ಡಿಜಿಟಲ್ ಕ್ರಾಂತಿ… ಡಿಜಿಟಲ್ ಇಂಡಿಯಾಗೆ ಹೆದ್ದಾರಿ ರೂಪಿಸುತ್ತಿರುವ JIO
Team Udayavani, Sep 8, 2018, 3:16 PM IST
ಬೆಂಗಳೂರು: ಡಿಜಿಟಲ್ ಇಂಡಿಯಾಗೆ ಬೇಕಾಗಿದ್ದ ಪರಿವರ್ತಕ, ಜಿಯೋ. ಎರಡು ವರ್ಷಗಳ ಹಿಂದೆ ತನ್ನ ಸೇವೆಗಳ ಪ್ರಾರಂಭವಾದಾಗಿನಿಂದ ಜಿಯೋ ಡಿಜಿಟಲ್ ಕ್ರಾಂತಿಯನ್ನೇ ಮಾಡಿದ್ದು, ಡೇಟಾದ ಶಕ್ತಿಯನ್ನು ಪ್ರತಿಯೊಬ್ಬ ಭಾರತೀಯನ ಕೈಗೂ ಎಟುಕುವ ಮಟ್ಟಕ್ಕೆ ತಂದಿದೆ.
ಒಂದು ಕಾಲಮಾನಕ್ಕೆ ವ್ಯಾಖ್ಯಾನ ಬರೆಯುವ ಈ ಆಂದೋಲನದ ಮುಂಚೂಣಿಯಲ್ಲಿದ್ದದ್ದು, ಡಿಜಿಟಲ್ ಪರಿಹಾರಗಳ ಸಂಪೂರ್ಣ ಶ್ರೇಣಿಯಿಂದ ಬೆಂಬಲಿತವಾದ ಹೊಸ ತಲೆಮಾರಿನ ತಂತ್ರಜ್ಞಾನ. ಡಿಜಿಟಲ್ ಬದುಕಿನ ಆಮ್ಲಜನಕವಾದ ಡೇಟಾವನ್ನು ಭಾರತೀಯರಿಗೆ ಅಧಿಕ ಪ್ರಮಾಣದಲ್ಲಿ, ಕೈಗೆಟುಕುವ ಬೆಲೆಗಳಲ್ಲಿ ನೀಡಲು ಜಿಯೋಗೆ ಸಾಧ್ಯವಾದದ್ದು ಈ ಹೊಸ ತಲೆಮಾರಿನ ತಂತ್ರಜ್ಞಾನದಿಂದಲೇ.
ಕಳೆದೆರಡು ವರ್ಷಗಳಲ್ಲಿ ಜಿಯೋ ಜೊತೆಗೆ ಭಾರತದ ಪ್ರಯಾಣ:
ಪ್ರಪಂಚದ ಅತಿದೊಡ್ಡ ಸಂಪೂರ್ಣ ಐಪಿ ಜಾಲ: ಅತ್ಯುನ್ನತ ತಂತ್ರಜ್ಞಾನ ಬಳಸುವ ಸಂಪೂರ್ಣ ಐಪಿ ಜಾಲದ ಬೆಂಬಲ, 800 ಮೆಗಾಹರ್ಟ್ಸ್, 1800 ಮೆಗಾಹರ್ಟ್ಸ್ ಹಾಗೂ 2300 ಮೆಗಾಹರ್ಟ್ಸ್ ಬ್ಯಾಂಡುಗಳನ್ನು ವ್ಯಾಪಿಸಿರುವ ಎಲ್ಟಿಇ ತರಂಗಗುಚ್ಛ (ಸ್ಪೆಕ್ಟ್ರಂ) ಹಾಗೂ ಅತಿದೊಡ್ಡ ಫೈಬರ್ ಹೆಜ್ಜೆಗುರುತಿನೊಡನೆ ಜಿಯೋ ಭಾರತದ ಬೇರೆಲ್ಲ ಟೆಲಿಕಾಂ ಸಂಸ್ಥೆಗಳಿಗಿಂತ ದೊಡ್ಡದಾದ ಎಲ್ಟಿಇ ಪ್ರಸಾರವ್ಯಾಪ್ತಿಯನ್ನು ಹೊಂದಿದೆ. ಜಿಯೋ ಜಾಲ ಇಷ್ಟರಲ್ಲೇ ಭಾರತದ ಶೇ.99 ಜನಸಂಖ್ಯೆಯನ್ನು ಸಂಪರ್ಕಿಸಲಿದೆ. ಭಾರತದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ರೂಪಿಸಲಾಗಿರುವ 2ಜಿ ಪ್ರಸಾರವ್ಯಾಪ್ತಿಗಿಂತ ದೊಡ್ಡದಾದ 4ಜಿ ವ್ಯಾಪ್ತಿಯನ್ನು ಪಡೆಯುವುದು ಜಿಯೋ ದೆಸೆಯಿಂದ ಸಾಧ್ಯವಾಗಿದೆ.
ಭಾರತದಲ್ಲಿ ಉಚಿತ ಕರೆಗಳ ಕನಸು ನನಸಾಗಿದೆ. ಜಿಯೋ ತನ್ನ ಎಲ್ಲ ಟ್ಯಾರಿಫ್ ಪ್ಲಾನುಗಳ ಜೊತೆಯಲ್ಲಿ ಅಪರಿಮಿತ ಉಚಿತ ಕರೆಗಳನ್ನು ನೀಡಿದೆ. ಮಾರುಕಟ್ಟೆ ಬಹಳ ಕ್ಷಿಪ್ರವಾಗಿ ಡೇಟಾದತ್ತ ಸಾಗಿದೆ ಹಾಗೂ ಮತ್ತೊಮ್ಮೆ ಗ್ರಾಹಕರಿಗೆ ಜಯ ದೊರೆತಿದೆ.
ಭಾರತದಲ್ಲಿ ಮೊಬೈಲ್ ಡೇಟಾ ಬಳಕೆಯ ಪ್ರಮಾಣ ತಿಂಗಳಿಗೆ 20 ಕೋಟಿ ಜಿಬಿಯಿಂದ ಸುಮಾರು 370 ಕೋಟಿ ಜಿಬಿಗೆ ತಲುಪಿದೆ. ಈ ಪೈಕಿ ಜಿಯೋ ಗ್ರಾಹಕರೇ ಸುಮಾರು 240 ಕೋಟಿ ಜಿಬಿ ಡೇಟಾ ಬಳಸುತ್ತಿದ್ದಾರೆ. ಮೊಬೈಲ್ ಡೇಟಾ ಬಳಸುವ ರಾಷ್ಟ್ರಗಳ ಸಾಲಿನಲ್ಲಿ 155ನೇ ಸ್ಥಾನದಲ್ಲಿದ್ದ ಭಾರತ ಈಗ ಮೊದಲ ಸ್ಥಾನಕ್ಕೆ ತಲುಪಿದೆ. ಪ್ರತಿ ತಿಂಗಳೂ 100 ಕೋಟಿ ಜಿಬಿಗಿಂತ ಹೆಚ್ಚು ಡೇಟಾ ನಿರ್ವಹಿಸುವ ಜಿಯೋ, ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ ವಿಶ್ವದ ಮೊದಲ ಹಾಗೂ ಏಕೈಕ ಎಕ್ಸಾಬೈಟ್ ಟೆಲಿಕಾಂ ಜಾಲವಾಗಿ ಬೆಳೆದಿದೆ.
ಪ್ರತಿ ಸೆಕೆಂಡಿಗೆ 7 ಗ್ರಾಹಕರಂತೆ ಕೇವಲ 170 ದಿನಗಳಲ್ಲಿ 100 ಮಿಲಿಯನ್ ಗ್ರಾಹಕರನ್ನು ಸೇರಿಸಿಕೊಂಡ ವಿಕ್ರಮ, ವಿಶ್ವದ ಯಾವುದೇ ಭಾಗದಲ್ಲಿ ಅತ್ಯಂತ ವೇಗವಾಗಿ ಅಳವಡಿಸಿಕೊಳ್ಳಲಾದ ತಂತ್ರಜ್ಞಾನ ಸೇವೆ ಎಂಬ ಹೆಗ್ಗಳಿಕೆಯನ್ನು ಜಿಯೋಗೆ ತಂದುಕೊಟ್ಟಿತು. ಜೂನ್ 30, 2018ರ ಅಂಕಿ ಅಂಶಗಳ ಪ್ರಕಾರ 215 ಮಿಲಿಯನ್ಗಿಂತ ಹೆಚ್ಚು ಗ್ರಾಹಕರು ಜಿಯೋ ಜಾಲದಲ್ಲಿ ಡಿಜಿಟಲ್ ಜೀವನವನ್ನು ಆನಂದಿಸುತ್ತಿದ್ದಾರೆ.
ಡೇಟಾ ಪ್ರಜಾತಾಂತ್ರೀಕರಣಕ್ಕೆ ದಾರಿತೋರಿದ ಜಿಯೋ: ಪ್ರತಿ ಜಿಬಿಗೆ ರೂ. 250 ರೂ. 10,000 ಇದ್ದ ದರಗಳು, ಜಿಯೋ ಪ್ರಾರಂಭದ ನಂತರ ಪ್ರತಿ ಜಿಬಿಗೆ ರೂ. 15ಕ್ಕಿಂತ ಕಡಿಮೆಯಾಗಿದ್ದು ದರಪಟ್ಟಿಗಳು ಜನಸಾಮಾನ್ಯರ ಕೈಗೆಟುಕುವ ಮಟ್ಟಕ್ಕೆ ತಲುಪಿವೆ. ವಿವಿಧ ಪ್ಲಾನುಗಳ ಮೂಲಕ ಜಿಯೋ ಗ್ರಾಹಕರು ಇನ್ನೂ ಕಡಿಮೆ ಶುಲ್ಕ ಪಾವತಿಸುತ್ತಿದ್ದಾರೆ.
ಭಾರತದಲ್ಲಿ ಟೆಲಿಕಾಂ ಜಾಲಗಳ ಗುಣಮಟ್ಟದ ಮೇಲ್ವಿಚಾರಣೆಯನ್ನು ಅಧಿಕೃತವಾಗಿ ನೋಡಿಕೊಳ್ಳುವ ಟ್ರಾಯ್ ಸ್ಪೀಡ್ಟೆಸ್ಟ್ ಪೋರ್ಟಲ್ ಜಿಯೋ ಅನ್ನು 4ಜಿ ಜಾಲಗಳ ವ್ಯಾಪ್ತಿ, ಬಳಕೆ ಹಾಗೂ ಡೇಟಾ ವೇಗಗಳಲ್ಲಿ ಅಗ್ರಗಣ್ಯವೆಂದು ಸತತವಾಗಿ ಗುರುತಿಸಿದೆ.
ಟ್ಯಾರಿಫ್ ಸರಳೀಕರಣ: ಜಿಯೋ ಬರುವ ಮೊದಲು ಮಾರುಕಟ್ಟೆಯಲ್ಲಿ ಸುಮಾರು 22,000 ಪ್ಲಾನುಗಳಿದ್ದವು. ಜಿಯೋ ಬಂದ ನಂತರ ಮೊಬೈಲ್ ಸೇವಾ ಸಂಸ್ಥೆಗಳು ಜಿಯೋ ಮಾದರಿಯನ್ನು ಅನುಸರಿಸುವ ಮೂಲಕ ಪ್ಲಾನುಗಳ ಸಂಖ್ಯೆಯನ್ನು ಕಡಿಮೆಮಾಡಲು ಪ್ರಯತ್ನಿಸುತ್ತಿವೆ. ಕೆಲವೇ ಸರಳ ಪ್ಲಾನುಗಳನ್ನು ಪರಿಚಯಿಸಿರುವ ಜಿಯೋ ಏಕಕಾಲದಲ್ಲಿ ಕೇವಲ ಒಂದೆರಡು ಪ್ಲಾನುಗಳನ್ನಷ್ಟೇ ಪ್ರಮುಖವೆಂದು ಪರಿಗಣಿಸುತ್ತಿದೆ. ಇದರಿಂದಾಗಿ ಗ್ರಾಹಕರ ಬದುಕು ಬಹಳ ಸರಳವಾಗಿದೆ ಹಾಗೂ ತಮಗಾಗಿ ಅತ್ಯುತ್ತಮ ಕೊಡುಗೆಯನ್ನು ಸ್ವತಃ ಅವರೇ ಆಯ್ದುಕೊಳ್ಳುವುದು ಸಾಧ್ಯವಾಗಿದೆ.
ಡಿಜಿಟಲ್ ಇಕೋಸಿಸ್ಟಂನ ಭಾರೀ ಬೆಳವಣಿಗೆ: ಜಿಯೋ ಪ್ರಾರಂಭದ ನಂತರ ಫೇಸ್ಬುಕ್, ಯೂಟ್ಯೂಬ್ ಸೇರಿದಂತೆ ಎಲ್ಲ ಪ್ರಮುಖ ಸೋಶಿಯಲ್ ಮೀಡಿಯಾ ವೇದಿಕೆಗಳ ಭಾರತೀಯ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜಿಯೋ ಪ್ರಾರಂಭದ ಮೊದಲ ವರ್ಷದಲ್ಲೇ ಸುಮಾರು 70 ಮಿಲಿಯನ್ ಹೊಸ ಬಳಕೆದಾರರನ್ನು ಪಡೆದಿರುವ ಗೂಗಲ್ ಹಾಗೂ ಫೇಸ್ಬುಕ್ ಪಾಲಿಗೆ ಭಾರತ ಅತ್ಯಂತ ಸಕ್ರಿಯ ಮಾರುಕಟ್ಟೆಯಾಗಿ ಪರಿಣಮಿಸಿದೆ.
ದೇಶದ ಡಿವೈಸ್ ಇಕೋಸಿಸ್ಟಂ ವೇಗವರ್ಧನೆ: ರಿಲಯನ್ಸ್ ರೀಟೈಲ್ ನಿಂದ ವಿಒಎಲ್ಟಿಇ ಅಂತರ್ಗತ ಔYಊ ಸಾಧನಗಳನ್ನು ಬಿಡುಗಡೆಮಾಡಿದುದರಿಂದ, ಸ್ಮಾರ್ಟ್ಫೋನ್ ಬ್ರಾಂಡ್ ಗಳೆಲ್ಲವೂ ಎಲ್ಟಿಇ ಶಿಪ್ಮೆಂಟ್ಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತಾಯಿತು. ಇದರಿಂದಾಗಿ ಈಗ ದೇಶದಲ್ಲಿ ಬಳಕೆಯಾಗುತ್ತಿರುವ ಎಲ್ಲ ಸ್ಮಾರ್ಟ್ಫೋನ್ ಶಿಪ್ಮೆಂಟ್ಗಳೂ ಎಲ್ಟಿಇ ಸಾಧನಗಳಾಗಿ ಬದಲಾಗಿರುವ ಸ್ಥಿತಿ ನಿರ್ಮಾಣವಾಗಿದೆ.
ಜಿಯೋಫೈ ಪರಿಚಯಿಸಿದುದು: ವೈಯಕ್ತಿಕ ಧ್ವನಿ ಹಾಗೂ ಡಾಟಾ ಹಾಟ್ ಸ್ಪಾಟ್ಗಳ ಅಳವಡಿಕೆಯಿಂದಾಗಿ ಗ್ರಾಹಕರು ಜಿಯೋ ಡಿಜಿಟಲ್ ಜೀವನಶೈಲಿಯನ್ನು ಅನ್ನು ಹಲವು ಸಾಧನಗಳ ಮೂಲಕ ಬಳಸುವುದು ಸಾಧ್ಯವಾಗಿದೆ. ಅಲ್ಲದೆ, ವಿಒಎಲ್ಟಿಇ ಕರೆಗಳ ಲಾಭವನ್ನು ತಮ್ಮ ಹಳೆಯ 2ಜಿ/3ಜಿ ಮೊಬೈಲ್ ಗಳಿಂದಲೂ ಪಡೆಯುವುದಕ್ಕೆ ಅವಕಾಶವಾಗಿದೆ.
ನವಯುಗವನ್ನು ಸಾರಿದ ಜಿಯೋಫೋನ್: ಫೀಚರ್ಗಳನ್ನು ಅಡಕಗೊಳಿಸಿದ ಫೋನ್ಗಳ ಬಳಕೆದಾರರಿಗೆ ಭಾರತದ ಹೊಸ ಸ್ಮಾರ್ಟ್ ಫೋನ್ ಎನಿಸಿದ ಜಿಯೋ ಫೋನ್ ಹೊಸದೊಂದು ಯುಗದ ಪ್ರಾರಂಭವನ್ನು ಸಾರುತ್ತಿದೆ. 2018 ಜೂನ್ 30ರ ವೇಳೆಗೆ, 25 ಮಿಲಿಯನ್ ಫೋನುಗಳನ್ನು ಮಾರಾಟಮಾಡಿರುವ ದಾಖಲೆ ಹೊಂದಿರುವ ಜಿಯೋ ಫೋನ್ ಮುಂದಿನ ದಿನಗಳಲ್ಲಿ ಅತಿ ಅಲ್ಪಾವಧಿಯಲ್ಲಿ 100 ಮಿಲಿಯ ಗ್ರಾಹಕರನ್ನು ತಲುಪುವ ಗುರಿ ಹೊಂದಿದೆ. ಉಚಿತ ಸವಲತ್ತು ಎಂದೇ ಹೇಳಬಹುದಾದ ಈ ವ್ಯವಸ್ಥೆಯಲ್ಲಿ ಗ್ರಾಹಕರು ತಮ್ಮ ಹಳೆಯ ಫೀಚರ್ ಫೋನನ್ನು ಬದಲಾಯಿಸಿಕೊಳ್ಳುವುದರ ಜೊತೆಗೆ ಕೇವಲ 501 ರೂ. ಗಳನ್ನು ಠೇವಣಿಯಾಗಿರಿಸಿ ಜಿಯೋಫೋನ್ ಸಾಧನವನ್ನು ಪಡೆಯಬಹುದಾಗಿದೆ. ಈ ಮೂಲಕ ಡಿಜಿಟಲ್ ಲೈಫ್ನ ಲಾಭಗಳನ್ನು ಅತಿ ಸುಲಭದರದಲ್ಲಿ ದೇಶದ ಕೊಟ್ಟಕೊನೆಯ ಮೂಲೆಗಳಿಗೂ ವಿಸ್ತರಿಸುವುದು ಈ ವ್ಯವಸ್ಥೆಯ ಗುರಿಯಾಗಿದೆ.
ಡಿಜಿಟಲ್ ಲೈಫ್ ಯೋಜನೆಯ ವಿಸ್ತರಣೆ: ಗ್ರಾಹಕರಿಗೆ ಹೆಚ್ಚು ಹೆಚ್ಚು ಸೌಲಭ್ಯಗಳನ್ನು ನೀಡಬೇಕೆಂಬ ನಿರಂತರ ಹಂಬಲದೊಡನೆ, ಜಿಯೋ ತನ್ನ ಕೊಡುಗೆಗಳ ಮಾಲಿಕೆಯನ್ನು ಹೆಚ್ಚಿಸುತ್ತಲೇ ಬಂದಿದೆ. ಕಳೆದೆರಡು ವರುಷಗಳಲ್ಲಿ, ಜಿಯೋ ಮತ್ತದರ ಪೋಷಕ ಕಂಪೆನಿಯಾದ ರಿಲಯನ್ಸ್ ಉದ್ಯಮವು, ಸಾವನ್ ಸಂಗೀತದ ಪೋರ್ಟಲ್ ಅನ್ನು ಪಡೆದುಕೊಂಡಿರುವುದಲ್ಲದೆ, ಇರಾಸ್ ಮತ್ತು ಆಲ್ಟ್ ಬಾಲಾಜಿಗಳೊಂದಿಗೆ ಒಪ್ಪಂದಗಳನ್ನು ಘೋಷಿಸಿಕೊಂಡಿದೆ. ಚಳಿಗಾಲದ ಒಲಿಂಪಿಕ್ಸ್ , ನಿಡಹಾಸ್ ಟ್ರೋಫಿ ಮತ್ತಿತರ ಕ್ರೀಡೆಗಳ ಡಿಜಿಟಲ್ ಹಕ್ಕುಗಳನ್ನೂ ಖರೀದಿಸಿದೆ. ಡಿಜಿಟಲ್ ಶಿಕ್ಷಣ ವಿಭಾಗದಲ್ಲೂ ತನ್ನ ಇರುವಿಕೆಯನ್ನು ಪ್ರಚುರಪಡಿಸಿರುವ ಜಿಯೋ ಪೋಷಕ ಸಂಸ್ಥೆಯು ಇಂಬೈಬ್ ಎಂಬ ವಿಶಿಷ್ಟ ಅಂಕಿಅಂಶಗಳ ಆಧಾರಿತ ಶೈಕ್ಷಣಿಕ ಸೇವಾವೇದಿಕೆಯಲ್ಲಿ ಅಧಿಕಪಾಲನ್ನು ಗಳಿಸಿಕೊಂಡಿದೆ. ಈ ಮೂಲಕ ಇಂಜಿನಿಯರಿಂಗ್, ವೈದ್ಯಕೀಯ, ಬ್ಯಾಂಕಿಂಗ್ ಹಾಗೂ ೮ ೧೦ ನೇ ತರಗತಿಗಳ ಫೌಂಡೇಶನ್ ಪರೀಕ್ಷೆಗಳ ಕಲಿಕೆಯ ಅವಶ್ಯಕತೆಗಳನ್ನು ಇದು ಈಡೇರಿಸಲಿದೆ. ಜಿಯೋ ದ ಸ್ವಂತ ಆಪ್ ಗಳೂ ಹೆಚ್ಚಿನ ಜನಪ್ರಿಯತೆ ಪಡೆಯತೊಡಗಿವೆ. ಮೈಜಿಯೋ ದ 200 ಮಿಲಿಯ ಡೌನ್ಲೋಡ್ಗಳೂ ಜಿಯೋ ಟೀವಿಯ 100 ಮಿಲಿಯಕ್ಕೂ ಹೆಚ್ಚಿನ ಡೌನ್ಲೋಡ್ ಗಳೇ ಇದಕ್ಕೆ ಸಾಕ್ಷಿಯಾಗಿವೆ.
ಜಿಯೋ : ಭಾರತದೊಡನೆ ತನ್ನ ಸಹಭಾಗಿತ್ವದ ಮುಂದುವರಿಕೆ : ಮೊಬೈಲ್ ಸೇವೆ ಹಾಗೂ ಫೈಬರ್ ಮೂಲದ ವೈರ್ ಲೈನ್ ಸಂಪರ್ಕಗಳೆರಡಕ್ಕೂ ಅನ್ವಯವಾಗುವಂತೆ, ಬ್ರಾಡ್ ಬ್ಯಾಂಡ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಜಗತ್ತಿನ ಮೊದಲ ಐದು ಅಗ್ರದೇಶಗಳಲ್ಲಿ ಭಾರತವನ್ನು ಒಂದಾಗಿಸುವುದಕ್ಕೆ ಜಿಯೋ ಕಟಿಬದ್ಧವಾಗಿದೆ. ಈಗಾಗಲೇ ಭವಿಷ್ಯಕ್ಕೆ ಸೂಕ್ತವಾದ ಜಾಲಗಳನ್ನು ನಿರ್ಮಿಸಿರುವ ಜಿಯೋ ಮುಂಬರುವ ದಶಕಗಳಲ್ಲಿ ಅತ್ಯಾಧುನಿಕ ತಾಂತ್ರಿಕತೆಯನ್ನು ತನ್ನ ಗ್ರಾಹಕಸಮೂಹಕ್ಕೆ ಒದಗಿಸಲು ಸಮರ್ಥವಾಗಿದೆ.
ಜಿಯೋ, ಅಸಾಮಾನ್ಯ ಸಾಮರ್ಥ್ಯವಿರುವ ಹಾಗೂ ದೇಶವ್ಯಾಪಿ ಪ್ರಸಾರವುಳ್ಳ ಡಿಜಿಟಲ್ ಸಂಪರ್ಕ ವೇದಿಕೆಯನ್ನು ನಿರ್ಮಾಣಮಾಡಿದೆ. ಇದರಿಂದ ರಿಲಯನ್ಸ್ ಭವಿಷ್ಯದಲ್ಲಿ ತಂತ್ರಜ್ಞಾನ ವೇದಿಕೆಯ ಕಂಪೆನಿಯಾಗುವ ನಿಟ್ಟಿನಲ್ಲಿ ತನ್ನನ್ನು ಪುನರ್ರೂಪಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿದಂತಾಗಿದೆ. ಡಿಜಿಟಲ್ ರಂಗಗಳು ನವಯುಗದ ಕಾರ್ಖಾನೆಗಳಾಗಿವೆ; ಸೇವಾ ಪೂರೈಕೆದಾರರೆನಿಸಿಕೊಂಡಿವೆ. ಜಗತ್ತು ಕಾಲಿರಿಸುತ್ತಿರುವ ಈ ಹೊಸ ಯುಗದಲ್ಲಿ ಯಾವಾಗ ಬೇಕಾದರೂ ಮೌಲ್ಯ ಸೃಷ್ಟಿ, ಎಲ್ಲೆಲ್ಲೂ ಮೌಲ್ಯ ಸೃಷ್ಟಿ, ಹಾಗೂ ಉತ್ತಮ ಉದ್ಯಮ ತಂತ್ರಗಳನ್ನು ಬಲ್ಲ ಯಾರಿಂದಲಾದರೂ ಮೌಲ್ಯ ಸೃಷ್ಟಿ ಎಂಬುದೇ ಮೂಲಸೂತ್ರವೆನಿಸಿದೆ. ಇದಕ್ಕನುಗುಣವಾಗಿ, ಜಿಯೋ ಪರಿಮಿತಿಯಿಲ್ಲದ, ಸಾಹಸಶೀಲ ಬೆಳವಣಿಗೆಯ ಸಂಭ್ರಮದ ಭವಿಷ್ಯದತ್ತ ಹೊರಡಲು ಸನ್ನದ್ಧವಾಗಿದೆ.
ಸಂಖ್ಯೆಗಳಲ್ಲಿ ಜಿಯೋ:
ಜಿಯೋ ಕಾರ್ಯಾಚರಣೆಯ ಮುಖ್ಯಾಂಶಗಳು
1.ಭಾರತದ ಅತಿದೊಡ್ಡ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಿಸ್ತಂತು ಡೇಟಾ ಚಂದಾದಾರರ ಜಾಲ (215.3 ಮಿಲಿಯನ್)
2.ಪ್ರತಿ ಗ್ರಾಹಕನಿಗೆ ಪ್ರತಿ ತಿಂಗಳೂ 10.6 ಜಿಬಿಯಂತೆ ಎರಡನೇ ತ್ರೈಮಾಸಿಕದಲ್ಲಿ (ಕಿ2) 642 ಕೋಟಿ ಜಿಬಿ ಡೇಟಾ ಬಳಕೆ
3.ಎರಡನೇ ತ್ರೈಮಾಸಿಕದಲ್ಲಿ ಉದ್ದಿಮೆಯ ಒಟ್ಟು 4ಜಿ ಡೇಟಾ ಟ್ರಾಫಿಕ್ನ ಶೇ. 76ರಷ್ಟನ್ನು ಜಿಯೋ ಜಾಲ ನಿರ್ವಹಿಸಿದೆ.
4.ಎರಡನೇ ತ್ರೈಮಾಸಿಕದಲ್ಲಿ ಪ್ರತಿ ಗ್ರಾಹಕನ ಮಟ್ಟದಲ್ಲಿ ಅತಿ ಹೆಚ್ಚು ವಾಯ್ಸ್ ಬಳಕೆ ಪ್ರತಿ ತಿಂಗಳೂ ಪ್ರತಿ ಗ್ರಾಹಕನಿಗೆ 744 ನಿಮಿಷದಂತೆ ಒಟ್ಟು 44,871 ಕೋಟಿ ನಿಮಿಷದಷ್ಟು ವಿಒಎಲ್ಟಿಇ ಟ್ರಾಫಿಕ್
5.ತಿಂಗಳಿಗೆ 340 ಕೋಟಿ ಗಂಟೆಗಳಿಗೂ ಹೆಚ್ಚು ಪ್ರಮಾಣದಲ್ಲಿ ಉನ್ನತ ಗುಣಮಟ್ಟದ ವೀಡಿಯೋ ಬಳಸುವ ಅತಿದೊಡ್ಡ ಜಾಲ
6.ಪ್ರತಿ ಗ್ರಾಹಕನಿಂದ ಪ್ರತಿ ತಿಂಗಳೂ 15.4 ಗಂಟೆಗಳಷ್ಟು ವೀಡಿಯೋ ವೀಕ್ಷಣೆ
7.ಉದ್ದಿಮೆಯಲ್ಲೇ ಅತಿಹೆಚ್ಚಿನ ಎಆರ್ಪಿಯು (ಪ್ರತಿ ಗ್ರಾಹಕನಿಂದ ಸರಾಸರಿ ಆದಾಯ), ಪ್ರತಿ ತಿಂಗಳು ರೂ. 134.5ರಷ್ಟು
8.ಅತ್ಯಂತ ಕಡಿಮೆ ಪ್ರಮಾಣದ ಕಾಲ್ ಡ್ರಾಪ್, ಶೇ. 0.13ರಷ್ಟು
9.ಸರಾಸರಿ ಡೌನ್ಲೋಡ್ ವೇಗ 18.6 ಎಂಬಿಪಿಎಸ್
10.1,100 ನಗರಗಳಲ್ಲಿ ಸ್ಥಿರ (ಫಿಕ್ಸೆಡ್ ಲೈನ್) ಫೈಬರ್ ಬ್ರಾಡ್ಬ್ಯಾಂಡ್ ಸಂಪರ್ಕ ಒದಗಿಸುವ ಉದ್ದೇಶ
11.ಡಿಜಿಟಲ್ ಅನ್ವಯಗಳ ಶ್ರೇಣಿಯ ಕೊಡುಗೆ ಜೀರೋ ಟಚ್ ಪೋಸ್ಟ್ಪೇಯ್ಡ್ ಪ್ಲಾನುಗಳು, ಜಿಯೋಫೋನ್ನಲ್ಲಿ ಜನಪ್ರಿಯ ಆಪ್ಗಳು, ಐಪಿಎಲ್ ಪ್ಲೇ ಅಲಾಂಗ್ ಗೇಮ್, ಜಿಯೋ ಇಂಟರಾಕ್ಟ್ ಸೇರಿ ಹಲವು ಮೊದಲ ಹೆಜ್ಜೆಗಳು
12.ವ್ಯವಹಾರದ ಬಲಿಷ್ಠತೆಯನ್ನು ತೋರಿಸಿದ ಸದೃಢ ಆರ್ಥಿಕ ಪ್ರದರ್ಶನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Old Age Home: ಶಿಕ್ಷಣ ವೃದ್ಧಾಶ್ರಮ ಹೆಚ್ಚಿಸದಿರಲಿ!
ಬೈಕ್ ನಲ್ಲಿ ಚಲಿಸುತ್ತಿದ್ದ ವೇಳೆ ತುಂಡಾಗಿ ಬಿದ್ದ ಕೊಂಬೆ;ಸವಾರರಿಗೆ ಗಂಭೀರ ಗಾಯ, ಮೂಳೆ ಮುರಿತ
ಐದನೇ ಬಾರಿ ಜತೆಯಾದ ಧನುಷ್ – ವೆಟ್ರಿಮಾರನ್; ತೆರೆಮೇಲೆ ʼಕೆಜಿಎಫ್ʼ ರಿಯಲ್ ಕಹಾನಿ?
Belagavi: ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾ*ರ
ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.