ಕೊರವಡಿ: ಬತ್ತಿದ ಪುರಾತನ ಹರಪನ ಕೆರೆ
Team Udayavani, Mar 25, 2019, 6:30 AM IST
ತೆಕ್ಕಟ್ಟೆ: ಕುಂಭಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನೂರಾರು ಎಕ್ರೆ ಕೃಷಿಭೂಮಿಗಳಿಗೆ ಆಶ್ರಯವಾಗಿದ್ದ 5 ಎಕ್ರೆ ವಿಸ್ತೀರ್ಣದ ಕೊರವಡಿ ಹರಪನಕೆರೆ ನಿರ್ವಹಣೆಗಳಿಲ್ಲದೆ ಬರಿದಾಗುತ್ತಿದೆ. ಇದು ಕೃಷಿ ಮತ್ತು ಅಂತರ್ಜಲ ಕುಸಿತಕ್ಕೂ ಕಾರಣವಾಗಿದ್ದು, ಗ್ರಾಮಸ್ಥರಿಗೆ ಆತಂಕ ಎದುರಾಗಿದೆ.
ಹರಪನಕೆರೆಯ ಅದೆಷ್ಟೋ ಕೃಷಿ ಭೂಮಿಗೆ ನೀರುಣಿಸುತ್ತಿತ್ತು. ರೈತರು ಭತ್ತ, ನೆಲಗಡಲೆ, ತರಕಾರಿ ಸೇರಿದಂತೆ ವಿವಿಧ ಬೆಳೆಗಳಲ್ಲಿ ಉತ್ತಮ ಫಸಲನ್ನು ಕಂಡಿದ್ದಾರೆ. 2011ರಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಕೆರೆಯ ಹೂಳು ತೆಗೆಯ ಲಾಗಿತ್ತು. ಬಳಿಕ ಇದು ಅಭಿವೃದ್ಧಿ ಕಂಡಿಲ್ಲ.
ಬತ್ತಿ ಹೋಗುತ್ತಿದೆ
ಈ ಕೆರೆಯಿಂದಾಗಿ ಈ ಪರಿಸರದ ಅಂತರ್ಜಲ ಮಟ್ಟದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದರೂ ಈಗ ಆ ಸ್ಥಿತಿ ಇಲ್ಲ. ಹೂಳು ತುಂಬಿದ್ದು, ಅಂತರಗಂಗೆಯೂ ಹರಡಿಕೊಂಡಿದೆ. ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯಾಡಳಿತ ಗಮನ ಹರಿಸಿ ಕೆರೆಯ ಸಂರಕ್ಷಣೆಗೆ ಮುಂದಾಗಬೇಕು ಎನ್ನುವುದು ಸ್ಥಳೀಯ ಪ್ರದೀಪ್ ಕುಂದರ್ ಹರಪನಕೆರೆ ಅವರ ಅಭಿಪ್ರಾಯ.
ಇಚ್ಛಾಶಕ್ತಿ ಕೊರತೆ
ಹಿಂದೆ ಈ ಹರಪನಕೆರೆಯಲ್ಲಿ ಯುಗಾದಿ ಹದಿನೈದು ದಿನಗಳ ನಂತರ ಈ ಭಾಗದ ಕೃಷಿಕರೆಲ್ಲರೂ ಒಂದಾಗಿ ಕೆರೆಯಲ್ಲಿ ಹುದುಗಿರುವ ಹೂಳು ತೆಗೆಯುವ ಕಾಯಕದಲ್ಲಿ ಸ್ವಯಂಪ್ರೇರಣೆಯಿಂದ ತೊಡಗಿಕೊಳ್ಳುತ್ತಿದ್ದೆವು . ಅಂತರ್ಜಲ ವೃದ್ಧಿಸಿ ಸುತ್ತಮುತ್ತಲಿನ ಕೃಷಿ ಭೂಮಿಯಲ್ಲಿ ಒಳ್ಳೆಯ ಇಳುವರಿಯನ್ನು ಕಂಡಿದ್ದೇವೆ . ಇತ್ತೀಚಿನ ದಿನಗಳಲ್ಲಿ ಕೆರೆ ಬರಿದಾಗುತ್ತಿದೆ, ಇಚ್ಛಾಶಕ್ತಿ ಕೊರತೆಯೂ ಕಾಡಿದೆ.
-ಭಾಸ್ಕರ ಕಾಂಚನ್ ಹರಪನಕೆರೆ, ಕೃಷಿಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
MUST WATCH
ಹೊಸ ಸೇರ್ಪಡೆ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.