‘ಸಮಾಜಸೇವೆ ಸಂಘ-ಸಂಸ್ಥೆಗಳ ಆದ್ಯತೆಯಾಗಲಿ’
Team Udayavani, May 9, 2019, 7:51 AM IST
ಉಳ್ಳಾಲ: ಸಮಾಜಮುಖಿಯಾಗಿ ಕೆಲಸ ಮಾಡುವ, ಒಂದೇ ಮನಸ್ಸುಳ್ಳ ಸದಸ್ಯರನ್ನೊಳಗೊಂಡ ಸಂಘ- ಸಂಸ್ಥೆಗಳು ಜನರ ಮನಸ್ಸಿನಲ್ಲಿ ಸದಾ ಅಚ್ಚಳಿಯದೆ ಉಳಿಯುತ್ತವೆ ಎಂದು ಚಂದ್ರಹಾಸ್ ಪಂಡಿತ್‌ಹೌಸ್ ಹೇಳಿದರು.
ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ತೌಡುಗೋಳಿಯ ನರಿಂಗಾನ ಯುವಕ ಮಂಡಲದ ಕಲಾ ಮಂದಿರದಲ್ಲಿ ಯುವಕ ಮಂಡಲದ 41ನೇ ವಾರ್ಷಿಕೋ ತ್ಸವದ ಅಧ್ಯಕ್ಷತೆ ವಹಿಸಿ, ಸಾಧಕ ಶಿಕ್ಷಕರನ್ನು ಸಮ್ಮಾನಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಯುವಕ ಮಂಡಲ ವೊಂದು ಸಾಂಸ್ಕೃತಿಕವಾಗಿ ಹಾಗೂ ಕ್ರೀಡೆ ಯಲ್ಲಿ ಪ್ರಸಿದ್ಧಿ ಪಡೆಯುವುದರ ಜತೆಗೆ ಕಳೆದ ನಾಲ್ಕು ದಶಕಗಳಿಂದ ಸಮಾಜಮುಖೀ ಕೆಲಸ ಮಾಡುತ್ತಾ ಮನರಂಜನೆ, ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಶ್ಲಾಘನೀಯ ಎಂದರು.
ಮೊಂಟೆಪದವು ಸರಕಾರಿ ಪ್ರೌಢ ಶಾಲೆಯ ವೈಸ್ ಪ್ರಿನ್ಸಿಪಾಲ್ ಸಂತೋಷ್ ಕುಮಾರ್ ಟಿ.ಎನ್. ಹಾಗೂ ತೌಡು ಗೋಳಿಯ ಮುಡೂರುತೋಕೆ ಶ್ರೀ ಕಾವೀ ಸುಬ್ರಹ್ಮಣ್ಯ ಕಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಚಂದ್ರಾವತಿ ಕೆ. ಅವರನ್ನು ಸಮ್ಮ್ಮಾನಿಸಲಾಯಿತು.
ಶಾಂತಿಪಳಿಕೆ ಶ್ರೀ ಮಿತ್ತಮೊಗರಾಯ ದೈವಸ್ಥಾನದ ಮೊಕ್ತೇಸರ ಬಿ. ನಾರಾಯಣ ಶೆಟ್ಟಿ ಬಲೆತ್ತೋಡು, ಸಂತೋಷ್ ಕುಮಾರ್ ಬೋಳಿಯಾರ್, ರಾಜೀವ್ ಎಸ್. ಶಾಂತಿಪಳಿಕೆ, ಬಾಳೆಪುಣಿಯ ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಹೇಶ್ ಚೌಟ, ಉದ್ಯಮಿ ಐತಪ್ಪ ಶೆಟ್ಟಿ ದೇವಂದಪಡ್ಪು, ಯೋಗೀಶ್ ಆಚಾರ್ಯ ಕೈರಂಗಳ, ಇರಾ ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಅಶ್ವತ್ಥಡಿ, ನರಿಂಗಾನ ಗ್ರಾಮ ಪಂಚಾಯಿತಿ ಸದಸ್ಯೆ ಸದಸ್ಯೆ ಹರಿಣಾಕ್ಷಿ ಕೊರಕಟ್ಟ, ಸದಸ್ಯ ಮುರಳೀಧರ ಶೆಟ್ಟಿ ಮೋರ್ಲ, ಭಾಗವತ ಆನಂದ ಎಸ್. ಸರ್ಕುಡೇಲು, ಶಿಕ್ಷಕ ಲೋಕೇಶ್ ಎಸ್. ಸರ್ಕುಡೇಲು, ಯುವಕ ಮಂಡಲದ ಗೌರವಾಧ್ಯಕ್ಷ ಉದಯ ಶಂಕರ ಶೆಟ್ಟಿ ಬಲೆತ್ತೋಡು, ಮಾಜಿ ಅಧ್ಯಕ್ಷರಾದ ವಿನೋದ್ ಸುವರ್ಣ ನಿಡ್ಮಾಡ್, ನವೀನ್ ಶೆಟ್ಟಿ ಮಂಗಲ್ಪಾಡಿ ಹಾಗೂ ದಿನೇಶ್ ಆಳ್ವ ಗರೋಡಿ, ವಿಜಯ್ ಎಲ್. ಸರ್ಕುಡೇಲು, ಕ್ರೀಡಾ ಕಾರ್ಯದರ್ಶಿ ಅವಿನಾಶ್ ಸರ್ಕುಡೇಲು, ಪರಶು ತೌಡುಗೋಳಿ, ರಾಕೇಶ್ ಕೊರ ಕಟ್ಟ, ಶ್ರೀಕುಮಾರ್ ಸರ್ಕುಡೇಲು, ಪದ್ಮನಾಭ ಸರ್ಕುಡೇಲು, ಜೀತೇಶ್ ಶೆಟ್ಟಿ ಪೂಂಜರ ಮನೆ, ಗೌತಮ್ ಕುಲಾಲ್ ತೌಡುಗೋಳಿ, ಜಗದೀಶ್ ಆಳ್ವ ಗರೋಡಿ, ಆನಂದ ನೀರೊಳಿಕೆ, ಜಗದೀಶ್ ನಾಯ್ಕ ನೀರೊಳಿಕೆ, ಕೌಶಿಕ್ ತೌಡುಗೋಳಿ, ವಿಜಯ್ ಆರ್. ಸರ್ಕುಡೇಲು, ಶ್ರವಣ್ ಕುಮಾರ್ ಸರ್ಕುಡೇಲು ಹಾಗೂ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಗಿರೀಶ್ ಆಳ್ವ ಗರೋಡಿ, ನಿಖೀಲ್ ಆಳ್ವ ಗರೋಡಿ ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ಚಂದ್ರಹಾಸ್ ಎಲ್. ಸರ್ಕುಡೇಲು ವರದಿ ವಾಚಿಸಿದರು. ಪುನೀತ್ ಶೆಟ್ಟಿ ಪುಳಿಂಕೆತ್ತಡಿ ಸಮ್ಮಾನ ಪತ್ರ ವಾಚಿಸಿದರು. ಸತೀಶ್ ಕುಮಾರ್ ಪುಂಡಿಕಾೖ ಕಾರ್ಯಕ್ರಮ ನಿರೂಪಿಸಿದರು.
ನೃತ್ಯ ಪ್ರದರ್ಶನ
ಸಾಂಸ್ಕೃತಿಕ ಮನರಂಜನೆ ಪ್ರಯುಕ್ತ ‘ತುಳುವೆರೆ ಉಡಲ್ ಜೋಡುಕಲ್ಲು’ ತಂಡದಿಂದ ‘ಬಯ್ಯಮಲ್ಲಿಗೆ’ ನಾಟಕ, ಶ್ರೀಕಾಂತ್ ಕೊಂಡಾಣ, ರಾಜೇಶ್ ಕುಡ್ಲ, ಪ್ರಾಪ್ತಿ ರಮೇಶ್ ಮೋರ್ಲ, ಶ್ರೇಯಾ ಸತೀಶ್ ಬೆಂಗಳೂರು ಹಾಗೂ ತೌಡು ಗೋಳಿಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
MUST WATCH
ಹೊಸ ಸೇರ್ಪಡೆ
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.