Davanagere ಜಿಲ್ಲೆಯ ಮೂವರಿಗೆ 68ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
Team Udayavani, Oct 31, 2023, 8:01 PM IST
ದಾವಣಗೆರೆ: ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ ಮೂವರಿಗೆ 68ನೇ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ 2023ನೇ ಸಾಲಿನ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಸಂಘ ಸಂಸ್ಥೆ ಗಳಿಗೆ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿ ಮೌಲಾನ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘಕ್ಕೆ ನೀಡಲಾಗಿದೆ.
ಬಂಜಾರ ಸಮುದಾಯದ ಪ್ರಪ್ರಥಮ ಇಂಜಿನಿಯರ್ ಕೆ. ರೂಪ್ಲಾನಾಯಕ್, ಹಕ್ಕಿಪಿಕ್ಕಿ ಜನಾಂಗದ ಅಭಿಜಾತೆ ಕಲಾವಿದೆ, ಜಾನಪದ ಹಾಡುಗಾರ್ತಿ ಶಿವಂಗಿ ಶಣ್ಮರಿ, ದೇವಸ್ಥಾನಗಳ ಗೋಪುರ ನಿರ್ಮಾಣದಲ್ಲಿ ನೈಪುಣ್ಯತೆ ಸಾಽಸಿರುವ ಟಿ. ಶಿವಶಂಕರ್ ಪ್ರಸ್ತಕ್ತ ಸಾಲಿನ ರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನರಾಗಿರುವ ಮಹಾನ್ ಸಾಧಕರು.
ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳ ನಡೆಸುತ್ತಿರುವ ಡಾಣ ಸಿ.ಆರ್. ನಸೀರ್ ಅಹಮದ್ ಅವರ ಅಧ್ಯಕ್ಷತೆಯ ಮೌಲಾನ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾಗಿದೆ.
ಕೆ. ರೂಪ್ಲಾನಾಯಕ್…
ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕುಡುನೀರುಕಟ್ಟೆಯ ಕೆ. ರೂಪ್ಲಾನಾಯಕ್ ಬಂಜಾರ
(ಲಂಬಾಣಿ) ಸಮುದಾಯದ ಪ್ರಥಮ ಇಂಜಿನಿಯರ್. ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಕೆ. ರೂಪ್ಲಾನಾಯಕ್ ತೇರ್ಗಡೆಯೊಂದಿಗೆ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ನೇಮಕಾತಿಗೊಂಡವರು. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿಯ ಭದ್ರಾ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಮುಖ್ಯಸ್ಥರಾಗಿದ್ದವರು. ಅತೀ ಮುಖ್ಯವಾಗಿ 1979 ರಲ್ಲಿ ನಿವೃತ್ತಿ ನಂತರ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕೆ. ರೂಪ್ಲಾನಾಯಕ್ ಬಂಜಾರ ಸಮುದಾಯದ ಕುಲಗುರು ಸಂತ ಸೇವಾಲಾಲ್ ಮಹಾರಾಜರ ದೇವಸ್ಥಾನವನ್ನು ಸಂತಸೇವಾಲಾಲ್‌ರವರ ಜನ್ಮ ಸ್ಥಳ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ನಿರ್ಮಾಣದ ಪ್ರಮುಖ ಕಾರಣಕರ್ತರು. 35 ವರ್ಷಕ್ಕೂ ಹೆಚ್ಚು ಕಾಲ ಮನೆ ತೊರೆದು ಶಿವಮೊಗ್ಗದ ಹೋಟೆಲೊಂದರಲ್ಲಿದ್ದುಕೊಂಡು ಸಂತ ಸೇವಾಲಾಲ್ ಮಹಾರಾಜರ ದೇವಸ್ಥಾನ ನಿರ್ಮಾಣಕ್ಕೆ ಶ್ರಮಿಸಿದವರು. ಕರ್ನಾಟಕ ಬಂಜಾರ ಸಂಘ ಕಟ್ಟಿ ಬೆಳೆಸಿದವರು. ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ೧೦೫ ವರ್ಷದ ಕೆ. ರೂಪ್ಲಾನಾಯಕ್ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಿವಂಗಿ ಶಣ್ಮರಿ(ಜಾನಪದ)
ಅತಿ ವಿಶಿಷ್ಟ ಬುಡಕಟ್ಟು ಸಂಸ್ಕೃತಿಯಾಗಿರುವ ಹಕ್ಕಿಪಿಕ್ಕಿ ಜನಾಂಗದ 95ವರ್ಷ ವಯೋಮಾನದ ಶಿವಂಗಿ ಶಣ್ಮರಿ
ಜಾನಪದ ಕ್ಷೇತ್ರದಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರು. ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಶಿವಂಗಿ ಶಣ್ಮರಿ ಚಿಕ್ಕ ವಯಸ್ಸಿನಿಂದಲೇ ಜಾನಪದ ಹಾಡುಗಳ ಹಾಡುತ್ತಿದ್ದವರು. ಪತಿ ಶಣ್ಮರಿ ಅವರೊ ಡನೆ ಜಾನಪದ ಹಾಡುಗಾರಿಕೆ ಕಲೆಯನ್ನು ಪಸರಿಸಿದವರು. ಹಕ್ಕಿಪಿಕ್ಕಿ ಜನಾಂಗದ ಮಾತೃಭಾಷೆ ವಾಘ್ರಿ ಬೋಲಿ… ಯಲ್ಲಿ ಅತ್ಯಂತ ನಿರರ್ಗಳವಾಗಿ ಜಾನಪದ ಹಾಡು, ಪುರಾಣ, ಪ್ರವಚನ ಹೇಳುವ ಶಿವಂಗಿ ಶಣ್ಮರಿ ಆಶುಕವಿಯೂ ಹೌದು. ತಮ್ಮ ಕಣ್ಣಿಗೆ ಬಿದ್ದುದ್ದು, ಮನಸ್ಸಿಗೆ ಬಂದ ಆಲೋಚನೆಯಂತೆ ಸ್ಥಳದಲ್ಲೇ ಹಾಡು ಕಟ್ಟಿ ಸುಶ್ರಾವ್ಯವಾಗಿ ಹಾಡುವುದನ್ನ ಸಿದ್ಧಿಸಿಕೊಂಡವರು. ಹಕ್ಕಿಪಿಕ್ಕಿ ಜನಾಂಗದ ಭಾಷೆ ಮಾತ್ರವಲ್ಲ ಕನ್ನಡದಲ್ಲೂ ಅತ್ಯಂತ ಸುಲಲಿತ ವಾಗಿ ಜಾನಪದ ಹಾಡುಗಳ ಹಾಡುವಂತಹ ಅಭಿಜಾತ ಕಲಾವಿದೆ ಶಿವಂಗಿ ಶಣ್ಮರಿ. 95ನೇ ವಯಸ್ಸಿನಲ್ಲೂ ಹಾಡುಗಳ ಹಾಡುವ ಶಿವಂಗಿ ಶಣ್ಮರಿ ಅವರ ನೋಡಿಯೇ ಮೊಮ್ಮಗಳು ಕುಮುದಾ ಅವರು ಸಹ ಜಾನಪದ ಹಾಡುಗಾತಿ ಯಾಗಿ ರೂಪುಗೊಂಡವರು. ಪ್ರಸ್ತುತ ತರೀಕೆರೆಯಲ್ಲಿ ಮೆಸ್ಕಾಂನಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿ ಯರ್ ಆಗಿ ಕೆಲಸ ಮಾಡುತ್ತಿರುವ ಕುಮುದಾ ಹಕ್ಕಿಪಿಕ್ಕಿ ಜನಾಂಗದ ಮೊಟ್ಟ ಮೊದಲ ಮಹಿಳಾ ಉದ್ಯೋಗಿ. ಶಿವಂಗಿ ಶಣ್ಮರಿ ನೂರಾರು ಹಾಡುಗಾರರಿಗೆ ಈ ಕ್ಷಣಕ್ಕೂ ಸ್ಪೂರ್ತಿ, ಪ್ರೇರಣೆ.
ಟಿ. ಶಿವಶಂಕರ್(ಶಿಲ್ಪಕಲೆ)
ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತಂದೆಯಿಂದ ಕಲಿತಂತಹ ದೇವಸ್ಥಾನಗಳ ಗೋಪುರ ನಿರ್ಮಾಣದಲ್ಲಿ ಅತ್ಯಂತ ನೈಪುಣ್ಯತೆಯ ಸಾಽಸಿರುವ ದಾವಣಗೆರೆಯ ಸರಸ್ವತಿ ನಗರದ ನಿವಾಸಿ, 60 ವರ್ಷದ ಟಿ. ಶಿವಶಂಕರ್ ಅವರು ಶಿಲ್ಪಕಲೆ ವಿಭಾಗದಲ್ಲಿ ೨೦೨೩ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ತಂದೆ ಟಿ. ಯಲ್ಲಪ್ಪ ಅವರ ನೋಡಿಯೇ ದೇವಸ್ಥಾನಗಳ ರಾಜಗೋಪುರ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಅವರು 40-45 ವರ್ಷಗಳಲ್ಲಿ ಅನೇಕ ದೇವಾಲಯಗಳಲ್ಲಿ ಅತ್ಯಂತ ಸುಂದರ, ಅತ್ಯಾಕರ್ಷಕ ಗೋಪುರಗಳ ನಿರ್ಮಾಣ ಮಾಡಿದ ಕೀರ್ತಿಗೆ ಪಾತ್ರರಾದವರು. ದಾವಣಗೆರೆಯ ಹಳೆ ಪಿಬಿ ರಸ್ತೆಯ ಶನೇಶ್ವರ ದೇವಸ್ಥಾನ, ನಿಟುವಳ್ಳಿಯ ಶ್ರೀ ಕರಿಯ ಮ್ಮ ದೇವಸ್ಥಾನ, ಭಗತ್‌ಸಿಂಗ್ ನಗರದ ಶ್ರೀ ಚೌಡೇಶ್ವರಿ ದೇವಸ್ಥಾನ, ಕೈದಾಳೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಹದಡಿಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನ, ಕೊಡದಗುಡ್ಡದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹೀಗೆ 400-450ಕ್ಕೂ ಹೆಚ್ಚು ದೇವಸ್ಥಾನಗಳ ಗೋಪುರ ನಿರ್ಮಾಣ ಮಾಡಿದವರು. ಗೋಪುರ ಮಾತ್ರವಲ್ಲ ಪ್ರತಿಮೆಗಳ ನಿರ್ಮಾಣದಲ್ಲೂ ಸಿದ್ಧಹಸ್ತರು. ಹಾವೇರಿ ಜಿಲ್ಲೆಯ ಹಳೆ ಮಾಗನೂರು ಗ್ರಾಮದಲ್ಲಿ 41 ಅಡಿ ಎತ್ತರದ ಆಂಜನೇಯಸ್ವಾಮಿ ಪ್ರತಿಮೆ, ಸಾತೇನಹಳ್ಳಿಯ ಶಾಂತೇಶ್ವರಿ ದೇವಾಲಯದಲ್ಲಿ 50 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಿದವರು. ಹೊಟ್ಟೆಪಾಡಿಗಾಗಿ ಆಯ್ಕೆ ಮಾಡಿಕೊಂಡ ವೃತ್ತಿಯಲ್ಲಿ ಅಪ್ರತಿಮ ಸಾಧನೆ ಮಾಡು ತ್ತಿರುವ ಟಿ. ಶಿವಶಂಕರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಖುಷಿ ಆಗುತ್ತಿದೆ. ಪಟ್ಟಂತಹ ಕಷ್ಟಕ್ಕೆ ದೇವರು ಆಶೀರ್ವಾದ ರೂಪವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
BJP ವಿಜಯೇಂದ್ರ ಪರ ಬಣದ ಮಹತ್ವದ ಸಭೆ ; ಯಾರ‍್ಯಾರು ಭಾಗಿ ..?
Davanagere: ನಗರದಲ್ಲಿ ಬಿ.ವೈ.ವಿಜಯೇಂದ್ರ ಬೆಂಬಲಿಗರ ಸಭೆ; 20ಕ್ಕೂ ಅಧಿಕ ನಾಯಕರು ಭಾಗಿ
ಚೆನ್ನಮ್ಮನ ವಂಶಸ್ಥರ ಮೇಲಿನ ಲಾಠಿ ಪ್ರಹಾರ ಮನುಕುಲಕ್ಕೆ ಮಾಡಿದ ಅಪಮಾನ: ರೇಣುಕಾಚಾರ್ಯ
Davanagere: ಮೀಸಲಾತಿ ಹೋರಾಟದಲ್ಲಿ ಲಾಠಿ ಜಾರ್ಜ್ ವಿರೋಧಿಸಿ ಪಂಚಮಸಾಲಿ ಸಮಾಜದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Maharashtra: ಫಡ್ನವೀಸ್ ಸಂಪುಟಕ್ಕೆ 39 ಮಂದಿ ಸಚಿವರ ಸೇರ್ಪಡೆ
Udupi: ಹಿರಿಯ ಮಾತೆ ಭಾಗ್ಯ ಸತ್ಯನಾರಾಯಣ್‌ಗೆ ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ ಪ್ರದಾನ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
Waqf: ಅನ್ವರ್ ಮಾಣಿಪ್ಪಾಡಿಗೆ ಲಂಚ ನೀಡಲು ಯತ್ನ: ಆರೋಪ ತಳ್ಳಿ ಹಾಕಿದ ವಿಜಯೇಂದ್ರ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.