ಕೇಂದ್ರದಲ್ಲಿ ಎನ್‌ಡಿಎ ಸರಕಾರ ಮತ್ತೆ ಅಧಿಕಾರಕ್ಕೆ: ರವೀಶ ತಂತ್ರಿ


Team Udayavani, Mar 26, 2019, 6:30 AM IST

kendra-nda

ಕುಂಬಳೆ: ಕೇಂದ್ರ ಸರಕಾರದ ಅಭಿವೃದ್ಧಿ ಸಾಧನೆ ಮತ್ತು ಕೇರಳ ನಾಸ್ತಿಕ ಎಡರಂಗ ಸರಕಾರ ಆಸ್ತಿಕ ವಿಶ್ವಾಸೀ ಸಮೂಹಕ್ಕೆ ಮಾಡಿದ ಅವಮಾನದಿಂದ ಈ ಬಾರಿ ಮತ್ತೆ ಕೇಂದ್ರದಲ್ಲಿ ನರೇಂದ್ರಮೋದಿ ಎನ್‌.ಡಿ.ಎ. ನೇತೃತ್ವದ ಸರಕಾರ ಬಹುಮತದಿಂದ ಅಧಿಕಾರಕ್ಕೇರುವುದಾಗಿ ಕಾಸರಗೋಡು ಲೋಕಸಭಾ ಎನ್‌. ಡಿ.ಎ. ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರು ಹೇಳಿದರು.

ಕಾಸರಗೋಡು ಪ್ರಸ್‌ಕ್ಲಬ್‌ನಲ್ಲಿ ಜರಗಿದ ಅಭ್ಯರ್ಥಿಯೊಂದಿಗೆ ಮುಖಾಮುಖೀ ಕಾರ್ಯಕ್ರಮದಲ್ಲಿ ಮಾತನಾಡಿದ ತಂತ್ರಿ ಯವರು ಕೇರಳದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಕಾಸರಗೋಡಿನಲ್ಲಿ ಎಡರಂಗ ಮತ್ತು ಎನ್‌.ಡಿ.ಎ. ಮಧ್ಯೆ ನೇರ ಸ್ಪರ್ಧೆಯಾಗಿದೆ. ಐಕ್ಯರಂಗದ ಕನ್ನಡಿಗ ಅಭ್ಯರ್ಥಿಯೋರ್ವರನ್ನು ಕೊನೆಯ ಹಂತದಲ್ಲಿ ಬದಲಾಯಿಸಿ ಅನ್ಯಾಯವೆಸಗಿದ ಕಾರಣ ಆ ಪಕ್ಷದಲ್ಲಿ ಭಿನ್ನಮತದಿಂದ ಐಕ್ಯರಂಗಕ್ಕೆ ಹಿನ್ನಡೆಯಾಗಲಿದೆ. ಇದು ಎನ್‌.ಡಿ.ಎ.ಗೆ ಲಾಭವಾಗಲಿದೆ ಎಂದರು.

ಕಳೆದ ಕೇಂದ್ರ ಸರಕಾರದ ಅಭಿವೃದ್ಧಿ ಕ್ರಾಂತಿಯ ಆಡಳಿತದಲ್ಲಿ ಜನರು ಸಂತೃಪ್ತರಾಗಿದ್ದು ಉತ್ತಮ ಆಡಳಿತಗಾರ ಪ್ರಧಾನಿ ಮೋದಿಯವರು ವಿಶ್ವ ಮಟ್ಟದ ನಾಯಕರಾಗಿ ಬೆಳೆದು ದೇಶವನ್ನು ಉನ್ನತ ಸ್ಥಾನಕ್ಕೇರಿಸಿದ್ದಾರೆ.
ಪುಲ್ವಾಮಾದಲ್ಲಿ ಸೇನಾನಿಗಳ ಹತ್ಯೆ ವಿರುದ್ಧ ನಡೆದ ಸರ್ಜಿಕಲ್‌ ಕಾರ್ಯಾಚರಣೆಯಿಂದ ಮೋದಿ ನೇತೃತ್ವದಲ್ಲಿ ಭಾರತ ಸದೃಢವೆಂಬ ವಿಶ್ವಾಸ ಜನರಲ್ಲಿ ಮೂಡಿದೆ. ವಿಪಕ್ಷಗಳ ಯಾವುದೇ ಅಪಪ್ರಚಾರಕ್ಕೆ ಮತದಾರ‌ರು ಮಣಿಯರು. ಕಾಸರಗೋಡು ಹಾಲಿ ಲೋಕಸಭಾ ಸದಸ್ಯರು ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತನ್ನ 15 ವರ್ಷಗಳ ಅಧಿಕಾರಾವಧಿಯಲ್ಲಿ ಕಳೆದ 5 ವರ್ಷಗಳಲ್ಲಿ ಅಭಿವೃದ್ದಿಗೆ ಕೇಂದ್ರ ಸರಕಾರ ತನಗೆ ಹೇರಳ ನಿಧಿ ನೀಡಿರುವುದಾಗಿ ಹೇಳಿರುವುದು ಕೇಂದ್ರ ಸರಕಾರ ಅಭಿವೃದ್ಧಿಯಲ್ಲಿ ರಾಜಕೀಯ ತೋರಿಸಿಲ್ಲವೆಂಬುದನ್ನು ಎತ್ತಿ ತೋರಿಸುವುದಾಗಿ ಹೇಳಿದರು.

ಬದಲಾವಣೆ ಬಯಸುತ್ತಿರುವ ಜನತೆ
ಮಂಜೇಶ್ವರದಿಂದ ಕಲ್ಯಾಶೆÏàರಿ ತನಕದ ತನ್ನ ಪರ್ಯಟನೆಯಲ್ಲಿ ಮತದಾರ ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನ ಬದಲಾವಣೆಗೆ ಬಯಸಿದ್ದಾರೆ. ಸರಕಾರ ಶಬರಿಮಲೆ ಆಚಾರ ಸಂರಕ್ಷಣೆಗೆ ಅಪಚಾರ ವೆಸಗಿದ ಕಾರಣ ನಾಸ್ತಿಕವಾದಿಗಳೂ ಆಸ್ತಿಕರಾಗಿ ಬಿಜೆಪಿಯತ್ತ ವಾಲಿದ್ದಾರೆ. ಮೊನ್ನೆ ತಿರುವಲ್ಲ ರೈಲು ನಿಲ್ದಾಣದಲ್ಲಿ ಪತ್ತನಂತಿಟ್ಟ ಎನ್‌.ಡಿ.ಎ. ಅಭ್ಯರ್ಥಿ ಕೆ. ಸುರೇಂದ್ರನ್‌ ಅವರಿಗೆ ಜನತೆ ನೀಡಿದ ಭವ್ಯ ಸ್ವಾಗತವೇ ಇದಕ್ಕೆ ನಿದರ್ಶನ ಎಂದರು ತಂತ್ರಿ.

ತಂತ್ರಿ ಗೆದ್ದಲ್ಲಿ ಮಂತ್ರಿಯಾಗುವರೇ ?
ಪತ್ರಕರ್ತರೋರ್ವರ ಮೇಲಿನ ಪ್ರಶ್ನೆಗೆ ದೇವರು ದಯಪಾಲಿಸಿದರೆ ಮತ್ತು ಮತದಾರರು ಆಶೀರ್ವದಿಸಿ ಗೆಲ್ಲಿಸಿದರೆ ಪಕ್ಷ ನೀಡುವ ಯಾವುದೇ ಜವಾಬ್ದಾರಿ ಯನ್ನು ಸಮರ್ಥವಾಗಿ ನಿರ್ವಹಿಸುವೆ. ತಾನು ಗೆದ್ದಲ್ಲಿ ಕಾಣಿಯೂರು-ಕಾಞಂ ಗಾಡು ರೈಲು ಹಳಿ ಸಂಪರ್ಕ, ಕಾಸರಗೋಡಿನ ಎಂಡೋ ಸಂತ್ರಸ್ತರ ಸಮಸ್ಯೆಗೆ ಪರಿಹಾರಕ್ಕೆ ಆದ್ಯತೆ ನೀಡುವೆ. ಕಾಸರಗೋಡು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ, ಕೃಷಿಕರ, ಭಾಷಾ ಅಲ್ಪಸಂಖ್ಯಾಕರ ಮತ್ತು ಇನ್ನಿತರ ಸಮಸ್ಯೆಗೆ ಪರಿಹಾರದೊಂದಿಗೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಸಾಧಿಸುವುದಾಗಿ ರವೀಶ ತಂತ್ರಿ ಹೇಳಿದರು.

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.