“ಮುಗೇರಡ್ಕ-ಬೆದ್ರೋಡಿ ತೂಗುಸೇತುವೆ ಶೀಘ್ರ’
Team Udayavani, Oct 22, 2019, 5:15 AM IST
ಉಪ್ಪಿನಂಗಡಿ: ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಮುಗೇರಡ್ಕ-ಬೆದ್ರೋಡಿ ಸಂಪರ್ಕದ ತೂಗು ಸೇತುವೆಯನ್ನು ಆದ್ಯತೆ ಅನುಸಾರ ಶೀಘ್ರ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಬಜತ್ತೂರು ಗ್ರಾಮದ ಬೆದ್ರೋಡಿಗೆ ಅ. 21ರಂದು ಭೇಟಿ ನೀಡಿ, ಆಗಸ್ಟ್ ತಿಂಗಳ ಮೊದಲ ವಾರ ಭಾರೀ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಮುಗೇರಡ್ಕ-ಬೆದ್ರೋಡಿ ತೂಗು ಸೇತುವೆಯ ಬಳಿ ನೇತ್ರಾವತಿ ನದಿ ತೀರದಲ್ಲಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ತೂಗುಸೇತುವೆಯೇ ಸೂಕ್ತ
ಶಾಶ್ವತ ಸೇತುವೆ ನಿರ್ಮಾಣದ ಬಗ್ಗೆ ಸ್ಥಳೀಯರು ಪ್ರಸ್ತಾವಿಸಿದಾಗ ಪ್ರತಿಕ್ರಿಯಿಸಿದ ಸಚಿವರು, ಸೇತುವೆ ನಿರ್ಮಾಣಕ್ಕೆ ಕನಿಷ್ಠ 5 ವರ್ಷಗಳು ಬೇಕಾಗುತ್ತವೆ. ಈ ಭಾಗದ ಗ್ರಾಮಸ್ಥರು, ವಿದ್ಯಾರ್ಥಿಗಳಿಗೆ ಸದ್ಯಕ್ಕೆ ತೂಗು ಸೇತುವೆ ಅತೀ ಅಗತ್ಯ. ಹೀಗಾಗಿ, ಆದ್ಯತೆ ನೆಲೆಯಲ್ಲಿ ಅದರ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಈ ಸೇತುವೆಯಿಂದ ಮೊಗ್ರು, ಬಂದಾರು, ಉರುವಾಲು ಪದವು ಗ್ರಾಮಸ್ಥರು, ವಿದ್ಯಾರ್ಥಿಗಳು ಹೆದ್ದಾರಿ ಸಂಪರ್ಕಸಿ ಉಪ್ಪಿನಂಗಡಿ, ನೆಲ್ಯಾಡಿಗೆ ತೆರಳುತ್ತಿದ್ದರು. ಈಗ ಇಳಂತಿಲ, ಕುಪ್ಪೆಟ್ಟಿ ಮೂಲಕ 21 ಕಿ.ಮೀ. ಸುತ್ತು ಬಳಸಿ ಸಂಚರಿಸಬೇಕಿದೆ. ಶೀಘ್ರವಾಗಿ ಸೇತುವೆ ನಿರ್ಮಿಸಿಕೊಡುವಂತೆ ಬೆಳ್ತಂಗಡಿ, ಪುತ್ತೂರು ಶಾಸಕರಾದ ಹರೀಶ್ ಪೂಂಜ ಹಾಗೂ ಸಂಜೀವ ಮಠಂದೂರು ಸಚಿವರಲ್ಲಿ ಮನವಿ ಮಾಡಿದರು.
ಹಣವಿಲ್ಲ ಎನ್ನುವಂತಿಲ್ಲ
ದ.ಕ. ಜಿಲ್ಲೆಗೆ ಪ್ರಾಕೃತಿಕ ವಿಕೋಪ ನಿಧಿ ಅಡಿಯಲ್ಲಿ ಹೆಚ್ಚುವರಿಯಾಗಿ 25 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದ್ದು, ಯಾವುದೇ ಕಾರಣಕ್ಕೆ ಜಿಲ್ಲಾಧಿಕಾರಿ ಬಳಿ ಹಣ ಇಲ್ಲ ಎನ್ನು ವಂತಿಲ್ಲ, ಪ್ರಾಕೃತಿಕ ವಿಕೋಪಕ್ಕೆ ಸಂಬ ಂಧಿಸಿದ ಪ್ರಕರಣಗಳಿಗೆ ತತ್‌ಕ್ಷಣ ಹಣ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅಶೋಕ್ ತಿಳಿಸಿದರು.
ಮಳೆ, ನೆರೆ ನೀರು ಮನೆಯೊಳಗೆ ನುಗ್ಗಿ ಸೊತ್ತು ಹಾನಿ ಆದವರಲ್ಲಿ ಬಹಳಷ್ಟು ಜನರಿಗೆ 10 ಸಾವಿರ ರೂ. ಪರಿಹಾರವೂ ಸಿಕ್ಕಿಲ್ಲ. ಜಿಲ್ಲಾಡಳಿತ ಅನಗತ್ಯ ವಿಳಂಬ ಮಾಡುತ್ತಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ರಾಜ್ಯಾದ್ಯಂತ ಮಳೆ ಮತ್ತು ನೆರೆಯಿಂದಾಗಿ ಹಾನಿಯಾಗಿರುವ ರಸ್ತೆ, ಸೇತುವೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಗೆ 500 ಕೋಟಿ ರೂ. ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ಅರ್ಜಿ ವಿಲೇವಾರಿ ತ್ವರಿತ
ಬಡವರ ಮನೆ ನಿವೇಶನಕ್ಕೆ ಸಂಬಂ ಧಿಸಿದಂತೆ ಗ್ರಾಮೀಣ ಪ್ರದೇಶದ 94 ಸಿ ಮತ್ತು ನಗರದ 94 ಸಿಸಿ ಅರ್ಜಿ ವಿಲೇವಾರಿ ವೇಗ ಹೆಚ್ಚಿಸಿಕೊಂಡಿದ್ದು, 20 ಸಾವಿರ ಅರ್ಜಿಗಳನ್ನು ಮಂಜೂರು ಮಾಡಲಾಗಿದೆ. ಈ ಹಿಂದಿನಂತೆ ಪಹಣಿ ಪತ್ರ ಹಾಗೂ ಫಲಾನುಭವಿಗೆ ನೀಡುವ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ. ಇಲಾಖೆಯಲ್ಲಿ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದಲ್ಲಿ ತತ್‌ಕ್ಷಣ ಫಲಾನುಭವಿಗಳಿಗೆ ನೀಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜ, ವೇದವ್ಯಾಸ ಕಾಮತ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪಕ್ಷದ ಪದಾಧಿಕಾರಿಗಳಾದ ಜೀವಂಧರ್ ಜೈನ್, ಆರ್.ಸಿ. ನಾರಾಯಣ, ಪುತ್ತೂರು ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಯಶವಂತ ಜಿ., ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್, ನ್ಯಾಯವಾದಿ ರಾಘವೇಂದ್ರ ನಾಯಕ್, ಬೆಳ್ತಂಗಡಿ ಬಿಜೆಪಿ ಮುಖಂಡರಾದ ಬಾಲಕೃಷ್ಣ ರೈ, ಹರೀಶ್ ಸಾಲ್ಯಾನ್, ಬಂದಾರು ತಾ.ಪಂ. ಸದಸ್ಯ ಕೃಷ್ಣಯ್ಯ ಆಚಾರ್, ಮಾಜಿ ಸದಸ್ಯ ಮಾಧವ ಗೌಡ, ಮೊಗ್ರು ಗ್ರಾ.ಪಂ. ಉಪಾಧ್ಯಕ್ಷೆ ಚಂದ್ರಾವತಿ, ಸದಸ್ಯರಾದ ದಿನೇಶ್, ರೂಪಾ ವಿಶ್ವಕರ್ಮ, ಪುತ್ತೂರು ತಹಶೀಲ್ದಾರ್ ಅನಂತ ಶಂಕರ, ತಾ.ಪಂ. ಇಒ ನವೀನ್ ಭಂಡಾರಿ, ಕಂದಾಯ ನಿರೀಕ್ಷಕ ವಿಜಯ ವಿಕ್ರಂ, ಗ್ರಾಮಕರಣಿಕ ಸುನೀಲ್ ಉಪಸ್ಥಿತರಿದ್ದರು.
ವಿಳಂಬ ಮಾಡಿದರೆ ಶಿಸ್ತುಕ್ರಮ
ನೇತ್ರಾವತಿ ಕುಮಾರಾಧಾರಾ ನದಿಗಳ ಸಂಗಮದಿಂದ ನೆರೆ ನೀರು ಹರಿದ ಪ್ರತಿ ಮನೆಗಳಿಗೆ ಯಾವುದೇ ದಾಖಲೆ ಪತ್ರ ಕೇಳದೆ ತತ್‌ಕ್ಷಣ 10 ಸಾವಿರ ರೂ. ಪರಿಹಾರ ನೀಡಬೇಕು. ಕಚೇರಿಗೆ ಅಲೆದಾಡಿಸುವಂತಿಲ್ಲ. ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದರೆ ತಮ್ಮ ಅಥವಾ ಶಾಸಕರ ಗಮನಕ್ಕೆ ತನ್ನಿ. ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದರು.
ಈ ಸೇತುವೆಯಿಂದ ಮೊಗ್ರು, ಬಂದಾರು, ಉರುವಾಲು ಪದವು ಗ್ರಾಮಸ್ಥರು, ವಿದ್ಯಾರ್ಥಿಗಳು ಹೆದ್ದಾರಿ ಸಂಪರ್ಕಸಿ ಉಪ್ಪಿನಂಗಡಿ, ನೆಲ್ಯಾಡಿಗೆ ತೆರಳುತ್ತಿದ್ದರು. ಈಗ ಇಳಂತಿಲ, ಕುಪ್ಪೆಟ್ಟಿ ಮೂಲಕ 21 ಕಿ.ಮೀ. ಸುತ್ತು ಬಳಸಿ ಸಂಚರಿಸಬೇಕಿದೆ. ಶೀಘ್ರವಾಗಿ ಸೇತುವೆ ನಿರ್ಮಿಸಿಕೊಡುವಂತೆ ಬೆಳ್ತಂಗಡಿ, ಪುತ್ತೂರು ಶಾಸಕರಾದ ಹರೀಶ್ ಪೂಂಜ ಹಾಗೂ ಸಂಜೀವ ಮಠಂದೂರು ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜ, ವೇದವ್ಯಾಸ ಕಾಮತ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪಕ್ಷದ ಪದಾಧಿಕಾರಿಗಳಾದ ಜೀವಂಧರ್ ಜೈನ್, ಆರ್.ಸಿ. ನಾರಾಯಣ, ಪುತ್ತೂರು ತಾ| ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಯಶವಂತ ಜಿ., ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್, ನ್ಯಾಯವಾದಿ ರಾಘವೇಂದ್ರ ನಾಯಕ್, ಬೆಳ್ತಂಗಡಿ ಬಿಜೆಪಿ ಮುಖಂಡರಾದ ಬಾಲಕೃಷ್ಣ ರೈ, ಹರೀಶ್ ಸಾಲ್ಯಾನ್, ಬಂದಾರು ತಾ.ಪಂ. ಸದಸ್ಯ ಕೃಷ್ಣಯ್ಯ ಆಚಾರ್, ಮಾಜಿ ಸದಸ್ಯ ಮಾಧವ ಗೌಡ, ಮೊಗ್ರು ಗ್ರಾ.ಪಂ. ಉಪಾಧ್ಯಕ್ಷೆ ಚಂದ್ರಾವತಿ, ಸದಸ್ಯರಾದ ದಿನೇಶ್, ರೂಪಾ ವಿಶ್ವಕರ್ಮ, ಪುತ್ತೂರು ತಹಶೀಲ್ದಾರ್ ಅನಂತ ಶಂಕರ, ತಾ.ಪಂ. ಇಒ ನವೀನ್ ಭಂಡಾರಿ, ಕಂದಾಯ ನಿರೀಕ್ಷಕ ವಿಜಯ ವಿಕ್ರಂ, ವಿಎ ಸುನೀಲ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.