ಕೆರ್ವಾಶೆ: ಮಡಿವಾಳ ಕಟ್ಟೆಕೆರೆಯಲ್ಲಿ ಮತ್ತೆ ನೀರಿನ ಒರತೆ
ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಪುನಶ್ಚೇತನ
Team Udayavani, May 5, 2019, 6:07 AM IST
ಅಜೆಕಾರು: ಕೆರ್ವಾಶೆ ಗ್ರಾಮದ ಪುರಾತನ ಐತಿಹಾಸಿಕ ಮಡಿವಾಳ ಕಟ್ಟೆಕೆರೆಯ ಹೂಳು ತೆಗೆದು ಅಭಿವೃದ್ಧಿ ಪಡಿಸಲಾಗಿದ್ದು ಕೆರೆ¿ಚುಲ್ಲಿ ಬೇಸಗೆ ಯಲ್ಲೂ ನೀರಿನ ಒರತೆ ಕಾಣಿಸಿರುವುದು ನಾಗರಿಕರಿಗೆ ಸಂತಸ ಮೂಡಿಸಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಅಭಿವೃದ್ಧ ಯೋಜನೆಯಡಿ ಮಡಿವಾಳ ಕಟ್ಟೆಕೆರೆ ಅಭಿವೃದ್ಧಿಗೊಳ್ಳುತ್ತಿದೆ. ಇದಕ್ಕೆ 4 ಲಕ್ಷ ರೂ ಅನುದಾನ ಮಂಜೂರುಗೊಂಡಿದ್ದು ಉಳಿದ ಮೊತ್ತವನ್ನು ದಾನಿಗಳ ಸಹಕಾರ ದಿಂದ ಸಂಗ್ರಹಿಸಲಾಗಿದೆ.
500 ವರ್ಷ ಹಳೆ ಕೆರೆ
ಸುಮಾರು 500 ವರ್ಷಗಳ ಇತಿಹಾಸ ವಿರುವ ಈ ಮಡಿವಾಳ ಕಟ್ಟೆಕೆರೆಯು ಹಿಂದೆ ಕೆರ್ವಾಶೆ ಗ್ರಾಮದ ನೂರಾರು ಎಕ್ರೆ ಭತ್ತದ ಗ¨ªೆಗಳಿಗೆ ನೀರು ಒದಗಿಸುತಿತ್ತು. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ನಿರ್ವಹಣೆ ಇಲ್ಲದೆ ಹೂಳಿನಿಂದ ತುಂಬಿಹೊಗಿ ನೀರು ಇಲ್ಲದಂತಾಗಿತ್ತು.
ಕಳೆದ 2 ತಿಂಗಳಿನಿಂದ ನಿರಂತರವಾಗಿ ಕೆರೆಯ ಹೂಳೆತ್ತುವ ಕಾಮಗಾರಿ ನಡೆ ಯುತ್ತಿದ್ದು ಸುಮಾರು 1850 ಲೋಡ್ ನಷ್ಟು ಹೂಳನ್ನು ತೆಗೆಯಲಾಗಿದೆ. ಕಡು ಬೇಸಗೆಯಲ್ಲಿಯೂ ನೀರಿನ ಒರತೆಯಿದ್ದು ಸುಮಾರು 1 ಫೀಟ್ ನಷ್ಟು ನೀರು ನಿಂತಿದೆ.
ಕೆರೆ 7.60 ಎಕ್ರೆಯಷ್ಟು ವಿಸ್ತಾರ ವಾಗಿತ್ತು. ಒತ್ತುವರಿಯಿಂದಾಗಿ ಈಗ ಕೇವಲ ಮೂರರಿಂದ ನಾಲ್ಕು ಎಕ್ರೆ ಯಷ್ಟು ವಿಸ್ತೀರ್ಣದಲ್ಲಿದೆ ಇದರಲ್ಲಿ 1.50 ಎಕ್ರೆಯಷ್ಟು ವಾಪ್ತಿಯ ಹೂಳನ್ನು ತೆಗೆಯ ಲಾಗಿದೆ.
ಕುಡಿಯವ ನೀರಿಗೆ ಉಪಯೋಗ
ಕೆರೆ ಹೂಳೆತ್ತಿದ ಬಳಿಕ ಕೆರ್ವಾಶೆ ಪಂಚಾಯತ್‌ಗೆ ಮತ್ತು ಕೆರೆ ಅಭಿವೃದ್ಧಿ ಸಮಿತಿ ಸುಪರ್ದಿಗೆ ಕೆರೆ ಹಸ್ತಾಂತರಗೊಳ್ಳಲಿದೆ. ಮುಂದಿನ ದಿನ ಗಳಲ್ಲಿ ಪಂಚಾಯತ್ ವ್ಯಾಪ್ತಿ ಯಲ್ಲಿ ಬೇಸಗೆಯಲ್ಲಿ ಕಂಡು ಬರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಈ ಕೆರೆ ಸಹಕಾರಿ ಯಾಗಲಿದೆ. ನೀರಿನ ಒರತೆ ಇರುವು ದರಿಂದ ವಿವಿಧ ಅನುದಾನ ಬಳಸಿ ಕೊಂಡು ಪಂಚಾಯತ್ ವ್ಯಾಪ್ತಿಗೆ ನೀರು ಒದಗಿಸಬಹುದು ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಪರಿಸರ ಸಂರಕ್ಷಣೆ ಉದ್ದೇಶ
ರಾಜ್ಯದ ಪ್ರತೀ ತಾಲೂಕಿನಲ್ಲಿಯೂ ಒಂದು ಕೆರೆ ಅಭಿವೃದ್ಧಿಪಡಿಸುವ ನಮ್ಮೂರು ನಮ್ಮ ಕೆರೆ ಯೋಜನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಡೆ ಹಾಗೂ ಹೇಮವತಿ ವಿ ಹೆಗ್ಡೆ ಅವರು ಹಮ್ಮಿಕೊಂಡಿ¨ªಾರೆ. ಈ ಯೋಜನೆಯಂತೆ ಕೆರ್ವಾಶೆಯ ಮಡಿವಾಳ ಕಟ್ಟೆಕೆರೆಯನ್ನು ಅಭಿವೃದ್ಧಿ ಪಡಿಸಿ ಅಂತರ್ಜಲ ಹೆಚ್ಚಿಸಿ ಪರಿಸರ ಸಂರಕ್ಷಣೆಯ ಉದ್ದೇಶ ಹೊಂದಲಾಗಿದೆ.
-ಶಶಿಕಿರಣ…, ಕೃಷಿ ಅಧಿಕಾರಿ, ಗ್ರಾಮಾಭಿವೃದ್ಧಿ ಯೋಜನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.