ಮಹಾ ನಗರದಲ್ಲಿ ಬಿಸಿಲಿನ ಧಗೆಗೆ ತಂಪೆರೆದ ಮಳೆ
Team Udayavani, Apr 3, 2019, 10:58 AM IST
ಪ್ರಬಲ ಗಾಳಿಗೆ ನಗರದ ರಥಬೀದಿ ಬಳಿ ಮರದ ಎಲೆಗಳು ರಸ್ತೆಯಲ್ಲಿ ಚದುರಿರುವುದು.
ಮಹಾನಗರ : ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಕಾಣಿಸಿಕೊಂಡ ಮೇಲ್ಮೆ, ಸುಳಿಗಾಳಿ ಪರಿಣಾಮ ಮಂಗಳವಾರ ಸಂಜೆ ವೇಳೆಗೆ ಮಂಗಳೂರು ನಗರದಲ್ಲಿ ಪ್ರಬಲ ಗಾಳಿ ಸಮೇತ ಸಾಧಾರಣ ಮಳೆಯಾಗಿದೆ.
ಸಂಜೆ 5 ಗಂಟೆ ವೇಳೆಗೆ ನಗರದಲ್ಲಿ ಧೂಳು ಮಿಶ್ರಿತ ಪ್ರಬಲ ಸುಳಿ ಗಾಳಿ ಉಂಟಾದ ಪರಿಣಾಮದಿಂದ ವಾಹನ ಸವಾರರಲ್ಲಿ ಕೆಲವು ಕಾಲ ಆತಂಕ ಸೃಷ್ಟಿಯಾಗಿತ್ತು. ವಾಹನ ಸವಾರರು ಅಂಗಡಿ, ರಸ್ತೆ ಬದಿಗಳಲ್ಲಿ ಕೆಲ ಕಾಲ ವಾಹನ ನಿಲ್ಲಿಸಿದ್ದ ಸನ್ನಿವೇಶ ನಗರದಲ್ಲಿ ಕಂಡು ಬಂದಿತ್ತು. ಇನ್ನು, ಭಾರೀ ಗಾಳಿಗೆ ಮರದ ಎಲೆಗಳು ರಸ್ತೆಯಲ್ಲಿ ಹರಡಿಕೊಂಡಿತ್ತು.
ಮಧ್ಯಾಹ್ನದ ವೇಳೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಸೆಕೆಯ ಪ್ರಮಾಣ ಹೆಚ್ಚಿತ್ತು. ಸಂಜೆ 5.30ರ ವೇಳೆಗೆ ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ವಾತಾವರಣ ಕೂಲ್ ಆಗಿತ್ತು. ಕಳೆದ ಕೆಲವು ದಿನಗಳಿಂದ ಬಿಸಿಲಿನ ಬೇಗೆಯಲ್ಲಿದ್ದ ಮಂದಿಗೆ ಮಳೆ ತಂಪೆರೆಯಿತು. ಅಕಾಲಿಕ ಮಳೆಯಿಂದಾಗಿ ವಾಹನ ಸವಾರರು, ಉದ್ಯೋಗಿಗಳು ರಸ್ತೆ ಬದಿಯಲ್ಲಿ ನಿಂತು ಮಳೆ ನಿಲ್ಲುವವರೆಗೆ ಕಾದರು. ಪ್ರಬಲ ಗಾಳಿಯ ಪರಿಣಾಮ ನಗ ರದ ವಿವಿ ಧಡೆ ರಾತ್ರಿ ವೇಳೆ ವಿದ್ಯುತ್ ಕಡಿತಗೊಂಡಿತ್ತು.
ಕಳೆದ ಎರಡು ದಿನಗಳಿಂದ ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಇದ್ದರೂ, ಮಳೆಯಾಗಲಿಲ್ಲ. 2017ರ ಮಾ. 2ರಂದು 39.6 ಡಿ.ಸೆ. ಗರಿಷ್ಠ ತಾಪ
ಮಾನ ದಾಖಲಾಗಿತ್ತು. ಇದಾದ ಬಳಿಕ 2016ರಲ್ಲಿಯೂ ಮಾ. 12ರಂದು 36.8 ಡಿ.ಸೆ. ತಾಪಮಾನ ದಾಖಲಾಗಿತ್ತು. ಈಗ 2019ರಲ್ಲಿಯೂ ಸುಮಾರು 37 ಡಿ.ಸೆ. ನಷ್ಟು ತಾಪಮಾನ ದಾಖಲಾಗುತ್ತಿದ್ದು, ಹವಾಮಾನ ಇಲಾಖೆ ಅಧಿಕಾರಿಗಳು ಹೇಳುವಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಸುರತ್ಕಲ್‌ನಲ್ಲಿ ತುಂತುರು ಮಳೆ
ಸುರತ್ಕಲ್, ಪಣಂಬೂರಿನಲ್ಲಿ ಮಂಗಳವಾರ ಸಂಜೆ ಸುರಿದ ತುಂತುರು ಮಳೆ ಇಳೆಯನ್ನು ತಂಪಾಗಿಸಿತು. ಭಾರೀ ಗಾಳಿಯೊಂದಿಗೆ ಮೋಡ ಕವಿದು ಕೆಲವು ಹೊತ್ತು ತುಂತುರು ಮಳೆಯಾಗಿದೆ. ಕಾಟಿಪಳ್ಳ ಸಹಿತ ವಿವಿಧೆಡೆ ಗಾಳಿಯೊಂದಿಗೆ ಮಣ್ಣಿನ ಧೂಳು ಆವರಿಸಿತು. ವ್ಯಾಯಾಮದಲ್ಲಿದ್ದವರು ಮಳೆಯೊಂದಿಗೆ ಸಂಭ್ರಮಪಟ್ಟರು.
ಮೂಲ್ಕಿ, ಮೂಡುಬಿದಿರೆ ತಂಪಾದ ವಾತಾವರಣ
ಒಂದು ವಾರದಿಂದ ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಮೂಲ್ಕಿ, ಮೂಡುಬಿ ದಿರೆ ಭಾಗ ದಲ್ಲಿ ಮಂಗಳವಾರ ಗಾಳಿ ಸಹಿತ ತುಂತುರು ಮಳೆಯಾಯಿತು. ಸಂಜೆ ಐದು ಗಂಟೆಗೆ ಮೋಡ ಕವಿದು ತಂಪಾದ ಗಾಳಿ ಬೀಸಿ,ತಂಪಾದ ವಾತಾವರಣ ಸೃಷ್ಟಿಸಿತ್ತು. ಸುರಿದ ಹನಿ ಮಳೆ ಪೇಟೆಯ ಜನರ ಮುಖದಲ್ಲಿ ಮಂದಹಾಸ ಉಂಟು ಮಾಡಿತ್ತು.
ಇನ್ನೆರಡು ದಿನ ಮಳೆ ಸಾಧ್ಯತೆ
ಕೆಎಸ್‌ಎನ್‌ಎಂಡಿಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರು ‘ಸುದಿನ’ ಕ್ಕೆ ಪ್ರತಿಕ್ರಿಯಿಸಿ ‘ದಕ್ಷಿಣ ಒಳನಾಡಿನಲ್ಲಿ ಮೇಲ್ಮೆ, ಸುಳಿಗಾಳಿ ಪರಿಣಾಮದಿಂದ ಮಳೆಯಾಗುತ್ತಿದೆ. ಮುನ್ಸೂಚನೆಯ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಇದೇ ರೀತಿ ಮಳೆಯಾಗಬಹುದು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.