![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 27, 2019, 5:32 AM IST
ಮಹಾನಗರ: ಇದು ಮಂಗಳೂರು ನಗರಕ್ಕೆ ತಿಲಕ ಇಟ್ಟಂತಿರುವ ಕ್ಷೇತ್ರ. ಪ್ರಮುಖ ರಸ್ತೆಗಳಿಗೆ ಫುಟ್‌ಪಾತ್ ನಿರ್ಮಾಣ ಕಾಮಗಾರಿ ಕೆಲವು ಕಡೆ ಪೂರ್ತಿಗೊಂಡಿದೆ ಹಾಗೂ ಇನ್ನೂ ಕೆಲವು ಕಡೆ ಕೆಲಸ ಆರಂಭವಾಗಿದ್ದು, ನಡೆಯುತ್ತಿದೆ.
ಹಂಪನಕಟ್ಟೆ ಪ್ರದೇಶ, ಸೆಂಟ್ರಲ್ ರೈಲು ನಿಲ್ದಾಣ, ರೈಲ್ವೇ ಕಾಲನಿ, ವೆನಲಾಕ್ ಆಸ್ಪತ್ರೆ, ಕೆ.ಎಂ.ಸಿ. ಆಸ್ಪತ್ರೆ, ಬಾವುಟಗುಡ್ಡೆಯ ಠಾಗೋರ್ ಪಾರ್ಕ್, ಸಂತ ಅಲೋಶಿಯಸ್ ಕಾಲೇಜು ಚಾಪೆಲ್, ಜಿಲ್ಲಾ ನ್ಯಾಯಾಲಯ ಕಟ್ಟಡ ಸಂಕೀರ್ಣ, 300 ವರ್ಷಕ್ಕೂ ಅಧಿಕ ಚರಿತ್ರೆ ಇರುವ ಮಿಲಾಗ್ರಿಸ್ ಚರ್ಚ್, ಒಂದೂವರೆ ಶತಮಾನ ದಾಟಿದ ವಿ.ವಿ. ಕಾಲೇಜು, ಮೊದಲಾದ ಪ್ರಮುಖ ತಾಣಗಳನ್ನು ಒಡಲಲ್ಲಿ ಇರಿಸಿಕೊಂಡಿರುವ ಮನಪಾ ಕ್ಷೇತ್ರ ಕೋರ್ಟ್ ವಾರ್ಡ್.
ಅತ್ತಾವರ ಮೆಸ್ಕಾಂ ಕಚೇರಿ, ಆದಾಯ ತೆರಿಗೆ ಇಲಾಖೆ ಕಚೇರಿ ಕಟ್ಟಡ ಸಂಕೀರ್ಣ, ಪಾಂಡೇಶ್ವರ ಅಗ್ನಿ ಶಾಮಕ ಠಾಣೆ, ರೈಲ್ವೇ ಪೊಲೀಸ್ ಠಾಣೆ, ನಗರ ಕೇಂದ್ರ ಗ್ರಂಥಾಲಯ, ಕಾರ್ನಾಡು ಸದಾಶಿವ ರಾವ್ ಸ್ಮಾರಕ ಟ್ರಸ್ಟ್ ಕಟ್ಟಡ ಮತ್ತಿತರ ಸರಕಾರಿ ಕಚೇರಿಗಳು, ಸಂತ ಅಲೋಶಿಯಸ್ ಕಾಲೇಜು, ತಾಂತ್ರಿಕ ತರಬೇತಿ ಸಂಸ್ಥೆ, ಮಿಲಾಗ್ರಿಸ್ ಕಾಲೇಜು, ಚಿನ್ಮಯಾ ಶಾಲೆ ಮತ್ತು ಕಾಲೇಜು, ಅತ್ತಾವರ ಸರೋಜಿನಿ ಕುಶೆ ಶಾಲೆ ಮತ್ತು ಕಾಲೇಜು, ವಿ.ವಿ. ಕಾಲೇಜು, ಬಲ್ಮಠ ಸರಕಾರಿ ಕಾಲೇಜು, ಕಸ್ತೂರ್ಬಾ ಮೆಡಿಕಲ್ ಮತ್ತು ಡೆಂಟಲ್ ಕಾಲೇಜು, ಆರ್ಯ ಸಮಾಜ, ಬಾವುಟಗುಡ್ಡೆಯ ಈದ್ಗಾ ಪ್ರಾರ್ಥನಾ ಮಂದಿರ, ಅತ್ತಾವರ ಬಬ್ಬು ಸ್ವಾಮಿ ದೈವಸ್ಥಾನ ಈ ವಾರ್ಡ್‌ನ ಪ್ರಮುಖ ಶೈಕ್ಷಣಿಕ ಮತ್ತು ಧಾರ್ಮಿಕ ಕೇಂದ್ರಗಳು ಈ ವ್ಯಾಪ್ತಿಯಲ್ಲಿವೆ.
ಬಾವುಟಗುಡ್ಡೆಯ ಠಾಗೋರ್ ಪಾರ್ಕ್ ಮತ್ತು ಪುರಭವನ ಎದುರಿನ ಗಾಂಧಿ (ರಾಜಾಜಿ) ಪಾರ್ಕ್ ಸಹಿತ ಎರಡು ಪ್ರಮುಖ ಐತಿಹಾಸಿಕ ಉದ್ಯಾನವನಗಳಿವೆ. ಅತ್ತಾವರ ಕಟ್ಟೆಯ ಬಳಿ ಕೂಡ ಪಾರ್ಕ್ ಅಭಿವೃದ್ಧಿ ಪಡಿಸಲಾಗಿದೆ. ಮಿಲಾಸ್ ಚರ್ಚ್ ಬಳಿ ಫುಟ್‌ಪಾತ್ ನಿರ್ಮಾಣ ಆಗ ಬೇಕಾಗಿದೆ. ಕೆಲವು ಕಡೆ ಬಸ್ ಬೇ, ಬಸ್ ವೈಟಿಂಗ್ ಶೆಲ್ಟರ್ ಇಲ್ಲದಿರುವುದು ಈ ವಾರ್ಡ್‌ನ ಪ್ರಮುಖ ಕೊರತೆಯಾಗಿದೆ. ನಗರದ ವಿವಿಧ ವಾರ್ಡ್‌ಗಳಲ್ಲಿ ಇರುವಂತೆ ಒಳ ಚರಂಡಿ ಅವ್ಯವಸ್ಥೆಯೂ ಈ ವಾರ್ಡ್‌ನಲ್ಲಿಯೂ ಇದೆ.
ರಾಜಕೀಯ ಹಿನ್ನೋಟ
ವಾರ್ಡ್ ನಂ. 40- ಕೋರ್ಟ್ ವಾರ್ಡ್‌ನಲ್ಲಿ ಎ. ಸಿ. ವಿನಯರಾಜ್ ನಿಕಟಪೂರ್ವ ಕಾರ್ಪೊರೇಟರ್. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಿಂತ 117 ಮತಗಳ ಅಂತರದಿಂದ ಕಾಂಗ್ರೆಸ್ ಜಯಗಳಿಸಿತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಈ ವಾರ್ಡ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಈ ಬಾರಿಯೂ ಅದೇ ಮೀಸಲಾತಿ ಮುಂದುವರಿದಿದೆ. ಹಾಗಾಗಿ ಈ ಬಾರಿಯೂ ಅವರಿಗೆ ಸ್ಪರ್ಧಿಸಲು ಅವಕಾಶವಿದೆ.
ಪದವು ಸೆಂಟ್ರಲ್ ವಾರ್ಡ್
ಭೌಗೋಳಿಕ ವ್ಯಾಪ್ತಿ: ಪಿ.ವಿ.ಎಸ್. ಜಂಕ್ಷನ್‌ನಿಂದ ಬಂಟ್ಸ್ ಹಾಸ್ಟೆಲ್, ಆರ್ಯ ಸಮಾಜ ಕ್ರಾಸ್ ರೋಡ್, ಕಲೆಕ್ಟರ್ಗೇಟ್, ಜ್ಯೋತಿ ಜಂಕ್ಷನ್, ಬಲ್ಮಠ ನ್ಯೂ ರೋಡ್, ಅವೇರಿ ಜಂಕ್ಷನ್, ಸ್ಟರಕ್ ರೋಡ್, ಅತ್ತಾವರ ಕಟ್ಟೆ, ಸರೋಜಿನಿ ಕುಶೆ ಶಾಲೆ, ಮೆಸ್ಕಾಂ ಕಚೇರಿ- ರೈಲು ನಿಲ್ದಾಣ, ರೈಲ್ವೇ ಕಾಲನಿ, ಪಾಂಡೇಶ್ವರ ಅಗ್ನಿ ಶಾಮಕ ಠಾಣೆ, ಗಾಂಧಿ ಪಾರ್ಕ್, ಕ್ಲಾಕ್ ಟವರ್- ಹಂಪನಕಟ್ಟೆ ಜಂಕ್ಷನ್, ಕೆ.ಎಸ್.ಆರ್. ರಾವ್ ರಸ್ತೆ, ಪಿ.ವಿ.ಎಸ್. ಜಂಕ್ಷನ್.
ಒಟ್ಟು ಮತದಾರರು 6000
ನಿಕಟಪೂರ್ವ ಕಾರ್ಪೊರೇಟರ್-ಎ.ಸಿ. ವಿನಯರಾಜ್ (ಕಾಂಗ್ರೆಸ್)
2013ರ ಚುನಾವಣೆ ಮತ ವಿವರ
ಎ. ಸಿ. ವಿನಯರಾಜ್ (ಕಾಂಗ್ರೆಸ್): 859
ರಂಗನಾಥ ಕಿಣಿ (ಬಿಜೆಪಿ): 742
ಸುನಿಲ್ ಕುಮಾರ್ ಬಜಾಲ್ (ಸಿಪಿಎಂ): 227
ವಿಶ್ವಾಸ್ ಕೆ.ಎಸ್.ಸಿಂಗ್ (ಪಕ್ಷೇತರ):32
ಲಿಂಕನ್ ಬ್ರಾಯನ್ ಡಿ’ಸೋಜಾ (ಪಕ್ಷೇತರ):27
ಕೆ. ನಾಗೇಶ್ ಬಲ್ಮಠ (ಜೆಡಿಎಸ್): 32
- ಹಿಲರಿ ಕ್ರಾಸ್ತಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.