ಎಲೆಕ್ಟೋರಲ್ ಬಾಂಡ್ ಖರೀದಿದಾರರ ಮಾಹಿತಿ ಬಹಿರಂಗಕ್ಕೆ SBI ನಿರಾಕರಣೆ
Team Udayavani, Jun 28, 2018, 5:31 PM IST
ಹೊಸದಿಲ್ಲಿ : ರಾಜಕೀಯ ಪಕ್ಷಗಳ ದೇಣಿಗೆ ರೂಪದ ಎಲೆಕ್ಟೋರಲ್ ಬಾಂಡ್ ಖರೀದಿದಾರರ ವಿವರಗಳನ್ನು ಬಹಿರಂಗಪಡಿಸುವಂತೆ ಕೋರಿ ಸಲ್ಲಿಸಲಾಗಿರುವ ಆರ್ಟಿಐ ಅರ್ಜಿಗೆ ಉತ್ತರಿಸಲು ಭಾರತೀಯ ಸ್ಟೇಟ್ ಬ್ಯಾಂಕ್ ನಿರಾಕರಿಸಿದೆ.
ಈ ಮಾಹಿತಿಗಳು ಖಾಸಗಿಯದ್ದಾಗಿರವುದರಿಂದ ತಾನು ಕಾನೂನಿನ ಪ್ರಕಾರ ಅವುಗಳನ್ನು ಬಹಿರಂಗಪಡಿಸುವ ಬದ್ಧತೆಯನ್ನು ಹೊಂದಿಲ್ಲ ಎಂದು ಎಸ್ಬಿಐ ಹೇಳಿದೆ.
2018ರ ಮಾರ್ಚ್ ಅಂತ್ಯದ ಪ್ರಕಾರ ಎಸ್ಬಿಐ 222 ಕೋಟಿ ರೂ.ಗಳ ಎಲೆಕ್ಟೋರಲ್ ಬಾಂಡ್ಗಳನ್ನು ಮಾರಿದೆ; ಎಪ್ರಿಲ್ ತಿಂಗಳಲ್ಲಿ ಇದು 114.90 ಕೋಟಿ ರೂ.ಗಳಿಗೆ ಇಳಿದಿದೆ. ಎಲೆಕ್ಟೋರಲ್ ಬಾಂಡ್ ಖರೀದಿಗೆ ಅತ್ಯಧಿಕ ಆಸಕ್ತಿ ಮುಂಬಯಿಯಲ್ಲಿ ತೋರಿ ಬಂದಿದ್ದು ಅದರ ಮುಖ್ಯ ಶಾಖೆಯೊಂದರಿಂದಲೇ 122 ಕೋಟಿ ರೂ. ಬಾಂಡ್ ಮಾರಾಟವಾಗಿದೆ. ಆದರೆ ಎಪ್ರಿಲ್ನಲ್ಲಿ ಇದು 53 ಕೋಟಿ ರೂ.ಗಳಿಗೆ ಇಳಿದಿದೆ ಎಂದು ಬ್ಯಾಂಕ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.