![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 9, 2019, 7:26 AM IST
ಬಡಗನ್ನೂರು: ಮರಾಟಿ ಜನಾಂಗಕ್ಕೆ ಸರಕಾರ ವಿದ್ಯಾಭ್ಯಾಸ ಹಾಗೂ ಸ್ವೋದ್ಯೋಗ ಮಾಡಲು ಅನೇಕ ಸೌಲಭ್ಯ ನೀಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಅಭಿವೃದ್ಧಿ ಸಾಧಿಸುವ ಪ್ರಯತ್ನ ಮಾಡಬೇಕು ಎಂದು ಜಿ.ಪಂ. ನಿವೃತ್ತ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ಪುತ್ತೂರು ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸುಂದರ ನಾಯ್ಕ ಹೇಳಿದರು.
ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ ಪೇರಾಲು ಅವರ ಅಧ್ಯಕ್ಷತೆಯಲ್ಲಿ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಎಲಿಯದಲ್ಲಿ ಆಟಿದ ಕೂಟ
ಪುತ್ತೂರು ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಎನ್.ಎಸ್. ಮಂಜುನಾಥ ಮಾತನಾಡಿ, ಈ ವರ್ಷ ಮರಾಟಿ ಸಂಘದ ವತಿಯಿಂದ ನಡೆಯುವ ಆಟಿದ ಕೂಟವನ್ನು ಸರ್ವೆ ಎಲಿಯದಲ್ಲಿ ಕೆಸರು ಗದ್ದೆ ಆಟದೊಂದಿಗೆ ವಿಶೇಷವಾಗಿ ನಡೆಸಲು ತೀರ್ಮಾನಿಸಲಾಗಿದ್ದು, ಇದರ ಜವಾಬ್ದಾರಿಯನ್ನು ಯುವ ವೇದಿಕೆಗೆ ನೀಡಲಾಗಿದೆ ಎಂದರು.
ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದುಗ್ಗಪ್ಪ ಎನ್. ಮಾತನಾಡಿದರು.
ಸಮ್ಮಾನ
ಕಳೆದ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ವಿಶಿಷ್ಟ ಹಾಗೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಮರಾಟಿ ಸಮಾಜದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಹಿರಿಯ ಸದಸ್ಯ ಯು.ಕೆ. ನಾಯ್ಕ, ನೃತ್ಯ ಗುರು ವಿದುಷಿ ಅನುಶ್ರೀ ಸಾಮೆತ್ತಡ್ಕ ಹಾಗೂ ಕುಣಿತ ಭಜನೆ ಗುರು ಮೂಲೆಗದ್ದೆ ಬಾಲಚಂದ್ರ ನಾಯ್ಕ ಅವರನ್ನು ಸಮ್ಮಾನಿಸಲಾಯಿತು. ಶೈಕ್ಷಣಿಕ ಪ್ರತಿಭೆ ಅಶ್ವಿನಿ ಅವರ ಅನುಪಸ್ಥಿತಿಯಲ್ಲಿ ಅವರ ತಂದೆ ಸೇಸಪ್ಪ ನಾಯ್ಕ ಮತ್ತು ತಾಯಿ ಲೀಲಾವತಿ ಅವರನ್ನು ಸಮ್ಮಾನಿಸಲಾಯಿತು.
ಪಡುಮಲೆ ಮರಾಟಿ ಸಂಘದ ಉಸ್ತುವಾರಿ ಸದಸ್ಯ ಪಿ.ಎಸ್. ನಾಯ್ಕ ಬನ್ನೂರು, ನಿವೃತ್ತ ಪ್ರಾಂಶುಪಾಲ ಬಾಲು ನಾಯ್ಕ, ಮಹಿಳಾ ವೇದಿಕೆ ಅಧ್ಯಕ್ಷೆ ಸಾವಿತ್ರಿ, ಯುವ ವೇದಿಕೆ ಅಧ್ಯಕ್ಷ ಸಂದೀಪ್ ಅರ್ಯಾಪು, ಸುಬ್ಬಣ್ಣ ನಾಯ್ಕ ಪುತ್ತೂರು, ಕರುಣಾಕರ ನಾಯ್ಕ ಅಲೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷೆ ರೇಖಾ ನಾಗರಾಜ್, ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಯಮುನಾ, ಗೋಪಾಲ ದೊಡ್ಡಡ್ಕ ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಪಡುಮಲೆ ಮರಾಟಿ ಸಂಘದ ಗೌರವಾಧ್ಯಕ್ಷ ವೈ. ಕೃಷ್ಣ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಪ್ಪಯ ನಾಯ್ಕ ತಲೆಂಜಿ ವರದಿ ವಾಚಿಸಿದರು. ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ ಮುಂಡೋಳೆ ಲೆಕ್ಕ ಪತ್ರ ಮಂಡಿಸಿದರು. ಕೇಶವ ಪ್ರಸಾದ್ ನೀಲಗಿರಿ ಹಾಗೂ ಜಯಲಕ್ಷ್ಮೀ ಪಟ್ಟೆ ನಿರೂಪಿಸಿದರು.
You seem to have an Ad Blocker on.
To continue reading, please turn it off or whitelist Udayavani.