ಕರಾವಳಿ ಅಪರಾಧ ಸುದ್ದಿಗಳು
Team Udayavani, Jul 22, 2019, 10:19 AM IST
ದೇರಳಕಟ್ಟೆ: ಸಹಾಯಕ ಪ್ರೊಫೆಸರ್ ನಿಗೂಢ ಸಾವು
ಉಳ್ಳಾಲ: ದೇರಳಕಟ್ಟೆಯ ಖಾಸಗಿ ದಂತ ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕರೊಬ್ಬರು ದೇರಳಕಟ್ಟೆಯ ಕ್ವಾಟ್ರಸ್‌ನಲ್ಲಿ ಅಸ್ವಾಭಾವಿಕವಾಗಿ ಸಾವನ್ನಪ್ಪಿರುವ ಘಟನೆ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಶಿರಸಿ ಮೂಲದ ಲಕ್ಷ್ಮಣ ಮಂಜುನಾಥ ಅವರ ಪುತ್ರ ಡಾ| ವಾಗೇಶ್ ಕುಮಾರ್(35) ಸಾವನ್ನಪ್ಪಿದವರು. ಓರಲ್ ರೇಡಿಯೋಲಾಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದ ಅವರು ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಿದ್ದು, ಸಂಜೆ ವೇಳೆ ಕ್ವಾಟ್ರಸ್‌ಗೆ ವಾಪಸಾಗಿದ್ದರು. ಶನಿವಾರ ಕಾಲೇಜಿಗೆ ರಜೆ ಇದ್ದು, ಬೆಳಗ್ಗೆ ಆಸ್ಪತ್ರೆಯ ಸಿಬಂದಿ ಶುಚಿಗೊಳಿಸಲು ಬಂದಾಗಲು ಕ್ವಾಟ್ರಸ್ ಬಾಗಿಲು ತೆರೆದಿರಲಿಲ್ಲ. ಡಾ| ವಾಗೇಶ್ ಹೊರಗಡೆ ಹೋಗಿರಬೇಕು ಎಂದು ಸಂಶಯಿಸಿ ಅವರು ವಾಪಸಾಗಿದ್ದರು.
ಶನಿವಾರ ಸಂಜೆ ವಾಗೇಶ್ ಅವರ ತಂದೆ ಮಂಜುನಾಥ್ ಅವರು ಪುತ್ರ ಶುಕ್ರವಾರ ರಾತ್ರಿಯಿಂದ ಮೊಬೈಲ್ ಫೋನ್ ಕರೆ ಸ್ವೀಕರಿಸದಿರುವುದನ್ನು ಗಮನಿಸಿ ಆ ಬಗ್ಗೆ ಮಾಹಿತಿ ಸಹೋದ್ಯೋಗಿಗೆ ಕರೆ ಮಾಡಿ ತಿಳಿ ಸಿದ್ದರು. ಅದರಂತೆ ಸಹೋದ್ಯೋಗಿ ರವಿವಾರ ಬೆಳಗ್ಗೆ ಕ್ವಾಟ್ರಸ್‌ಗೆ ಬಂದಾಗ ಬಾಗಿಲು ಒಳಗಡೆ ಚಿಲಕ ಹಾಕಲಾಗಿತ್ತು. ತತ್‌ಕ್ಷಣವೇ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆ ಬಳಿಕ ಸೆಕ್ಯುರಿಟಿ ಸಿಬಂದಿ ಹಾಗೂ ಉಳ್ಳಾಲ ಪೊಲೀಸರು ಬಾಗಿಲು ಒಡೆದು ನೋಡಿದಾಗ ವಾಗೇಶ್ ಮೃತದೇಹ ಬಾಯಿಯಲ್ಲಿ ನೊರೆ ಕಾರಿದ ಸ್ಥಿತಿಯಲ್ಲಿ ಮಂಚದ ಮೇಲೆ ಕಂಡು ಬಂತು. ಸಾವಿನ ಕಾರಣ ಮರಣೋತ್ತರ ಪರೀಕ್ಷೆಯ ವರದಿಯಿಂದಷ್ಟೆ ಸ್ಪಷ್ಟವಾಗಬೇಕಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*
ಸರಕಾರಿ ಬಸ್ಸಿನಲ್ಲಿ ದನದ ಮಾಂಸ ಸಾಗಾಟ ಯತ್ನ: ನಿರ್ವಾಹಕ ಸೆರೆ
ಪುತ್ತೂರು: ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲೇ ದನದ ಮಾಂಸ ಸಾಗಾಟದ ಪ್ರಕರಣ ಪುತ್ತೂರಿನಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಹರಿಹರ ಬಾಳುಗೋಡು ಬಸ್ಸಿನಲ್ಲಿ ಮಾಂಸ ಪತ್ತೆಯಾಗಿದ್ದು, ನಿರ್ವಾಹಕ ಬೆಳಗಾವಿಯ ಪಶುವಾಪುರ ನಿವಾಸಿ ಸುನಿಲ್ (44) ಬಂಧಿತ ಆರೋಪಿ. ಬಸ್ಸಿನ ಹಿಂಬದಿಯ ಸೀಟಿನ ಅಡಿಯಲ್ಲಿಟ್ಟಿದ್ದ 9 ಕೆ.ಜಿ. ದನದ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರಿನಿಂದ ಹರಿಹರ ಬಾಳುಗೋಡಿಗೆ ಬೆಳಗ್ಗೆ 6.30ಕ್ಕೆ ಹೊರಟ ಬಸ್ಸಿನ ಲ್ಲಿ ದನದ ಮಾಂಸ ಇರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ಗಡಿಪಿಲ ಸಮೀಪ ಸುಮಾರು 7 ಗಂಟೆಗೆ ತಪಾಸಣೆಗೆ ನಡೆಸಿದರು. ಈ ವೇಳೆ ಬಸ್ಸಿನ ಹಿಂಬದಿಯ ನಿರ್ವಾಹಕನ ಸೀಟ್ ಬಳಿ ಇದ್ದ ಗೋಣಿ ಚೀಲದಲ್ಲಿ ದನದ ಮಾಂಸ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.