ಈಗ ಹೇಳಿ ಈ ಜಗದಲಿ ಯಾರು ಮೇಲು ?


Team Udayavani, May 22, 2020, 4:16 AM IST

ಈಗ ಹೇಳಿ ಈ ಜಗದಲಿ ಯಾರು ಮೇಲು ?

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಒಂದು ಹಂತದಲ್ಲಿ ತಾನೇ ಮೇಲೆಂದು ಬಡಾಯಿ ಕೊಚ್ಚಿಕೊಳ್ಳುತ್ತ, ಅನ್ಯರಿಗೆ ಮೋಸ ಮಾಡಿ ದಿನ ಗಳೆಯುತ್ತಿದ್ದ ಮತ್ತು ಬಂಡವಾಳ ಹೂಡಿ ಮನೆ-ಮಠ ವಿಸ್ತರಿಸುತ್ತಿದ್ದ ಮಂದಿಗೀಗ ಬಾನೇ ಮೈಮೇಲೆ ಬಿದ್ದಂತಾಗಿದೆ.

ದೇವರ ಹೆಸರಲ್ಲಿ ಬಡಜನತೆಯ ಸುಲಿಗೆ ಮಾಡುತ್ತಿದ್ದ ವರ್ಗಕ್ಕೆ ಈಗ ದಿಕ್ಕೇ ತೋಚದಂತಾಗಿದೆ.

ನಿನ್ನೆಯವರೆಗೆ ಎಲ್ಲವೂ ನಡೆಯುತ್ತಿತ್ತು. ಜಗತ್ತಿಗೆ ಕವಿದ ಮಾರಣಾಂತಿಕ ಜೈವಿಕ ಅಸ್ತ್ರದ ಪರಿಣಾಮ ಈಗ ಎಲ್ಲೆಡೆ ಮೂರನೇ ಜಾಗತಿಕ ಸಮರದ ಬಿಸಿ ತಟ್ಟಿದೆ.

ಇಲ್ಲಿ ಅಸ್ತ್ರಗಳಿಲ್ಲ, ಆದರೂ ಯುದ್ಧ ನಡೆಯುತ್ತಿದೆ. ಹಿಂದೆ ಆಸ್ತಿ-ಪಾಸ್ತಿ ಸ್ತರಿಸಲು ಯುದ್ಧ ನಡೆದಿದ್ದರೆ, ಈಗ ಅದೇ ಜನರ ಕಬಳಿಸಲು ಪ್ರಕೃತಿ ಯುದ್ಧ ಸಾರಿದೆ.

ಈ ಯುದ್ಧದಲ್ಲಿ ಮಾನವರೆಲ್ಲ ಒಂದೇ ಎಂಬ ಭಾವನೆ ವ್ಯಕ್ತವಾಗುವಂತಹ ಕಡ್ಡಾಯ ಕ್ರಮಗಳಿವೆ. ಇದನ್ನು ಮೀರುವ ಶ್ರೀಮಂತ, ಬಡವ-ಬಲ್ಲಿದ, ಕೋವಿದ, ಕಲಾವಿದ, ರಾಜಕಾರಣಿ, ಬಂಡವಾಳ ಶಾಹಿ, ಜ್ಯೋತಿಷಿಗಳು, ಮಾಧ್ಯಮ ವರ್ಗಕ್ಕೆ ಸಮಾನ ಶಿಕ್ಷೆ, ವೇದನೆ ತಪ್ಪಿದ್ದಲ್ಲ.

ಕೋವಿಡ್ ವೈರಸ್‌ ಹರಡುವಿಕೆಗಿಂತಲೂ ವೇಗವಾಗಿ ಹರಡಿದ ‘ಕೋಮು ವೈರಸ್‌’ಗೆ ಸದ್ಯ ಬ್ರೇಕ್‌ ಬಿದ್ದಿದೆ. ದೇಶಕ್ಕೆ ದೇಶವೇ ಲಾಕ್‌ಡೌನ್‌ ಆದಾಗಲೂ ಪರಿಸ್ಥಿತಿಯ ಗಂಭೀರತೆ ಅರಿತ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಜಾತೀಯ ಮತಭೇದದ ಸಂದೇಶ ರವಾನಿಸಿ, ಮಜಾ ಉಡಾುಸಿದ್ದರು.

ದಿನಗಳೆಯುತ್ತಿದ್ದಂತೆ ಪರಿಸ್ಥಿತಿಯ ಗಂಭೀರತೆ ತನ್ನ ಮನೆಗೇ ಬರಸಿಡಿಲಿನಂತೆ ಬಡಿದಾಗ ಇಂತಹ ವಿಷಯ ವಿಘ್ನ ಸಂತೋಞಿಗಳ ಸಂದೇಶಗಳು ಕ್ಷೀಣಿಸತೊಡಗಿವೆ. ಇನ್ನೂ ಒಂದು ತಿಂಗಳು ಇದೇ ಸ್ಥಿತಿ ಮುಂದುವರಿದಲ್ಲಿ ಜಾತೀಯ ತಡೆಗೋಡೆ ತನ್ನಿಂದ ತಾನೇ ಬಿರುಕು ಬಿಟ್ಟು, ನೆರೆಮನೆಯವರ ಪರಿಚಯವಾಗಲಿದೆ.

ಅಂದರೆ, ಸಾವಿನಂಚಿನಲ್ಲಿರುವ ಶ್ರೀಮಂತರಿಗೂ ಬಡವರಿಗೂ ಯಾವುದೇ ಅಂತರವಿಲ್ಲ ಎಂಬುದು ಮನದಟ್ಟಾಗಲಿದೆ. ಸಾವು ಯಾರನ್ನೂ ಬಿಟ್ಟಿಲ್ಲ, ಸಾವು ಗೆದ್ದವರಿಗೆ ಕೋವಿಡ್ ತಟ್ಟಲಿಕ್ಕಿಲ್ಲ ಎಂದು ಹೇಳುವವರಿದ್ದಾರೆ.

ಹಾಗಾದರೆ ಈ ಜಗತ್ತಿನಲ್ಲಿ ಸಾವು ಗೆದ್ದವರಿದ್ದಾರೆಯೇ? ಹುಟ್ಟಿದ ಜೀವಂತ ಮನುಷ್ಯ ಆತ ಸ್ವಾಮಿಯಾಗಿರಲಿ, ಧರ್ಮಗುರುವಾಗಿರಲಿ, ಪಾದ್ರಿ, ಮೌಲ್ವಿ ಸ್ವಯಂ-ಘೋಷಿತರಿರರಲಿ ಯಾರನ್ನು ಕೋವಿಡ್ ಉಸಿರುಗಟ್ಟಿಸದೆ ಹಾಗೆಯೇ ಸುಮ್ಮನೆ ಬಿಡದು. ಈ ಜಗತ್ತಿನಲ್ಲಿ ಇನ್ನೊಂದಷ್ಟು ಕಾಲ ಮನುಷ್ಯರಿರಬೇಕೆಂದುಕೊಂಡಲ್ಲಿ, ನಾವೆಲ್ಲರೂ ಜಾಗೃತೆ ವಹಿಸುವುದು ಉಚಿತ.

ಪ್ರಸಕ್ತ ಪರಿಸ್ಥಿತಿಯಲ್ಲಿ ಮನುಷ್ಯರ ಸ್ವೇಚ್ಛಾಚಾರ, ಸ್ವಾತಂತ್ರ್ಯಕ್ಕೆ ಒಂದಷ್ಟು ಬ್ರೇಕ್‌ ಬಿದ್ದಿದೆ ಎಂಬುದು ಸತ್ಯ. ಅಳಿದುಳಿದ ಕಾಡುಗಳಲ್ಲಿ ಪ್ರಾಣಿ – ಪಕ್ಷಿಗಳು ಭಯಭೀತಿ ಬಿಟ್ಟು ತಿರುಗಾಡುತ್ತಿರುವುದೇ ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ಜಾತ್ರೆ, ಕೋಲ, ಬಲಿಪೂಜೆ, ನಮಾಜು ಗೌಜಿ ಗದ್ದಲಲ್ಲ. ಇವೆಲ್ಲ ಇದ್ದ ಸಂದರ್ಭಗಳಲ್ಲಿ ಎಷ್ಟೇ ಕಷ್ಟವಾದರೂ ಅವಕ್ಕೆ ಮನುಷ್ಯ ಕುಲ ಒಗ್ಗಿ ಹೋಗಿತ್ತು. ಜಾತ್ರೆ, ಉತ್ಸವ, ಕೋಲ ನೇಮ, ಉರುಸ್‌… ಹೀಗೆ ಅನೇಕಾನೇಕ ನವನವೀನ ಕಾರ್ಯಕ್ರಮ ಆಯೋಜಿಸಿ, ಜೇಬು ತುಂಬಿಕೊಳ್ಳುತ್ತಿದ್ದ ವರ್ಗಕ್ಕೆ ಈಗ ಸುನಾಮಿ ಬೀಸಿದಂತಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಎಲ್ಲರಿಗೂ ಎಲ್ಲರ ಗುರುತು ಸಿಗಲಿದೆ. “ಸಾವು’ ಇದೆಲ್ಲದರ ಹಿಂದಿರುವ ಸತ್ಯ ಎಂಬುದು ಜಾಹೀರಾಗಲಿದೆ.

ಈಗಲಾದರೂ “ಮಾನವೀಯತೆ’ ಎಂಬ ಪದದ ಅರ್ಥ ತಿಳಿದು ವ್ಯವಹರಿಸುವುದು ಮನುಷ್ಯ ಧರ್ಮವಾಗಲಿದೆ. ಎಲ್ಲಿ ಮಾನವೀಯತೆಗೆ ಬೆಲೆ ಇಲ್ಲದೆ, ಮನುಷ್ಯ ಸೃrಗಳಿಗೆ ಬೆಲೆ -ನೆಲೆಯಾಗುತ್ತದೆಯೋ ಅಲ್ಲಿಯವರೆಗೆ ಮನುಷ್ಯನ ಒದ್ದಾಟ-ಗುದ್ದಾಟಗಳಿಗೆ ಕೊನೆ ಎಂಬುದಿಲ್ಲ. ಅದಕ್ಕೆ ಕೇವಲ ಕೋವಿಡ್ ವೈರಸ್‌ ಬರಬೇಕಾಗಿಲ್ಲ.

ಭವಿಷ್ಯದಲ್ಲಿ ಇದಕ್ಕಿಂತಲೂ ದೊಡ್ಡ ಸಮಸ್ಯೆ ಮನುಕುಲ ಕಾಡಬಹುದು. ಆದ್ದರಿಂದ ಎಚ್ಚರಿಕೆ ಮತ್ತು ಸಹೋದರತೆಯಿಂದದ ಬಾಳುವುದು ಮುಖ್ಯ. ಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ಮೇಲಿನ ಅತ್ಯಾಚಾರ ನಿಲ್ಲಬೇಕು. ಜನಸಂಖ್ಯೆಗೆ ಕಡಿವಾಣ ಹೇರಿ, ಇರುವ ಜಾಗದಲ್ಲಿ ಬದುಕು ರೂಪಿಸಬೇಕು.

ದೇವರು ಎಂಬುದು ನಂಬಿಕೆ ಮತ್ತು ಮನುಷ್ಯರಿಗೆ ದಾರಿ ದೀಪವಾದ ನಂಬಿಕೆಯೇ ಹೊರತು, ಅದು ಪ್ರಕೃತಿ ಸೃಷ್ಟಿಯಲ್ಲ ಎಂಬುದನ್ನು ಅರಿಯುವ ಕಾಲದು. ಹಾಗಾದರೆ ಇನ್ನಾದರೂ ನಾವೆಲ್ಲ ಬೆಳಗೆದ್ದು ಭೂಮಿಗೆ, ಸೂರ್ಯ-ಚಂದ್ರ, ಪ್ರಕೃತಿ ಮಾತೆಗೆ ಕೈಮುಗಿಯುವ ಪರಿಪಾಠ ಬೆಳೆಸೋಣ. ಮನಸ್ಸಿನ ಮಲಿನತೆ ಬಿಟ್ಟು, ಮನುಷ್ಯರಾಗಿ, ಮನುಷ್ಯರಿಗಾಗಿ ಬದುಕೋಣ.

— ಧನಂಜಯ ಗುರುಪುರ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಷಾಸುರನ ದಯೆಯಿಂದ ಬದಲಿಸಬೇಕಾದ ನಿರ್ಣಯಗಳು

ವಿಷಾಸುರನ ದಯೆಯಿಂದ ಬದಲಿಸಬೇಕಾದ ನಿರ್ಣಯಗಳು

Tribes

ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿಕೊಂಡೇ ನಡೆಯಬೇಕಿದೆ ಆದಿವಾಸಿಗಳ ಅಭಿವೃದ್ಧಿ!

ಸ್ವಾತಂತ್ರ ಸಂಗ್ರಾಮ: ಭಾರತಾಂಬೆಯ ಮಡಿಲಿಗೆ ದೊರೆತ ಸ್ವಾತಂತ್ರ

ಸ್ವಾತಂತ್ರ ಸಂಗ್ರಾಮ: ಭಾರತಾಂಬೆಯ ಮಡಿಲಿಗೆ ದೊರೆತ ಸ್ವಾತಂತ್ರ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಭಾರತ : ಒಂದು ಅವಲೋಕನ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಭಾರತ : ಒಂದು ಅವಲೋಕನ

Ramachandra-Prabhu

‘ಶ್ರೀ ರಾಮಚಂದಿರ – ವೇದಾಂತ ಮಂದಿರ..”

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.