![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 29, 2019, 4:45 AM IST
ಪೊಳಲಿಯ ಕಿಂಡಿ ಅಣೆಕಟ್ಟಿನ ಅಡಿಪಾಯ ಕಾಮಗಾರಿ ಪೂರ್ಣಗೊಂಡಿದೆ.
ಬಂಟ್ವಾಳ: ಕರಾವಳಿ ಜಿಲ್ಲೆಗಳ ಪಶ್ಚಿಮವಾಹಿನಿ ಯೋಜನೆಯ ಮೂಲಕ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರು ಗೊಂಡಿರುವ ಮೂರು ಕಿಂಡಿ ಅಣೆಕಟ್ಟು (ವೆಂಟೆಡ್ ಡ್ಯಾಂ)ಗಳ ಪೈಕಿ ಈಗಾಗಲೇ ಎರಡು ಅಣೆಕಟ್ಟುಗಳ ಅಡಿಪಾಯ ಹಂತ ಪೂರ್ಣಗೊಂಡಿದ್ದು, ಇದೀಗ ಕಪೆì ಗ್ರಾಮದ ದೋಟದ ಕಿಂಡಿ ಅಣೆಕಟ್ಟಿನ ಕಾಮಗಾರಿಯೂ ಪ್ರಾರಂಭಗೊಂಡಿದೆ.
ಪಶ್ಚಿಮಾಭಿಮುಖವಾಗಿ ಹರಿದು ಸಮುದ್ರ ಸೇರುವ ಕರಾವಳಿ ಜಿಲ್ಲೆಗಳ (ದ.ಕ., ಉಡುಪಿ, ಉ.ಕ.) ನದಿಗಳಿಗೆ ಕಿಂಡಿ ಅಣೆಕಟ್ಟು ನಿರ್ಮಿಸಿ ಕೃಷಿ ಹಾಗೂ ಕುಡಿಯುವ ನೀರು ಒದಗಿಸುವ ಜತೆಗೆ ಅಂತರ್ಜಲ ಮಟ್ಟದ ವೃದ್ಧಿಯ ಉದ್ದೇಶದಿಂದ ರಾಜ್ಯ ಸರಕಾರದ ಸಣ್ಣ ನೀರಾವರಿ ಇಲಾಖೆಯು ಪಶ್ಚಿಮವಾಹಿನಿ ಯೋಜನೆಯ ಮೂಲಕ ಕಿಂಡಿ ಅಣೆಕಟ್ಟುಗಳ ನಿರ್ಮಾಣದ ಕಾರ್ಯವನ್ನು ನಿರ್ವಹಿಸುತ್ತಿದೆ.
11 ತಿಂಗಳಲ್ಲಿ ಅಸಾಧ್ಯ
ಈ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಸರಕಾರವು ಕಾಮಗಾರಿ ಆರಂಭಗೊಂಡು 11 ತಿಂಗಳ ಗಡುವನ್ನು ನೀಡಿದೆ. ಆದರೆ ಇಲ್ಲಿನ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿರುವಾಗ 11 ತಿಂಗಳಲ್ಲಿ ಕಾಮಗಾರಿ ಮುಗಿಸುವುದು ಅಸಾಧ್ಯವಾಗಿದೆ. ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇರುವ ಬೇಸಗೆಯಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ. ಅನಂತರ ಮಳೆಗಾಲ ಪ್ರಾರಂಭವಾಗಿ ನೀರು ಹೆಚ್ಚಳಗೊಂಡು ಕಾಮಗಾರಿ ಸ್ಥಗಿತಗೊಳಿಸಬೇಕಾಗುತ್ತಿದೆ. ಹೀಗಾಗಿ ಈ ಭಾಗದಲ್ಲಿ ಕಿಂಡಿ ಅಣೆಕಟ್ಟಿನ ಯೋಜನೆ ಪೂರ್ಣಗೊಳ್ಳಬೇಕಾದರೆ ಕನಿಷ್ಠ 2 ವರ್ಷಗಳಾದರೂ ಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಸಿವಿಲ್ ಕಾಮಗಾರಿ ವಿಳಂಬ
ಕಿಂಡಿ ಅಣೆಕಟ್ಟು ನಿರ್ಮಾಣದಲ್ಲಿ ಸಿವಿಲ್ ಕಾಮಗಾರಿಗಳು ವಿಳಂಬವಾಗುತ್ತವೆ. ನದಿ ಯಲ್ಲಿ ನೀರಿರುವ ವೇಳೆ ಯಂತ್ರಗಳನ್ನು ಇಳಿಸುವುದು ಕಷ್ಟವಾಗಿರುವುದರಿಂದ ವಿಳಂಬ ಅನಿವಾರ್ಯವಾಗುತ್ತದೆ. ಅಡಿಪಾಯ ಪೂರ್ಣಗೊಂಡು ಪಿಲ್ಲರ್ ಕಾಮಗಾರಿ ಮುಗಿದರೆ ಮೆಕ್ಯಾನಿಕಲ್ ಗೇಟ್‌ಗಳ ಕಾಮಗಾರಿ ವೇಗ ಪಡೆಯುತ್ತದೆ. ಪ್ರಸ್ತುತ ಈ ಕಾಮಗಾರಿಯಲ್ಲಿ ವರ್ಟಿಕಲ್ ಲಿಫ್ಟ್ ಗೇಟ್‌ಗಳ ಅಳವಡಿಕೆ ನಡೆಯಬೇಕಿದೆ.
ಒಟ್ಟು 34.50 ಕೋ. ರೂ. ಗಳಲ್ಲಿ 3 ಯೋಜನೆ
ಬಂಟ್ವಾಳ ಕ್ಷೇತ್ರ ವ್ಯಾಪ್ತಿಯ ಕರಿಯಂಗಳ ಗ್ರಾಮ ಪೊಳಲಿಯಲ್ಲಿ 12.50 ಕೋ. ರೂ., ಸಂಗಬೆಟ್ಟು ಗ್ರಾಮದ ಪುಚ್ಚಮೊಗರಿನಲ್ಲಿ 7 ಕೋ. ರೂ. ಹಾಗೂ ಕಪೆì ಗ್ರಾಮದ ದೋಟದಲ್ಲಿ 15 ಕೋ. ರೂ. ಸಹಿತ ಒಟ್ಟು 34.50 ಕೋ. ರೂ.ಗಳಲ್ಲಿ ಮೂರು ಯೋಜನೆಗಳು ಮಂಜೂರುಗೊಂಡಿದ್ದವು.
ಮೂರು ಕಿಂಡಿ ಅಣೆಕಟ್ಟುಗಳನ್ನೂ ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿದ್ದು, ಅವುಗಳಲ್ಲಿ ಪೊಳಲಿ ಹಾಗೂ ಪುಚ್ಚಮೊಗರಿನ ಕಾಮಗಾರಿಗಳು ಈ ಹಿಂದೆಯೇ ಪ್ರಾರಂಭಗೊಂಡು ಅಡಿಪಾಯದ ಹಂತ ಪೂರ್ಣಗೊಂಡಿದ್ದರೆ, ದೋಟದ ಕಾಮಗಾರಿಯು ಈಗಷ್ಟೇ ಆರಂಭವಾಗಿದೆ. ಸುಮಾರು 4 ಮೀ. ನೀರು ನಿಲ್ಲಿಸುವ ಯೋಜನೆಗಳು ಇದಾಗಿದ್ದು, ಪೊಳಲಿಯಲ್ಲಿ 171 ಮೀ., ಪುಚ್ಚಮೊಗರಿನಲ್ಲಿ 125 ಮೀ. ಹಾಗೂ ಕಪೆì ದೋಟದಲ್ಲಿ 375 ಮೀ.ಗಳ ಅಣೆಕಟ್ಟು ನಿರ್ಮಾಣವಾಗಲಿದೆ. ಇವುಗಳಲ್ಲಿ ಕಪೆì ದೋಟದ ಯೋಜನೆಯ ಉದ್ದ ಹೆಚ್ಚಿರುವುದರಿಂದ ಅದಕ್ಕೆ ಹೆಚ್ಚು ಅನುದಾನವನ್ನು ಮೀಸಲಿರಿಸಲಾಗಿದೆ.
ನೀರಿನ ಮಟ್ಟ ಹೆಚ್ಚಿದೆ
ಬಂಟ್ವಾಳ ಕ್ಷೇತ್ರದ ಮೂರು ಯೋಜನೆಗಳ ಪೈಕಿ 2 ಯೋಜನೆಗಳ ಅಡಿಪಾಯ ಪೂರ್ಣಗೊಂಡಿದ್ದು, ಮಳೆಗಾಲ ಮುಗಿಯುತ್ತಿದ್ದಂತೆ ಕಪೆì ದೋಟದ ಕಾಮಗಾರಿ ಪ್ರಾರಂಭಗೊಂಡಿದೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವಾಗ ಕಾಮಗಾರಿ ನಡೆಸುವುದು ಅಸಾಧ್ಯ. ನೀರು ಕಡಿಮೆಯಾಗುತ್ತಿದ್ದಂತೆ ಕಾಮಗಾರಿ ವೇಗವನ್ನು ಪಡೆಯಲಿದೆ.
– ಶಿವಪ್ರಸನ್ನ, ಸಹಾಯಕ, ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ.
- ಕಿರಣ್ ಸರಪಾಡಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.