ಗ್ರಾಹಕರ ಬೇಡಿಕೆಗೆ ಸ್ಪಂದಿಸುವೆ: ಸ್ನೇಹಲ್
ಆಲಂಕಾರಿನಲ್ಲಿ ವಿದ್ಯುತ್ ಸಬ್‌ಸ್ಟೇಷನ್: ಕ್ರಮ ಕೈಗೊಳ್ಳುವುದಾಗಿ ಭರವಸೆ
Team Udayavani, Oct 5, 2019, 5:35 AM IST
ಕಡಬ: ಕಡಬ ಮೆಸ್ಕಾಂ ಉಪವಿಭಾಗೀಯ ಮಟ್ಟದ ಜನಸಂಪರ್ಕ ಸಭೆಯು ಮೆಸ್ಕಾಂ ಕಡಬ ಉಪವಿಭಾಗದ ಕಚೇರಿಯ ಸಭಾಂಗಣದಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಅವರು ಮಾತನಾಡಿ, ಕಡಬ ಉಪವಿಭಾಗದಲ್ಲಿನ ವಿದ್ಯುತ್ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಅತೀ ಶೀಘ್ರದಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳ ಲಾಗುವುದು. ಆಲಂಕಾರಿನಲ್ಲಿ 110 ಕೆ.ವಿ. ವಿದ್ಯುತ್ ಸಬ್‌ಸ್ಟೇಷನ್ ಆರಂಭದ ಬಗ್ಗೆ ಸ್ಪಂದಿಸಲಾಗುವುದು ಎಂದರು.
ಮೆಸ್ಕಾಂ ಜಿಲ್ಲಾ ಅಧೀಕ್ಷಕ ಮಂಜಪ್ಪ ಮಾತನಾಡಿ ಕಡಬ ಉಪವಿಭಾಗ ವ್ಯಾಪ್ತಿಯಲ್ಲಿನ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ 40ಕ್ಕೂ ಹೆಚ್ಚಿನ ದೂರುಗಳು ಬಂದಿವೆ. ಗ್ರಾಹಕರಿಂದ ಬಂದ ದೂರಿನ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಜನಸಂಪರ್ಕ ಸಭೆಗೆ ಮೊದಲು ಸಮಸ್ಯೆ ಬಗೆಹರಿಸಲಾಗುವುದು ಎಂದರು.
ರಸ್ತೆ ವಿಸ್ತರಣೆ: ಲೈನ್ ತೆರವುಗೊಳಿಸಿ
ಕಡಬ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಮಾತನಾಡಿ, ಕಡಬ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಿದಷ್ಟು ಮರುಕಳಿಸುತ್ತಿವೆ. ಹಳೆಯ ತಂತಿಗಳ ಬದಲಾವಣೆ, ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸಲು ಅಧಿಕಾರಿಗಳು ಶೀಘ್ರ ಸ್ಪಂದಿಸ ಬೇಕಾಗಿದೆ. ಕಡಬ ಸಿಎ ಬ್ಯಾಂಕ್‌ನ ಕಟ್ಟ ಡದ ಎದುರು ಮುಖ್ಯ ರಸ್ತೆಯ ತಿರುವಿನಲ್ಲಿ ರಸ್ತೆ ವಿಸ್ತರಣೆಗಾಗಿ ಮಣ್ಣು ತೆಗೆಯಬೇಕಾಗಿದೆ. ಆದ್ದರಿಂದ ಅಲ್ಲಿರುವ ಮೆಸ್ಕಾಂ ಎಚ್‌ಟಿ ಹಾಗೂ ಎಲ್‌ಟಿ ಲೈನ್ ತೆರವುಗೊಳಿಸಿ ಕೊಡಬೇಕು. ಈ ಬಗ್ಗೆ ಕಳೆದ ಜನಸಂಪರ್ಕ ಸಭೆಯಲ್ಲಿಯೂ ಒತ್ತಾಯಿಸಲಾಗಿದೆ. ಆದರೆ ಇನ್ನೂ ತೆರವು ಗೊಳಿಸದೇ ಇರುವುದರಿಂದ ಅಭಿವೃದ್ಧಿ ಕೆಲಸಕ್ಕೆ ತೊಂದರೆಯಾಗಿದೆ. ಕೂಡಲೇ ತೆರವು ಗೊಳಿಸ ಬೇಕೆಂದು ಹೇಳಿದರು. ಇದಕ್ಕೆ ಉತ್ತರಿಸಿದ ಅಧೀಕ್ಷಕ ಮಂಜಪ್ಪ, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಳೆಯ ಕಂಬ, ತಂತಿ ಬದಲಾಯಿಸಿ
ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ, ಕಡಬ ತಾಲೂಕು ವ್ಯಾಪ್ತಿಯಲ್ಲಿನ ಹಳೆಯ ವಿದ್ಯುತ್ ತಂತಿಗಳನ್ನು ತೆಗೆದು ಹೊಸ ವಿದ್ಯುತ್ ತಂತಿ ಅಳವಡಿಕೆಗೆ ಈ ಹಿಂದಿನ ಕುಮಾರಸ್ವಾಮಿ ಅಧಿ ಕಾರದ ಅವಧಿಯಲ್ಲಿ ಅನುದಾನ ನೀಡ ಲಾಗಿದ್ದರೂ ಕಾಮಗಾರಿ ಆರಂಭಗೊಂಡಿಲ್ಲ. ಅಧಿಕಾರಿಗಳು ವಿಳಂಬ ಧೋರಣೆ ಮಾಡುವುದು ಸರಿಯಲ್ಲ ಎಂದರು. ಇದಕ್ಕೆ ಉತ್ತರಿಸಿದ ಅಧೀಕ್ಷಕ ಮಂಜಪ್ಪ, ಕಂಬ ಹಾಗೂ ತಂತಿ ಒದಗಿಸಲಾಗಿದ್ದು ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.
ತಂತಿ ಮೇಲೆ ಮರ
ಆಲಂಕಾರಿನಲ್ಲಿ 110 ಕೆ.ವಿ. ಸಬ್‌ಸ್ಟೇಷನ್‌ಗೆ ಜಾಗ ಕಾದಿರಿಸಿದ್ದರೂ ಕಾಮಗಾರಿ ಆರಂಭಿಸಿಲ್ಲ. ಸಬ್‌ಸ್ಟೇಷನ್ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಮರ್ದಾಳ-ಕೈಕಂಬ ಮಧ್ಯೆ ರಸ್ತೆ ಬದಿಯಲ್ಲಿರುವ ದೂಪದ ಮರ ವಿದ್ಯುತ್ ತಂತಿ ಮೇಲೆಯೇ ಬೀಳುತ್ತಿವೆ. ಇದಕ್ಕೆ ಬದಲಿ ವ್ಯವಸ್ಥೆಯಾಗಿ ಅಂಡರ್‌ಗ್ರೌಂಡ್ ಮೂಲಕ ಲೈನ್ ಅಳ ವಡಿಸುವಂತೆಯೂ ಸಯ್ಯದ್ ಮೀರಾ ಸಾಹೇಬ್ ಆಗ್ರಹಿಸಿದರು.
ನೆಲ್ಯಾಡಿ ಗ್ರಾಮದ ಕೆಳಗಿನಬಲ್ಯ ಪರಿಸರದಲ್ಲಿ 21 ವರ್ಷದ ಹಿಂದೆ ಅಳವಡಿಸಿದ ವಿದ್ಯುತ್ ಕಂಬಗಳು ವಾಲುತ್ತಿವೆ. ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಇವುಗಳನ್ನು ತೆರವುಗೊಳಿಸಿ ಹೊಸ ಲೈನ್ ಅಳವಡಿಸುವಂತೆ ಆ ಭಾಗದ ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ನೆಲ್ಯಾಡಿ ಜೆಇ ಅವರಿಂದ ಅಧೀಕ್ಷಕರು ಮಾಹಿತಿ ಪಡೆದುಕೊಂಡರು. ಇಲ್ಲಿ ಕಂಬ ಹಾಗೂ ತಂತಿ ಬದಲಾವಣೆ ಕಾಮಗಾರಿ ಪ್ರಗತಿಯಲ್ಲಿದ್ದು, ಈ ವರ್ಷ ಸಂಪೂರ್ಣ ಹೊಸ ಲೈನ್ ಅಳವಡಿಸಲಾಗುವುದು ಎಂದು ತಿಳಿಸಿದರು. ಕಡಬ ಗ್ರಾ.ಪಂ. ಅಧ್ಯಕ್ಷ ಬಾಬುಮುಗೇ ಮಾತನಾಡಿ, ಕಡಬ-ಪಿಜಕ್ಕಳ ಹಾಗೂ ಕಡಬ ಪೇಟೆಯಿಂದ ಕಳಾರದ ತನಕ ವಿದ್ಯುತ್ ಲೈನ್‌ನ ತಂತಿ ನೇತಾಡುತ್ತಿವೆ. ಅದನ್ನೆಲ್ಲಾ ತೆಗೆದು ಹೊಸ ಲೈನ್ ಅಳವಡಿಸುವಂತೆ ಸಲಹೆ ನೀಡಿದರು.
ವಸತಿ ಸೌಕರ್ಯ ಕಲ್ಪಿಸಿ
ಸೀತಾರಾಮ ಗೌಡ ಪೊಸೊಳಿಕೆ ಅವರು ಮಾತನಾಡಿ, ಆಲಂಕಾರಿನಲ್ಲಿ 110 ಕೆ.ವಿ. ಸಬ್‌ಸ್ಟೇಶನ್ ಆಗಬೇಕು. ಕಡಬ ಮೆಸ್ಕಾಂ ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವಸತಿ ಸೌಕರ್ಯ ಕಲ್ಪಿಸಬೇಕು, ರಸ್ತೆ ಮಾರ್ಜಿನ್ ಬಿಟ್ಟು ವಿದ್ಯುತ್ ಕಂಬಗಳನ್ನು ಅಳವಡಿ ಸಬೇಕು. ನೀರಕಟ್ಟೆಯಿಂದ ನೆಲ್ಯಾಡಿಗೆ ವಿದ್ಯುತ್ ಲಿಂಕ್‌ಲೈನ್ ಕೂಡಲೇ ಮಾಡ ಬೇಕು. ಕಡಬ ಮೆಸ್ಕಾಂನಿಂದ ಪೇಟೆವರೆಗೆ ಅಂಡರ್‌ಲೈನ್ ಕೇಬಲ್ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಕುಡಿಯುವ ನೀರಿನ ಪಂಪ್‌ಗ್ಳಿಗೆ ಗ್ರಾಮ ಪಂಚಾಯತ್‌ನಿಂದ ಠೇವಣಿ ಇಟ್ಟು ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿದೆ. ಅಲ್ಲಿಂದಲೇ ಇತರೇ ವಿದ್ಯುತ್ ಬಳಕೆದಾರರಿಗೂ ಸಂಪರ್ಕ ಕೊಡಲಾಗುತ್ತಿದೆ. ಇತರರಿಗೆ ಬೇರೆಯೇ ವ್ಯವಸ್ಥೆ ಮಾಡಬೇಕೆಂದು ಗ್ರಾ.ಪಂ.ಸದಸ್ಯ ಕೆ.ಎಂ. ಹನೀಫ್ ಆಗ್ರಹಿಸಿದರು.
ಪುತ್ತೂರು ಉಪವಿಭಾಗದ ಕಾರ್ಯ ಪಾಲಕ ಅಭಿಯಂತರ ನರಸಿಂಹ, ಕೆ.ಪಿ.ಟಿ.ಸಿ.ಎಲ್.ನ ಕಾರ್ಯಪಾಲಕ ಇಂಜಿನಿ ಯರ್ ಸತೀಶ್, ತಾ.ಪಂ. ಸದಸ್ಯ ರಾದ ಗಣೇಶ್ ಕೈಕುರೆ, ಕೆ.ಟಿ. ವಲ್ಸಮ್ಮ, ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷೆ ನೀಲಾವತಿ ಶಿವರಾಂ ಉಪಸ್ಥಿತರಿದ್ದರು.
ಕಡಬ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಗ್ರಾ.ಪಂ. ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಎ.ಎಸ್. ಶರೀಫ್, ಆದಂ ಕುಂಡೋಳಿ, ಪ್ರಮುಖ ರಾದ ಉಮೇಶ್ ಶೆಟ್ಟಿ ಸಾಯಿರಾಂ, ರಘುಚಂದ್ರ ಬಳ್ಳಾಲ್, ಹರೀಶ್ ಕೋಡಿ ಬೈಲ್, ಶಿವರಾಮ ಎಂ.ಎಸ್., ಪ್ರಕಾಶ್ ಎನ್.ಕೆ., ನಾರಾಯಣ ಪೂಜಾರಿ, ಗಿರೀಶ್ ಕೊರುಂದೂರು, ಗಿರೀಶ್ ಎ.ಪಿ., ವೆಂಕಟ ರಾಜ್ ಕೋಡಿಬೈಲ್, ಪೂವಪ್ಪ ಗೌಡ ಕೋಲ್ಪೆ, ಮೋನಪ್ಪ ಗೌಡ ನಾಡೋಳಿ, ಕೃಷ್ಣಪ್ಪ ಮಡಿವಾಳ, ಸತೀಶ್ ನಾಯಕ್, ಮನಮೋಹನ ಗೋಳಾಡಿ, ಜಯರಾಮ್ ಪಡೆಜ್ಜಾರು, ಸೂರ್ಯನಾರಾಯಣ ಭಟ್ ಮತ್ತಿತರರು ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಕಡಬ ಉಪವಿಭಾಗದ ಕಾರ್ಯಪಾಲಕ ಅಭಿಯಂತರ ಸಜಿಕುಮಾರ್ ಸ್ವಾಗತಿಸಿ, ಕಡಬ ಎಇ ಸತ್ಯನಾರಾಯಣ ವಂದಿಸಿದರು. ಆಲಂಕಾರು, ನೆಲ್ಯಾಡಿ, ಬಿಳಿನೆಲೆ ವ್ಯಾಪ್ತಿಯ ಸಹಾಯಕ ಎಂಜಿನಿಯರ್, ಮೆಸ್ಕಾಂ ಸಿಬಂದಿ ಉಪಸ್ಥಿತರಿದ್ದರು.
ಸಬ್‌ಸ್ಟೇಷನ್ ಶೀಘ್ರ ಆಗಲಿ
ತಾ.ಪಂ. ಸದಸ್ಯೆ ತೇಜಸ್ವಿನಿ ಕಟ್ಟಪುಣಿಯವರು ಮಾತನಾಡಿ, ಕಡಬ ತಾಲೂಕಿನಲ್ಲಿನ ವಿದ್ಯುತ್ ಸಮಸ್ಯೆ ನಿವಾರಿಸಬೇಕಾದಲ್ಲಿ ಆಲಂಕಾರಿನಲ್ಲಿ 110 ಕೆವಿ ವಿದ್ಯುತ್ ಸಬ್‌ಸ್ಟೇಶನ್ ಆಗಲೇಬೇಕಿದೆ. ಅದು ತಡವಾಗುವುದಾದಲ್ಲಿ 33 ಕೆ.ವಿ.ಯ ಸಬ್‌ಸ್ಟೇಶನ್ ಆದರೂ ಮಾಡಿ ವಿದ್ಯುತ್ ಸಮಸ್ಯೆಯನ್ನು ನಿವಾರಿಸುವಂತೆ ಆಗ್ರಹಿಸಿದರು.
ಲೋ ವೋಲ್ಟೆಜ್ ಸಮಸ್ಯೆ ಬಗೆಹರಿಸಿ
ಗ್ರಾಹಕರು ವಿದ್ಯುತ್ ಪರಿವರ್ತಕದ ಸಮಸ್ಯೆ ಬಗ್ಗೆ ಅಧಿ ಕಾರಿಗಳ ಗಮನ ಸೆಳೆದರು. 25 ಎಚ್‌ಪಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕಗಳಲ್ಲಿ 60ಕ್ಕೂ ಹೆಚ್ಚು ಪಂಪ್‌ಗ್ಳಿಗೆ ಸಂಪರ್ಕ ಇದೆ. ಇದರಿಂದಾಗಿ ಬೇಸಗೆಯಲ್ಲಿ ಲೋವೋಲ್ಟೆàಜ್ ಸಮಸ್ಯೆಯಿಂದಾಗಿ ಪಂಪ್‌ಗ್ಳು ಚಾಲೂ ಆಗುವುದಿಲ್ಲ ಎಂದು ಗ್ರಾಹಕರು ಹೇಳಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ನೆಲ್ಯಾಡಿ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ಒಂದೇ ಕಂಬ ಅಳವಡಿಸಿ ಟಿಸಿ ಅಳವಡಿಸುವುದರಿಂದ ಸಮಸ್ಯೆಯಾಗುತ್ತಿದ್ದು, ಎರಡು ಕಂಬ ಅಳವಡಿಸಿಯೇ ಪರಿವರ್ತಕ ನಿರ್ಮಿಸಿದ್ದಲ್ಲಿ ಇಂತಹ ಸಮಸ್ಯೆಗಳು ನಿವಾರಣೆ ಆಗಬಹುದೆಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.