ಒಂದಾನೊಂದು ಕಾಲದಲ್ಲಿ ಸಾಹಿತಿಗಳು ಸುಖವಾಗಿದ್ದರು !
Team Udayavani, Sep 2, 2018, 6:00 AM IST
ಒಂದಾನೊಂದು ಕಾಲದಲ್ಲಿ ಕನ್ನಡ ಸಾಹಿತಿಗಳು ಸುಖವಾಗಿದ್ದರು’- ಇನ್ನು ಕೆಲವು ಶತಮಾನಗಳ ಬಳಿಕ ಕನ್ನಡ ಸಾಹಿತ್ಯದ ಇಂದಿನ ಸ್ಥಿತಿಯ ಬಗ್ಗೆ ಮಾತನಾಡುವಾಗ ಉದ್ಧರಿಸಬಹುದಾದ ವಾಕ್ಯವಿದು. ಏಕೆಂದರೆ, ಈ ಕಾಲದ ಸಾಹಿತಿಗಳೇ ಹಾಗಿದ್ದಾರೆ !
ಸೂಕ್ಷ್ಮವಾಗಿ ಗಮನಿಸಿದರೆ ಪ್ರಜಾಪ್ರಭುತ್ವವನ್ನು ಅನುಸರಿಸುವ ದೇಶದಲ್ಲಿ ಸರಕಾರ ಯಾವುದೇ ವ್ಯಕ್ತಿಗೆ ಪ್ರಶಸ್ತಿ ಕೊಡುವುದು ಪ್ರಜಾತಂತ್ರಕ್ಕೆ ಅನುಗುಣವಾದ ಸಂಗತಿಯಲ್ಲ. ಪ್ರಶಸ್ತಿ ಸ್ವೀಕರಿಸುವುದು ತಪ್ಪು. ಪ್ರಶಸ್ತಿ ಒಮ್ಮೆ ಸ್ವೀಕರಿಸಿದರೆ ಮತ್ತೆ ಹಿಂತಿರುಗಿಸುವುದು ಮತ್ತೂಂದು ದೊಡ್ಡ ತಪ್ಪು. ಅದರಲ್ಲಿಯೂ ಪ್ರಶಸ್ತಿಗಾಗಿ ಲಾಬಿ ನಡೆಸಿದರೆ ಅದು ಮಹಾತಪ್ಪು. ಅಕಾಡೆಮಿಯಾಗಲಿ, ಇಲಾಖೆಯಾಗಲಿ ನೀಡುವ ಪ್ರಶಸ್ತಿಯನ್ನು “ಬೇಡ’ ಎಂದು ನಿರಾಕರಿಸಿದವರು ಇಲ್ಲವೇ ಇಲ್ಲ ; ಇದ್ದರೂ ಅಪರೂಪಕ್ಕೆ ಒಬ್ಬರು, ಇಬ್ಬರು. ಇವೆಲ್ಲ ತಿಳಿದಿದ್ದೂ ಪ್ರಶಸ್ತಿಗಾಗಿ ಹಾತೊರೆಯುತ್ತ, ವೇದಿಕೆಯ ಮುಂಭಾಗದಲ್ಲಿ ಪ್ರಶಸ್ತಿ ಪುರಸ್ಕೃತರಿಗಾಗಿ ಇರಿಸಿದ ಆಸನದಲ್ಲಿ ಕುಳಿತು ಮುಜುಗರವನ್ನು ಅನುಭವಿಸುತ್ತಿರುವವರಂತೆ ಕೃತಕವಾಗಿ ಅಭಿನಯಿಸುತ್ತ, ಅಕಾಡೆಮಿ-ಪ್ರಾಧಿಕಾರಗಳ ಹುದ್ದೆಗಳಲ್ಲಿ ಸಾರ್ಥಕತೆ ಹೊಂದಲು ತವಕಿಸುವ ಸಾಹಿತಿಗಳು ಮತ್ತೆ ಹೇಗೆ ಇರುತ್ತಾರೆ?
ಹಾಗಾಗಿಯೇ “ಒಂದಾನೊಂದು ಕಾಲದಲ್ಲಿ ಕನ್ನಡ ಸಾಹಿತಿಗಳು ಸುಖವಾಗಿದ್ದರು!’
ಕತೆ-ಕಾವ್ಯ ಬರೆಯುವ ಎಲ್ಲ ಲೇಖಕರ ಆತ್ಮಕಥನಗಳಲ್ಲಿ ಅವರವರ ಹಿರಿಯರು ಮಹಾನುಭಾವರೇ ಆಗಿರುತ್ತಾರೆ, ಬಂಧುಗಳು ಊರಿಗೆ ಉಪಕಾರ ಮಾಡುವವರಾಗಿರುತ್ತಾರೆ. ಸ್ವ-ಸಮುದಾಯದವರಂತೂ ಊರಿಗೆ ಆಡ್ಯರಾಗಿರುತ್ತಾರೆ. ಅವರ ಸಮುದಾಯದವರೊಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಸಮಾಜವನ್ನು ಶೋಷಣೆ ಮಾಡಿರುತ್ತಾರೆ. ತಮ್ಮ ಬಗ್ಗೆ ಒಂದು ಅಭಿನಂದನ ಗ್ರಂಥ ಬಂದರೆ ಒಳ್ಳೆಯದಿತ್ತು ಎಂಬ ಭಾವನೆ ಇದ್ದರೂ ಅದನ್ನು ನೇರವಾಗಿ ಹೇಳದೆ ತಮ್ಮ ಅಭಿಮಾನಿಗಳ ಮೂಲಕ ಕಾರ್ಯಗತಗೊಳಿಸುವ ಸೌಜನ್ಯ ತೋರುತ್ತಾರೆ. ಕಾರಂತ, ಮಾಸ್ತಿ, ಬೇಂದ್ರೆಯವರಂಥ ಹಿರಿಯ ಸಾಹಿತಿಗಳು ಅನುಭವಿಸಿದ ತಳಮಳ ಇವರನ್ನು ಬಾಧಿಸುವುದಿಲ್ಲ. ಆ ಕಡೆಯವರಿಗೂ ಈ ಕಡೆಯವರಿಗೂ ಬೇಸರವಾಗದಂತೆ “ನಡುಪಥ’ದಲ್ಲಿ ನಡೆಯುತ್ತಾರೆ. ಯಾವುದೇ ಗೊಂದಲಗಳಿಲ್ಲದ ಕಾರಣ ಒಂದು ರೀತಿಯ ಸಂತೋಷದಿಂದಿರಲು ಸಾಧ್ಯವಾಗಿದೆ.
ಹಾಗಾಗಿಯೇ “ಒಂದಾನೊಂದು ಕಾಲದಲ್ಲಿ ಸಾಹಿತಿಗಳು ಸುಖವಾಗಿದ್ದರು’
ಎಲ್ಲ ಸಾಹಿತಿಗಳು ಪ್ರಶಸ್ತಿ, ಸಂಮಾನ, ಪ್ರಸಿದ್ಧಿ, ಅಂಕಣ, ಫೊಟೊ, ಪಿಂಚಣಿ, ಸ್ವಜನಪ್ರೀತಿ-ಗಳಲ್ಲಿ ಮುಳುಗಿಹೋಗಿ ಒಂದು ರೀತಿಯ “ಕಂಫರ್ಟ್ ಝೋನ್’ನಲ್ಲಿ ಬದುಕುತ್ತಿದ್ದಾರೆ. ಸಾಹಿತ್ಯ ಗೋಷ್ಠಿಗಳು, ಸಮ್ಮೇಳನಗಳು ಓದುಗರನ್ನು ಉತ್ತೇಜಿಸಬೇಕು ಎಂಬುದು ನಿಜವೇ ; ಆದರೆ, ಸಾಹಿತಿಗಳ “ಕಂಫರ್ಟ್ ಝೋನ್’ಗಳನ್ನು ಕೊಂಚವಾದರೂ ಅಲುಗಾಡಿಸಬೇಕು, ಆತ್ಮಸಾಕ್ಷಿಯನ್ನು ಪ್ರಶ್ನಿಸಬೇಕು. ಹಾಗಾದರೆ ಮಾತ್ರ ಸಾರ್ಥಕ.
ಕುಮಾರ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ
Hindu Temple: ಸಂಭಲ್ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.