Bengaluru Kambala: ಚಿನ್ನ ಗೆದ್ದು ಬೀಗಿದ ಮಗ: ಅಪ್ಪನ ಕಣ್ಣಂಚಲಿ ನೀರು

Team Udayavani, Nov 27, 2023, 8:35 AM IST

3-bng-kambala

ಬೆಂಗಳೂರು: ಕೈಯೆತ್ತದ ತಂದೆ, ಜೋರು ಮಾಡದ ಬಂಧುಗಳು…. ರಕ್ತ ಸಂಬಂಧಿಯಲ್ಲದಿದ್ದರೂ ಯಾವುದೇ ಫ‌ಲಾಪೇಕ್ಷೆಯಿಲ್ಲದ ಲಕ್ಷಾಂತರ ರೂಪಾಯಿ ವ್ಯಯಿಸಿದ ಜನಕನ ಪ್ರತಿಷ್ಠೆಗಾಗಿ ಶಕ್ತಿ ಮೀರಿ ಓಡುವ ಕೋಣಗಳು. ಸೋತು-ಗೆದ್ದ ತಂದೆ ಮಗನ ಮಾತಿನ ಸನ್ನೆ ನೋಡಿದರೆ ಎಂತವರ ಕಣ್ಣಗಳು ಒದ್ದೆಯಾಗುತ್ತದೆ. ಇಂತಹ ಅಪರೂಪದ ದೃಶ್ಯ ಬೆಂಗಳೂರು ಕಂಬಳದಲ್ಲಿ ಕಂಡು ಬಂತು.

ಕಂಬಳ ಎಂದಾಕ್ಷಣ ಹೆಚ್ಚಿನವ ರಿಗೆ ಕಣ್ಣುಂದೆ ಬರೋದು ಅರ ಚಾಟ, ಏಟುಗಳು, ಶಿಳ್ಳೆ -ಕೇಕೆ ಹಾಗೂ ಮನೋರಂಜನೆ ಮಾತ್ರ. ಆದರೆ, ಒಮ್ಮೆ ಕೋಣಗಳ ಮಾಲೀಕರು ಮತ್ತವರ ಮಕ್ಕಳ ( ಕೋಣ)ನ್ನು ದಿಟ್ಟಿಸಿ ನೋಡಬೇಕು. ಎಂದೂ ಹೊಡೆಯದ ತಂದೆ ಒಂದೇಟು ಹಾಕುತ್ತಾನೆ, ಒಂದು ಮುಳ್ಳು ಚುಚ್ಚದಂತೆ ನೋಡಿಕೊಳ್ಳುವವರು ಕೋಲಿನಿಂದ ಅಲ್ಲೊಂದು ಇಲ್ಲೊಂದು ಮೆಲ್ಲಗೆ ಹೊಡೆಯುತ್ತಾರೆ. ಏನಾಗುತ್ತಿದೆ ಎಂದು ಯೋಚಿಸುವ ಷ್ಟರಲ್ಲಿ ಪಕ್ಕಲ್ಲಿ ಇನ್ನೊಂದು ಜೋಡಿಯನ್ನು ನೋಡಿದಾಗಲೇ, ಕೋಣಗಳಿಗೆ ಕಂಬಳದ ಕಣದಲ್ಲಿ ಓಡಬೇಕೆಂದು ಅರಿವಾಗೋದು.

ಅರಮನೆ ಮೈದಾನದ ಕಂಬಳ ಕ್ರೀಡಾಕೂಟದಲ್ಲಿ ಕೋಣಗಳನ್ನು ಪ್ರೀತಿಯಿಂದ ಸಾಕುವ ಮಾಲೀಕರು ಹಾಗೂ ಬಂಧುಗಳು ಕಂಬಳ ಸ್ಪರ್ಧಾ ಕಣಕ್ಕೆ ಇಳಿಸುವಾಗ ಅವರಲ್ಲಿನ ಆಂತಕ, ಭಯವನ್ನು ದೂರ ಮಾಡಲು, ತನ್ನನ್ನು ತಾನೇ ಓಟಕ್ಕೆ ಸಿದ್ಧಪಡಿಸಿಕೊಂಡಿತ್ತು. ಮುಖದಲ್ಲಿ ರೋಷಾ, ಹುರುಪು, ಗೆಲುವಿನ ಆತ್ಮವಿಶ್ವಾಸ, ಗುಟುರು ಹಾಕುವ ಸದ್ದು ಅಕ್ಕ- ಪಕ್ಕದವರನ್ನು ಬೆಚ್ಚಿ ಬೀಳಿಸುವಂತಿತ್ತು. ಒಮ್ಮೆಲೇ ವೀಕ್ಷಕರ ಮೇಲೆ ಹಾಯುತ್ತದೆಯೇ ಎಂದು ಊಹಿಸುವಷ್ಟರಲ್ಲಿ, ಸಿದ್ಧವಾಗಿ ನಿಂತ ಜಾಕಿಯೊಂದಿಗೆ( ಕೋಣ ಓಡಿಸುವವರು) ನೇರವಾಗಿ ಗಮ್ಯವನ್ನು ಸೇರಲು ಜೀವದ ಹಂಗ ತೊರೆದು ಇತರೆ ಜೋಡಿಗಳಿಗಿಂತ ಮುಂಚಿತವಾಗಿ ತಲುಪಲು ಪ್ರಯತ್ನಿಸುವ ದೃಶ್ಯಗಳು.

ಗೆಲುವಿನ ಪಾಂಚಜನ್ಯ: ಕಂಬಳದ ಕರೆಯಲ್ಲಿ ಗೆದ್ದ ಮಗನಿಗೆ ಬೆನ್ನು ತಟ್ಟಿ ಪಾಂಚಜನ್ಯ ಊದಿ, ಚಪ್ಪಾಳೆ ತಟ್ಟಿ ಸಂಭ್ರಮವನ್ನು ವ್ಯಕ್ತಪಡಿದ್ದರು. ಇನ್ನೂ ಸೋತ ಮಗನಿಗೆ (ಕೋಣಕ್ಕೆ) ತಂದೆ (ಮಾಲೀಕ) ಬೆನ್ನು ತಟ್ಟಿ, ಮುತ್ತಿಟ್ಟು, ಕಣ್ಣಿನಲ್ಲಿ ನೀರಿದ್ದರೂ ಮುಂದಿನ ಸ್ಪರ್ಧೆಯಲ್ಲಿ ಗೆಲ್ಲೋಣ ಎನ್ನುವ ಸನ್ನೆ ಮಾಡಿದರೂ, ಇಬ್ಬರಲ್ಲಿಯೂ ನಿರಾಶೆ ನೋವು ಕಾಣುತ್ತಿತ್ತು.

ಸನ್ನೆಯ ಮಾತು!: ಮನುಷ್ಯರಾದ ನಾವು ಮಕ್ಕಳನ್ನು ಪೋಷಿಸುವಾಗ ಮುಂದೆ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ ಎನ್ನುವ ಕಿಂಚಿತ್ತಾದರೂ ಸ್ವಾರ್ಥ ಇರುತ್ತದೆ. ಆದರೆ, ಇಂತಹ ದೂರ(ರಾ)ಲೋಚನೆಯು ಕೋಣ ಮತ್ತವರ ಮಾಲೀಕರ ನಡುವೆ ಇರಲಿಲ್ಲ. ಮಾತು ಬಾರದ ಮೂಕ ಪ್ರಾಣಿ- ಯಾಜಮಾನ ನಿಷ್ಕಲ್ಮಶವಾದ ಪ್ರೀತಿ ಸನ್ನೆ ಮಾತುಗಳು ಕಂಡವರ ಕಣ್ಣುಗಳಲ್ಲಿ ನೀರು ತುಂಬಿರುವುದು ಅಂತೂ ಸತ್ಯ.

ಮಗ ಮೊದಲ ಬಾರಿಗೆ ಬೆಂಗಳೂರು ನೋಡಿದ್ದಾನೆ

ಮಗ(ಕೋಣ) ಹುಟ್ಟಿನಿಂದ ಕರಾವಳಿ ಬಿಟ್ಟು ಬೇರೆಲ್ಲೂ ಹೋಗಿಲ್ಲ. ಈ ಬಾರಿ ಬೆಂಗಳೂರು ನೋಡಿದ್ದಾನೆ. ಬಹುಮಾನ ಸಿಗದಿದ್ದರೂ, ಅವನಿಗೆ ಹೊಸ ಪ್ರದೇಶ ಪರಿಚಯ ಮಾಡಿದ್ದೇನೆ ಎನ್ನುವ ಖುಷಿ ಇದೆ. ಅವನಿಗೂ(ಕೋಣ) ಸೋತಿರುವ ಅರಿವಿದೆ. ಏನ್‌ ಮಾಡೋದು ಗೆಲುವು ಎಲ್ಲ ಬಾರಿ ಸಿಗೋದಿಲ್ಲ ಎಂದು ಕೋಣದ ಮಾಲೀಕರು ಉದಯವಾಣಿಯೊಂದಿಗೆ ಅನುಭವ ಹಂಚಿಕೊಂಡರು.

ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baradi Kambala: 3 ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಕೃತಿಕ್ ಗೌಡ; ಇಲ್ಲಿದೆ ಫಲಿತಾಂಶ ಪಟ್ಟಿ

Baradi Kambala: 3 ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಕೃತಿಕ್ ಗೌಡ; ಇಲ್ಲಿದೆ ಫಲಿತಾಂಶ ಪಟ್ಟಿ

8-uv-fusion

Bengaluru Kambala: ಬೆಂಗಳೂರು ಕಂಬಳ ಕಣ್ತುಂಬಿಕೊಂಡ ಕ್ಷಣ

3-shirwa

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Shirva; ಧಾರ್ಮಿಕ ಹಿನ್ನೆಲೆಯ ಶಿರ್ವ ನಡಿಬೆಟ್ಟು ಕಂಬಳ; ಇತಿಹಾಸದ ಪುಟದಲ್ಲಿ ದಾಖಲಾದ ವೈಭವ

Kambala; ಧಾರ್ಮಿಕ ಹಿನ್ನೆಲೆಯ ಶಿರ್ವ ನಡಿಬೆಟ್ಟು ಕಂಬಳ; ಇತಿಹಾಸದ ಪುಟದಲ್ಲಿ ದಾಖಲಾದ ವೈಭವ

Bengaluru Kambala: ಬೆಂಗೂರ್‌ ಕಂಬ್ಳ ಮುಗೀಂಡ್‌, ಊರುಗ್‌ ಪೋಯಿ

Bengaluru Kambala: ಬೆಂಗೂರ್‌ ಕಂಬ್ಳ ಮುಗೀಂಡ್‌, ಊರುಗ್‌ ಪೋಯಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.