ಆತ್ಮಾವಲೋಕನ ಸಾಧನೆಯ ಮೊದಲ ಮೆಟ್ಟಿಲು
Team Udayavani, Apr 1, 2019, 1:11 PM IST
ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕು ಎಂಬ ಕನಸು ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಆದರೆ ಎಲ್ಲಿಂದ, ಹೇಗೆ ಪ್ರಾರಂಭಿಸಬೇಕೋ ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಸಾಧನೆಯ ಪಥವನ್ನು ಮೊದಲು ನಾವು ನಮ್ಮಿಂದಲೇ ಆರಂಭಿಸಬೇಕು. ಅದುವೇ ಆತ್ಮಾವಲೋಕನದ ಮೂಲಕ ಎನ್ನುತ್ತಾರೆ ಅವದೇಶನಂದ ಗಿರಿ ಮಹಾರಾಜ್. ಉತ್ತಮ ಜೀವನಕ್ಕೆ ಅವರು ಹೇಳಿರುವ ಐದು ನಿಯಮಗಳನ್ನು ಪಾಲಿಸಿದರೆ ಯಶಸ್ವೀ ಜೀವನ ನಮ್ಮದಾಗುತ್ತದೆ ಎಂಬುದನ್ನು ಸ್ವತಃ ಅವರೇ ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟು ಲಕ್ಷಾಂತರ ಮಂದಿಗೆ ಯಶಸ್ಸಿ ಜೀವನಕ್ಕೆ ದಾರಿದೀಪವಾಗಿದ್ದಾರೆ.
ನೀವು ಜೀವನದಲ್ಲಿ ಅವಾಸ್ತವಿಕ ಭ್ರಮೆ, ಕಲ್ಪನೆಗಳನ್ನು ಇಟ್ಟುಕೊಂಡಿದ್ದರೆ, ಇಂದಿಗೆ ಅದನ್ನು ಕಿತ್ತು ಹಾಕಿಬಿಡಿ. ಭ್ರಮೆ ಮತ್ತು ಕಲ್ಪನೆಗಳು ಜೀವನವನ್ನು ವಿಭಾಗಿಸುತ್ತವೆ. ವ್ಯತ್ಯಾಸ ಕಾಣುವಂತೆ ಮಾಡುತ್ತವೆ. ಅಲ್ಲದೇ ನಮ್ಮನ್ನು ಅಜ್ಞಾನದ ಅಂಧಕಾರದ ಕೂಪಕ್ಕೆ ತಳ್ಳುತ್ತವೆ. ಹಾಗಾಗಿ ಭ್ರಮೆ ಮತ್ತು ಕಲ್ಪನೆಯಿಲ್ಲದ ಜೀವನ ಸರ್ವ ಸ್ವತಂತ್ರವಾದದ್ದು ಎಂದು ಜೀವನದ ತಿರಳನ್ನು ತಿಳಿಸಿಕೊಟ್ಟವರು ಹಿಂದೂ ಆಧ್ಯಾತ್ಮಿಕ ಸಂತ ಅವದೇಶನಂದ ಗಿರಿ ಮಹಾರಾಜ್ ಅವರು.
ಸ್ವಾಮಿ ಅವದೇಶನಂದ ಗಿರಿ ಮಹಾರಾಜ್ ಅವರು ಮಹಾಮಂಡಲೇಶ್ವರ ಜುನಾ ಆಖಾರದ ಆಚಾರ್ಯರು. ತಮ್ಮ ಪ್ರವಚನ ಹಾಗೂ ಮಾರ್ಗದರ್ಶನದಿಂದ ಇಂದು ಲಕ್ಷಾಂತರ ಭಕ್ತ ಸಮೂಹ, ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ತಮ್ಮ ಸನ್ಯಾಸಿ ಶಿಷ್ಯ ಬಳಗದಿಂದ ಸಾಮಾಜಿಕ ಕಾರ್ಯ ಚಟುವಟಿಕೆ ಹಾಗೂ ಧರ್ಮ ಪ್ರಸಾರದ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ಅವದೇಶನಂದ ಗಿರಿ ಮಹಾರಾಜ್ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದು, ಬಾಲ್ಯದಿಂದಲೇ ಆಧ್ಯಾತ್ಮಿಕತೆಯನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡಿದ್ದರು. ಯೋಗ ಹಾಗೂ ವೇದಾಂತ ಸಾರವನ್ನು ಸಣ್ಣ ವಯಸ್ಸಿನಲ್ಲೇ ಅರ್ಥೈಸಿಕೊಂಡಿದ್ದರು.
ಗುರುಗಳ ಭೇಟಿ
ಅವದೇಶನಂದ ಗಿರಿ ಮಹಾರಾಜ್ ಅವರು ತಮ್ಮ ಕಾಲೇಜು ದಿನಗಳಲ್ಲಿ ತುಂಬಾ ಆಧ್ಯಾತ್ಮಿಕವಾಗಿದ್ದರು. ಆದರೆ ಒಂದು ದಿನ ಅವರು ಜ್ಞಾನ ಹಾಗೂ ಸತ್ಯದ ಅರಿವಿಗೆ ಹಿಮಾಲಯಕ್ಕೆ ಹೋದರು. ಹಿಮಾಲಯದಲ್ಲಿ ಗುರು ಸ್ವಾಮೀ ಅವಧೂತ್ ಪ್ರಕಾಶ್ ಮಹಾರಾಜ್ ಅವರ ನೆರವಿನಿಂದಾಗಿ ಯೋಗ ಹಾಗೂ ವೇದಗಳಲ್ಲಿನ ಜ್ಞಾನ ಪರಿಪೂರ್ಣವಾಗಿ ಅರಿತು, ಅನಂತರ ದೀಕ್ಷೆ ಪಡೆದು ಜುನಾಪೀಠ ಆಖಾರಕ್ಕೆ ಬಂದು ಆಚಾರ್ಯರಾದರು.
ಅವದೇಶನಂದ ಗಿರಿ ಮಹಾರಾಜ್ ಅವರ ಪ್ರಚವನ ಹಾಗೂ ಮಾರ್ಗದರ್ಶನದ ಮೂಲಕ ಇಂದು ಅನೇಕರಿಗೆ ಜೀವನದ ತಿರುಳನ್ನು ಹೇಳಿಕೊಡುತ್ತಿದ್ದಾರೆ. ಇವರು ತಿಳಿಸಿದ ಜೀವನದ ಮಹತ್ವದ ಅಂಶಗಳ ಬಗ್ಗೆ ಬೆಳಕು ಚೆಲ್ಲುವುದು ಸದ್ಯದ ಸಂಗತಿ.
ಜೀವನಕ್ಕಿರಲಿ ಐದು ನಿಯಮ
ನಾವು ಯಶಸ್ವಿ ಜೀವನಕ್ಕಾಗಿ ಹಲವಾರು ರೀತಿಯಲ್ಲಿ ಮಾರ್ಗಗಳನ್ನು ಹುಡುಕಾಡುತ್ತೇವೆ. ಇದಕ್ಕೆ ಅನುಗುಣವಾಗಿ ನಮ್ಮ ನೈತಿಕ ಹಾಗೂ ಮೌಲ್ಯಯುತ ಜೀವನದ ಸಂದೇಶಕ್ಕಾಗಿ ಅವದೇಶನಂದ ಗಿರಿ ಮಹಾರಾಜ್ ಅವರು ‘ಉತ್ತಮ ಜೀವನಕ್ಕೆ ಐದು ನಿಯಮಗಳು’ ಎಂಬ ಪ್ರವಚನದಲ್ಲಿ ಅವರೇ ಹೇಳುವಂತೆ, ಯಶಸ್ವೀ ಜೀವನಕ್ಕೆ ಅಂತರಂಗ ಶುದ್ಧತೆ, ಬಹಿರಂಗ ನಿರ್ಮಲತೆ, ತೃಪ್ತಿದಾಯಕ ಮನೋಭಾವ, ಧ್ಯಾನ ಹಾಗೂ ಸ್ವಯಂ ನಿಯಂತ್ರಣ ಇವುಗಳನ್ನು ದೈನಂದಿನ ಜೀವನದಲ್ಲಿ ರೂಢಿಸಿಕೊಂಡರೆ ಯಶಸ್ವಿ ಜೀವನ ನಮ್ಮದು.
ಪರಿಪೂರ್ಣರು ಯಾರು?
ಮನುಷ್ಯನು ತನ್ನ ಜೀವನದಲ್ಲಿ ಪರಿಪೂರ್ಣನಾಗಿರಬೇಕು ಎಂದು ಯೋಚಿಸುವುದು ಸಹಜ, ಅದರಂತೆ ಅವದೇಶನಂದ ಗಿರಿ ಮಹಾರಾಜ್ ಅವರು ಹೇಳುವಂತೆ ಯಾವ ವ್ಯಕ್ತಿ ಜೀವನದಲ್ಲಿ ಪಾರದರ್ಶಕ ಮನೋಭಾವನೆಯಿಂದ ಸದ್ಗುಣಗಳನ್ನು ರೂಢಿಸಿಕೊಂಡು, ಉತ್ತಮ ಮೌಲ್ಯ ಹಾಗೂ ಸೇವೆಯನ್ನು ಸಮಾಜಕ್ಕೆ ನೀಡುತ್ತಾನೋ ಅದೇ ವ್ಯಕ್ತಿ ಜೀವನದ ಪರಿಪೂರ್ಣ ವ್ಯಕ್ತಿ ಎಂದು ಹೇಳಬಹುದು ಎನ್ನುತ್ತಾರೆ.
ಆತ್ಮಸ್ಥೈರ್ಯ ರೂಪಿಸಿಕೊಳ್ಳಿ
ನಮ್ಮಲ್ಲಿ ಆತ್ಮಸ್ಥೈರ್ಯ ರೂಢಿಸಿಕೊಳ್ಳಲು ಹಲವಾರು ರೀತಿಯಲ್ಲಿ ಪ್ರಯತ್ನ ಪಡುತ್ತೇವೆ. ಅದೊಂದು ಗಳಿಸಬಹುದಾದ ಸಿದ್ಧಿ ಎಂಬಂತೆ ಭಾವಿಸುತ್ತೇವೆ. ಈ ಬಗ್ಗೆ ಅವದೇಶನಂದ ಗಿರಿ ಮಹಾರಾಜ್ ಅವರು ಹೇಳುವಂತೆ, ಜೀವನದಲ್ಲಿ ನೀವು ಮೊದಲು ಆತ್ಮಸ್ಥೈರ್ಯವನ್ನು ರೂಢಿಸಿಕೊಳ್ಳಬೇಕಾದರೆ, ಮೊದಲು ಧನಾತ್ಮಕವಾಗಿ ಯೋಚಿಸುವುದನ್ನು ಕಲಿಯಿರಿ. ಮಾನಸಿಕವಾಗಿ ಸ್ವಸ್ಥರಾದಾಗ ನೀವು ನಿಮ್ಮಲ್ಲಿ ನಿಮಗೆ ತಿಳಿಯದಂತೆ ಆತ್ಮಸ್ಥೈರ್ಯ ಬೆಳೆದಿರುತ್ತದೆ ಎಂದು ಅವರು ಬ್ಯುಲ್ಡ್ ಸೆಲ್ಫ್ ಕಂಟ್ರೋಲ್ ಎಂಬ ಶೀರ್ಷಿಕೆಯ ಪ್ರವಚನದಲ್ಲಿ ತಿಳಿಸುತ್ತಾರೆ.
ಅಜ್ಞಾನ ನಮ್ಮ ಶತ್ರುವಾಗಲಿ
ಅಜ್ಞಾನ ಎಂಬ ಅಂಧಕಾರ ಕೇವಲ ಒಬ್ಬ ವ್ಯಕ್ತಿಗೆ ಶತ್ರುವಲ್ಲ, ಅದು ಇಡೀ ದೇಶಕ್ಕೆ, ಸಮಾಜಕ್ಕೆ ಶತ್ರು. ಇದರಿಂದಾಗಿ ದೇಶದಲ್ಲಿ ಆರ್ಥಿಕ, ಲಿಂಗ ಹಾಗೂ ಸಾಮಾಜಿಕ ಅಸಮಾನತೆ ತಲೆದೋರುತ್ತದೆ ಎಂದು ಅವದೇಶನಂದ ಗಿರಿ ಮಹಾರಾಜ್ ಅವರು ಹೇಳುತ್ತಾರೆ. ಹಾಗಾಗಿ ನಾವು ಸಣ್ತೀಪೂರಿತ, ನೈತಿಕ ಶಿಕ್ಷಣವನ್ನು ಪಡೆದಾಗ ಮಾತ್ರ ನಾವು ಅಜ್ಞಾನವನ್ನು ಹೊಡೆದೊರಳಿಸಬಹುದು ಎನ್ನುತ್ತಾರೆ ಅವದೇಶನಂದ ಗಿರಿ ಮಹಾರಾಜ್.
ಆತ್ಮಾವಲೋಕನ ಅಗತ್ಯ
ಜೀವನ ಸಾಧನೆಯ ಮೊದಲ ಮೆಟ್ಟಿಲು ಎಂದರೆ ಅದು ಆತ್ಮಾವಲೋಕನ ಎಂದಿರುವ ಅವದೇಶನಂದ ಗಿರಿ ಮಹಾರಾಜ್, ನಮ್ಮ ಕೆಲಸ ಹಾಗೂ ಕಾರ್ಯಗಳ ಬಗ್ಗೆ ನಮ್ಮಲ್ಲಿ ಅತ್ಮಾವಲೋಕನ ಅಗತ್ಯ. ಇದರಿಂದಾಗಿ ಸರಿ- ತಪ್ಪುಗಳನ್ನು ತಿಳಿದು ನಮ್ಮ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸಬಹುದು ಎಂದು ಅವರು ತಿಳಿಸುತ್ತಾರೆ.
ಜೀವನದಲ್ಲಿ ಸಂಭವಿಸುವ ಗೊಂದಲಗಳ ಸಮಯದಲ್ಲಿ ನೀವು ಹೆಚ್ಚು ಸಂಯಮ, ಶಾಂತತೆಯಿಂದ ಇರುವುದಾದರೆ, ದೇವರಿಗೆ ಅತಿ ಹೆಚ್ಚು ಇಷ್ಟವಾಗುತ್ತೀರಿ.
ನೀವು ನಿಮ್ಮ ಜೀವನದಲ್ಲಿ ಶುದ್ಧ ಹಾಗೂ ದೈವಿಕವಾಗಿ ಬದುಕುಬೇಕು ಎಂಬ ಅಚಲವಾಗಿ ಯೋಚಿಸುತ್ತೀರಿ ಆದರೆ, ನಿಮ್ಮ ಪ್ರಯತ್ನಕ್ಕೆ ಅವಕಾಶಗಳು ಸಿಕ್ಕೇ ಸಿಗುತ್ತವೆ.
ಶಿವ ಸ್ಥಾವರಮಠ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.