ಕರಾವಳಿ ಸ್ಪೆಷಲ್; ರುಚಿಕರವಾದ ಸಿಗಡಿ ಬಿರಿಯಾನಿ ಮನೆಯಲ್ಲೇ ಸಿದ್ಧ ಪಡಿಸಿ
ಶ್ರೀರಾಮ್ ನಾಯಕ್, Dec 4, 2021, 6:00 PM IST
ಮೀನು ಪ್ರಿಯರಿಗೆ ಸಿಗಡಿ ಅಂದರೆ ಎಲ್ಲರಿಗೆ ಅಚ್ಚು ಮೆಚ್ಚು. ಮಾಂಸಹಾರದಲ್ಲಿ ಅತ್ಯಂತ ಆರೋಗ್ಯಕರವಾದ ಆಹಾರದಲ್ಲಿ ಸಿಗಡಿಯೂ ಉತ್ತಮವಾದ ಸ್ಥಾನಮಾನ ಪಡೆದಿದೆ. ಸಿಗಡಿ ಪಶ್ವಿಮ ಮತ್ತು ಪೂರ್ವ ಕಡಲ ಕಿನಾರೆಯಲ್ಲಿ ಧಾರಾಳ ದೊರೆಯುತ್ತವೆ. ಸಿಗಡಿಯನ್ನು ಒಂದು ಮುಖ್ಯವಾದ ಮೀನಿನ ಪಂಗಡವೆಂದು ಪರಿಗಣಿಸಲಾಗಿದೆ. ಸುಮಾರು 30ಕ್ಕಿಂತಲೂ ಹೆಚ್ಚು ಬಗೆಯ ಸಿಗಡಿಗಳಿವೆ. ಅವುಗಳ ಗಾತ್ರದಲ್ಲೂ ವ್ಯತ್ಯಾಸಗಳಿವೆ. ಸುಮಾರು 6 ಸೆಂ.ಮೀ. ಗಾತ್ರದಿಂದ 30 ಸೆಂ.ಮೀ. ವರೆಗೆ ಬೆಳೆಯುವ ಸಿಗಡಿಗಳಿವೆ. ಸಿಗಡಿಯನ್ನು ತುಳುವಿನಲ್ಲಿ ಎಟ್ಟಿ ಎಂದು ಕರೆಯುತ್ತಾರೆ.
ನೀವು ಮನೆಯಲ್ಲೇ ಸಿದ್ಧ ಪಡಿಸಿ; ಮಾಂಸಹಾರಿಗಳು ಇಷ್ಟಪಡುವ ಮತ್ತು ಪೌಷ್ಠಿಕಾಂಶದ ಸಿಗಡಿ ಬಿರಿಯಾನಿಯನ್ನು ನೀವೂ ಒಮ್ಮೆ ಸವಿದು ನೋಡಿ.
ಬೇಕಾಗುವ ಸಾಮಗ್ರಿಗಳು
ಸಿಗಡಿ 20, ಬಾಸುಮತಿ ಅಕ್ಕಿ 1/2 ಕೆ.ಜಿ., ಟೊಮೆಟೋ 2, ಈರುಳ್ಳಿ 4, ತುಪ್ಪ 4 ಚಮಚ, ಜೀರಿಗೆ 1 ಚಮಚ, ಅರಿಶಿನ ಪುಡಿ ಸ್ವಲ್ಪ, ಗಸಗಸೆ 1 ಚಮಚ, ಕರಿಮೆಣಸು 5 ರಿಂದ 10, ಮೆಣಸಿನ ಕಾಯಿ 5, ಒಣಮೆಣಸು 5, ಏಲಕ್ಕಿ 4, ಲವಂಗ 5, ಬೆಳ್ಳುಳ್ಳಿ ಬೀಜ 4, ಹಸಿ ಶುಂಠಿ ಸ್ವಲ್ಪ, ಕೊತ್ತಂಬರಿ ಸೊಪ್ಪು 1 ಕಂತೆ, ತೆಂಗಿನ ತುರಿ 2 ಚಮಚ ಗೇರು ಬೀಜ 10 ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಸಿಗಡಿ ಸಿಪ್ಪೆ ಸುಲಿದು(ತಲೆಭಾಗ ಸೇರಿ)ತೆಗೆದು ಹಾಕಿ, ಸ್ವಚ್ಛಗೊಳಿಸಿ ನೀರಲ್ಲಿ ತೊಳೆಯಿರಿ. ನಂತರ ನೀರು ಬಸಿದು ಹಿಂಡಿ ತೆಗೆಯಿರಿ. ಜೀರಿಗೆ, ಗಸಗಸೆ, ಕರಿ ಮೆಣಸು, ಹಸಿ ಮೆಣಸು, ಒಣ ಮೆಣಸು, ಬೆಳ್ಳುಳ್ಳಿ ಬೀಜ, ಶುಂಠಿ, ಆರಿಶಿನ ಪುಡಿ, 1 ಈರುಳ್ಳಿ ಮತ್ತು ತೆಂಗಿನ ತುರಿ ಹಾಕಿ ಈ ಎಲ್ಲ ಪದಾರ್ಥಗಳನ್ನು ಮಿಕ್ಸರಿಗೆ ಹಾಕಿ ನಯವಾಗಿ ಮಸಾಲೆ ರುಬ್ಬಿರಿ. ಅಕ್ಕಿಯನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ 3 ಕಪ್ ನೀರು ಬಿಸಿ ಮಾಡಿ ಪಕ್ಕದಲ್ಲಿಟ್ಟುಕೊಳ್ಳಿ. ಬಿರಿಯಾನಿ ಮಾಡುವ ಪಾತ್ರೆಗೆ 4 ಚಮಚ ತುಪ್ಪ ಹಾಕಿ ಒಲೆಯ ಮೇಲಿಟ್ಟು ಕಾಯಿಸಿರಿ. ಅದರಲ್ಲಿ ಈರುಳ್ಳಿ ಕೊಚ್ಚಲನ್ನು ಹಾಕಿ ಹುರಿಯಿರಿ. ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ ಮೇಲೆ ಟೊಮೆಟೋ ಸೇರಿಸಿ ಸ್ವಲ್ಪ ಹುರಿದು ಸಿಗಡಿಯನ್ನು ಸೇರಿಸಿ ಮಗುಚಿರಿ. ಇವುಗಳನ್ನು ಚೆನ್ನಾಗಿ ಹುರಿದ ಮೇಲೆ ಅಕ್ಕಿ ಸೇರಿಸಿ ಹುರಿಯಿರಿ. ನಂತರ 3 ಕಪ್ ಬಿಸಿ ನೀರು ಸೇರಿಸಿ, ಲವಂಗ, ಏಲಕ್ಕಿ, ಗೇರು ಬೀಜ ಮತ್ತು ರುಚಿಗೆ ಉಪ್ಪು ಹಾಕಿ ಒಂದು ಕುದಿ ಚೆನ್ನಾಗಿ ಬಂದ ಮೇಲೆ ಉರಿಯನ್ನು ಮಂದಗೊಳಿಸಿರಿ. ಪಾತ್ರೆಯನ್ನು ಮುಚ್ಚಿ ಮಂದ ಉರಿಯ ಮೇಲೆ ಬೇಯಿಸಿರಿ. ಬಿರಿಯಾನಿ ತಳ ಹತ್ತದಂತೆ 2 ರಿಂದ 3 ಬಾರಿ ಮುಚ್ಚಳ ತೆಗೆದು ಮಗುಚಿರಿ. ಪಾತ್ರೆಯಲ್ಲಿ ನೀರು ಪೂರ್ತಿ ಆರಿದ ಬಳಿಕ ಪಾತ್ರೆ ಕೆಳಗಿಸಿರಿ. ಈಗ ಬಿಸಿ-ಬಿಸಿಯಾದ ಸಿಗಡಿ ಬಿರಿಯಾನಿ ಸವಿಯಲು ಸಿದ್ಧ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.