ಇತಿಹಾಸ ಪುಟ ಸೇರುವ ಆತಂಕದಲ್ಲಿ ಬೆಂದ್ರ್ತೀರ್ಥ!
ತೀರ್ಥ ಕೆರೆಯ ತಡೆಗೋಡೆಯಲ್ಲಿ ಬಿರುಕು, ಕುಸಿದು ಬೀಳುವ ಸ್ಥಿತಿ
Team Udayavani, Oct 25, 2019, 4:23 AM IST
ಬೆಟ್ಟಂಪಾಡಿ: ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಇರ್ದೆ ಗ್ರಾಮದ ದಕ್ಷಿಣ ಭಾರತ ಏಕೈಕ ಬಿಸಿ ನೀರಿನ ತಾಣ ಬೆಂದ್ರ ತೀರ್ಥ ಯಾವುದೇ ನಿರ್ವಹಣೆ ಇಲ್ಲದೆ ಅಧಿಕಾರಿ ವರ್ಗ, ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಇತಿಹಾಸದ ಪುಟ ಸೇರುವ ಆತಂಕ ಭಕ್ತ ಜನರಲ್ಲಿದೆ.
ಬೆಂದ್ರ್ ತೀರ್ಥದ ಬಗ್ಗೆ ಭಾರತೀಯ ಪುರಾತತ್ವ ಇಲಾಖೆ ಅಧ್ಯಯನ ನಡೆಸಿದ್ದು, ದಕ್ಷಿಣ ಭಾರತದಲ್ಲಿರುವ ಏಕೈಕ ನೈಸರ್ಗಿಕ ಬಿಸಿ ನೀರಿನ ಚಿಲುಮೆ ಎಂದು ಗುರುತಿಸಿದೆ. ತುಳು ಭಾಷೆಯಲ್ಲಿ “ಬೆಂದ್ರ್’ ಎಂದರೆ ಬಿಸಿ ಎಂದರ್ಥ. ಬೆಂದ್ರ್ ತೀರ್ಥ ಪುತ್ತೂರು ತಾಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ.
ಬೆಂದ್ರ್ ತೀರ್ಥದಲ್ಲಿ ಹಲವು ವರ್ಷಗಳ ಹಿಂದೆ ಗಂಟೆಗೆ 1,350ರಿಂದ 4,600 ಲೀಟರ್‌ನಷ್ಟು ನೀರು ಚಿಮ್ಮುತ್ತದೆ. ಇದರ ಉಷ್ಣಾಂಶ 99 ಡಿಗ್ರಿ 106 ಡಿಗ್ರಿ ಫಾರನ್ ಹೀಟ್. ಇದು ಗಂಧಕದ ವಾಸನೆಯಿಂದ ಕೂಡಿದ ಈ ನೀರಿನಲ್ಲಿ ಅಧಿಕ ಮಟ್ಟದ ಖನಿಜಾಂಶಗಳನ್ನು ಹೊಂದಿರುವುದಲ್ಲದೆ ಈ ಕೆರೆಯಲ್ಲಿ ಸ್ನಾನ ಮಾಡಿದರೆ ಕೆಲವೊಂದು ಚರ್ಮರೋಗಗಳು ವಾಸಿಯಾಗುತ್ತದೆ ಎಂದು ಆಸ್ತಿಕರಲ್ಲಿ ಇನ್ನೂ ನಂಬಿಕೆ ಉಳಿದಿದೆ.
ಧಾರ್ಮಿಕ ಕ್ಷೇತ್ರ
ಇರ್ದೆ ಗ್ರಾಮದಲ್ಲಿ ವಿಷ್ಣುಮೂರ್ತಿ ದೇವಸ್ಥಾನ ಇದೆ. ಹಿಂದೆ ಕಣ್ವ ಮುನಿಗಳ ಶಿಷ್ಯರು ಈ ಭಾಗದ ದಟ್ಟ ಕಾಡುಗಳಲ್ಲಿ ಸಂಚರಿಸುವಾಗ ಹುಲಿಗಳು ಇತರೆ ಪ್ರಾಣಿಗಳೊಂದಿಗೆ ಸಾಮರಸ್ಯ ಬದುಕುತ್ತಿರುವುದನ್ನು ನೋಡಿ ಅಚ್ಚರಿ ಪಟ್ಟಿದ್ದರು ಎಂಬುದು ಇತಿಹಾದ ತಿಳಿಸುತ್ತದೆ. ಈ ಪ್ರದೇಶದಲ್ಲಿ ಜಾನು ವಾರುಗಳು ಹೆಚ್ಚು ಕಂಡು ಬರುತ್ತಿದ್ದವು. ಆದರಿಂದ ಗೋಪಾಲ ಕ್ಷೇತ್ರ ಎಂದು ಕರೆದಿದ್ದರು. ತೀರ್ಥ ಪ್ರದೇಶದ ಸಮೀಪ ದಲ್ಲಿ ಸೀರೆ ನದಿ ಉಕ್ಕಿ ಹರಿಯುತ್ತಿದೆ. ಬೆಂದ್ರ್ ತೀರ್ಥವನ್ನು ದೇವಸ್ಥಾನದಲ್ಲಿ ತೀರ್ಥವಾಗಿ ಬಳಸಲಾಗುತ್ತಿದೆ. ಬೆಂದ್ರ್ ತೀರ್ಥ ಪ್ರದೇಶದಲ್ಲಿ ಅಶ್ವತ್ಥ ಮರ ಮತ್ತು ಅರಳೀ ಮರ ಇರುವುದು ಧಾರ್ಮಿಕತೆಯ ಸಂಕೇತವಾಗಿದೆ. ಸೋಣ ಅಮಾವಾಸ್ಯೆ ದಿನ ದೇವಸ್ಥಾನದ ಅರ್ಚಕರು ವಿಶೇಷ ಪೂಜೆ ನಡೆಸಿದ ಅನಂತರ ತೀರ್ಥದ ಕೆರೆಯಲ್ಲಿ ಆಸ್ತಿಕರು ತೀರ್ಥ ಸ್ನಾನ ಮಾಡುತ್ತಾರೆ. ನೂರಾರು ಭಕ್ತರು ತೀರ್ಥ ಸ್ನಾನ ಮಾಡಿ ಪುನೀತರಾಗುತ್ತಾರೆ.
ಬೆಂದ್ರ ತೀರ್ಥ ಪ್ರದೇಶದಲ್ಲಿ ವಸ್ತ್ರ ಬದಲಾಯಿಸುವ ಕೊಠಡಿಗಳು, ಶೌಚಾಲಯಗಳು ಮತ್ತು ಪ್ರವಾಸಿಗಳಿಗೆ ಅಡುಗೆ ಸಹಾಯಕವಾಗುವ ಕೊಠಡಿ ಇದೆ. ಇವು ನಿರ್ವಹಣೆ ಇಲ್ಲದೆ ಬಾಗಿಲುಗಳು ತೆರೆದು ಮುರಿದು ಹೋಗುವ ಸ್ಥಿತಿಯಲ್ಲಿವೆ. ಹಲವು ವರ್ಷಗಳ ಹಿಂದೆ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ನೂತನ ಕಟ್ಟಡದ ಸುತ್ತ ಪೊದೆಗಳು ತುಂಬಿದ್ದು, ಬಳಕೆಗೆ ಸಿಗದೆ ಅನಾಥವಾಗಿದೆ. ಅಭಿವೃದ್ಧಿ ಬಗ್ಗೆ ಶಾಸಕರು, ಉಸ್ತುವಾರಿ ಸಚಿವರು, ಸಂಸದರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕಾಳಜಿ ವಹಿಸಿ ಬೆಂದ್ರ್ ತೀರ್ಥವನ್ನು ಉಳಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇರ್ದೆ-ಬೆಂದ್ರ್ ತೀರ್ಥ ರಸ್ತೆ ಅಭಿವೃದ್ಧಿ ಆಗಲಿ
ಬೆಂದ್ರ್ ತೀರ್ಥವನ್ನು ಸಂಪರ್ಕಿಸುವ ಇರ್ದೆ ಸಮೀಪದಿಂದ ಪೇರಲ್ತಡ್ಕದ ವರೆಗೆ ಡಾಮರು ರಸ್ತೆ ಇದೆ. ಸುಮಾರು 2 ಕಿ.ಮೀ. ರಸ್ತೆ ನಾದುರಸ್ತಿಯಲ್ಲಿದೆ. ಈ ರಸ್ತೆಯ ಒಂದು ಭಾಗವನ್ನು ಕಳೆದ ವರ್ಷ ಶಾಸಕ ಸಂಜೀವ ಮಠಂದೂರು ಅವರ ಅನುದಾನದಿಂದ ಕಾಂಕ್ರೀಟ್ ಹಾಕಿ ಅಭಿವೃದ್ಧಿ ಮಾಡಲಾಗಿದೆ. ಪೂರ್ತಿ ರಸ್ತೆ ಅಭಿವೃದ್ಧಿ ಆಗಬೇಕಿದೆ.
ಬೆಂದ್ರ್ ತೀರ್ಥದಲ್ಲಿ ಬಿಸಿ ನೀರಿನ ತೀವ್ರತೆ ಇತ್ತೀಚಿನ ವರ್ಷಗಳಲ್ಲಿ ಇಳಿಕೆಯಾಗಿದೆ. ಹಲವು ವರ್ಷಗಳಿಂದ ವಿದೇಶಿ ಪ್ರವಾಸಿಗರು ಪ್ರವಾಸಿ ತಾಣ ವೀಕ್ಷಣೆಗೆ ಬರುತ್ತಿದ್ದಾರೆ. ಸ್ಥಳೀಯ ಪಂಚಾಯತ್ ಸದಸ್ಯರಾದ ರಕ್ಷಣ್ ರೈ, ಪ್ರಕಾಶ್ ರೈ ಬೈಲಾಡಿ ಕ್ಷೇತ್ರದ ಬಗ್ಗೆ ಆಂಗ್ಲ ಭಾಷೆಯಲ್ಲಿ ವಿವರಣೆ ಕೊಡುತ್ತಾರೆ. ಉತ್ತಮ ನಿರ್ವಹಣೆ ಇದ್ದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು. ಉಷ್ಣಾಂಶದ ಇಳಿಕೆ ಕಾರಣವಾದ ಅಂಶವನ್ನು ಅಧ್ಯಯನ ನಡೆಸಿ, ಹಿಂದಿನ ಉಷ್ಣಾಂಶಕ್ಕೆ ಮರಳಿ ತರುವಲ್ಲಿ ಅಧಿಕಾರಿಗಳು ಶ್ರಮಿಸಬೇಕಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಪ್ರವಾಸೋದ್ಯಮ ಇಲಾಖೆ ಯು ಬೆಂದ್ರ್ ತೀರ್ಥದ ಬಳಿಯೇ ಇರುವ ಸೀರೆ ನದಿಯಲ್ಲಿ ಬೋಟಿಂಗ್ ವ್ಯವಸ್ಥೆಗೂ ಅವಕಾಶವಿದೆ.
ಶಾಸಕರೊಂದಿಗೆ ಚರ್ಚೆ
ಬೆಂದ್ರ್ ತೀರ್ಥ ಅಭಿವೃದ್ಧಿ ತುರ್ತು ಆಗಬೇಕಾಗಿದೆ. ಪಂಚಾಯತ್ ಅನುದಾನ ಸಾಲದು. ಕ್ಷೇತ್ರವು ಅಭಿವೃದ್ಧಿ ಹೊಂದಿದರೆ ಪ್ರವಾಸಿ ಗರಿಗೆ ಅನುಕೂಲ ವಾಗಲಿದೆ. ಶಾಸಕ ಸಂಜೀವ ಮಠಂದೂರು ಅವರಲ್ಲಿ ಮಾತನಾಡಿ ಅಭಿವೃದ್ಧಿಗೊಳಿಸುವ ಬಗ್ಗೆ ಚಿಂತನೆ ಮಾಡಲಾಗುವುದು.
– ಬೇಬಿ ಜಯರಾಮ ಪೂಜಾರಿ, ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷರು
ನಿರ್ವಹಣೆಯೇ ಸಮಸ್ಯೆ
ಐದು ವರ್ಷಗಳ ಹಿಂದೆ 20 ಲಕ್ಷ ರೂ. ವೆಚ್ಚದ ಕಟ್ಟಡ ಕಾಮಗಾರಿ ಮುಗಿದಿದೆ. ನಿರ್ವಹಣೆಯ ಬಗ್ಗೆ ಗ್ರಾ.ಪಂ. ಮುತುವರ್ಜಿ ವಹಿಸುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ನಿರ್ವಹಣೆ ಸಾಧ್ಯವಾಗಿಲ್ಲ. ಸ್ಥಳೀಯ ಯುವಕ ಮಂಡಲ ನಿರ್ವಹಣೆಯ ಬಗ್ಗೆ ಆಸಕ್ತಿ ವಹಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಉದಯ ಶೆಟ್ಟಿ
ಪ್ರಭಾರ ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ದ.ಕ.
– ಮಾಧವ ನಾಯಕ್ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.