ಅತ್ಯಾಚಾರ, ಕೊಲೆ ಆರೋಪಿಗೆ ಮತ್ತೆ ನ್ಯಾಯಾಂಗ ಸೆರೆ
Team Udayavani, Apr 3, 2019, 8:44 AM IST
ಉಡುಪಿ: ಪೊಲೀಸರಿಂದ ತಪ್ಪಿಸಿಕೊಂಡು ಮತ್ತೆ ಬಂಧನಕ್ಕೊಳಗಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಬಾದಾಮಿ ತಾಲೂಕಿನ ಹನುಮಂತಪ್ಪ ಬಸಪ್ಪನನ್ನು ಮಂಗಳವಾರ ಹಿರಿಯಡಕ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶರು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದರು.
ಒಮ್ಮೆ ಹೆಡ್ ಕಾನ್ಸ್ಟೆàಬಲ್ ಹಾಗೂ ಪೊಲೀಸ್ ಪೇದೆ ಸಹಿತವಾದ ಪೊಲೀಸ್ ತಂಡದಿಂದ ಆರೋಪಿ ತಪ್ಪಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಮತ್ತು ಅಲ್ಲಿಂದ ಹಿರಿಯಡಕ ಅಂಜಾರಿನ ಕಾರಾಗೃಹಕ್ಕೆ ಕರೆತರುವಾಗ ಹಿರಿಯಡಕ ಎಸ್ಐ ಸಹಿತವಾದ ಮೂವರ ತಂಡ ನಿಗಾ ವಹಿಸಿತ್ತು. ಕಾರಾಗೃಹಕ್ಕೆ ತರುವಾಗ ಪೊಲೀಸರನ್ನು ದೂಡಿ ಪರಾರಿಯಾದ ಬಗ್ಗೆ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದಡಿ ಇದೀಗ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪೋಕ್ಸೋ ಪ್ರಕರಣದಡಿ ಈಗಾಗಲೇ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.