ಆರಾಧನ ಸಂಪ್ರದಾಯದಲ್ಲಿ ಜನಪದ ಮಹಿಳೆ
Team Udayavani, Mar 8, 2019, 12:30 AM IST
ಜನಪದರ ಆರಾಧನೆಯಲ್ಲಿ ಮಹಿಳೆಗೆ ತುಂಬ ಪ್ರಾಶಸ್ತ್ಯ ಇದೆ. ನನ್ನ ಪತಿ ಕೋಲ ಕಟ್ಟುವ ಕಲಾವಿದರಾಗಿದ್ದರು. ದೈವಾರಾಧನೆ ನಡೆಯುವುದು ರಾತ್ರಿಯ ವೇಳೆ. ಸಾಮಾನ್ಯವಾಗಿ ಮಹಿಳೆಯರಿಗೆ ರಾತ್ರಿಯ ಕಾರ್ಯಕ್ರಮಗಳಿಗೆ ಹೋಗಲು ಅನುಮತಿ ಇಲ್ಲ. ಆದರೆ, ನನ್ನ ಪತಿ ತಾವು ಹೋದಲ್ಲೆಲ್ಲ ನನ್ನನ್ನು ಕರೆದೊಯ್ದಿದ್ದಾರೆ. ರಾತ್ರಿ ಕಾಲವೆಂದು ಅವರು ನನ್ನನ್ನು ಬೇಡವೆನ್ನಲಿಲ್ಲ. ಜೊತೆಗೆ, ದೈವಾರಾಧನೆಯಲ್ಲಿ ಪ್ರಮುಖ ಕೆಲಸಗಳನ್ನು ನಿರ್ವಹಿಸುವ ಹಕ್ಕು ಮತ್ತು ಹೊಣೆ ಮಹಿಳೆಯದ್ದೇ ಆಗಿರುತ್ತದೆ; ವಿಶೇಷವಾಗಿ ಕೋಲ ಕಟ್ಟುವವನ ಪತ್ನಿಯದ್ದು. ನಾನು ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆಂಬ ಅಭಿಮಾನವಿದೆ.
ಹಿಂದಿನ ದಿನಗಳಲ್ಲಿ ದೈವಾರಾಧನೆಯಲ್ಲಿ ಆರಂಭದಿಂದ ಕೊನೆಯವರೆಗೂ ಅಂದರೆ, ರಾತ್ರಿ ಬೆಳಗಾತವರೆಗೂ ಮಹಿಳೆಯ ಸಹಭಾಗಿತ್ವ ಬೇಕೇಬೇಕು. ಪಾಡªನವನ್ನೂ ಹಾಡಬೇಕು, ಭೂತಕಟ್ಟುವ ಪರಿಕರಗಳನ್ನು ಸಿದ್ಧಪಡಿಸಬೇಕು, ಸಿರಿಯೋಲೆಗಳನ್ನು ತಯಾರು ಮಾಡಬೇಕು. ಮದುವೆಯಾದ ಆರಂಭದಲ್ಲಿ ನನಗೆ ಈ ಕೆಲಸಗಳ ಬಗ್ಗೆ ಅನುಭವವಿರಲಿಲ್ಲ. ಮದುವೆಗೆ ಪೂರ್ವದಲ್ಲಿ ತಂದೆತಾಯಿಯೊಂದಿಗಾಗಲಿ, ಸಹೋದರರ ಜೊತೆಗಾಗಲಿ ಕೋಲ ನಡೆಯುವಲ್ಲಿಗೆ ಹೋದವಳಲ್ಲ. ಮದುವೆಯಾದ ಬಳಿಕ ನನ್ನ ಪತಿಯೇ ನನಗೆ ದೈವಾರಾಧನೆಯಲ್ಲಿ ನಿರ್ವಹಿಸಬೇಕಾದ ಕೆಲಸವನ್ನು ಕಲಿಸಿಕೊಟ್ಟರು. ಪಾಡªನಗಳನ್ನು ಹೇಳಿಸಿದರು. ನನಗೆ ತುಂಬ ಪಾಡªನಗಳು ಕಂಠಪಾಠ ಇವೆ. ಉಡುಪಿಯ ಓಂತಿಬೆಟ್ಟು ಬಳಿ ಇರುವ ನಮ್ಮ ಊರಿನ ಆಸುಪಾಸಿನ “ಅಜಲು’ ಹಕ್ಕಿನ ಮಾದಿರ, ಮಾಂಕಾಳಿ ಆರಾಧನ ಸಂಪ್ರದಾಯದಲ್ಲಿಯೂ ನನ್ನವರೊಂದಿಗೆ ನಾನು ಭಾಗವಹಿಸಿದ್ದೇನೆ.
ಜನಪದರ ಬದುಕಿನಲ್ಲಾಗಲಿ, ಕಲೆಯಲ್ಲಾಗಲಿ ಗಂಡಸಿನಷ್ಟೇ ಪ್ರಾಮುಖ್ಯ ಹೆಣ್ಣಿಗೂ ಇದೆ.
ಅಮ್ಮಣಿ ಡಂಗು ಪಾಣಾರ
ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.