ದೇಶ ಭಾಷೆಗಳ ಸಂಗತಿ

Team Udayavani, Jul 15, 2018, 6:00 AM IST

13.jpg

ಇವತ್ತು ತುಳು ಭಾಷೆಯ ಕುರಿತಾದ ಅಧ್ಯಯನಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ಪ್ರಾಪ್ತಿಸಿದೆ. ಆದರೂ ಅದನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಿ, ಆ ಭಾಷೆಗೊಂದು ಅಧಿಕೃತ ಮಾನ್ಯತೆಯನ್ನು ತಂದುಕೊಳ್ಳಲು ಇದುವರೆಗೆ ನಮಗೆ ಸಾಧ್ಯ ಆಗಿಲ್ಲ. ಹಾಗೆ ಸಾಧ್ಯವಾಗಲು ಬೇಕಾದ ರಾಜಕೀಯ ತುಳುವರಿಗೆ ಗೊತ್ತಿಲ್ಲದಿರುವುದೇ ಇದಕ್ಕೆ ಕಾರಣವೇ ಹೊರತು ತುಳುವಿಗೆ ಅಂಥ ಅರ್ಹತೆಯಿಲ್ಲವೆಂದು ಅರ್ಥವಲ್ಲ. 

ನಮ್ಮ ದೇಶದಲ್ಲಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಸಲಾಗುತ್ತದೆ. ಈ ಹಿಂದೆ 1971, 1981 ಮತ್ತು 2001ರಲ್ಲಿ ಜನಗಣತಿ ನಡೆಸಲಾಗಿತ್ತು. 2011ರಲ್ಲಿ ಮತ್ತೆ ಜನಗಣತಿ ನಡೆಸಲಾಗಿತ್ತಾದರೂ ಯಾವುದೋ ಕಾರಣಕ್ಕೆ ಅದರ ಫ‌ಲಿತಾಂಶಗಳನ್ನು ಬಹಿರಂಗಗೊಳಿಸಿರಲಿಲ್ಲ. ಇದೀಗ ಮುಂದಿನ ಜನಗಣತಿ 2021ರಲ್ಲಿ ನಡೆಯುವ ಕೇವಲ ಮೂರು ವರುಷಗಳ ಮುನ್ನ 2011ರ ಫ‌ಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಸರಕಾರ ಸಂಗ್ರಹಿಸಿದ ಮಾಹಿತಿಗಳನ್ನು ವರ್ಗೀಕರಿಸಿ ಸಾರ್ವಜನಿಕರಿಗೆ ಮಂಡಿಸಲು ಏಳು ವರ್ಷಗಳನ್ನು ತೆಗೆದುಕೊಂಡಿದೆ ಎಂಬ ಅಂಶವು ಡಿಜಿಟಲ್‌ ಭಾರತಕ್ಕೆ ಒಳ್ಳೆಯ ಹೆಸರೇನನ್ನೂ ತಂದುಕೊಡದು. 

ಏನೇ ಇರಲಿ, ತಡವಾಗಿಯಾದರೂ ಅತ್ಯಂತ ಅಮೂಲ್ಯವಾದ ಮಾಹಿತಿಗಳು  ಇದೀಗ ನಮಗೆ ಲಭ್ಯವಿದೆ. ಇದರಲ್ಲಿರುವ ಭಾಷಾ ಸಂಬಂಧಿಯಾದ ಕೆಲವು ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಭಾಷೆಗೆ ಸಂಬಂಧಿಸಿದಂತೆ 1971ರಿಂದಲೂ ಕೇಂದ್ರ ಸರಕಾರ ಒಂದು ಧೋರಣೆಯನ್ನು ಸ್ಪಷ್ಟವಾಗಿ ಅನುಸರಿಸುತ್ತಲೇ ಬಂದಿದೆ. ಅದೆಂದರೆ 10 ಸಾವಿರ ಮತ್ತು ಅದಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳನ್ನು ಮಾತ್ರ ಅದು ವಿಶ್ಲೇಷಣೆಗೆ ಬಳಸಿಕೊಳ್ಳುತ್ತದೆ. ಈ ನಿಲುವಿನಿಂದಾಗಿ  ನಮ್ಮ ದೇಶದ ಅನೇಕ ಸ್ವತಂತ್ರ ಭಾಷೆಗಳ ಹೆಸರುಗಳು ( ಉದಾಹರಣೆಗೆ ಕೊರಗ ಭಾಷೆ) ಇಲ್ಲಿ ಲಭ್ಯವಾಗುವುದೇ ಇಲ್ಲ.  ಈ ಮಿತಿಯೊಳಗೆ 2011ರ ಜನಗಣತಿಯು ಒಟ್ಟು 19569 ಭಾಷೆಗಳನ್ನು ಮಾತೃಭಾಷೆಗಳೆಂದು ಮನ್ನಿಸುತ್ತದೆ. ಈ ಸುದೀರ್ಘ‌ ಪಟ್ಟಿಯಲ್ಲಿರುವ ಸ್ವತಂತ್ರ ಭಾಷೆಗಳು ಒಟ್ಟು 121. ಇದರಲ್ಲಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿದ ಭಾಷೆಗಳ ಸಂಖ್ಯೆ ಕೇವಲ 22. ಆದರೆ ಅದು ದೇಶದ ಒಟ್ಟು 96.71 ಶೇ  ಜನರನ್ನು ( 117,11,03,853 ಕೋಟಿ ) ಪ್ರತಿನಿಧಿಸುತ್ತದೆ. ಈಗ ಸಂವಿಧಾನದ ಮನ್ನಣೆ ಪಡೆಯಲು ಕಾದು ಕುಳಿತಿರುವ ಸ್ವತಂತ್ರ ಭಾಷೆಗಳ ಸಂಖ್ಯೆ ಒಟ್ಟು 99. ಆದರೆ, ಇದು ದೇಶದ 3.29 (39751124 ಕೋಟಿ) ಶೇ.ಜನರನ್ನು ಮಾತ್ರ ಪ್ರತಿನಿಧಿಸುತ್ತದೆ. 

ಈ ಅಂಕಿ ಅಂಶಗಳು 2001ರ ಜನಗಣತಿಯಿಂದ ತುಂಬ ಬೇರೆಯಾಗಿಯೇನೂ ಇಲ್ಲ. ಅಲ್ಲಿ 8ನೇ ಪರಿಚ್ಛೇದಕ್ಕೆ ಸೇರಬೇಕಾದ ಭಾಷೆಗಳ ಸಂಖ್ಯೆಯನ್ನು 100 ಎಂದು ಹೇಳಲಾಗಿದೆ. 2011ರ ಜನಗಣತಿಯಲ್ಲಿ ಸಿಮ್ಟೆ ಮತ್ತು ಪರ್ಶಿಯನ್‌ ಭಾಷೆಗಳನ್ನು  ತೆಗೆದು ಹಾಕಿ, ಅಲ್ಲಿಗೆ  ಮಾವೋ ಭಾಷೆಯನ್ನು ಸೇರಿಸಲಾಗಿದೆ.  

8ನೇ ಪರಿಚ್ಛೇದಕ್ಕೆ ಸೇರಿರುವ ಭಾಷೆಗಳಲ್ಲಿ ಹಿಂದಿಯು 52,83,47,193 ಕೋಟಿ ಜನರನ್ನು ಹೊಂದಿದ್ದು (ಶೇ. 43.63) ಪ್ರಥಮ ಸ್ಥಾನದಲ್ಲಿದೆ. 4,3706512 ಜನರನ್ನು ಹೊಂದಿರುವ ( ಶೇ. 3.61) ಕನ್ನಡವು ಈ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಬಂಗಾಲಿ (ಶೇ. 8.3), ಮರಾಠಿ ( ಶೇ. 6.86) , ತೆಲುಗು ( ಶೇ. 6.70), ತಮಿಳು ( ಶೇ. 5.70), ಗುಜರಾತೀ ( ಶೇ. 4.58) ಮತ್ತು ಉರ್ದು ( ಶೇ. 4.19) ಭಾಷೆಗಳು ಸಂಖ್ಯಾ ದೃಷ್ಟಿಯಿಂದ ಕನ್ನಡಕ್ಕಿಂತ ಮೇಲಿವೆ. ಸಂಸ್ಕƒತವನ್ನು ಮಾತೃಭಾಷೆಯೆಂದು ದಾಖಲಿಸಿದವರ ಸಂಖ್ಯೆ ಒಟ್ಟು 24, 821 ಮಾತ್ರ. 

ಕರ್ನಾಟಕದ ಒಟ್ಟು ಜನಸಂಖ್ಯೆ 6,10,95,297 ಆಗಿದ್ದು ಇದರಲ್ಲಿ ಶೇ. 96.47ರಷ್ಟು ಜನರು ( 43706512)  ತಮ್ಮ ಮಾತೃಭಾಷೆಯನ್ನು ಕನ್ನಡವೆಂದು ಅಂಗೀಕರಿಸಿಕೊಂಡಿದ್ದಾರೆ. ಉಳಿದ 21,54,853 (ಶೇ. 3.53)  ಜನರು ಕರ್ನಾಟಕದಲ್ಲಿರುವ ಬೇರೆ ಭಾಷೆಯವರಾಗಿದ್ದಾರೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಒಂದು ನಿರ್ದಿಷ್ಟ ಭಾಷೆಯನ್ನು ಆಡುವವರ ಸಂಖ್ಯೆಯಲ್ಲಿ ಕಂಡು ಬರುವ ಏರಿಳಿತಗಳು. 1971ರಿಂದ 2011ರ ಅಂಕಿ ಅಂಶಗಳನ್ನು ಗಮನಿಸಿದರೆ, ಕನ್ನಡ ಮಾತಾಡುವವರ ಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಎಂದರೆ ಸರಾಸರಿ ಶೇ. 3.75 ಮಾತ್ರ ಏರಿಕೆ ಆಗಿದೆ. ಇದು ಹಿಂದಿಯಲ್ಲಿ ಸರಾಸರಿ ಶೇ. 42 ಆಗಿದ್ದರೆ ತಮಿಳಿನಲ್ಲಿ ಶೇ. 6 ಆಗಿದೆ. ಈ ವಿಷಯದಲ್ಲಿ ತುಳುವರು ಕನ್ನಡಕ್ಕಿಂತ ಮುಂದಿದ್ದು ಶೇ. 9 ಏರಿಕೆ ತೋರಿಸಿದ್ದಾರೆ. 

ಸಂವಿಧಾನದ ಎಂಟನೇ ಪರಿಚ್ಛೇದ 
ಈಚಿನ ದಿನಗಳಲ್ಲಿ ತುಳುವೂ ಸೇರಿದಂತೆ ಒಟ್ಟು 39 ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಲು ಹೋರಾಟ ನಡೆಸುತ್ತಿವೆ. ಇತರ 60 ಭಾಷೆಗಳು ಹೋರಾಟಕ್ಕೆ ತಯಾರಾಗುತ್ತಿವೆ.  ನಡೆಸಲು ಸಜ್ಜಾಗುತ್ತಿವೆ. ಈ ಹೋರಾಟಗಳನ್ನು ಸವಾಲಾಗಿ ಸ್ವೀಕರಿಸಲು ಸಿದ್ಧವಿಲ್ಲದ ಕೇಂದ್ರ ಸರಕಾರವು ಎಂಟನೆಯ ಪರಿಚ್ಛೇದದ ಕೆಲವು ಸವಲತ್ತುಗಳನ್ನು ಕಡಿತಗೊಳಿಸಲು ಆರಂಭಿಸಿದೆ. ಈ ನಡುವೆ ಯುನೆಸ್ಕೋವು ಸಿದ್ಧಪಡಿಸಿದ ಭಾಷೆಗಳ ಜಾಗತಿಕ ಭೂಪಟವು ಭಾರತದಲ್ಲಿನ 172 ಭಾಷೆಗಳನ್ನು ಅಪಾಯದ ಅಂಚಿನಲ್ಲಿರುವ  ಭಾಷೆಗಳೆಂದೂ,  ಅದರಲ್ಲಿ 101 ಭಾಷೆಗಳನ್ನು ಅತೀವ ಅಪಾಯದಲ್ಲಿರುವ ಭಾಷೆಗಳೆಂದೂ 71 ಭಾಷೆಗಳನ್ನು ಎಲ್ಲ ಬಗೆಯ ಅಪಾಯಗಳಿಗೆ ಬಲಿಯಾಗುತ್ತಿರುವ ಭಾಷೆಗಳೆಂದೂ ಗುರುತಿಸಿದೆ.

ತುಳುವಿಗೆ ಸಿಗದ ಮನ್ನಣೆ  
ಇವತ್ತು ತುಳು ಭಾಷೆಯ ಕುರಿತಾದ ಅಧ್ಯಯನಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ಪ್ರಾಪ್ತಿಸಿದೆ. ಆದರೂ ಅದನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಿ, ಆ ಭಾಷೆಗೊಂದು ಅಧಿಕೃತ ಮಾನ್ಯತೆಯನ್ನು ತಂದುಕೊಳ್ಳಲು ಇದುವರೆಗೆ ನಮಗೆ ಸಾಧ್ಯ ಆಗಿಲ್ಲ. ಹಾಗೆ ಸಾಧ್ಯವಾಗಲು ಬೇಕಾದ ರಾಜಕೀಯ ತುಳುವರಿಗೆ ಗೊತ್ತಿಲ್ಲದಿರುವುದೇ ಇದಕ್ಕೆ ಕಾರಣವೇ ಹೊರತು ತುಳುವಿಗೆ ಅಂಥ ಅರ್ಹತೆಯಿಲ್ಲವೆಂದು ಅರ್ಥವಲ್ಲ. 

ಭಾಷೆಯೊಂದು ಯಾವುದೇ ರಾಜ್ಯದ ಅಧಿಕೃತವಾದ ಭಾಷೆಯೆಂದು ಘೋಷಿಸಲ್ಪಟ್ಟಾಗ ಅದು ಸಹಜವಾಗಿ ಎಂಟನೆಯ ಪರಿಚ್ಛೇದಕ್ಕೆ ಸೇರುತ್ತದೆ. ಕಾರಣ ಸಂವಿಧಾನ ಅಸ್ತಿತ್ವಕ್ಕೆ ಬಂದಾಗ 14 ಭಾಷೆಗಳನ್ನು ಪಟ್ಟಿಗೆ ಸೇರಿಸಲಾಯಿತು. ಮುಂದೆ 1967ರಲ್ಲಿ ಸಿಂಧಿ, 1992ರಲ್ಲಿ ಕೊಂಕಣಿ, ಮಣಿಪುರಿ, ಮತ್ತು ನೇಪಾಲಿ ಭಾಷೆಗಳನ್ನು ಸೇರಿಸಲಾಯಿತು. ಆದರೆ 2003ರಲ್ಲಿ ಭಾರತದ ಸಂವಿಧಾನದಲ್ಲಿ ಬದಲಾವಣೆ ಮಾಡಿ, ಯಾವುದೇ ರಾಜ್ಯದ ಆಧಿಕೃತ ಭಾಷೆಗಳಲ್ಲದ ಬೋಡೋ, ಡೋಗ್ರಿ, ಸಂತಾಲಿ ಮತ್ತು ಮೈಥಿಲಿ ಭಾಷೆಗಳನ್ನು ಸೇರಿಸಲಾಯಿತು. ಈ ನಾಲ್ಕು ಭಾಷೆಗಳು ಕೇವಲ ಅರ್ಹತೆಯಿಂದ ಸೇರಿವೆ ಎಂದೇನೂ ಭಾವಿಸಬೇಕಾಗಿಲ್ಲ. ಡೋಗ್ರಿ ಭಾಷೆಯ ಹಿಂದೆ ಮಹಾರಾಜಾ ಕರಣ್‌ ಸಿಂಗ್‌ ಇದ್ದರು. ಅಸ್ಸಾಂಗೆ ಭೇಟಿ ನೀಡಿದ್ದ ಆಗಣ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರತ್ಯೇಕ ಬೋಡೋ ಲ್ಯಾಂಡ್‌ ಕೇಳುತ್ತಿರುವ ಬೋಡೋ ಬುಡಕಟ್ಟಿನ ಜನರನ್ನು ಮೆಚ್ಚಿಸಲು ಬೋಡೋ ಭಾಷೆಗೆ ಮನ್ನಣೆ ನೀಡುವ ಕೆಲಸ ಮಾಡಿದರು. ಮೈಥಿಲಿ ಭಾಷೆಯ ಹಿಂದೆ ಆಗಣ ಗೃಹ ಸಚಿವ ಎಲ್‌. ಕೆ. ಆಡ್ವಾಣಿ ಅವರ ಕೆಲಸಗಳಿವೆ ಮತ್ತು ಸಂತಾಲಿ ಭಾಷೆಯ ಹಿಂದೆ ಪಶ್ಚಿಮ ಬಂಗಾಳ ಸರಕಾರದ ಒತ್ತಡವಿದೆ. ತುಳುವಿಗೆ ಈ ಮಟ್ಟದ ಹೋರಾಟಗಾರರು ಸಿಗಲಿಲ್ಲವಾದ್ದರಿಂದ ಕನಸು ಹಾಗೆಯೇ ಉಳಿಯಿತು. 

ಒಟ್ಟಾರೆಯಾಗಿ ಇದೀಗ ಉತ್ತರ ಭಾರತದ 18 ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿವೆ. ಆದರೆ, ದಕ್ಷಿಣಭಾರತದ ಕೇವಲ 4 ಭಾಷೆಗಳಿಗೆ ಅಲ್ಲಿ ಸ್ಥಾನ ಸಿಕ್ಕಿದೆ. ಇದೊಂದು ಅಪಾಯಕಾರೀ ಪ್ರಾದೇಶಿಕ ಅಸಮತೋಲನ. ದಕ್ಷಿಣಭಾರತದ ರಾಜಕಾರಣಿಗಳಿಗೆ ಈ ಬಗ್ಗೆ ನಾವೆಲ್ಲ ತಿಳಿಸಿ ಹೇಳಬೇಕಾಗಿದೆ.  

ಪ್ರಸ್ತುತ ತುಳು, ಕೊಡವದಂಥ ನೂರಾರು ಸಣ್ಣ ಭಾಷೆಗಳ ಮುಂದೆ ಇಂದು ಹಲವು ಸವಾಲುಗಳಿವೆ. ಈ ಸಣ್ಣ ಭಾಷೆಗಳನ್ನು ಆಯಾ ರಾಜ್ಯ ಸರಕಾರಗಳು ತಮ್ಮ ರಾಜ್ಯದ ಅಧಿಕೃತ ಭಾಷೆಯೆಂದು ಇದುವರೆಗೂ ಘೋಷಿಸಿಲ್ಲ.  ಆಂಧ್ರ ಪ್ರದೇಶವು ತೆಲುಗಿನ ಜೊತೆಗೆ ಉರ್ದುವನ್ನು, ಬಿಹಾರವು ಬಿಹಾರಿ ಭಾಷೆಯ ಜೊತೆಗೆ ಬಾಂಗ್ಲಾವನ್ನು , ಪಶ್ಚಿಮ ಬಂಗಾಳವು ಬಾಂಗ್ಲಾ ಜೊತೆಗೆ ಉರ್ದು, ಪಂಜಾಬಿ, ನೇಪಾಲಿ, ಒರಿಯಾ ಮತ್ತು ಹಿಂದಿಯನ್ನು , ದೆಹಲಿ ಸರಕಾರವು ಹಿಂದಿಯ ಜೊತೆಗೆ ಪಂಜಾಬಿ ಮತ್ತು ಉರ್ದುವನ್ನು ಅಧಿಕೃತ ಭಾಷೆಗಳೆಂದು ಘೋಷಿಸಿವೆ. ಇದು ಹೌದಾದರೆ, ಕರ್ನಾಟಕವು ಕೊಡವ, ತುಳು ಭಾಷೆಗಳನ್ನು ಕರ್ನಾಟಕದ ಅಧಿಕೃತ ಭಾಷೆಗಳೆಂದು ಯಾಕೆ ಮಾನ್ಯ ಮಾಡಬಾರದು? ಹಾಗೆ ಮಾನ್ಯ ಮಾಡದೇ ಇರುವುದರಿಂದ ಕೇಂದ್ರ ಸರಕಾರಕ್ಕೆ ಸುಲಭವಾಗಿ ನುಣುಚಿಕೊಳ್ಳಲು ಸಾಧ್ಯವಾಗಿದೆ.

ಪುರುಷೋತ್ತಮ ಬಿಳಿಮಲೆ

ಟಾಪ್ ನ್ಯೂಸ್

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.