭಾವ. ಇವುಗಳ ಜತೆಗೆ ಆಳವಾದ ಆತ್ಮ ವಿಮರ್ಶೆಯೂ ಜತೆಗೂಡಿ ದರೆ ಸೃಷ್ಟಿ – ಪ್ರಕೃತಿಯ ನಿಯಮಗಳನ್ನು ಅರ್ಥ ಮಾಡಿಕೊಂಡು ಅದರ ಜತೆಗೆ ನಮ್ಮ ಬದುಕಿನ ಶ್ರುತಿಯನ್ನು ಕೂಡಿಸಬಹುದು.

ಸೃಷ್ಟಿ ರಹಸ್ಯಗಳನ್ನು ಅರ್ಥ ಮಾಡಿಕೊಳ್ಳು ವುದು ಹೇಗೆ ಎಂಬುದಕ್ಕೆ ಒಂದೆರಡು ಉದಾಹರಣೆಗಳನ್ನು ನೋಡೋಣ. ಒಂದು ಹಾವು ಚಲಿಸುವುದನ್ನು ಗಮನಿಸಿ. ಅದು ಅಂಕುಡೊಂಕಾಗಿ ಹರಿದಾಡುತ್ತದೆ. ನಮಗೆ ಅದು ಬರೇ ಸಣ್ಣ ಸಂಗತಿ ಎನಿಸಬಹುದು ಅಥವಾ ಅದು ನೇರವಾಗಿ ಚಲಿಸಬೇಕಿತ್ತು ಎಂದು ಕಾಣಬಹುದು. ಆದರೆ ಕೈಕಾಲು ಗಳಿಲ್ಲದ ಉರಗ ಸಂತತಿ ತನ್ನ ಮಟ್ಟಿಗೆ ಅತ್ಯಂತ ಸಮರ್ಥವಾದ ಚಲನೆಯ ವ್ಯವಸ್ಥೆ ಯೊಂದನ್ನು ರೂಪಿಸಿಕೊಂಡಿದೆ. ಅದು ಸಾವಿರಾರು ವರ್ಷಗಳ ಅವಧಿಯಲ್ಲಿ ಪರೀಕ್ಷೆ ಗೊಂಡು ಗೆದ್ದುಬಂದ ಚಲನೆಯ ಕ್ರಮ ಎಂಬುದನ್ನು ತಿಳಿದುಕೊಳ್ಳುವ ಒಳಗಣ್ಣು ನಮ್ಮದಾಗಿರಬೇಕು. ಹಾಗೆಯೇ ಒಂದು ಕಾಡನ್ನು ತೆಗೆದುಕೊಳ್ಳಿ. ಮರಗಿಡಗಳು ಅಲ್ಲಿ ಅಡ್ಡಾದಿಡ್ಡಿ ಬೆಳೆದಿವೆ ಅನ್ನಿಸಬಹುದು. ಒಂದು ಉದ್ಯಾನದಲ್ಲಿ ಗಿಡಮರಗಳು ವ್ಯವಸ್ಥಿತವಾಗಿ ಬೆಳೆದಿದ್ದು, ಅದು ಆಕರ್ಷಕ ಅನ್ನಿಸಬಹುದು. ಆದರೆ ಕಾಡಿನ ಸಂರಚನೆಯಲ್ಲಿ ಆಳವಾದ ಅಚ್ಚುಕಟ್ಟು ವ್ಯವಸ್ಥೆಯೊಂದು ಹುದುಗಿರು ತ್ತದೆ. ಅದು ಕೋಟ್ಯಂತರ ವರ್ಷಗಳಿಂದ ಸುದೃಢವಾಗಿ ರುವಂಥದ್ದು. ಆದರೆ ನಮಗೆ ಸುಂದರ ಎನ್ನಿಸುವ ಉದ್ಯಾನ ವನ ನಿರ್ವಹಣೆ ಮಾಡದಿದ್ದರೆ ಕೆಲವೇ ದಿನಗಳಲ್ಲಿ ಹಾಳಾಗುತ್ತದೆ, ಒಣಗುತ್ತದೆ.

ಈ ಸೃಷ್ಟಿ ವೈವಿಧ್ಯ ಮಯ ವಾಗಿದೆ. ಹಾಗಿದ್ದೂ ಸೃಷ್ಟಿಯ ಪ್ರತಿ ಯೊಂದು ಕೂಡ ಕಾಲ ಚಕ್ರದಲ್ಲಿ ಪರೀಕ್ಷೆಗೊಂಡು ಗಟ್ಟಿ ಯಾದ ವ್ಯವಸ್ಥಿತ ಸ್ವರೂಪವೊಂದರ ಪ್ರಕಾರ ನಡೆಯು ತ್ತಿರುತ್ತದೆ. ಎಲ್ಲೋ ಸುತ್ತಿ ತನ್ನ ಗೂಡನ್ನೇ ಸೇರುವ ಜೇನುಹುಳ, ಇಂತಿಷ್ಟೇ ಎಲೆಗಳನ್ನು ಅರಳಿಸಿದ ಮೇಲೆ ಗೊನೆ ಹಾಕುವ ಬಾಳೆ, ನಿಯಮಿತ ಕಾಲಗತಿಯ ಪ್ರಕಾರ ಬೆದೆಗೆ ಬರುವ ಪ್ರಾಣಿಗಳು… ಎಲ್ಲವೂ ನಿಯಮಬದ್ಧವಾಗಿ ನಡೆಯುತ್ತಿವೆ.

ನಾವು ನಮ್ಮ ಒಳಗಣ್ಣನ್ನು ತೆರೆದು ಈ ಸೃಷ್ಟಿ ನಿಯಮಗಳನ್ನು ಅರ್ಥ ಮಾಡಿ ಕೊಳ್ಳಲು ಪ್ರಯತ್ನಿಸಬೇಕು. ಅದಕ್ಕಾಗಿ ಎಲ್ಲವನ್ನೂ ಸಕಾರಾತ್ಮಕವಾದ ಸ್ವೀಕಾರ ಮನೋಭಾವ ದಿಂದ ನೋಡುವ, ಮಗುಸಹಜ ಕುತೂಹಲ ದಿಂದ ಪರೀಕ್ಷಿಸುವ ಗುಣಗಳನ್ನು ಬೆಳೆಸಿಕೊಳ್ಳ ಬೇಕು. ಇದರ ಜತೆಗೆ ಬೇಕಾಗಿರುವುದು ಸರ್ವವನ್ನೂ ವಿನಯ ದಿಂದ ಗಮನಿಸುವ ವ್ಯವಧಾನ ನಮ್ಮಲ್ಲಿರುವುದು.

( ಸಾರ ಸಂಗ್ರಹ)

ಟಾಪ್ ನ್ಯೂಸ್

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Mulki: ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.