ಸ್ಟೀಫ‌ನ್‌ ಹಾಕಿಂಗ್‌-ಮಹಾಧ್ಯಾನಿ ವಿಜ್ಞಾನಿ


Team Udayavani, Mar 25, 2018, 6:00 AM IST

10.jpg

ಗೆಲಿಲಿಯೋ, ಐಸಾಕ್‌ ನ್ಯೂಟನ್‌, ಆಲ್ಬರ್ಟ್‌ ಐನ್‌ಸ್ಟಿನ್‌ರಂಥ ವಿಜ್ಞಾನಿಗಳ ಪಂಕ್ತಿಯಲ್ಲಿ ರಾರಾಜಿಸಬಲ್ಲ ಸ್ಟೀಫ‌ನ್‌ ಹಾಕಿಂಗ್‌ ಇತ್ತೀಚೆಗೆ ನಿಧನರಾಗಿದ್ದಾರೆ. ಪ್ರತಿಕೂಲ ದೇಹಸ್ಥಿತಿಯಲ್ಲಿಯೂ ಅವರು ವೈಜ್ಞಾನಿಕ ಚಿಂತನೆ, ಸಂಶೋಧನೆಗಳನ್ನು ಕೈಬಿಡಲಿಲ್ಲ ! 

ಈ ತಿಂಗಳ 14ರಂದು ತೀರಿಕೊಂಡ ಸ್ಟೀಫ‌ನ್‌ ಹಾಕಿಂಗ್‌, ತಮ್ಮ ತಲೆಮಾರಿನ ಅತ್ಯಂತ ಪ್ರಮುಖ ಭೌತವಿಜ್ಞಾನಿಯಾಗಿದ್ದರು ಎಂದು ಹೇಳಿದರೆ ಬಹುಶಃ ಈ ಮಾತನ್ನು ಅಲ್ಲಗಳೆಯುವವರು ಯಾರೂ ಇರಲಾರರು. ಹೀಗೆ ಹೇಳಲು ಕಾರಣ ಕೇವಲ ಅವರು ಭೌತವಿಜ್ಞಾನಕ್ಕೆ ನೀಡಿರುವ ಕೊಡುಗೆಗಳಷ್ಟೇ ಅಲ್ಲ. ಕೃಷ್ಣ ಕುಹರ (ಬ್ಲ್ಯಾಕ್‌ ಹೋಲ್‌)ಗಳ ಬಗ್ಗೆ ಅವರು ನಡೆಸಿದ ಸಂಶೋಧನಾ ಕಾರ್ಯವೆಂಬುದು ನಿಜಕ್ಕೂ ಒಂದು ಪಥಪ್ರವರ್ತಕ ಸಾಧನೆ; ಆದರೆ ಅವರ ಸಾಧನೆ ಇಷ್ಟಕ್ಕೇ ಸೀಮಿತವಲ್ಲ. ಅವರು ಅನೇಕ ಜನಪ್ರಿಯ ವಿಜ್ಞಾನ ಗ್ರಂಥಗಳನ್ನೂ ನೀಡಿದ್ದಾರೆ. ಅವರ ಈ ಗ್ರಂಥಗಳು ಅವರನ್ನೊಬ್ಬ ಜಾಗತಿಕ ವ್ಯಕ್ತಿಯನ್ನಾಗಿ ಮಾಡಿದೆ. ತನ್ನನ್ನು ತೀವ್ರವಾಗಿ ಶಕ್ತಿಗುಂದಿಸುತ್ತಿದ್ದ ಭೀಕರ ಕಾಯಿಲೆಯ ನಡುವೆಯೂ ಇಂಥ ಅಸಾಧಾರಣವಾದ ಸಾಧನೆಯನ್ನು ಮಾಡಿದವರು ಅವರು. ದೇಹದ ಮೇಲೆ ಮನಸ್ಸು ಬೀರಬಲ್ಲ ಪ್ರಭಾವದ ಬಗ್ಗೆ ನಂಬಿಕೆಯಿರಿಸಿಕೊಂಡ ಎಲ್ಲರ ಪಾಲಿಗೂ ಅವರೊಬ್ಬ ಅತ್ಯುತ್ಕೃಷ್ಟ ಮಾದರಿ ವ್ಯಕ್ತಿ.

ಹಾಕಿಂಗ್‌ ಅವರ ಜನನ ದಿನಾಂಕ ಜನವರಿ 8. ಆಧುನಿಕ ವಿಜ್ಞಾನದ ಪಿತಾಮಹ ಎಂದು ಅನೇಕರಿಂದ ಗೌರವಿಸಲ್ಪಡುವ ಗೆಲಿಲಿಯೋ ಮುನ್ನೂರು ವರ್ಷಗಳ ಹಿಂದೆ ತೀರಿಕೊಂಡದ್ದು ಇದೇ ದಿನಾಂಕದಂದು. ಇವರಿಬ್ಬರಲ್ಲಿ ಇನ್ನೂ ಒಂದು ಸಾಮ್ಯವಿದೆ. ಮಗ ಔಷಧ ಶಾಸ್ತ್ರ (ವೈದ್ಯಕೀಯ) ಓದಬೇಕೆಂದು ಇಬ್ಬರ ತಂದೆಯರೂ ಬಯಸಿದ್ದರು; ಆದರೆ ಇಬ್ಬರೂ ಆಯ್ದುಕೊಂಡದ್ದು ವಿಜ್ಞಾನವನ್ನು ! ಹಾಕಿನ್ಸ್‌ ಅವರ ನಿಧನಕ್ಕೆ ಸಂಬಂಧಿಸಿದ ಸುದ್ದಿ ವಿವರಗಳಲ್ಲಿ ಇನ್ನೂ ವಿಶೇಷ ಅಂಶವನ್ನು ಉಲ್ಲೇಖೀಸಲಾಗಿದೆ. ಹಾಕಿನ್ಸ್‌ ಅವರು ತೀರಿಕೊಂಡ ದಿನಾಂಕ, ಐನ್‌ಸ್ಟಿàನ್‌ ಅವರ ಜನ್ಮದಿನಾಂಕವೂ ಹೌದು. ಇಂಥ ವಿಶ್ವಿ‌ಯ ಮಟ್ಟದ ಸಂಖ್ಯಾಕ್ರೀಡೆಗಳ ಹಿಂದಿನ ರಹಸ್ಯವನ್ನು ಭೇದಿಸುವ ಆಸಕ್ತಿಯಿರುವವರು ಹಾಗೆ ಮಾಡಹೊರಡುವುದು ಸಹಜವೇ. ಏನಿದ್ದರೂ ವಿಜ್ಞಾನಲೋಕದ ಕಲ್ಪನಾಶಕ್ತಿಗೆ ಸಂಬಂಧಿಸಿದಂತೆ ಹಾಕಿಂಗ್‌ ಅವರು ಬೀರಿದ ಪ್ರಭಾವ, ಗೆಲಿಲಿಯೋ ಹಾಗೂ ಐನ್‌ಸ್ಟಿನ್‌ರ ಪ್ರಭಾವದಷ್ಟೇ ಮುಖ್ಯವಾದದ್ದು.

ಭೌತವಿಜ್ಞಾನ ಅಥವಾ ಜ್ಯೋತಿಭೌìತ ವಿಜ್ಞಾನ (ಆ್ಯಸ್ಟ್ರೊ ಫಿಸಿಕ್ಸ್‌)ದ ಅಧ್ಯಯನ ಕ್ಷೇತ್ರವೆಂಬುದು ವ್ಯೋಮವಿಜ್ಞಾನಪ್ರಿಯರನ್ನು, ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆಯನ್ನು ಹೆಚ್ಚಾಗಿ ಆಕರ್ಷಿಸುವಂಥ ಅಧ್ಯಯನ ಶಾಖೆ. ನಮ್ಮ ಯಾವ ಬಾಲಕ ಅಥವಾ ಬಾಲಕಿ ಏಕಾಂಗಿಯಾಗಿ ಅಂಗಳದಲ್ಲಿ ನಿಂತು ನಕ್ಷತ್ರಗಳನ್ನೇ ದಿಟ್ಟಿಸುತ್ತ ಭೂಮಿಯ ಮೇಲೆ ಕಾಣಲು ಸಾಧ್ಯವಿದ್ದಿಲ್ಲದಂಥ ಕನಸುಗಳನ್ನು ಆಕಾಶದ ಅಂಗಳದಲ್ಲಿ ಕಂಡಿಲ್ಲ ಹೇಳಿ? ನಮ್ಮ ಸುತ್ತ ವ್ಯಾಪಿಸಿರುವ ಅನಂತ ಅವಕಾಶದ ಈ ಆಕಾಶ, ತಣ್ತೀಶಾಸ್ತ್ರ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳ ಉಗಮಕ್ಕೆ ಸ್ಫೂರ್ತಿ ಕೇಂದ್ರವಾಗಿ ಉಪಕರಿಸಿದೆ; ಅತ್ಯಂತ ಪರಿಣಾಮಕಾರಿ ಮಾಧ್ಯಮಗಳಾದ ಸಾಹಿತ್ಯ ಹಾಗೂ ಸಂಗೀತದಂಥ ಆವಿಷ್ಕಾರಗಳಿಗೆ ವೇಗವರ್ಧಕವಾಗಿ ಉಪಕರಿಸಿದೆ. ಈ ವಿಶ್ವದ ಮೂಲ ಯಾವುದು; ಅದು ಹುಟ್ಟಿದ್ದು ಹೇಗೆ ಎಂಬ ಪ್ರಶ್ನೆ ಹದಿವಯಸ್ಕರನ್ನು ಸದಾ ಕಾಡುತ್ತಲೇ ಇರುತ್ತದೆ; ವ್ಯವಸ್ಥೆಯ ವಿರುದ್ಧ ಬಂಡಾಯವೇಳುವ ಈ ವಯಸ್ಸಿನಲ್ಲಿ ಅವರು ಹತಾಶರಾಗಿ ದಿಟ್ಟಿಸುವುದು ಆಕಾಶವನ್ನೆ! ಸಮಸ್ತ ಅಸ್ತಿತ್ವದ ಉಗಮಕ್ಕೆ ಮುನ್ನ ಇಲ್ಲಿ ಏನಿತ್ತು- ಎಂಬುದು, ನಿಜಕ್ಕೂ ವಿಸ್ಮಯಯಿಂದಲೇ ಉದ್ಭವಿಸಿದ ಪ್ರಶ್ನೆ. ಈ ಪ್ರಶ್ನೆಗೆ ಬೇರೆ ಬೇರೆ ರೂಪಾಂತರಗಳೂ ಇರಬಹುದು. ಇದು ನಮ್ಮ ಅಸ್ತಿತ್ವದ ಮೂಲ ಅಥವಾ ಪರಿಮಿತಿಗಳಿಗೆ ಸಂಬಂಧಿಸಿದ ಪ್ರಶ್ನೆಗಳೊಂದಿಗೆ ಸಾದೃಶ್ಯವನ್ನು ಹೊಂದಿರುವ ಪ್ರಶ್ನೆಯಾಗಿದೆ. ಈ ವಿಶ್ವ ಅನಂತವಲ್ಲ, ಸಾಂತ (ಪರಿಮಿತ) ಎಂದು ಯಾರಾದರೂ ಹೇಳಿದಲ್ಲಿ, ಸಹಜವಾಗಿಯೇ ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ- ಹಾಗಿದ್ದರೆ ವಿಶ್ವದ ಪರಿಮಿತ ಸರಹದ್ದಿನ ಆಚೆಗೆ ಏನಿದೆ? ಹಾಕಿಂಗ್‌ ಅವರು ಈ ಎರಡೂ ವಿಷಯಗಳ-ವಿಶ್ವದ ಮೂಲ (ಹುಟ್ಟು) ಹಾಗೂ ಅದರ ಸೀಮಾರೇಖೆ ಎಂಬ ವಿಷಯಗಳ ಬಗ್ಗೆ ಅಧ್ಯಯನ ನಡೆಸಿದರು; ವಿಶ್ವದ ಮಹಾಸ್ಫೋಟದ ಘಟನೆ ಸಂಭವಿಸಿದ ಕ್ಷಣದಲ್ಲೇ ಆಕಾಶ (ಖಟಚcಛಿ) ಹಾಗೂ ಕಾಲ (ಖಜಿಞಛಿ) ಎರಡೂ ಉದ್ಭವಿಸಿದವು ಎಂಬುದನ್ನು ಈ ಅಧ್ಯಯನದ ಮೂಲಕ ತೋರಿಸಿಕೊಟ್ಟರು. ಹಾಗೆಯೇ, ವಿಶ್ವಕ್ಕೆ ಒಂದು ನಿಗದಿತ ಗಡಿರೇಖೆ ಅಥವಾ ಸೀಮೆಯೊಂದು ಇಲ್ಲ ಎಂಬುದನ್ನೂ ಶ್ರುತಪಡಿಸಿದರು.

ಮಹಾಸ್ಫೋಟ ಅಥವಾ ಬಿಗ್‌ಬ್ಯಾಂಗ್‌ ಕುರಿತ ಸಿದ್ಧಾಂತಕ್ಕೆ ಹಾಕಿಂಗ್‌ ನೀಡಿದ ಕೊಡುಗೆ ಇದು. ವಿಶ್ವದ ವಿಕಸನ ಪ್ರಕ್ರಿಯೆಗೆ ಸಂಬಂಧಿಸಿದ ಅಧ್ಯಯನ ಇದು. ಅವರ ಇನ್ನೊಂದು ಕೊಡುಗೆ ಸಂದಿರುವುದು ಕೃಷ್ಣಕುಹರ ಅಥವಾ ಖಗೋಳೀಯ ಕಪ್ಪು ಕುಳಿಗಳ ಸಿದ್ಧಾಂತಕ್ಕೆ. ಅವರ ಕೊಡುಗೆ ಈ ಎರಡು ವಿಷಯಗಳಿಗಷ್ಟೆ ಸೀಮಿತವಲ್ಲ ; ಬಹುವಿಶ್ವ ವ್ಯವಸ್ಥೆಯೂ ಸೇರಿದಂತೆ ಸಾಪೇಕ್ಷ ಸಿದ್ಧಾಂತದಂಥ ವ್ಯಾಪಕ ಸ್ವರೂಪದ ಅಧ್ಯಯನ ಕ್ಷೇತ್ರಗಳಿಗೂ ಅವರ ಕೊಡುಗೆ ಸಂದಿದೆ. ಇಂಥ ಮಹಣ್ತೀದ ಕಾರ್ಯವನ್ನವರು ಸಾಧಿಸಿದ್ದು ದೈಹಿಕ ಸಾಮರ್ಥ್ಯವನ್ನು ಸತತವಾಗಿ ದುರ್ಬಲಗೊಳಿಸುತ್ತಿದ್ದ “ಲೊವ್‌ ಗೆಹ್ರಿಗ್ಸ್‌’ ಎಂಬ ವಿಚಿತ್ರ ಕಾಯಿಲೆಯ ಜೊತೆಗೆಯೇ ಎಂಬುದು ಗಮನಿಸಲೇಬೇಕಾದ ಸಂಗತಿ. ಇಂಥ ಅಪರೂಪದ ಕಾಯಿಲೆ ಅಮರಿಕೊಂಡದ್ದು ಅವರು 21ರ ಹರೆಯಕ್ಕೆ ಕಾಲಿರಿಸುವ ಮುನ್ನವೇ. ಬದುಕಿ ಉಳಿಯುವ ಭರವಸೆಯೂ ಇರಲಿಲ್ಲ. ಆದರೆ ಅವರು ಬದುಕುಳಿದರಷ್ಟೇ ಅಲ್ಲ, ಮುಂದಿನ 50 ವರ್ಷಗಳ ಕಾಲ ನೆನಪಿಡಬಹುದಾದಷ್ಟು ಪ್ರಭಾವಶಾಲಿಯಾದ ಸಜೃನಶೀಲ ಹಾಗೂ ಬೌದ್ಧಿಕ ವಿಜಯವನ್ನು ಸಾಧಿಸಿ ತೋರಿಸಿದರು.

ಈ ವಿಚಿತ್ರ ಕಾಯಿಲೆ ಅಕ್ಷರಶಃ ಅವರ ಗಂಟಲಿಗೆ ಕುತ್ತು ತಂದಿತು. ಅವರ ಧ್ವನಿಪೆಟ್ಟಿಗೆಯ ಸಾಮರ್ಥ್ಯ ಕುಂದತೊಡಗಿತು. 1985ರ ಬಳಿಕ ಮಾತೇ ನಿಂತುಹೋಯಿತು. ಆದರೆ, ಇಲೆಕ್ಟ್ರಾನಿಕ್‌ ಸಾಧನವೊಂದರ ಮೂಲಕ ಸಂವಹನವನ್ನು ಸಾಧ್ಯಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ಅವರು ಯಶಸ್ವಿಯಾದರು. ಈ ಸಾಧನದ ಧ್ವನಿತರಂಗಗಳು ಅವರ ಕೆನ್ನೆ-ದವಡೆಯ ಸ್ನಾಯುಗಳ ಚಲನೆಗಳ ಆಧಾರದಲ್ಲಿ ಸೃಷ್ಟಿಯಾಗುತ್ತಿದ್ದವು. ವಿಜ್ಞಾನ ರಂಗದಲ್ಲಿ ಸಂಶೋಧನೆ ನಡೆಸುವುದೆಂದರೆ ನಿಜಕ್ಕೂ ಹರಸಾಹಸವೇ ಸರಿ. ಅದರಲ್ಲೂ ಗಾಲಿಕುರ್ಚಿಯಲ್ಲಿ ಕುಳಿತೇ ಕೆಲಸಮಾಡಬೇಕಾದ ಅವಸ್ಥೆಯನ್ನು , ಮಾತಿನ ಸಾಮರ್ಥ್ಯ ಕಳೆದುಕೊಂಡ ಸ್ಥಿತಿಯಲ್ಲೂ ಸಂಶೋಧನೆ ಮುಂದುವರಿಸಬೇಕಾದ ಸಂಕಷ್ಟವನ್ನು ನೀವೇ ಊಹಿಸಿಕೊಳ್ಳಿ!

ಒತ್ತಿ ಹೇಳಬೇಕಾದ ಮಾತೆಂದರೆ, ಇತರ ಸಂಶೋಧಕ ವಿಜ್ಞಾನಿಗಳಂತಲ್ಲದೆ ಅವರು ಜನಪ್ರಿಯ ವಿಜ್ಞಾನ ಗ್ರಂಥಗಳನ್ನು ಬರೆಯಲಾರಂಭಿಸಿದ್ದು. ಅವರ ಒಂದು ಪುಸ್ತಕ, ಎ ಬ್ರಿàಫ್ ಹಿಸ್ಟರಿ ಆಫ್ ಟೈಮ್‌, ಒಂದು ಅಭಿಜಾತ ಕೃತಿಯೆಂದೇ ಮನ್ನಿಸಲ್ಪಟ್ಟಿದೆ. ವಿಶ್ವಾದ್ಯಂತ ಜನಪ್ರಿಯಗೊಂಡಿರುವ ಕೃತಿ ಇದು. ವಿಶ್ವ ವ್ಯವಸ್ಥೆ ಹಾಗೂ ವಿಜ್ಞಾನ ಕುರಿತಂತೆ  ಅವರು ಇತರ ಅನೇಕ ಕೃತಿಗಳನ್ನು ನೀಡಿದ್ದಾರೆ. “ಸ್ಟಾರ್‌ ಟ್ರೆಕ್‌’ ಮಾದರಿಯ ಹಲವಾರು ಟಿ.ವಿ. ಶೋಗಳಲ್ಲಿ ಅವರು ಪಾಲ್ಗೊಂಡಿದ್ದುಂಟು. ಈ ಮೂಲಕ ಅವರು ನಿಜವಾದ ಅರ್ಥದಲ್ಲಿ ಜನರ ನಡುವೆ ಪ್ರಸ್ತುತರಾದರು. ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ ಮನೆಮಾತಾದರು. ಅವರ ಜೀವನವನ್ನಾಧರಿಸಿದ ಒಂದು ಚಲನಚಿತ್ರವೂ ನಿರ್ಮಾಣವಾಗಿದೆ.

ಜೀವನೋತ್ಸಾಹಕ್ಕೆ ಅವರೊಂದು ಉದಾಹರಣೆಯಾಗಿದ್ದರು. ಚಿಂತನೆ ಹಾಗೂ ಕಾರ್ಯಶೀಲತೆ- ಎರಡರಲ್ಲೂ ಅವರು ಅದ್ಭುತ ಉತ್ಸಾಹದ ಬುಗ್ಗೆಯಾಗಿದ್ದರು. ತಮ್ಮ ದೈಹಿಕ ದೌರ್ಬಲ್ಯದ ಸಮಸ್ಯೆ ಸಂಶೋಧನ ಕಾರ್ಯದಲ್ಲಾಗಲಿ, ಇತರ ಚಟುವಟಿಕೆಗಳಲ್ಲಾಗಲಿ ಅಡ್ಡ ಬಾರದಂತೆ ಅವರು ನೋಡಿಕೊಂಡರು. ಅವರದೊಂದು ಸುಪ್ರಸಿದ್ಧ ಛಾಯಾಚಿತ್ರವಿದೆ. ಅದರಲ್ಲಿ ಅವರು ಶೂನ್ಯ ಗುರುತ್ವಾಕರ್ಷಣ ಉಡ್ಡಯನದಲ್ಲಿದ್ದಾರೆ, ಆರಾಮವಾಗಿ ತೇಲುತ್ತಿದ್ದಾರೆ. ಇದು ಅವರ ಅಂತರನುಭವದ ಒಂದು ಸಂಕೇತ ಮಾತ್ರವಲ್ಲ ; ಅವರು ಅಂಟಾರ್ಕಟಿಕಾಗೂ ಹೋಗಿದ್ದರು. ತಮ್ಮ ದೈಹಿಕ ನಿರ್ಬಲತೆಯ ಕುರಿತಂತೆ ಅವರೊಮ್ಮೆ ಹೀಗೆ ಹೇಳಿದ್ದರು- “”ನೀವು ಸದಾ ಕೋಪದಲ್ಲಿ ಕುದಿಯುತ್ತಿದ್ದರೆ ಅಥವಾ ಸದಾ ದೂರುತ್ತಲೇ ಇದ್ದರೆ, ನಿಮ್ಮ ಬಳಿ ಬರುವುದಕ್ಕೆ ಜನರಿಗೆ ಸಮಯವೇ ಸಿಗುವುದಿಲ್ಲ!” ವಿಜ್ಞಾನ ಕ್ಷೇತ್ರದಲ್ಲಿ ತಾವು ಯಾವ ಕೆಲಸ ಮಾಡುತ್ತಿದ್ದರೋ ಅದನ್ನೇ ಅವರು ಬಾಳಿ ಬದುಕಿದರು. ಆ ಕೆಲಸವೆಂದರೆ-ಪರಿಮಿತಿಗಳ, ಸೀಮೆಗಳ ಗಡಿಗೆರೆಗಳ ಅನ್ವೇಷಣೆ!

(ಇಂಗ್ಲಿಶ್‌ ಬರಹದ ಕನ್ನಡ ಸಂಗ್ರಹ ರೂಪ : ಜಯರಾಮ ಕಾರಂತ)
ಸುಂದರ ಸರುಕ್ಕೆ

ಟಾಪ್ ನ್ಯೂಸ್

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.