ಅವರು, ಇವರು, ಮತ್ತೂಬ್ಬರು – ಎಲ್ಲರೂ ನಮ್ಮವರು!

Team Udayavani, Oct 10, 2020, 6:09 AM IST

Flowerಅವರು, ಇವರು, ಮತ್ತೂಬ್ಬರು – ಎಲ್ಲರೂ ನಮ್ಮವರು!ಅವರು, ಇವರು, ಮತ್ತೂಬ್ಬರು – ಎಲ್ಲರೂ ನಮ್ಮವರು!

ಬೌದ್ಧ ಮಠವೊಂದರಲ್ಲಿ ಝೆನ್‌ ಗುರುಗಳು ಒಲೆ ಉರಿಸಲು ಪ್ರಯತ್ನಿಸುತ್ತಿದ್ದರು. ಕಟ್ಟಿಗೆ ಕೊಂಚ ಒದ್ದೆಯಾದ ಕಾರಣ ಬೆಂಕಿ ಹತ್ತಿ ಕೊಳ್ಳುತ್ತಿರಲಿಲ್ಲ. ಊದಿ ಊದಿ ಗುರುಗಳ ಕಣ್ಣುಗಳಲ್ಲಿ ನೀರು ಬಂತು.

ಗುರುಗಳ ಕಷ್ಟವನ್ನು ನೋಡಿದ ಒಬ್ಬ ಶಿಷ್ಯ ಹತ್ತಿರ ಬಂದು ಏನು ಮಾಡುತ್ತಿದ್ದೀರಿ ಎಂದು ಕೇಳಿದ. ಚಹಾ ಮಾಡುತ್ತಿದ್ದೇನೆ ಎಂದು ಗುರುಗಳು ಉತ್ತರಿಸಿದರು. “ಯಾರಿಗಾಗಿ?’ ಮರುಪ್ರಶ್ನೆ ತೂರಿಬಂತು. “ಓ ಅಲ್ಲಿ ಕುಳಿತಿ ದ್ದಾನಲ್ಲ ಸೋಮಾರಿ, ಅವನಿಗಾಗಿ’ ಎಂದರು ಗುರುಗಳು.

ಮಠದಲ್ಲೊಬ್ಬ ಜಡಭರತ ಶಿಷ್ಯನಿದ್ದ. ಸದಾ ನಿದ್ದೆ ತೂಗುವುದು, ಉಳಿದವರೆಲ್ಲರೂ ಕೆಲಸಕಾರ್ಯಗಳಲ್ಲಿ ವ್ಯಸ್ತರಾಗಿದ್ದರೆ ತಾನು ಉದಾಸವಾಗಿರುವುದು ಅವನ ಸ್ವಭಾವ. ಗುರುಗಳು ಹೇಳಿದ್ದು ಅವನ ಬಗ್ಗೆಯೇ.
ಶಿಷ್ಯ ಹೇಳಿದ, “ಅವನು ಈಗ ತಾನೇ ಚಹಾ ಮಾಡಿಕೊಳ್ಳುವಷ್ಟು ದೊಡ್ಡವನಾಗಿ ದ್ದಾನಲ್ಲ! ಅವನೇ ಚಹಾ ತಯಾರಿಸಿಕೊಳ್ಳ ಬಹುದಲ್ಲ’. ಗುರುಗಳು ನಸುನಕ್ಕು ಹೇಳಿ ದರು, “ನಾನೀಗ ಇದ್ದೇನಲ್ಲ!’

ಬದುಕಿನ ಅತ್ಯಂತ ಪ್ರಾಮುಖ್ಯವಾದ ತಣ್ತೀ ಏನು? ನಾವು ಏನು ಮಾಡ ಬೇಕೋ, ನಮ್ಮಿಂದ ಏನು ಸಾಧ್ಯವೋ ಅದನ್ನು ಮಾಡು ವುದು. ಪ್ರತೀ ದಿನ ಕೆಲಸ ಕಾರ್ಯಗಳಲ್ಲಿ ಲವಲವಿಕೆ, ನನ್ನಿಂದ ಇದು ಸಾಧ್ಯ ಎಂಬ ಆಶಾಭಾವ, ಆತ್ಮವಿಶ್ವಾಸ ಹೊಂದಿ ತೊಡಗಿಸಿ ಕೊಳ್ಳುವುದು. ನಮ್ಮ ಆಲೋಚನೆಯು “ನಾನು ಇದನ್ನು ಮಾಡಬೇಕು’ ಮತ್ತು “ನಾನು ಇದನ್ನು ಮಾಡಬಾರದು’ ಎಂಬುದ ಕ್ಕಿಂತ “ನಾನು ಇದನ್ನು ಮಾಡಬಲ್ಲೆ’ ಮತ್ತು “ನಾನು ಇದನ್ನು ಮಾಡಲಾರೆ’ ಎಂಬ ಹಾಗಿ ದ್ದರೆ ಚೆನ್ನ. ಅದು ಸಕಾರಾತ್ಮಕವಾಗಿರುತ್ತದೆ ಮತ್ತು ಪ್ರಾಮಾಣಿಕವಾಗಿರುತ್ತದೆ.

ನಾವು ಯಾವಾಗಲೂ ಇನ್ನೊಬ್ಬರ ಜತೆಗೆ ನಮ್ಮನ್ನು ಗುರುತಿಸಿಕೊಳ್ಳುವಾಗ ಇವಳು ನನ್ನ ಹೆಂಡತಿ, ಈತ ನನ್ನ ಮಗ, ಇವರು ನನ್ನ ಅಪ್ಪ, ಇದು ನನ್ನ ಕುಟುಂಬ ಎಂದು ಹೇಳಿಕೊಳ್ಳುತ್ತೇವೆ. ಇದು ನನ್ನ ಮನೆ, ಇದು ನನ್ನ ಮನೆಯಿರುವ ರಸ್ತೆ, ಇದು ನನ್ನ ಗ್ರಾಮ, ಇದು ನನ್ನ ಊರು… ಹೀಗೆ ಇದು ಮುಂದುವರಿಯುತ್ತದೆ. ಇದರ ಆಧಾರದಲ್ಲಿ ನಾವು “ಇದನ್ನು ಮಾಡುತ್ತೇನೆ’, “ಇದನ್ನು ಮಾಡುವುದಿಲ್ಲ’ ಎಂದು ಬೇಲಿ ಹಾಕಿ ಕೊಳ್ಳುತ್ತೇವೆ. “ನನ್ನ ಮಗು ಗಾಯಗೊಂಡರೆ ಓಡಿಹೋಗಿ ರಕ್ಷಿಸುತ್ತೇನೆ, ಇನ್ಯಾರದೋ ಮಗುವಿಗೆ ಗಾಯವಾದರೆ ನನಗೇನಂತೆ’ ಎನ್ನುವುದು ಇಂತಹ ಚಿಂತನೆಯ ಮುಂದುವರಿದ ರೂಪ.

ನಿಜಕ್ಕಾದರೆ ಈ ಜಗತ್ತಿನಲ್ಲಿ ನಮಗೆ ಸೇರಿದವರು ಯಾರೂ ಇಲ್ಲ. ನಾವು -ನೀವು ಈ ಭೂಮಿಯಲ್ಲಿ ಜನ್ಮ ತಾಳಿದ ಹಾಗೆ ಅವರೂ ಬಂದವರು. ಮದುವೆಯಾದ ಬಳಿಕ ಈಕೆ ನನ್ನ ಹೆಂಡತಿ ಎನ್ನುತ್ತೇವೆ. ಅದು ನಾವೇ ಸೃಷ್ಟಿಸಿಕೊಂಡ ಸಂಬಂಧ. ಆ ಬಳಿಕ ಆ ವ್ಯಕ್ತಿಯಲ್ಲಿ ಪ್ರೀತಿ, ಮೋಹ ಬೆಳೆಯುತ್ತದೆ. ಸಂಸಾರದಲ್ಲಿ ವಿರಸ ಮೂಡಿದಾಗ ಪ್ರೀತಿ, ಮೋಹಗಳ ಸ್ಥಾನವನ್ನು ಹತಾಶೆ, ದ್ವೇಷ ಆಕ್ರಮಿಸಿ ಕೊಳ್ಳುತ್ತವೆ. ಇದು ಮನಸ್ಸಿನ ಭಾವನೆಗಳ ಆಟ.

ಕೆಲವೇ ಕೆಲವರನ್ನು, ಕೆಲವು ವಸ್ತುಗಳನ್ನು ನಮ್ಮವರು, ನಮ್ಮದು ಎಂದುಕೊಳ್ಳುವುದು ಇನ್ನುಳಿದವರು, ಇನ್ನುಳಿದವುಗಳ ಬಗ್ಗೆ ಪಕ್ಷಪಾತದ ಭಾವನೆಗಳು, ಆಲೋಚನೆಗಳು ರೂಪುಗೊಳ್ಳುವಂತೆ ಮಾಡುತ್ತವೆ. “ನಾನು ಇದನ್ನು ಮಾಡುತ್ತೇನೆ’ – “ಇದನ್ನು ಮಾಡುವುದಿಲ್ಲ’ ಎಂಬುದು ಹುಟ್ಟಿ ಕೊಳ್ಳುವುದು ಆಗಲೇ. ಇಂತಹ ಬೇಲಿಗಳನ್ನು ಹಾಕಿಕೊಂಡಾಗ ನಮ್ಮ ವ್ಯಕ್ತಿತ್ವ ಪೂರ್ಣ ಪ್ರಮಾಣದಲ್ಲಿ ಅರಳುವುದಿಲ್ಲ, ನಾವು ನಮ್ಮ ಪೂರ್ಣ ಸಾಮರ್ಥ್ಯದಲ್ಲಿ ಈ ಜೀವನದಲ್ಲಿ ತೊಡಗಿಕೊಳ್ಳುವುದಿಲ್ಲ.

“ವಸುಧೈವ ಕುಟುಂಬಕಮ್‌’ ಎಂಬೊಂದು ಆರ್ಷವಾಕ್ಯವಿದೆಯಲ್ಲ! ಅದರಂತೆ ನಡೆಯುವುದು ಶ್ರೇಷ್ಠವಾದ ಮಾರ್ಗ.

( ಸಾರ ಸಂಗ್ರಹ)

ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ
ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು ಛಿಛಜಿಠಿಃuಛಚyಚvಚnಜಿ.cಟಞಗೆ ಕಳುಹಿಸಬಹುದು.
ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.

ಟಾಪ್ ನ್ಯೂಸ್

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.