ಕಡಬ ಗ್ರಾ.ಪಂಚಾಯತ್‌ಗೆ ಉನ್ನತ ಸ್ಥಾನ ಯೋಗ

ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೆ

Team Udayavani, Oct 22, 2019, 3:09 AM IST

Udayavani Kannada Newspaper

ಕಡಬ: ಗ್ರಾಮ ಪಂಚಾಯತ್‌ ಆಗಿರುವ ಕಡಬವನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆಗೆ ಕೊನೆಗೂ ಸರಕಾರದ ಮಟ್ಟದಲ್ಲಿ ಹಸಿರು ನಿಶಾನೆ ದೊರೆತಿದೆ.

ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಸೂಚನೆಯಂತೆ 2 ವರ್ಷಗಳ ಹಿಂದೆ ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪಟ್ಟಣ ಪಂಚಾಯತ್‌ ಸ್ಥಾನಮಾನ ಲಭಿಸಿರುವುದರಿಂದ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮೂಲಸೌಕರ್ಯಗಳ ಒದಗಣೆಗೆ ಹೆಚ್ಚಿನ ಅನುದಾನಗಳು ಲಭಿಸಲಿವೆ.

ಕಡಬ ಮತ್ತು ಕೋಡಿಂಬಾಳ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ 18.70 ಚದರ ಕಿ.ಮೀ. (5629.67 ಎಕರೆ) ಭೌಗೋಳಿಕ ವಿಸ್ತೀರ್ಣ, 2011ರ ಜನಗಣತಿಯಲ್ಲಿ 9,546 ಜನಸಂಖ್ಯೆ ಹೊಂದಿರುವ ಕಡಬ ಗ್ರಾ.ಪಂ. ಅನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಬೇಕೆಂದು ಈ ಹಿಂದೆ ವಿನಯ ಕುಮಾರ್‌ ಸೊರಕೆ ನಗರಾಭಿವೃದ್ಧಿ ಸಚಿವರಾಗಿದ್ದ ವೇಳೆ ಭೇಟಿಯಾಗಿದ್ದ ಸ್ಥಳೀಯ ಕಾಂಗ್ರೆಸ್‌ ಮುಖಂಡರ ನಿಯೋಗವು ಮನವಿ ಸಲ್ಲಿಸಿತ್ತು. ಬಳಿಕ ಸರಕಾರವೇ ಕಡಬವನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಲು ಪಂಚಾಯತ್‌ನಿಂದ ಪೂರಕ ವರದಿ ಕೇಳಿತ್ತು. ಗ್ರಾ.ಪಂ. ವ್ಯವಸ್ಥೆಯಿಂದ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಲು 10 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಅಗತ್ಯ. ವರದಿ ಸಲ್ಲಿಕೆಯ ವೇಳೆ ಜನಸಂಖ್ಯೆಯು ಮೊದಲಿನ ಜನಗಣತಿಗಿಂತ ಶೇ. 11ರಷ್ಟು ಹೆಚ್ಚಿರಬಹುದೆಂದು ಅಂದಾಜಿಸಿ 1,050 ಹೆಚ್ಚುವರಿ ಜನಸಾಂದ್ರತೆ ನಮೂದಿಸಿ ಜನಸಂಖ್ಯೆ 10,596 ಎಂದು ಪ್ರಸ್ತಾವನೆಯಲ್ಲಿ ಸೇರಿಸಲಾಗಿತ್ತು.

ಪೂರಕ ಅಂಶಗಳು
ಪ್ರಸ್ತಾವಿತ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಭೌಗೋಳಿಕ ವಿಸ್ತೀರ್ಣದ ಶೇ. 55 (3060.57 ಎಕರೆ) ಭಾಗ ಕೃಷಿಯೇತರ ಚಟುವಟಿಕೆಯ ಭೂಮಿಯಾಗಿದ್ದು, ಶೇ. 45 (2569.10 ಎಕರೆ) ಭಾಗ ಕೃಷಿ ಭೂಮಿಯಾಗಿದೆ. ಪಂಚಾಯತ್‌ ಸ್ವಾಮ್ಯದ ವಾಣಿಜ್ಯ ಸಂಕೀರ್ಣಗಳು, ಖಾಸಗಿ ಸ್ವಾಮ್ಯದ ವಾಣಿಜ್ಯ ಸಂಕೀರ್ಣಗಳು, 5 ರಾಷ್ಟ್ರೀಕೃತ ಬ್ಯಾಂಕ್‌ ಶಾಖೆಗಳು, ಈಗಾಗಲೇ ನಡೆಯುತ್ತಿರುವ ವಾರದ ಸಂತೆ, 2 ಪೆಟ್ರೋಲ್‌ ಬಂಕ್‌ಗಳು, ಸಭಾಭವನಗಳು, ವಿವಿಧ ಸಹಕಾರಿ ಸಂಘಗಳು, ಕೃಷಿ ಪತ್ತಿನ ಸಹಕಾರಿ ಸಂಘ, ಭೂ ಅಭಿವೃದ್ಧಿ ಬ್ಯಾಂಕ್‌ ಶಾಖೆ, ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು, ರೈಲು ನಿಲ್ದಾಣ, ಮೊಬೈಲ್‌ ಟವರ್‌ಗಳು, ಸಮುದಾಯ ಆರೋಗ್ಯ ಕೇಂದ್ರ, ತಹಶೀಲ್ದಾರರ ಕಚೇರಿ, ಸುಸಜ್ಜಿತ ರಸ್ತೆ ಸಂಪರ್ಕ ಇತ್ಯಾದಿಗಳನ್ನು ಪಟ್ಟಣ ಪಂಚಾಯತ್‌ಗೆ ಪೂರಕ ಅಂಶಗಳಾಗಿ ಪ್ರಸ್ತಾವನೆಯಲ್ಲಿ ಉಲ್ಲೇಖೀಸಲಾಗಿತ್ತು.

ಕಡಬವನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸುವಂತೆ 2 ವರ್ಷಗಳ‌ ಹಿಂದೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಇದೀಗ ಸರಕಾರವು ಅದಕ್ಕೆ ಮುಂದಾಗಿರುವುದು ಖುಷಿ ತಂದಿದೆ.
– ಚೆನ್ನಪ್ಪ ಗೌಡ ಕಜೆಮೂಲೆ, ಪಿಡಿಒ, ಕಡಬ ಗ್ರಾ.ಪಂ.

ಟಾಪ್ ನ್ಯೂಸ್

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Video: ಮದುವೆ ಮೆರವಣಿಗೆಯ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

14-

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು ?

India: ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು?

Video: ಮದುವೆ ಮೆರವಣಿಗೆಯ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು ?

India: ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು?

Video: ಮದುವೆ ಮೆರವಣಿಗೆಯ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.