ಪ್ರವಾಸಿ ತಾಣ ಹಂಗಾರಕಟ್ಟೆ ; ಅಭಿವೃದ್ಧಿಗಿದೆ ಸಾಕಷ್ಟು ಅವಕಾಶ
Team Udayavani, Apr 23, 2019, 6:04 AM IST
ಕೋಟ: ತುಳುನಾಡ ರಾಜಧಾನಿ ಬಾರಕೂರಿನ ರಾಜಾಡಳಿತದ ಕಾಲದಲ್ಲಿ ವಿದೇಶಗಳಿಗೆ ಪ್ರಮುಖ ಆಹಾರ ವಸ್ತುಗಳನ್ನು ರಪು¤ಗೊಳಿಸುವ ಬಂದರಾಗಿ ಹಂಗಾರಕಟ್ಟೆ ವಿಶ್ವಮಾನ್ಯತೆ ಪಡೆದಿತ್ತು. ರಾಜವೈಭವಗಳು ಮರೆಯಾದಂತೆ ಇದು ತನ್ನ ಅಸ್ಥಿತ್ವ ಕಳೆದುಕೊಂಡು ಇಂದು ಸಣ್ಣ ಜಟ್ಟಿಯಾಗಿ ಉಳಿದಿದೆ. ಆದರೆ ಇಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯ ವಿಶೇಷವಾಗಿದ್ದು, ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿ ಬೆಳೆಯಲಿದೆ.
ಸುಂದರ ಪ್ರದೇಶ
ಸೀತಾನದಿ ಹಂಗಾರಕಟ್ಟೆಯ ಅಳಿವೆಯ ಮೂಲಕ ಸಮುದ್ರ ಸೇರುವ ನದಿ-ಕಡಲುಗಳ ಸಂಗಮ ದೃಶ್ಯ ಇಲ್ಲಿ ಕಾಣಸಿಗುತ್ತದೆ. ಮೂರು ಕಡೆ ಜಲರಾಶಿ, ಪ್ರಶಾಂತ ವಾತಾವರಣ ಪ್ರವಾಸಿಗರಿಗೆ ಅತ್ಯಂತ ಖುಷಿ ನೀಡುತ್ತದೆ. ಬೋಟ್ ಹಾಗೂ ದೋಣಿಗಳು ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಲು ಹಾಗೂ ಮೀನುಗಾರಿಕೆ ಮುಗಿದ ಮೇಲೆ ಹಂಗಾರಕಟ್ಟೆ, ಕೋಡಿಬೆಂಗ್ರೆ ಜಟ್ಟಿಯನ್ನು ತಲುಪಲು ಈ ಅಳಿವೆಯನ್ನು ಅವಲಂಬಿಸುತ್ತವೆ. ಈ ಎರಡು ಜಟ್ಟಿಗಳಲ್ಲಿ ಸದಾ ಕಾಲ ಹತ್ತಾರು ಬೋಟ್‌ಗಳು ಲಂಗರು ಹಾಕಿದ್ದು ಬಂದರಿನ ರೀತಿಯಲ್ಲೇ ಕಾರ್ಯನಿರ್ವಹಿಸುತ್ತದೆ. ಹಂಗಾರಕಟ್ಟೆಯಿಂದ ಪಕ್ಕದ ದ್ವೀಪ ಪ್ರದೇಶ ಕೋಡಿಬೆಂಗ್ರೆಗೆ ಪುಟ್ಟ ಬಾರ್ಜ್ ವ್ಯವಸ್ಥೆ ಇದ್ದು ಅಳಿವೆಯಲ್ಲಿ ಪ್ರಯಾಣಿಸುವುದು ರೋಚಕ ಅನುಭವ ನೀಡುತ್ತದೆ. ಕೋಡಿಬೆಂಗ್ರೆ ತಲುಪುತ್ತಿದ್ದಂತೆ ಸ್ವಲ್ಪದೂರದಲ್ಲೇ ಬೀಚ್ ಇದೆ. ಇಲ್ಲಿನ ತೆಂಗು-ಕಂಗುಗಳ ಸುಂದರ ಪ್ರದೇಶದಲ್ಲಿ ಕುಳಿತು ಸಂಜೆಯ ಸೂರ್ಯಾಸ್ತಮಾನದ ಸೊಬಗು ಕಣ್ತುಂಬಿಕೊಳ್ಳುವುದು ಅದ್ಬುತವಾದ ಅನುಭವ ನೀಡುತ್ತದೆ ಹಾಗೂ ಅಕ್ಕ-ಪಕ್ಕದಲ್ಲಿ ಹಡಗು ತಯಾರಿಕಾ ಕೇಂದ್ರಗಳು ಕೂಡ ಇದೆ.
ಬೇಕಾದ ಸೌಕರ್ಯಗಳು
ಪ್ರಮುಖವಾಗಿ ಇಲ್ಲಿನ ಎರಡು ಮೀನುಗಾರಿಕೆ ಜಟ್ಟಿಗಳು ಪುಟ್ಟ ಬಂದರಾಗಿ ಅಭಿವೃದ್ಧಿಗೊಂಡು ಮೀನುಗಾರಿಕೆ ವ್ಯವಹಾರಗಳು ಆರಂಭಗೊಂಡರೆ ಪ್ರಾದೇಶಿಕ ಹಾಗೂ ಪ್ರವಾಸಿ ತಾಣವಾಗಿ ಬೆಳೆಯಲು ಅನುಕೂಲವಾಗುತ್ತದೆ. ಇಲ್ಲಿನ ಅಳಿವೆಯಲ್ಲಿ ಹೂಳು ತುಂಬಿರುವುದರಿಂದ ಬೋಟ್, ಬಾರ್ಜ್‌ಗಳ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಆದ್ದರಿಂದ ಅಳಿವೆಯ ಹೂಳೆತ್ತಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ. ಈ ಹಿಂದೆ ಇಲ್ಲಿಗೆ ದೊಡ್ಡ ಬಾರ್ಜ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿರ್ವಹಣೆ ಕಷ್ಟವಾದ ಹಿನ್ನೆಲೆಯಲ್ಲಿ ಅದನ್ನು ವಾಪಾಸು ಪಡೆದು ಮಧ್ಯಮ ಗಾತ್ರದ ಬಾರ್ಜ್ ನೀಡುವುದಾಗಿ ಹೇಳಲಾಗಿತ್ತು. ಆದರೆ ಈಗ ಸಣ್ಣ ಬಾರ್ಜ್ ನೀಡಲಾಗಿದೆ. ಮುಂದೆ ಬಸ್ಸು, ಕಾರು ಮುಂತಾದವುಗಳನ್ನು ಸಾಗಿಸಬಲ್ಲ ಮಧ್ಯಮ ಗಾತ್ರದ ಬಾರ್ಜ್ ಇಲ್ಲಿಗೆ ಅಗತ್ಯವಿದೆ. ದ್ವೀಪದಂತಿರುವ ಕೋಡಿಬೆಂಗ್ರೆ ಬೀಚ್ ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕಿದೆ. ಪ್ರವಾಸಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ವಿದ್ಯುತ್ ಸೌಲಭ್ಯ, ಪಾರ್ಕ್‌ಗಳ ಅಭಿವೃದ್ಧಿ ಅಗತ್ಯವಿದೆ. ಸರಕಾರದ ವತಿಯಿಂದ ಹೌಸ್ ಬೋಟ್‌ಗಳ ವ್ಯವಸ್ಥೆ ಮಾಡಿದರೆ ಇನ್ನೂ ಅನುಕೂಲವಾಗಲಿದೆ. ಮೂಲಸೌಕರ್ಯಗಳನ್ನು ಒದಗಿಸಿದಲ್ಲಿ ಹಂಗಾರಕಟ್ಟೆ-ಕೋಡಿಬೆಂಗ್ರೆ ಪ್ರದೇಶ ರಾಜ್ಯದ ಉತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಇಲ್ಲಿಗೆ ಭೇಟಿ ನೀಡಿದ್ದು ಕೇರಳ, ಗೋವಾದ ಬೀಚ್‌ಗಳಿಗೆ ಭೇಟಿ ನೀಡಿದಷ್ಟು
ಖುಷಿ ನೀಡಿದೆ. ಅದರಲ್ಲೂ ಬಾರ್ಜ್‌ಯಾನ ರೋಚಕ ಅನುಭವ ನೀಡುತ್ತದೆ. ಇಷ್ಟು ಸುಂದರವಾದ ಪ್ರದೇಶದ ಕುರಿತು ಪ್ರವಾಸಿಗರಿಗೆ ಮಾಹಿತಿ ಇಲ್ಲದಿರುವುದು ಹಾಗೂ ಅಭಿವೃದ್ಧಿಗೊಳ್ಳದಿರುವುದು ಬೇಸರದ ಸಂಗತಿ.
-ರೋಶನ್ ಶೆಟ್ಟಿ ಮಂಗಳೂರು, ಪ್ರವಾಸಿಗ
ಅಗತ್ಯವಿರುವ ಮೂಲ ಸೌಕರ್ಯಗಳು
– ಅಳಿವೆಯ ಹೊಳೆತ್ತಿ ಸುಗಮವಾಗಿ ಬಾರ್ಜ್, ಬೋಟ್‌ಗಳ ಸಂಚಾರಕ್ಕೆ ಅನುವು
– ಮಧ್ಯಮ ಗಾತ್ರದ ಬಾರ್ಜ್ ವ್ಯವಸ್ಥೆ
– ಕೋಡಿ ಬೆಂಗ್ರೆ ಬೀಚ್‌ನ್ನು ಪ್ರವಾಸಿತಾಣವಾಗಿ ಅಭಿವೃದ್ಧಿ
ಹಂಗಾರಕಟ್ಟೆ, ಕೋಡಿಬೆಂಗ್ರೆ ಜಟ್ಟಿಯನ್ನು ಸಾರ್ವಕಾಲಿಕ ಬಂದರಾಗಿ ಅಭಿವೃದ್ಧಿ
– ಸರಕಾರದ ವತಿಯಿಂದಲೇ ಹೌಸ್ ಬೋಟ್ ವ್ಯವಸ್ಥೆ
ಆಸನ, ವಿಹಾರ ತಾಣ, ವಿದ್ಯುತ್, ಪಾರ್ಕ್ ಅಭಿವೃದ್ಧಿ, ಮುಂತಾದ ವ್ಯವಸ್ಥೆ
ರಾಜೇಶ್ ಗಾಣಿಗ ಅಚಾÉಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.