ನೀನಾಸಂನಲ್ಲಿ ಬಿ. ವಿ. ಕಾರಂತ ರಂಗಸಂಕೀರ್ಣ


Team Udayavani, Dec 2, 2018, 6:00 AM IST

s-10.jpg

ಕೋಟ ಶಿವರಾಮ ಕಾರಂತ ಮತ್ತು ಬಾಬುಕೋಡಿ ವೆಂಕಟರಮಣ ಕಾರಂತ- ಕನ್ನಡನಾಡು ಇಡೀ ದೇಶದಲ್ಲಿಯೇ ಹೆಮ್ಮೆ ಪಡುವಂಥ ಎರಡು ಹೆಸರುಗಳಿವು. “ಕಾರಂತ’ ಎಂದರೆ ಒಂದು ಕುಲನಾಮ ಎಂಬುದು ಸಾಹಿತ್ಯ ಮತ್ತು ರಂಗಭೂಮಿಯ ಮಂದಿಗೆ ಮರೆತೇಹೋದಂತಿದೆ, ಅದು ಸಮಗ್ರ ಸಮಾಜಕ್ಕೆ ಸಲ್ಲತಕ್ಕದ್ದೇನೋ ಎಂಬ ಭಾವ ಮೂಡಿದೆ. ಆ ಇಬ್ಬರ ಅಸಾಧಾರಣ ಸಾಧನೆಯ ಪ್ರತೀಕವದು. ಹೆಗ್ಗೋಡಿನ ನೀನಾಸಂಗೆ ಹೋದವರೆಲ್ಲ “ಶಿವರಾಮ ಕಾರಂತ ರಂಗಮಂದಿರ’ವನ್ನು ನೋಡಿಯೇ ಇರುತ್ತೀರಿ. ಅದು, ನೀನಾಸಂನ ಸ್ಥಾಪಕರಾದ ಕೆ. ವಿ. ಸುಬ್ಬಣ್ಣ ಅವರು ಕನ್ನಡದ ಮಹಾನ್‌ ಲೇಖಕನಿಗೆ ಕೊಟ್ಟಂಥ ಸಂಮಾನ. ಇನ್ನು ಮುಂದಿನ ದಿನಗಳಲ್ಲಿ ನೀನಾಸಂ ಹೋಗುವವರು “ಬಿ. ವಿ. ಕಾರಂತ ರಂಗಸಂಕೀರ್ಣ’ ವನ್ನು ನೋಡಲಿರುವಿರಿ. ಅದು, ಶ್ರೇಷ್ಠ ರಂಗಕರ್ಮಿಯ ನೆನಪಿಗೆ ಕೆ. ವಿ. ಅಕ್ಷರ ಅವರು ಸಲ್ಲಿಸುತ್ತಿರುವ ಗೌರವ. “ಬಿ. ವಿ. ಕಾರಂತ ರಂಗ ಸಂಕೀರ್ಣ’ದ ನಿರ್ಮಾಣದ ಹಿಂದೆ ಬಾಬುಕೋಡಿ ಬಿ. ವಿ. ಕಾರಂತ ರಂಗ ಪ್ರತಿಷ್ಠಾನ ರಿ., ಬೆಂಗಳೂರು ಇದರ ಸಂಕಲ್ಪವಿದೆ, ಪರಿಶ್ರಮವಿದೆ. 

ಬಿ. ವಿ. ಕಾರಂತರು ಮತ್ತು ಪ್ರೇಮಾ ಕಾರಂತರು ನಮ್ಮೊಂದಿಗೆ ಇರುವಾಗಲೇ ಅವರ ಮಾರ್ಗದರ್ಶನದಲ್ಲಿ, 2000ನೆಯ ಇಸವಿಯಲ್ಲಿ, ಈ ಪ್ರತಿಷ್ಠಾನ ಸ್ಥಾಪನೆಗೊಂಡಿತ್ತು. “ನೀವೇ ಮ್ಯಾನೇಜಿಂಗ್‌ ಟ್ರಸ್ಟಿಯಾಗಿ’ ಎಂದು  ಬಿ. ವಿ. ಕಾರಂತರು ನನಗೆ ಸೂಚಿಸಿದ್ದರು. ಅದನ್ನು ಅಕ್ಷರಶಃ ಆದೇಶವಾಗಿ ಸ್ವೀಕರಿಸಿದ್ದೆ. 2002ರಲ್ಲಿ ಬಿ. ವಿ. ಕಾರಂತರು ನಿಧನರಾದರು. ಐದು ವರ್ಷಗಳ ಬಳಿಕ ಪ್ರೇಮಾಕಾರಂತರು ನಮ್ಮನ್ನಗಲಿದರು. ಆ ಬಳಿಕ ಬಿ. ವಿ. ಕಾರಂತರ ಸಾಧನೆಯನ್ನು ಪ್ರತಿವರ್ಷ ಸ್ಮರಿಸಿಕೊಳ್ಳುವ ಉದ್ದೇಶದಿಂದ “ಬಿ. ವಿ. ಕಾರಂತ ರಂಗನಮನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯೋಜನೆಯನ್ನು ಹಾಕಿಕೊಳ್ಳಲಾಯಿತು. ಮೊದಲ ಕಾರ್ಯಕ್ರಮ ನಡೆದದ್ದು ಬೆಂಗಳೂರಿನಲ್ಲಿ. ಮುಂದಿನ ವರ್ಷಗಳಲ್ಲಿ ಮುಂಬಯಿ, ಇಳಕಲ್‌, ಬಿಜಾಪುರ. ಸಾಗರ, ಧಾರವಾಡ, ಶಿವಮೊಗ್ಗ, ಉಡುಪಿ, ತೀರ್ಥಹಳ್ಳಿ- ಹೀಗೆ ವಿವಿಧ ಕಡೆಗಳಲ್ಲಿ ಮೂರುದಿನಗಳ ವಿಚಾರಸಂಕಿರಣ ಮತ್ತು ಬಹುಭಾಷಾ ನಾಟಕೋತ್ಸವಗಳನ್ನು ಆಯೋಜಿಸಿಕೊಂಡು ಬರಲಾಗಿದೆ.

ನಾಟಕಪ್ರಿಯರ ನೆನಪಿನಲ್ಲಿ ಬದುಕುತ್ತಿರುವ ಬಿ. ವಿ. ಕಾರಂತರು

ಜೊತೆಗೆ, ಬಿ. ವಿ. ಕಾರಂತರ ಹೆಸರನ್ನು ಶಾಶ್ವತವಾಗಿ ಉಳಿಸುವ ಸ್ಮಾರಕವನ್ನು ನಿರ್ಮಿಸುವ ಕನಸು ಇತ್ತು. ಅದು, ಕೇವಲ ಸ್ಥಾವರವಾಗದೆ, ಅದರೊಳಗೆ ಕ್ರಿಯಾಶೀಲವಾದ ಜಂಗಮತ್ವವಿದ್ದರೆ ಮಾತ್ರ ಸಾರ್ಥಕವೆಂಬ ಅರಿವು ಕೂಡ ಇತ್ತು. ಬೆಂಗಳೂರಿನ ಗಿರಿನಗರದಲ್ಲಿರುವ ಬಿ. ವಿ. ಕಾರಂತರ ಮನೆಯಲ್ಲಿ ಪುಸ್ತಕಗಳೂ ಸೇರಿದಂತೆ ಅಮೂಲ್ಯ ವಸ್ತುಗಳ ಸಂಗ್ರಹಗಳಿದ್ದವು. ಕಾರಂತರು ಹೇಳಿಕೇಳಿ ರ‌ಂಗಸಂಗೀತ ಪ್ರಕಾರದಲ್ಲಿ  ಹೊಸಶಕೆಯನ್ನು ಆರಂಭಿಸಿದವರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಜನಪದ, ಶಾಸ್ತ್ರೀಯ ವಾದ್ಯ ಪರಿಕರಗಳೆಲ್ಲ ಅವರಲ್ಲಿದ್ದವು. ನೂರೈವತ್ತರಿಂದ ಇನ್ನೂರಕ್ಕಿಂತಲೂ ವೈವಿಧ್ಯಗಳಿದ್ದವು. ವಾದ್ಯವಲ್ಲವೆಂದು ಭಾವಿಸಿದ ವಸ್ತುಗಳೂ ಅವರ ಕೈಯಲ್ಲಿ ನಾದ ಹೊರಡಿಸುತ್ತಿದ್ದವು. ನಮ್ಮ ನಾಡಿನ ಹೆಮ್ಮೆಯ ಸಾಂಸ್ಕೃತಿಕ ಸಂಘಟಕರಾಗಿದ್ದ ಮಣಿಪಾಲದ ವಿಜಯನಾಥ ಶೆಣೈಯವರು ತಮ್ಮ “ಹೆರಿಟೇಜ್‌ ವಿಲೇಜ್‌’ನಲ್ಲಿ ಬಿ. ವಿ. ಕಾರಂತರ ವಾದ್ಯಪರಿಕರಗಳ ಸಂಗ್ರಹಾಲಯವನ್ನು ಸಂಯೋಜಿಸುವ ಬಗ್ಗೆ ಅವರಲ್ಲಿಯೇ ಮಾತನಾಡಿದ್ದರು. ಅದಕ್ಕೆ ಬಿ. ವಿ. ಕಾರಂತರು ಒಪ್ಪಿಗೆ ಸೂಚಿಸಿದ್ದರು ಕೂಡ. ಈಗ ಇಬ್ಬರೂ ಇಲ್ಲ. ಆದರೆ, ವಾದ್ಯಪರಿಕರಗಳೆಲ್ಲವನ್ನು ಮಣಿಪಾಲದ ಹೆರಿಟೇಜ್‌ ವಿಲೇಜ್‌ಗೆ ಒಪ್ಪಿಸಲಾಗಿದ್ದು ರಂಗಾಸಕ್ತರು ಅದನ್ನು ಅಲ್ಲಿಯೇ ವೀಕ್ಷಿಸುವ ಅವಕಾಶವಿದೆ.  

ಬಿ. ವಿ. ಕಾರಂತರ ಬಳಿ ಸುಮಾರು ಹನ್ನೆರಡು ಸಾವಿರಕ್ಕೂ ಅಧಿಕ ಪುಸ್ತಕಗಳಿದ್ದವು. ಅದರಲ್ಲಿ ದೇಶ-ವಿದೇಶದ ಹಲವು ಭಾಷೆಗಳ, ಹಲವು ಪ್ರಾಂತ್ಯಗಳ ರಂಗಭೂಮಿಯ ಕುರಿತ ಗ್ರಂಥಗಳಿದ್ದವು. ಈಗ ಹೆಗ್ಗೊàಡಿನ ನೀನಾಸಂನಲ್ಲಿ ನಿರ್ಮಾಣಗೊಂಡಿರುವ ರಂಗಸಂಕೀರ್ಣಕ್ಕೆ ಈ ಎಲ್ಲ ಪುಸ್ತಕಗಳನ್ನು ಒದಗಿಸಲಾಗಿದೆ. ಅದನ್ನು ಒಪ್ಪವಾಗಿ ಜೋಡಿಸಿಡುವ ಮತ್ತು ದಾಖಲಾತಿ ಮಾಡುವ ಕೆಲಸಗಳು ನಡೆದಿವೆ. ರಂಗಭೂಮಿಯ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಆಸಕ್ತರಾದವರಿಗೆ ಆಸರೆ ನೀಡುವುದು ಈ ರಂಗಸಂಕೀರ್ಣದ ಮುಖ್ಯ ಉದ್ದೇಶ. ಪುಸ್ತಕಗಳನ್ನು ಪರಾಮರ್ಶನಕ್ಕೆ ಬಳಸುವುದಕ್ಕೂ ಅವಕಾಶವಿದೆ. ಗ್ರಂಥಾಲಯ, ಪಡಸಾಲೆ, ಚರ್ಚಾಕೊಠಡಿ, ವಾಸ್ತವ್ಯಕೊಠಡಿಗಳು ಸೇರಿದಂತೆ ಈ ರಂಗಸಂಕೀರ್ಣದ ಕಟ್ಟೋಣಕ್ಕೆ ಒಂದು ಮಹಡಿ ಇದೆ. ಗೋಡೆಗಳಿಗೆ ಮಣ್ಣಿನ ಬಣ್ಣವನ್ನೇ ಬಳಿದುಕೊಂಡು, ನೀನಾಸಂನ ಉಳಿದ ಕಟ್ಟಡಗಳಿಗೆ ಅನುರೂಪದ ಸರಳ ರಚನೆ ಇದು. ಇದನ್ನು ಕಟ್ಟುವಲ್ಲಿ ಅನೇಕ ಸಹೃದಯಿ ದಾನಿಗಳು ಸಹಕರಿಸಿದ್ದಾರೆ. ರಂಗಾಧ್ಯಯನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ “ಬಿ. ವಿ. ಕಾರಂತ ಫೆಲೋಶಿಪ್‌’ನ್ನು ಆರಂಭಿಸುವ ಪ್ರಸ್ತಾವನೆಯೂ ಇದೆ. ಬಿ. ವಿ. ಕಾರಂತರ ಸಂಗ್ರಹದಲ್ಲಿದ್ದ ಹಳೆಯ ಕಾಲದ ಧ್ವನಿಸುರುಳಿಗಳನ್ನು ಕಂಪ್ಯೂಟರ್‌ ತಂತ್ರಜ್ಞಾನದ ಮೂಲಕ ಕಾಪಿಡುವ ಯೋಜನೆಯೂ ಮುಂದಿದೆ.

ಬಿ. ವಿ. ಕಾರಂತರಿಗೆ ಸಂಬಂಧಿಸಿದ ವಸ್ತುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಮೈಸೂರಿನ ರಂಗಾಯಣದಲ್ಲಿ ಸಂಗ್ರಹಾಲಯ ಸ್ಥಾಪಿಸುವ ಯೋಜನೆ ಕನ್ನಡ-ಸಂಸ್ಕೃತಿ ಇಲಾಖೆಯ ಮುಂದೆ ಇತ್ತು. ಆದರೆ, ಎಂಟು ವರ್ಷ ಕಳೆದರೂ ಈ ಕುರಿತು ರಚನಾತ್ಮಕವಾದ ಹೆಜ್ಜೆಯನ್ನಿಡಲಿಲ್ಲ. ಅಲ್ಲದೆ, ಈ ದಿನಗಳಲ್ಲಿ ಸರಕಾರದ ಅಧೀನದಲ್ಲಿರುವ ಸಂಸ್ಥೆಗಳ ಕಾರ್ಯವೈಖರಿಯ ಮೇಲೆ ವಿಶ್ವಾಸಪಡುವುದು ಕೊಂಚ ಕಷ್ಟವೇ. ಅನುದಾನವಿದ್ದರೆ ಏನಾದರೂ ಮಾಡಿಕೊಂಡಿರುತ್ತೇವೆ, ಇಲ್ಲದಿದ್ದರೆ ಇಲ್ಲ ಎಂಬಂಥ ನಿಸ್ತೇಜ ವಾತಾವರಣ ಸರಕಾರಿ ವಲಯಗಳಲ್ಲಿದೆ. ಆದರೆ, ನೀನಾಸಂನಂಥ ಸಂಸ್ಥೆ ಹೆಚ್ಚು ರಚನಾತ್ಮಕವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಪರಿಶ್ರಮವಹಿಸಿ ಸರಕಾರ ಮತ್ತು ಸರಕಾರೇತರ ವಲಯದಿಂದ ಸಂಪನ್ಮೂಲಗಳನ್ನು ಸಂಗ್ರಹಿಸಿ ನಿರಂತರ ಚಟುವಟಿಕೆಗಳನ್ನು ನಡೆಸುತ್ತಿದೆ. ಬಿ. ವಿ. ಕಾರಂತರಂತೂ ನೀನಾಸಂನ ಜೊತೆಗೆ ನಿರಂತರ ಸಂಬಂಧವಿರಿಸಿಕೊಂಡವರು. ಬಿ. ವಿ. ಕಾರಂತರು ನಿರ್ದೇಶಿಸಿದ ಗೋಕುಲನಿರ್ಗಮನದಂಥ ನಾಟಕವನ್ನು ರಂಗಾಸಕ್ತರು ಮರೆಯಲು ಸಾಧ್ಯವೇ ಇಲ್ಲ. ಈ ಎಲ್ಲ ದೃಷ್ಟಿಗಳಲ್ಲಿಯೂ ನೀನಾಸಂನಲ್ಲಿ ಬಿ. ವಿ. ಕಾರಂತರ ರಂಗ ಸಂಕೀರ್ಣವೊಂದು ಸ್ಥಾಪನೆಗೊಂಡಿರುವುದು ಹೆಚ್ಚು ಅರ್ಥಪೂರ್ಣ. ಇವತ್ತು ಹೆಗ್ಗೋಡಿನಲ್ಲಿ “ಬಿ. ವಿ. ಕಾರಂತ ರಂಗಸಂಕೀರ್ಣ’ ಉದ್ಘಾಟನೆಗೊಳ್ಳುತ್ತಿದೆ. 

ಎಂ. ಜಯರಾಮ ಪಾಟೀಲ 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.