ಕನ್ನಡ ಸಂಶೋಧನೆ ಒಂದು ಅಧ್ಯಯನ !


Team Udayavani, Jan 21, 2018, 6:20 AM IST

lead.jpg

ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಒಟ್ಟಾರೆಯಾಗಿ ಕನ್ನಡ ಸಂಶೋಧನೆಯು ಇಂದು ಪತನಮುಖೀಯಾಗಿದೆ. ಸಂಶೋಧನಾ ವಿಧಾನಗಳು ವರ್ತಮಾನದ ಅಗತ್ಯಗಳಿಗೆ ಪೂರಕವಾಗಿ ತನ್ನನ್ನು ಹೊಸದುಗೊಳಿಸಿಕೊಳ್ಳದೆ ನಿರ್ಜೀವವಾಗಿವೆ. ಸಂಶೋಧನೆಗೆ ಆಯ್ದುಕೊಳ್ಳುವ ವಸ್ತುಗಳು ಯಾವುದೇ ಸವಾಲುಗಳನ್ನು ಸ್ವೀಕರಿಸದೆ ಸರಳವಾಗಿದ್ದು ನಮ್ಮ ಅರಿವಿನ ವಲಯಗಳನ್ನು ವಿಸ್ತರಿಸುತ್ತಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಸಂಶೋಧನೆಗಳು ಕಳೆಗುಂದುತ್ತಿರುವ ಬಗ್ಗೆ ಗಂಭೀರವಾದ ಚರ್ಚೆಗಳೂ ನಡೆಯುತ್ತಿಲ್ಲ.

ಕೆಲವು ಉನ್ನತ ಶಿಕ್ಷಣ ಕೇಂದ್ರಗಳೂ ಸೇರಿದರೆ ಕರ್ನಾಟಕದಲ್ಲಿ ಸುಮಾರು 43 ಪ್ರಮುಖ ಸಂಶೋಧನಾ ಕೇಂದ್ರಗಳಿವೆ, ಇಲ್ಲಿ ಸಂಶೋಧನೆ ಮಾಡುತ್ತಿರುವವರ ಸಂಖ್ಯೆ ಸುಮಾರು 5000. ಇದು ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ.  0.008 ಆಗಿದೆ. ಈ ವಿಷಯದಲ್ಲಿ ರಾಷ್ಟ್ರೀಯ ಸರಾಸರಿ 0.6 ಆಗಿದ್ದು ಕರ್ನಾಟಕ ರಾಜ್ಯವು ರಾಷ್ಟ್ರೀಯ ಸರಾಸರಿಗಿಂತ ಬಹಳ ಹಿಂದಿದೆ. ಹೀಗೆ ಸಂಖ್ಯಾ ದೃಷ್ಟಿಯಿಂದ ಹಿಂದೆ ಬಿದ್ದಿರುವ ಕರ್ನಾಟಕವು ಸಂಶೋಧನೆಯ ಗುಣಮಟ್ಟದ ದೃಷ್ಟಿಯಿಂದಲೂ ಮಹತ್ವದ್ದೇನನ್ನೂ ಸಾಧಿಸುತ್ತಿಲ್ಲ. 

ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಒಟ್ಟಾರೆಯಾಗಿ ಕನ್ನಡ ಸಂಶೋಧನೆಯು ಇಂದು ಪತನಮುಖೀಯಾಗಿದೆ. ಸಂಶೋಧನಾ ವಿಧಾನಗಳು ವರ್ತಮಾನದ ಅಗತ್ಯಗಳಿಗೆ ಪೂರಕವಾಗಿ ತನ್ನನ್ನು ಹೊಸದುಗೊಳಿಸಿಕೊಳ್ಳದೆ ನಿರ್ಜೀವವಾಗಿವೆ. ಸಂಶೋಧನೆಗೆ ಆಯ್ದುಕೊಳ್ಳುವ ವಸ್ತುಗಳು ಯಾವುದೇ ಸವಾಲುಗಳನ್ನು ಸ್ವೀಕರಿಸದೆ ಸರಳವಾಗಿದ್ದು ನಮ್ಮ ಅರಿವಿನ ವಲಯಗಳನ್ನು ವಿಸ್ತರಿಸುತ್ತಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಸಂಶೋಧನೆಗಳು ಕಳೆಗುಂದುತ್ತಿರುವ ಬಗ್ಗೆ ಗಂಭೀರವಾದ ಚರ್ಚೆಗಳೂ ನಡೆಯುತ್ತಿಲ್ಲ. ನನಗೆ ಮೌಲ್ಯಮಾಪನಕ್ಕೆ ಬರುವ ಪಿಎಚ್‌.ಡಿ ಮಹಾಪ್ರಬಂಧಗಳಲ್ಲಿ ಸಾಮಾನ್ಯವಾಗಿ ಪುಟಕ್ಕೆರಡರಂತೆ ಅಕ್ಷರ ತಪ್ಪುಗಳಿರುತ್ತವೆ. ಲೇಖಕರ ಹೆಸರುಗಳನ್ನೇ ಸರಿಯಾಗಿ ಬರೆದಿರುವುದಿಲ್ಲ.

ಉÇÉೇಖಗಳನ್ನು ಹೇಗೆ ಮಾಡಬೇಕೆಂಬ ತಿಳುವಳಿಕೆ ಇರುವುದಿಲ್ಲ. ಆರಿಸಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಅಧ್ಯಯನಗಳ ಓದು ಮತ್ತು ಅವುಗಳ ವಿಮಶಾìತ್ಮಕ ವಿಶ್ಲೇಷಣೆ ಬಹುಮಟ್ಟಿಗೆ ಕಾಣೆಯಾಗಿರುತ್ತವೆ. ಪಾರಿಭಾಷಿಕ ಪದಗಳ ಬಳಕೆಯಲ್ಲಿ ಅಸ್ಪಷ್ಟತೆ ಹಾಗೂ ಗೊಂದಲ ಎÇÉೆಂದರಲ್ಲಿ ಕಂಡುಬರುತ್ತದೆ. ಅತ್ಯಂತ ಅವೈಜ್ಞಾನಿಕವಾದ ರೀತಿಯಲ್ಲಿ ಆಕರ ಸೂಚಿಗಳನ್ನು ಕೊಡಲಾಗುತ್ತದೆ. ಇವಕ್ಕೆಲ್ಲ ಕಲಶವಿಟ್ಟಂತೆ ವಿದ್ಯಾರ್ಥಿಗಳಲ್ಲಿ ಕಂಡುಬರುವ ಅಸಡ್ಡೆ ಮತ್ತು ದುರಹಂಕಾರವು ಯಾವುದೇ ಬಗೆಯ ಚರ್ಚೆಗಳನ್ನು ಕೂಡಾ ನಡೆಸಲು ಅವಕಾಶ ಕೊಡುತ್ತಿಲ್ಲ. ಕುತೂಹಲದ ವಿಷಯವೆಂದರೆ, ನಮ್ಮ ಶಿಕ್ಷಣ ಕ್ರಮದ ಯಾವ ಹಂತದಲ್ಲೂ ಸಂಶೋಧನೆಯನ್ನು ಪ್ರೋತ್ಸಾಹಿಸುವ ಪಠ್ಯಕ್ರಮವಿಲ್ಲ. 

ಈ ವಿಷಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಸರಿಯಾಗಿ ಮಾರ್ಗದರ್ಶನ ಮಾಡಬಲ್ಲ ಯೋಗ್ಯತೆ ಇರುವ ಅಧ್ಯಾಪಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ತಾವು ಕೆಲಸ ಮಾಡಬಯಸುವ ಕ್ಷೇತ್ರದಲ್ಲಿ ಯಾವ ಬಗೆಯ ಸಂಶೋಧನೆಗಳು ನಡೆದಿವೆ ಮತ್ತು ನಡೆಯುತ್ತಿವೆ, ನಮ್ಮ ಇಂದಿನ ತುರ್ತು ಅಗತ್ಯಗಳೇನು? ಎಂಬುದನ್ನು ವಿಸ್ತಾರವಾದ ಓದಿನ ಮೂಲಕ ಗ್ರಹಿಸಿ ಅದನ್ನು ತನ್ನ ಸಂಶೋಧನಾ ವಿದ್ಯಾರ್ಥಿಗೆ ಸಮರ್ಥವಾಗಿ ಹೇಳಬಲ್ಲ ಅಧ್ಯಾಪಕರ ಸಂಖ್ಯೆ ಇವತ್ತು ಬೆರಳೆಣಿಕೆಯಲ್ಲಿದೆ. ಈ ನಡುವೆ ಅಧ್ಯಾಪಕರ ನಡುವಣ ಪರಸ್ಪರ ಶೈಕ್ಷಣಿಕ ಸಂಬಂಧಗಳು ಎಷ್ಟು ಕುಸಿದು ಹೋಗಿವೆಯೆಂದರೆ ಸಮಾನಾಸಕ್ತಿಯ ವಿದ್ವಾಂಸರ ನಡುವೆ ಕೂಡಾ ಯಾವುದೇ ಬಗೆಯ ಅರ್ಥಪೂರ್ಣವಾದ ಸಂವಾದಗಳೂ ನಡೆಯುತ್ತಿಲ್ಲ. ಈ ಕ್ಷೇತ್ರದ ಇನ್ನೊಂದು ಸಮಸ್ಯೆಯೆಂದರೆ ಕೆಲವರು ಯಾವುದೋ ಕಾರಣಕ್ಕೆ ಸಂಶೋಧನೆಯನ್ನು ಆರಂಭಿಸುತ್ತಾರೆ. ಅದಕ್ಕಾಗಿ ಶ್ರಮಪಟ್ಟು ಕೆಲಸವನ್ನೂ ಮಾಡುತ್ತಾರೆ. ಆನಂತರ ಇದ್ದಕ್ಕಿದ್ದಂತೆ ಸಂಶೋಧನಾ ಕ್ಷೇತ್ರವನ್ನೇ ಬಿಟ್ಟು ಮೌನವಾಗಿಬಿಡುತ್ತಾರೆ. ಪದವಿ ದೊರಕಿದ ಮೇಲೆ ಅವರು ಒಂದು ಲೇಖನವನ್ನೂ ಬರೆಯುವುದಿಲ್ಲ. ಸಂಶೋಧನೆಯೆಂಬುದು ನಿರಂತರವಾದ ಒಂದು ಪ್ರಕ್ರಿಯೆ ಎಂಬ ತಿಳುವಳಿಕೆ ನಮ್ಮಲ್ಲಿ ಮೂಡದ ಹೊರತು ಆ ಕ್ಷೇತ್ರ ಅಭಿವೃದ್ಧಿಯಾಗದು. 
ಎಂಥ ಅದ್ಭುತ ಸಂಶೋಧನ ಪರಂಪರೆ !

ಹಾಗೆ ನೋಡಿದರೆ ಕನ್ನಡ ಸಂಶೋಧನೆಗೆ ಒಳ್ಳೆಯ ತಳಹದಿಯೇನೋ ಇದೆ. ಈಸ್ಟ್‌ ಇಂಡಿಯಾ ಕಂಪೆನಿಯ ನೌಕರನಾಗಿ 1762ರಲ್ಲಿ ಭಾರತಕ್ಕೆ ಬಂದ ಬುಕ್‌ನನ್‌, 1783ರಲ್ಲಿ ಕರ್ನಾಟಕ ಪ್ರವೇಶಿಸಿದ ಲೆ.ಕ. ಮೆಕೆಂಜಿ,   ಶ್ರೀರಂಗಪಟ್ಟಣದ ಲಾವಣಿಯನ್ನು 1803ರಲ್ಲಿ ಸಂಗ್ರಹಿಸಿದ ಜಾನ್‌ ಲೇಡನ್‌, 1816ರಲ್ಲಿ ಕನ್ನಡ ಗಾದೆ, ಒಗಟು ಮತ್ತು  ನಂಬಿಕೆಗಳನ್ನು ಸಂಗ್ರಹಿಸಿದ ಅಬ್ಬೆ ದುಬಾಯಿ, 3,000 ಕನ್ನಡ ಗಾದೆಗಳಿರುವ ಬೃಹತ್‌ ಸಂಪುಟವನ್ನು 1847ರಲ್ಲಿ ಪ್ರಕಟಿಸಿದ ಮೋಗ್ಲಿಂಗ್‌, ದಾಸರಪದಗಳ ಮೌಖೀಕ ರೂಪಗಳನ್ನು 1831ರಷ್ಟು ಹಿಂದೆ ಸಂಗ್ರಹಿಸಿದ ಗೋವರ್‌, 1873ರಲ್ಲಿಯೇ ಕನ್ನಡಕ್ಕೊಂದು ನಿಘಂಟು ನೀಡಿದ ಕಿಟೆಲ್‌, 1885ರಲ್ಲಿ  17 ಐತಿಹಾಸಿಕ ಲಾವಣಿಗಳನ್ನು, ನಾಲ್ಕು ದಂಡಕಗಳನ್ನು, ನಾಲ್ಕು ಜೋಗುಳದ ಹಾಡುಗಳನ್ನು ಸಂಗ್ರಹಿಸಿದ‌ ಜೆ.ಎಫ್. ಫ್ಲೀಟ್‌, ಜನಪದ ಕತೆಗಳ ಕಡೆಗೆ 1881ರಲ್ಲಿಯೇ ಮುಖಮಾಡಿದ ಮೇರಿ ಫ್ರಿಯರೆ, 1875ರಲ್ಲಿ ಭೂತಾರಾಧನೆಯ ಬಗೆಗೆ ಲೇಖನ ಪ್ರಕಟಿಸಿದ ವಾಲ್‌ಹೌಸ್‌, 1892ರಲ್ಲಿ ಇಪ್ಪತ್ತೂಂದು ಪಾಡ್ಡನಗಳನ್ನು ಸಂಕಲಿಸಿ ಪ್ರಕಟಿಸಿದ ಎ.ಸಿ. ಬರ್ನೆಲ್‌ ಮೊದಲಾದ ಪಾಶ್ಚಾತ್ಯ ವಿದ್ವಾಂಸರು ಮಾಡಿದ ಕೆಲಸಗಳು ಇಂದಿಗೂ ನಮಗೆ ಸಂಶೋಧನೆಯ ಮೂಲ ಆಕರಗಳಾಗಿ ಸಹಕರಿಸುತ್ತಲಿವೆ. ಅವರ ಕೆಲಸಗಳ ಮೂಲ ಉದ್ದೇಶಗಳು ಏನೇ ಇದ್ದಿರಲಿ, ಇವತ್ತು ಅವು ಆ ಮೂಲ ಉದ್ದೇಶಗಳನ್ನೂ ಮೀರಿ ಕನ್ನಡ ಸಂಶೋಧನೆಗೆ ಭದ್ರ ತಳಪಾಯವನ್ನು ನಿರ್ಮಿಸಿಕೊಟ್ಟಿವೆ. ಈ ವಿದ್ವಾಂಸರುಗಳು ಆರಂಭ ಮಾಡಿದ ನಿಘಂಟು ಶಾಸ್ತ್ರ , ಶಾಸನ ಶಾಸ್ತ್ರ , ಹಸ್ತಪ್ರತಿ ಸಂಪಾದನೆ, ಗ್ರಂಥ ಸಂಪಾದನೆ, ಮತ್ತು ಜಾನಪದ ಕೆಲಸಗಳು ನಮ್ಮ ಮುಖ್ಯ ಸಂಶೋಧನೆಗಳ ವಸ್ತು ಮತ್ತು ವಿಧಾನಗಳನ್ನು ನಿರ್ವಚಿಸಿವೆ.

ಈ ಆರಂಭಿಕ ಕೆಲಸಗಳನ್ನು 20ನೇ ಶತಮಾನದಲ್ಲಿ ಅರ್ಥಪೂರ್ಣವಾಗಿ ಮತ್ತು ವಿದ್ವತ್‌ಪೂರ್ಣವಾಗಿ ಮುಂದುವರಿಸಲಾಯಿತು. ಶ್ರೀಗಳಾದ ಕೆ. ಬಿ. ಪಾಠಕ್‌, ಪಿ. ಬಿ. ದೇಸಾಯಿ, ಕೆ. ಜಿ. ಕುಂದಣಗಾರ, ಟಿ. ಎಸ್‌. ವೆಂಕಣಯ್ಯ, ಮಂಜೇಶ್ವರ ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಕೃಷ್ಣ ಭಟ್‌, ರಾ. ನರಸಿಂಹಾಚಾರ್‌, ಡಿ.ಎಲ್‌. ನರಸಿಂಹಾಚಾರ್‌, ಎಲ್‌. ಬಸವರಾಜು, ಶಂಭಾ ಜೋಷಿ, ಫ‌. ಗು. ಹಳಕಟ್ಟಿ, ಚನ್ನಪ್ಪ ಉತ್ತಂಗಿ ಮೊದಲಾದವರ ಕೆಲಸಗಳು ಕನ್ನಡ ಸಂಶೋಧನೆಯ ಮಹತ್ವದ ಘಟ್ಟವೊಂದನ್ನು ಸೂಚಿಸುತ್ತದೆ. ಇವರಲ್ಲಿ ಪ್ರತಿಯೊಬ್ಬರೂ ಹೊಸ ಹಾದಿ ಹಿಡಿಯಲು ಪ್ರಯತ್ನ ಪಟ್ಟವರು. ಕೆಲವರು ಸಂಶೋಧನೆಗೆ ಭಾಷಾಶಾಸ್ತ್ರದ ಮೂಲಕ ಪ್ರವೇಶಿಸಿದರೆ, ಮತ್ತೆ ಕೆಲವರು ಶಾಸನಗಳ ಮೂಲಕ ಪ್ರವೇಶಿಸಿದರು. ಐತಿಹಾಸಿಕ ಪ್ರಜ್ಞೆಯಿಂದ ಸಂಶೋಧನೆಗೆ ಘನತೆ ತಂದವರು ಹಲವರು. ಹಳಕಟ್ಟಿಯವರ ಅಸಾಮಾನ್ಯ ವಚನ ಸಂಪುಟಗಳು ಮತ್ತು 30 ವರ್ಷ ದುಡಿದು ಸಿದ್ಧಪಡಿಸಿದ ಆರ್‌. ನರಸಿಂಹಾಚಾರ್ಯರ ಕವಿಚರಿತೆ ಸಂಪುಟಗಳು ಇಂದಿಗೆ ನಮಗೊಂದು ವಿಸ್ಮಯದ ಹಾಗೆೆ ತೋರುತ್ತದೆ. ಡಿ.ಎಲ್‌. ನರಸಿಂಹಾಚಾರ್ಯರು ಭಿನ್ನ ಪಠ್ಯಗಳ ಸಮೇತ ಸಂಪಾದಿಸಿ ಕೊಟ್ಟ ಪ್ರಾಚೀನ ಗ್ರಂಥಗಳು ಹಾಗೂ ಬರೆದ ಲೇಖನಗಳು ಕನ್ನಡ ಪಂಡಿತ ಪರಂಪರೆಯು ತಲುಪಬಹುದಾದ ಎತ್ತರವನ್ನು ಸಂಕೇತಿಸುತ್ತದೆ. ಆ ಕಾಲದ ವಿದ್ವಾಂಸರ ಹಠ, ಕಠಿಣ ಶ್ರಮ, ವಿದ್ವತ್ತು ಮತ್ತು ಸಂಶೋಧನೆಯ ಮೇಲಣ ಬದ್ಧತೆಯನ್ನು ಇಂದು ನಮಗೆ ಊಹಿಸಿಕೊಳ್ಳುವುದೂ ಕಷ್ಟವಾಗುತ್ತಿದೆ. ಸಂಶೋಧನೆಯ ಪರಿಕರಗಳು ಏನೇನೂ ಇಲ್ಲದ ಕಾಲದಲ್ಲಿ ಇವರೆಲ್ಲ ಮಾಡಿದ ಕೆಲಸಗಳು ಅಸಾಮಾನ್ಯವಾದುವು. 

ಈ ತಲೆಮಾರಿನ ಪ್ರಮುಖ ಶಿಷ್ಯರುಗಳಾಗಿ ತರಬೇತು ಪಡೆದು, ಆನಂತರದ ಕಾಲಘಟ್ಟದ ಸಂಶೋಧನಾ ಕ್ಷೇತ್ರದಲ್ಲಿ ದುಡಿದ ವಿದ್ವಾಂಸರು ಕೂಡಾ ಸ್ವಾತಂತ್ರೊéàತ್ತರ ಭಾರತದ ಶೈಕ್ಷಣಿಕ ಅಗತ್ಯಗಳಿಗನುಗುಣವಾಗಿ ಕನ್ನಡ ಸಂಶೋಧನೆಯ ಅಗತ್ಯಗಳನ್ನು ಪುನಾರಚಿಸಿಕೊಂಡು, ಅದರ ಕ್ಷಿತಿಜಗ‌ಳನ್ನು ಗಮನಾರ್ಹವಾಗಿ ವಿಸ್ತರಿಸಿದರು. ಮುಖ್ಯವಾಗಿ ಮೈಸೂರು, ಬೆಂಗಳೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಆ ಕಾಲಕ್ಕೆ ದೊರಕಿದ ಸಾಂಸ್ಥಿಕ ಬೆಂಬಲ ಮತ್ತು ಸಂಶೋಧನಾ ಸವಲತ್ತುಗಳನ್ನು ಉಪಯೋಗಿಸಿ ಕೊಳ್ಳುವಲ್ಲಿ ಈ ವಿದ್ವಾಂಸರು ಹಿಂದೆ ಬೀಳಲಿಲ್ಲ.

– ಪುರುಷೋತ್ತಮ ಬಿಳಿಮಲೆ

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.