ನಾವು ಎಷ್ಟು ಶಕ್ತಿಯುತ ಎಂಜಿನ್ ಎಂಬುದು ನಮಗೇ ತಿಳಿದಿಲ್ಲ !
Team Udayavani, Oct 2, 2020, 6:18 AM IST
ಸಾಂದರ್ಭಿಕ ಚಿತ್ರ
ಬದುಕಿನಲ್ಲಿ ಏನಾದರೂ ಸಾಧನೆ ಮಾಡ ಬೇಕು ಎಂದುಕೊಳ್ಳದವರು ಯಾರಿದ್ದಾರೆ! ಉದ್ಯೋಗದಲ್ಲಿ ಭಡ್ತಿ, ಹಡಗಿನಷ್ಟು ಉದ್ದದ ಕಾರು ಕೊಳ್ಳುವುದು, ಚೆಂದದ ಮನೆ ಕಟ್ಟುವುದು… ನಾವು ಹಾಕಿಕೊಳ್ಳುವ ಗುರಿ ಸಾಧನೆಯ ಪಟ್ಟಿ ಸಾಮಾನ್ಯವಾಗಿ ಹೀಗಿರುತ್ತದೆ. ಅದನ್ನು ಸಾಧಿಸಿದ ಕೂಡಲೇ ಸಂತೃಪ್ತಿ ಹೊಂದುತ್ತೇವೆ.
ನಾವು ತಪ್ಪಿರುವುದು ಇಲ್ಲಿಯೇ ಎನ್ನುತ್ತಾರೆ ಸದ್ಗುರು. ದೃಷ್ಟಿ ದೋಷ ಹೊಂದಿರುವವರು ಪೇಟೆಗೆ ಹೋಗಿ ಮನೆಗೆ ಮರಳಿದ್ದು ಬಹಳ ದೊಡ್ಡ ಸಾಧನೆ ಎಂದುಕೊಳ್ಳುತ್ತಾರೆ. ಆದರೆ ದೃಷ್ಟಿ ಸರಿ ಇರುವವರಿಗೆ ಅದು ಬಹಳ ಸುಲಭದ ಕೆಲಸ. ಭಡ್ತಿ, ಕಾರು, ಮನೆ… ಹೀಗೆ ಗುರಿಗಳನ್ನು ಹಾಕಿಕೊಳ್ಳುವುದು ಎಂದರೆ ನಮ್ಮ ಬದುಕನ್ನು, ನಮ್ಮ ಸಾಮರ್ಥ್ಯವನ್ನು ನಾವೇ ಕಡಿಮೆ ಅಂದಾಜು ಮಾಡಿಕೊಳ್ಳುವುದು ಎನ್ನುತ್ತಾರೆ ಸದ್ಗುರು.
ಒಂದು ಆಟೋ ರಿಕ್ಷಾ ವನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಅದರಲ್ಲಿ ಮೂವರು ಕುಳಿತು ಪ್ರಯಾಣಿಸಬಹುದು. ಒಬ್ಬ ಚಾಲಕ ಹತ್ತು ಮಂದಿ ಯನ್ನು ಕುಳ್ಳಿರಿಸಿಕೊಂಡು ಹೇಗೋ ಸಾಹಸಪಟ್ಟು ಬೆಟ್ಟ ಏರಿ ಮಹತ್ಸಾಧನೆ ಮಾಡಿದ್ದೇನೆ ಎಂದು ಕೊಳ್ಳುತ್ತಾನೆ. ಆದರೆ ರಿಕ್ಷಾದ ಎಂಜಿನ್ನಿನ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಅದನ್ನು ಬಹಳ ಸುಲಭವಾಗಿ ಸಾಧಿಸಬಹುದು. ಇನ್ನಷ್ಟು ಮಂದಿಯನ್ನು ಕರೆದೊಯ್ಯಬಹುದು ಅಥವಾ ಇನ್ನಷ್ಟು ಎತ್ತರದ ಬೆಟ್ಟ ಏರಬಹುದು. ನಾವು ನಮ್ಮ ಬದುಕನ್ನು ಸಣ್ಣದಕ್ಕೆ ಸೀಮಿತಗೊಳಿಸಿದರೆ ಅಷ್ಟನ್ನು ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ.
ಬೆಟ್ಟ ಏರಿದ ರಿಕ್ಷಾ ಚಾಲಕನ ಸಾಧನೆ ವೈಯಕ್ತಿಕವಾದದ್ದು ಅಥವಾ ಲೌಕಿಕಕ್ಕೆ ಸಂಬಂಧಿಸಿದ್ದು. ಅದೊಂದು ಕಾಣೆR ಅಥವಾ ದೂರದರ್ಶಿತ್ವ ಹೊಂದಿರುವಂಥದ್ದಲ್ಲ. ಅದನ್ನೊಂದು “ಆಸೆ’ಗೆ ಹೋಲಿಸಬಹುದು.
ನಾವು ನಮ್ಮ ಆತ್ಮೋನ್ನತಿಯನ್ನು ಸಾಧಿಸದೆ ಹೋದರೆ ಸಣ್ಣ ಸಣ್ಣ ಗುರಿಗಳನ್ನು ಹಾಕಿಕೊಳ್ಳುತ್ತ ಅಷ್ಟರಿಂದಲೇ ಸಂತೃಪ್ತಿಗೊಳ್ಳುತ್ತೇವೆ. ನಿಜವಾಗಿ ಪ್ರತಿಯೊಬ್ಬ ಮನುಷ್ಯ ಒಂದು ಅಗಾಧ ಶಕ್ತಿಯ ಎಂಜಿನ್ ಇರುವಂತೆ. ಅದು ಎಷ್ಟೋ ಮಹತ್ಕಾರ್ಯ ಗಳನ್ನು ಸಾಧಿಸ ಬಲ್ಲುದು. ಆ ಶಕ್ತಿ ಸಾಮರ್ಥ್ಯಗಳನ್ನು ಮೊತ್ತ ಮೊದಲಾಗಿ ಗುರುತಿಸಿ ಕೊಳ್ಳುವುದು ಅಗತ್ಯವಾಗಿ ಆಗಬೇಕಾದ ಕಾರ್ಯ.
ಹೀಗಾಗಿ ನಾವು ನಮ್ಮನ್ನು ಕೇಳಿಕೊಳ್ಳ ಬೇಕಾದ ಪ್ರಶ್ನೆ ಎಂದರೆ “ನಾನೇನಾಗಬೇಕು’, “ನಾನೇನು ಸಾಧಿಸಬೇಕು’ ಎಂಬುದಲ್ಲ; “ನನ್ನ ಆತ್ಮೋನ್ನತಿಯನ್ನು ಸಾಧಿಸುವುದು ಹೇಗೆ’ ಎಂಬುದು. ಈಗಿನದ್ದಕ್ಕಿಂತ ಹೆಚ್ಚು ಶಕ್ತಿ ಯುತವಾಗಿ, ದೇದೀಪ್ಯಮಾನವಾಗಿ, ಸಮರ್ಥವಾಗಿ ನಮ್ಮ ಬದುಕನ್ನು ರೂಪಿಸಿ ಕೊಳ್ಳುವುದು ಹೇಗೆ ಎಂಬುದು. ಅಂಥ ಬದುಕು ಏನೆಲ್ಲ ಮಾಡಬೇಕೋ ಅದನ್ನು ತಾನೇ ತಾನಾಗಿ ಮಾಡಿಬಿಡುತ್ತದೆ.
ನಾವೀಗ ಏನನ್ನು ಹೊಂದಿದ್ದೇವೆ ಅಥವಾ ಏನು ಮಾಡಲಿದ್ದೇವೆ ಎಂಬುದರ ಬಗ್ಗೆ ಹೆಚ್ಚು ಚಿಂತೆ ಬೇಡ. ಬದುಕನ್ನು ಒಂದು ಶಕ್ತಿಯುತ ಎಂಜಿನ್ ಆಗಿ ರೂಪಿಸಿಕೊಳ್ಳೋಣ. ಆಗ ಅದು ಎಂಥ ದುರ್ಗಮ ಬೆಟ್ಟಗಳನ್ನೂ ಅನಾಯಾಸವಾಗಿ ಏರಿಬಿಡುತ್ತದೆ.
ಹನುಮಂತನ ಕಥೆ ಗೊತ್ತಲ್ಲ..! ಸಮುದ್ರೋಲ್ಲಂಘನ ತನ್ನಿಂದ ಸಾಧ್ಯ ಇಲ್ಲ ಎಂದುಕೊಂಡಿದ್ದ ಆತ. ಹಾಗೆಯೇ ನಾವು ಕೂಡ. ನಮ್ಮ ಬದುಕನ್ನು ಹೆಚ್ಚು ಸಾಮರ್ಥ್ಯ ಯುತವಾಗಿ ರೂಪಿಸಿಕೊಳ್ಳಬೇಕು. ಕಾರು, ಮನೆ, ಭಡ್ತಿಗಳನ್ನು ಇಂದು ಸಾಧಿಸಬಹುದು; ನಾಳೆ ಇನ್ನೊಬ್ಟಾತ ಅವುಗಳನ್ನು ಪಡೆದು ಕೊಂಡರೆ ಅಸೂಯೆಯಷ್ಟೇ ಹುಟ್ಟಿಕೊಳ್ಳುತ್ತದೆ. ಆದರೆ ನಮ್ಮ ವ್ಯಕ್ತಿತ್ವ ಶಕ್ತಿಯುತವಾಗಿ ವಿಕಸನಗೊಂಡರೆ ಪಟ್ಟಣದಲ್ಲಿರಲಿ, ಹಳ್ಳಿಗಾಡಿನಲ್ಲಿರಲಿ ಸ್ವಸಂತೃಪ್ತಿಯೊಂದಿಗೆ ಬಾಳುವುದು ಸಾಧ್ಯವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.