ಜಿಲ್ಲೆ ಬರ ಪೀಡಿತ ಪ್ರದೇಶ: ಘೋಷಣೆಗೆ ಕಿಸಾನ್ ಸಂಘ ಒತ್ತಾಯ
Team Udayavani, Apr 13, 2019, 6:00 AM IST
ಸಾಂದರ್ಭಿಕ ಚಿತ್ರ
ಕುಂಬಳೆ: ಭಾರತೀಯ ಕಿಸಾನ್ ಸಂಘದ ಕಾಸರಗೋಡು ಜಿಲ್ಲಾ ಮಟ್ಟದ ಸಮಾವೇಶವು ಕಾಸರಗೋಡು ಟೌನ್ ಬ್ಯಾಂಕಿನ ಸಭಾಭವನದಲ್ಲಿ ಜರಗಿತು. ಸಮಾವೇಶವನ್ನು ಉದ್ಘಾಟಿಸಿ ಸಂಘಟನೆಯ ರಾಜ್ಯ ಸಂಘಟನ ಕಾರ್ಯದರ್ಶಿ ರಮೇಶ್ ಐ. ಅವರು ಮಾತನಾಡಿ ದಿನದಿಂದ ದಿನಕ್ಕೆ ಬಿಸಿಲಿನ ಅತೀವ ತಾಪದಿಂದ ಜಲಮಟ್ಟ ಕುಸಿಯುತ್ತಿದ್ದು 12 ಜನ ಸಾವನ್ನಪ್ಪಿದ್ದಾರೆ.
ಸುಮಾರು 400 ಜನರಿಗೆ ಸೂರ್ಯತಾಪದಿಂದ ಶರೀರದಲ್ಲಿ ಗುಳ್ಳೆಗಳು ಬಿದ್ದಿದ್ದು ಜಿಲ್ಲೆಯಲ್ಲಿ ಈ ರೋಗ ಕೆಲವು ಕಡೆಗಳಲ್ಲಿ ಕಾಣಿಸಿಕೊಂಡಿರುತ್ತದೆ.ಹೊಳೆ, ಬಾವಿ, ಕೆರೆಗಳು ಬರಡಾಗಿ ತೋಟ ಗದ್ದೆಗಳು ಒಣಗಿ ಕೃಷಿ ನಷ್ಟವಾಗಿರುತ್ತದೆ. ಅತಿವೃಷ್ಟಿಯಿಂದ ಕಂಗಾಲಾದ ರೈತರ ಕೃಷಿ ಉತ್ಪಾದನೆ ನಾಶವಾಗಿದೆ. ಕೃಷಿಕರಿಗೆ ಸರಕಾರದಿಂದ ಈ ತನಕ ಯಾವುದೇ ಪರಿಹಾರ ದೊರೆಯದೇ ಸಂಕಷ್ಟಕ್ಕೀಡಾಗಬೇಕಾಗಿದೆ. ಸರಕಾರದಿಂದ ಪರಿಹಾರಕ್ಕೆ ಕೃಷಿಕರು ಈ ಹಿಂದೆ ಮನವಿ ಸಲ್ಲಿಸಿದ್ದರೂ ಜಿಲ್ಲಾ ಕೃಷಿ ಅಧಿಕಾರಿಗಳಲ್ಲಿ ಕೇಳಿದರೆ ಸರಕಾರದ ಎಸ್.ಡಿ.ಆರ್.ಎಫ್ ಮತ್ತು ಡಬ್ಲೂé.ಡಿ.ಆರ್.ಎಫ್. ನಲ್ಲಿ ಫಂಡ್ ಇಲ್ಲವೆಂಬ ಸಬೂಬು ಇವರದು. ಆದುದರಿಂದ ರೈತರ ಸಾಲ ಮನ್ನಾ ಮಾಡಬೇಕು, ರೈತರಿಂದ ಬಲಾತ್ಕಾರವಾಗಿ ಸಹಕಾರಿ ಸಂಘಗಳು ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ವಸೂಲಿ ಮಾಡಬಾರದು, ಉದ್ಯೋಗ ಖಾತರಿ ಯೋಜನೆಯ ಕೂಲಿಯಾಳುಗಳನ್ನು ಭತ್ತದ ಕೃಷಿಗೂ ವಿಸ್ತರಿಸಬೇಕು. ಹಾಲು ಉತ್ಪಾದಕರಿಗೆ ಮತ್ತು ರಬ್ಬರ್ ಉತ್ಪಾದಕರಿಗೆ ಬಾಕಿ ನೀಡಬೇಕಾದ ಸಬ್ಸಿಡಿ ಹಣವನ್ನು ಬಿಡುಗಡೆಗೊಳಿಸಬೇಕು. ಊರ ತಳಿಯ ದನ ಸಾಕಣೆಗೆ ಪ್ರೋತ್ಸಾಹ ನೀಡಬೇಕು.
ತೆಂಗಿನ ಕಾಯಿ ಕೃಷಿ ಆಭಿವೃದ್ಧಿ ನಿಗಮ ನೀಡುತ್ತಿರುವ ರಸಗೊಬ್ಬರ ಮುಂತಾದ ಸವಲತ್ತುಗಳನ್ನು ಪುನ:ಆರಂಭಿಸಬೇಕು. ನದಿ ನೀರು ಎತ್ತುವ ಮತ್ತು ಕೃಷಿ ಉಪಯೋಗಕ್ಕೆ ಕೊರೆಯುವ ಬೋರ್‌ವೆಲ್‌ಗಳಿಗೆ ಸರಕಾರ ಅಡೆತಡೆಯನ್ನು ನಿವಾರಿಸಬೇಕು. ರೈತರ ಸಮಸ್ಯೆಗಳಿಗೆ ಸರಕಾರ ಕೂಡಲೇ ಸ್ಪಂದಿಸಿ ಪರಿಹಾರವನ್ನು ನೀಡಬೇಕೆಂದು ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದು ಇದನ್ನು ಸರಕಾರ ತಕ್ಷಣ ಪರಿಹರಿಸಬೇಕೆಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ
Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.