“ಮಲೆಗಳಲ್ಲಿ ಮದುಮಗಳು’ ಬರಿಯ ಪುಸ್ತಕವಲ್ಲ…ಕುವೆಂಪು ಅವರು ಸೃಷ್ಟಿಸಿದ ಮಾಯಾಲೋಕ
ಬಾಹ್ಯ ಪ್ರಪಂಚಬಿಟ್ಟು ನಾವು ಬೇರೊಂದು ಕಲ್ಪನಾ ಲೋಕದಲ್ಲಿ ತೇಲುತ್ತೇವೆ.
Team Udayavani, Oct 29, 2022, 10:18 AM IST
ಕುವೆಂಪು ಅವರನ್ನು “ರಸಋಷಿ’ ಎಂದು ಕರೆದರು ಎಂಬುದಕ್ಕೆ ಬಹುಶಃ “ಮಲೆಗಳಲ್ಲಿ ಮದುಮಗಳು’ ಕಾದಂಬರಿ ನಿಮಗೆ ಸಾಕ್ಷಿಯನ್ನು ಒದಗಿಸಬಲ್ಲುದು. ಅಧುನಿಕ ಕನ್ನಡ ಸಾಹಿತ್ಯವನ್ನು ನವೋದಯ, ನವ್ಯ, ಬಂಡಾಯ, ಪ್ರಗತಿಪರವೆಂದು ವಿಂಗಡಿಸುವುದಾದರೆ ಕುವೆಂಪು ಅವರ ಸಾಹಿತ್ಯವನ್ನು ಯಾವುದೇ ಒಂದು ಪ್ರಕಾರಕ್ಕೆ ಸೀಮಿತಗೊಳಿಸಲಾಗದು.
“ಮಲೆಗಳಲ್ಲಿ ಮದುಮ ಗಳು’ ಬರಿಯ ಪುಸ್ತಕವಲ್ಲ. ಕುವೆಂಪು ಅವರು ಸೃಷ್ಟಿಸಿದ ಮಾಯಾಲೋಕ. ಇಲ್ಲಿನ ಪಾತ್ರಗಳು, ವರ್ಣನೆಗಳು ಬರಿಯ ಸಾಲುಗಳಾಗಿರದೆ ಅವರ ಕಲಾ ಸೃಷ್ಟಿಗೆ ಹಿಡಿದ ಕನ್ನಡಿಗಳಾಗಿವೆ.
ಮಲೆನಾಡ ಸೌಂದರ್ಯ, ಜಾತಿ ಪದ್ಧತಿ ವ್ಯವಸ್ಥೆ, ವರ್ಣ ಶ್ರೇಣಿ ವ್ಯವಸ್ಥೆ, ಪುರುಷ ಪ್ರಧಾನ ಸಮಾಜದ ಘೋರ ಮುಖಗಳು, ಮತಾಂತರದ ಕಪ್ಪು ಛಾಯೆ, ಆಗ ತಾನೇ ಹೊಸ ಪುಟಕ್ಕೆ ತೆರೆದುಕೊಳ್ಳುತಿದ್ದ ಜನಜೀವನ ಮತ್ತು ಇವೆಲ್ಲದರ ನಡುವೆ ಮಾನವ ಸಹಜ ಪ್ರೀತಿ, ಪ್ರೇಮಗಳ ತಲ್ಲಣ, ದಾಂಪತ್ಯ ಜೀವನದ ಸಿಹಿ ಕಹಿಗಳು, ಮನುಷ್ಯ ಮತ್ತು ಪ್ರಾಣಿ (ಗುತ್ತಿ-ಹುಲಿಯ) ಪ್ರೀತಿಯ ಆಳ, ಪ್ರಕೃತಿಯ ರಮ್ಯ ಮನೋ ಹರ ಚಿತ್ರಣದ ಜತೆ ಅದರ ವ್ಯಾಘ್ರ ಸ್ವಭಾವ – ಇವೆಲ್ಲವನ್ನು ಕುವೆಂಪು ನಮ್ಮ ಕಲ್ಪನಾ ಶಕ್ತಿಗೆ ಸವಾಲು ಹಾಕುವಂತೆ ವಿವರಿಸುತ್ತಾರೆ.
“ಮಲೆಗಳಲ್ಲಿ ಮದುಮಗಳು’ ಕಾದಂಬರಿ ಯನ್ನು ಓದಿದಾಗಲೇ ನನಗೂ ಅದರ ಪ್ರತ್ಯಕ್ಷ ಅನುಭವವಾದದ್ದು. ಕುವೆಂಪು ಹೆಣೆದಿರುವ ಈ ಕಾದಂಬರಿಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಮತ್ತು ಅವುಗಳನ್ನು ವರ್ಣ ನಾತ್ಮಕವಾಗಿ ನಿರೂಪಿಸಿರುವ ಶೈಲಿ ನಿಜಕ್ಕೂ ಅದ್ಭುತ. ಈ ಕಥೆಯಲ್ಲಿ ಮಲೆನಾಡಿನ ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾ ಯಗಳು ಹಾಗೂ ಜೀವನಶೈಲಿಯ ಸ್ಥೂಲ ವಾದ ಪರಿಚಯವಿದೆ. ಮಲೆನಾಡಿನ ಮಲೆ ಗಳಲ್ಲಿ ವಾಸಿಸುವ ಶ್ರೀಮಂತ ಸಿಂಬಾವಿ ಹೆಗ್ಗಡೆಯವರ ಮನೆಯಾಳು ನಾಯಿಗುತ್ತಿ, ಬೆಟ್ಟಳ್ಳಿಯ ದೊಡ್ಡಬೀರನ ಮಗಳು ತಿಮ್ಮಿ ಯನ್ನು ಹಾರಿಸಿಕೊಂಡು ಬರಲು ಹೋಗುವ ಸನ್ನಿವೇಶದಿಂದ ಪ್ರಾರಂಭವಾಗುವ ಕಾದಂಬ ರಿಯು ಹೆಗ್ಗಡೆಯವರ ದೈನಂದಿನ ಜೀವನ, ಮನೆ ಜಗಳ, ಕುಟುಂಬದ ನಂಬುಗೆಗಳು, ಹೊಲೆಯಾಳುಗಳ ಸ್ಥಾನಮಾನ, ಬದುಕು ಕಟ್ಟಿಕೊಳ್ಳಲು ಅವರು ನಡೆಸುವ ಸಂಘರ್ಷ ಇತ್ಯಾದಿಗಳೆಲ್ಲವೂ ಕಥಾವಸ್ತುಗಳಾಗಿವೆ.
ಈ ಕಾದಂಬರಿಯನ್ನು ಓದುತ್ತಾ ಹೋದಂತೆ ನಮ್ಮ ಬಾಹ್ಯ ಪ್ರಪಂಚಬಿಟ್ಟು ನಾವು ಬೇರೊಂದು ಕಲ್ಪನಾ ಲೋಕದಲ್ಲಿ ತೇಲುತ್ತೇವೆ. ಕಣ್ಣುಗಳು ಅಕ್ಷರಗಳ ಮೇಲೆ ಇದ್ದರೂ ತಲೆಯಲ್ಲೊಂದು ದೃಶ್ಯ ಕಾವ್ಯ ಸಿನೆಮಾದ ರೀಲಿನಂತೆ ಓಡುತ್ತಿರುತ್ತದೆ. ಇದು ಕುವೆಂಪು ಅವರ ಬರವಣಿಗೆಯ ವೈಶಿಷ್ಟé. ನಮಗೆ ಗೊತ್ತಿರದ ನೂರಾರು ಶಬ್ದಗಳ ಪರಿಚಯವನ್ನು ಮಾಡಿಸುವುದರ ಜತೆಗೆ ಕುವೆಂಪು ಅವರೊಳಗಿನ ಒಬ್ಬ ಅದ್ಭುತ ಚಿತ್ರಕ ಥೆಗಾರನನ್ನು ಓದುಗರಿಗೆ ಪರಿಚ ಯಿಸುತ್ತದೆ. ಇದನ್ನು ಸಿನೆಮಾ ಮಾಡುವುದಾದರೆ ಮತ್ತೂಮ್ಮೆ ಚಿತ್ರಕಥೆಯನ್ನು ಬರೆ ಯುವ ಅಗತ್ಯವಿಲ್ಲ. ಕಾದಂಬರಿಯ ಮೂಲ ರೂಪವನ್ನು ತೆರೆಗೆ ತಂದರೆ ಸಾಕು ಎನ್ನುವಷ್ಟು ವಿವರವಾಗಿ ಸನ್ನಿವೇಶಗಳನ್ನು ಓದುಗರಿಗೆ ಕಟ್ಟಿಕೊಟ್ಟಿದ್ದಾರೆ.
ಎಂತಹುದೇ ಸನ್ನಿವೇಶವಾದರೂ ಕೂಡ ಹದ ವಾದ ಭಾಷೆಯಿಂದ ನಯವಾಗಿ ಓದುಗರ ಹೃದಯಾಂತರಾಳಕ್ಕಿಳಿಸುವ ಕುವೆಂಪು ಅವರ ಭಾಷಾ ಬಳಕೆಯ ಛಾತಿ ಪ್ರಣಯದ ಸನ್ನಿವೇ ಶಗಳನ್ನೂ ಕೂಡ ಸಹಜವಾಗಿ ಕಟ್ಟಿಕೊಡುತ್ತವೆ. ಕುವೆಂಪು ಅವರ ಈ ಕಾದಂಬರಿಯು ಮಲೆನಾಡಿನ ಜನರ ಬದುಕಿನ ಕನ್ನಡಿಯಾಗಿದೆ. ಕವಿಯಾಗುವ ತುಡಿತವಿರುವ ಯುವ ಬರಹಗಾರರಿಗೆ ಹೊಸದೊಂದು ಬರವಣಿಗೆ ಶೈಲಿಯನ್ನು ಕಾದಂಬರಿ ಕಲಿಸಿಕೊಡುತ್ತದೆ.
-ಬಸವರಾಜ ಸಿದ್ದಣ್ಣವರ, ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.