ತೊಡಿಕಾನ ದೇವರಗುಂಡಿ ಜಲಪಾತ ರಸ್ತೆಯ ಅಭಿವೃದ್ಧಿ ಎಂದು?

ಪಟ್ಟಿಯಲ್ಲಿ ಸೇರ್ಪಡೆಗೊಂಡಿಲ್ಲವೆಂದು ಪ್ರವಾಸೋದ್ಯಮ ಇಲಾಖೆಯಿಂದ ಮನವಿ ತಿರಸ್ಕಾರ

Team Udayavani, Oct 29, 2019, 4:14 AM IST

x-29

ಅಭಿವೃದ್ಧಿಗಾಗಿ ಕಾಯುತ್ತಿರುವ ದೇವರಗುಂಡಿ ರಸ್ತೆ.

ಅರಂತೋಡು: ಅನೇಕ ಪ್ರವಾಸಿಗರು, ಚಾರಣಿಗರು ನಡೆದಾಡುವ ತೊಡಿಕಾನ ಸಮೀಪದ ದೇವರ ಗುಂಡಿ ರಸ್ತೆ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಅಭಿವೃದ್ಧಿಗಾಗಿ ಕಾಯುತ್ತಿದೆ.

ದೇವರ ಗುಂಡಿ ಎಂದ ತತ್‌ಕ್ಷಣ ನೆನಪಾಗುವುದು ಇಲ್ಲಿಯ ಜಲಪಾತ. ಈ ಜಲಪಾತ ದೇವರ ಗುಂಡಿ ಜಲಪಾತ ಎಂದೇ ಈಗ ಪ್ರಸಿದ್ಧಿಯಾಗಿದೆ. ಜಲಪಾತ ನೋಡಲು ನೂರಾರು ಪ್ರವಾಸಿ ಪ್ರೇಮಿಗಳು, ಪ್ರಕೃತಿಪ್ರಿಯರು ಆಗಮಿಸುತ್ತಾರೆ. ಹೆಚ್ಚಿನವರು ದೇವರ ಗುಂಡಿ ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ನಡೆದುಕೊಂಡು ದೇವರ ಗುಂಡಿ ಜಲಪಾತದತ್ತ ಸಾಗುತ್ತಾರೆ. ದೇವರ ಗುಂಡಿಯ ತನಕ ಕಚ್ಚಾ ರಸ್ತೆ ಇದೆ. ಇದರಲ್ಲಿ ಎಲ್ಲ ವಾಹನಗಳು ಸಂಚರಿಸಲು ಅಸಾಧ್ಯ. ರಸ್ತೆ ಅಭಿವೃದ್ಧಿ ಮಾಡಿದರೆ ಹೆಚ್ಚಿನ ವಾಹನಗಳು ಜಲಪಾತದ ತನಕ ಸಂಚರಿಸಲಿವೆ. ಇದರಿಂದ ಪ್ರಕೃತಿ ಪ್ರೇಮಿಗಳು ಜಲಪಾತವನ್ನು ನೋಡಲು ಬಹುಬೇಗ ತಲುಪಬಹುದು. ಅಲ್ಲದೆ ಸಮಯದ ಉಳಿತಾಯವಾಗುತ್ತದೆ. ಜತೆಗೆ ವಯೋವೃದ್ಧರು ಕೂಡ ಜಲಪಾತ ನೋಡಲು ಸಾಧ್ಯವಾಗುತ್ತದೆ.

ಸ್ಥಳೀಯರಿಗೆ ಪೂರಕ
ಈ ರಸ್ತೆ ಅಭಿವೃದ್ಧಿಯಾದರೆ ಸ್ಥಳೀಯರಿಗೆ ತುಂಬಾ ಪ್ರಯೋಜನ ಇದೆ. ಈ ಭಾಗದಲ್ಲಿ ಹೆಚ್ಚಿನವರು ಪರಿಶಿಷ್ಟ ಪಂಗಡದ ಜನರೇ ವಾಸವಾಗಿದ್ದು, ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಅವರು ಅನೇಕ ವರ್ಷಗಳಿಂದ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಭಾಗದಿಂದ ಅನೇಕ ಮಕ್ಕಳು ಶಾಲಾ-ಕಾಲೇಜುಗಳಿಗೆ ಈ ರಸ್ತೆಯ ಮೂಲಕವೇ ತೆರಳುತ್ತಾರೆ.

ಧಾರ್ಮಿಕ ಹಿನ್ನೆಲೆ
ದೇವರ ಗುಂಡಿ ಜಲಪಾತ ಸುಳ್ಯ ಸೀಮೆ ದೇವಾಲಯವಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಧಾರ್ಮಿಕ ಹಿನ್ನೆಲೆಯಿದೆ. ದೇವರಗುಂಡಿಯಲ್ಲಿ ವಿಷ್ಣುವು ಮತ್ಸ್ಯರೂಪ ತಾಳಿದ ಸ್ಥಳ ಸೇರಿದಂತೆ ಇತರ ಧಾರ್ಮಿಕ ನಂಬಿಕೆಗಳು ಸ್ಥಳೀಯ ಜನರಲ್ಲಿವೆ.

ಇಲಾಖೆ ನಿರ್ಲಕ್ಷ್ಯ
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ಕಚೇರಿಯಿಂದ ತೊಡಿಕಾನ ದೇವಾಲಯ ಬಳಿಯ ದೇವರ (ಮಹಶೀರ್‌) ಮೀನು ಗುಂಡಿ ಹಾಗೂ ದೇವರಗುಂಡಿ ಜಲಪಾತದ ಪರಿಸರ ಅಭಿವೃದ್ಧಿಪಡಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯಲಾಗಿತ್ತು. ಆದರೆ ಇಲಾಖೆ ಇದು ನಮ್ಮ ಇಲಾಖೆಯ ಪಟ್ಟಿಯಲ್ಲಿ ಸೇರ್ಪಡೆಗೊಂಡಿಲ್ಲ ಎಂಬ ಕಾರಣದಿಂದ ಮನವಿಯನ್ನು ತಿರಸ್ಕರಿಸಿದೆ. ಸ್ಥಳೀಯ ಗ್ರಾಮ ಪಂಚಾಯತ್‌ನಲ್ಲಿ ತೊಡಿಕಾನ ಪ್ರವಾಸಿ ತಾಣವಾಗಿದೆ ಎಂದು ಬರೆಯಿಸಿಕೊಂಡು ಮತ್ತೆ ಅಭಿವೃದ್ಧಿಗಾಗಿ ಮನವಿ ಸಲ್ಲಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯು ನಿರ್ಲಕ್ಷ್ಯ ತೋರಿದೆ. ದೇವರ ಗುಂಡಿ ಪರಿಸರ ಸೇರಿದಂತೆ ರಸ್ತೆಯನ್ನು ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಪಡಿಸಲು ಅವಕಾಶ ಇದೆ ಎಂದು ಸ್ಥಳೀಯರ ಮಾತಾಗಿದೆ.

ಮನವಿಗೆ ಸ್ಪಂದನೆ ಸಿಕ್ಕಿಲ್ಲ
ತೊಡಿಕಾನ ದೇಗುಲದ ವತಿ ಯಿಂದ ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆ ಅನುದಾನ ಕೋರಿ ಅರ್ಜಿ ಬರೆಯಲಾಗಿತ್ತು. ನಮ್ಮ ಸ್ಥಳ ಇಲಾಖೆಯ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದ ಕಾರಣ ಮನವಿಗೆ ಸ್ಪಂದನೆ ದೊರೆತಿಲ್ಲ. ಪ್ರವಾ ಸೋದ್ಯಮ ನಿಯಮದ ಪ್ರಕಾರ ನಮ್ಮ ಗ್ರಾ.ಪಂ.ನಲ್ಲಿ ತೊಡಿಕಾನವು ಪ್ರವಾಸಿ ತಾಣ ಎಂದು ನಿರ್ಣಯ ಮಾಡಿಸಿ ಮತ್ತೆ ಇಲಾಖೆಗೆ ಬರೆಯಲಾಗಿದೆ.
– ಆನಂದ ಕಲ್ಲಗದ್ದೆ, ಮ್ಯಾನೇಜರ್‌, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲ

ಅಭಿವೃದ್ಧಿ ಅಗತ್ಯ
ತೊಡಿಕಾನ ದೇವರಗುಂಡಿ ರಸ್ತೆ ಅಗತ್ಯವಾಗಿ ಅಭಿವೃದ್ಧಿಯಾಗಬೇಕು. ಇಲ್ಲಿಗೆ ದಿನನಿತ್ಯ ಅನೇಕ ಪ್ರವಾಸಿಗರು ಆಗಮಿಸುತ್ತಿದ್ದಾರೆ. ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಸಮಸ್ಯೆಯಾಗುತ್ತಿದೆ.
– ಮನೋಜ್‌, ಸ್ಥಳೀಯ

ತೇಜೇಶ್ವರ್‌ ಕುಂದಲ್ಪಾಡಿ

ಟಾಪ್ ನ್ಯೂಸ್

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.