ಸ್ಲಿಂ ಆ್ಯಂಡ್ ಹೆಲ್ದೀ ಆಗಿರಬೇಕೇ? ಸ್ಕಿಪ್ಪಿಂಗ್ ಮಾಡಿ
Team Udayavani, Aug 11, 2019, 9:30 PM IST
ದಿನಾ ಜಿಮ್‌ಗೆ ಹೋಗೋದಿಕ್ಕೆ ಬೋರು. ಆದರೆ ಸ್ಲಿಂ ಆಗಿ ಸುಂದರವಾಗಿ ಕಾಣಬೇಕು ಎನ್ನುವ ಆಕಾಂಕ್ಷೆ ಮನದಲ್ಲಿ. ಆದ್ರೆ ಯಾವ ವ್ಯಾಯಾಮಕ್ಕೂ ನಮ್ಮನ್ನು ನಾವು ಒಗ್ಗಿಸಿಕೊಳ್ಳದೇ ಹೋದಲ್ಲಿ ದೇಹ ದಂಡನೆ ಹೇಗೆ ಸಾಧ್ಯ? ದೇಹದಲ್ಲಿ ತುಂಬುವ ಬೊಜ್ಜು ಕರಗಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೀರಾ.
ಅದಕ್ಕೆ ಸುಲಭೋಪಾಯ ಇಲ್ಲಿದೆ. ದಿನದ ಸುಮಾರು ಒಂದು ತಾಸನ್ನು ಸ್ಕಿಪ್ಪಿಂಗ್ ಮಾಡಲು ಮೀಸಲಿಡಿ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲಾಗುವ ಸಕರಾತ್ಮಕ ಪರಿಣಾಮಗಳಿಂದ ನಿಮಗೇ ಆಶ್ಚರ್ಯ ಉಂಟಾಗುತ್ತದೆ ಎನ್ನುವುದರಲ್ಲಿ ಸಂದೇಹ ಬೇಡ.
ಸ್ಕಿಪ್ಪಿಂಗ್‌ನಿಂದಾಗುವ ಉಪಯೋಗ
ಸ್ಕಿಪ್ಪಿಂಗ್ ಎಲ್ಲರಿಗೂ ಸುಲಭವಾಗಿ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳಬಹುದಾದ, ಎಲ್ಲರಿಗೂ ಚಿರಪರಿಚಿತವಾದ ಆಟ. ಕೈಕಾಲುಗಳ ಚಲನೆಯ ಕಾರಣದಿಂದ ರಕ್ತ ಪರಿಚಲನೆಯೂ ಸರಿಯಾಗಿ ಆಗುತ್ತದೆ. ಅಲ್ಲದೆ ರಕ್ತ ಪಂಪ್ ಮಾಡುವ ಹೃದಯಕ್ಕೂ ಇದು ಹೆಚ್ಚು ಉಲ್ಲಾಸ ತುಂಬುವ ಕೆಲಸವನ್ನು ಮಾಡುತ್ತದೆ. ದಿನಕ್ಕೆ ಸುಮಾರು ಒಂದು ಗಂಟೆಗಳಷ್ಟು ಕಾಲ ನಾವು ಸ್ಕಿಪ್ಪಿಂಗ್ ಮಾಡಿದೆವು ಎಂದಾದಲ್ಲಿ 1,074 ಕ್ಯಾಲರಿಗಳಷ್ಟು ಕೊಬ್ಬು ಕರಗಿಸುತ್ತದೆ. ಸ್ನಾಯುಗಳನ್ನು ದೃಢಪಡಿಸುವ ಜತೆಯಲ್ಲಿ ಮನಸ್ಸು ಹಗುರಾಗುವುದಕ್ಕೂ ಸ್ಕಿಪ್ಪಿಂಗ್ ಸಹಕಾರಿ.
ಆರಂಭದ ದಿನಗಳಲ್ಲಿ ಸ್ಕಿಪ್ಪಿಂಗ್ ನಮ್ಮನ್ನು ಆಯಾಸಗೊಳಿಸುವುದು ಸಾಮಾನ್ಯ. ಹಾಗೆಂದು ನಾವು ಆಗಲ್ಲಪ್ಪ ಎಂದು ಕೈಬಿಡಬಾರದು.
ಆರಂಭದಲ್ಲಿ ಕಾಲು ಗಂಟೆೆ, ಕೊಂಚ ದಿನಗಳ ಬಳಿಕ ಹೆಚ್ಚು ಸಮಯವನ್ನು ಇದಕ್ಕಾಗಿ ವಿನಿಯೋಗಿಸಿದಲ್ಲಿ , ಕೆಲವು ದಿನಗಳ ಬಳಿಕ ಇದು ನಮ್ಮ ಜೀವನದ ದೈನಂದಿನ ರೂಢಿಗಳಲ್ಲಿ ಸೇರಿ ಬಿಡುತ್ತದೆ . ಒಂದು ಸ್ಕಿಪ್ಪಿಂಗ್ ವೈರ್‌ಅನ್ನು ಖರೀದಿಸಿದರೆ ಸಾಕು, ನಮ್ಮ ದೇಹವನ್ನು ಸುಲಭವಾಗಿ ಫಿಟ್ ಆಂಡ್ ಫೈನ್ ಆಗಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತೇವೆ.
– ಭುವನ ಬಾಬು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.