Kollywood: ನಾಲ್ಕನೇ ಬಾರಿ ಜೊತೆ ಆಗಲಿದ್ದಾರೆ ಅಟ್ಲಿ – ದಳಪತಿ ವಿಜಯ್
ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ಅಟ್ಲಿ ಕುಮಾರ್ ʼಜವಾನ್ʼ ಮೂಲಕ ಬಾಲಿವುಡ್ ನಲ್ಲಿ ಕಮಾಲ್ ಮಾಡಿದ್ದಾರೆ. ಕಿಂಗ್ ಖಾನ್ ಅವರೊಂದಿಗೆ ಸಿನಿಮಾ ಮಾಡುವ ಮೂಲಕ ಬಿಟೌನ್ ನಲ್ಲೂ ಅವರು ಮೋಡಿ ಮಾಡಿದ್ದಾರೆ. ಕೇವಲ 5 ಸಿನಿಮಾಗಳನ್ನು ಮಾಡಿ ಭಾರತೀಯ ಚಿತ್ರರಂಗದಲ್ಲಿ ಸೋಲಿಲ್ದ ಸಾರಥಿಯಾಗಿ ಮಿಂಚಿರುವ ಅಟ್ಲಿ ಕುಮಾರ್ ದಳಪತಿ ವಿಜಯ್ ಅವರೊಂದಿಗೆ ಮತ್ತೆ ಸಿನಿಮಾ ಮಾಡುವುದರ ಬಗ್ಗೆ ಮಾತನಾಡಿದ್ದಾರೆ. ʼಪಿಂಕ್ ವಿಲ್ಲಾʼ ನಡೆಸಿದ ಸಂದರ್ಶನದಲ್ಲಿ ಈ ಕುರಿತು ಅಟ್ಲಿ ಮಾತನಾಡಿದ್ದಾರೆ. “ಖಂಡಿತ ಇದು ಸಂಭವಿಸುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಾನು ಇದುವರೆಗೆ 5 ಸಿನಿಮಾಗಳನ್ನು ಮಾಡಿದ್ದೇನೆ. ಇದರಲ್ಲಿ 3 ಸಿನಿಮಾ ವಿಜಯ್ ಅವರೊಂದಿಗೆ ಮಾಡಿದ್ದೇನೆ. ಹಾಗಾಗಿ ಯಾವಾಗ ಸೂಕ್ತ ಸಮಯ ಸಿಗುತ್ತದೋ ಆ ವೇಳೆ ಮುಂದಿನ ಸಿನಿಮಾವನ್ನು ಮಾಡುತ್ತೇವೆ” ಎಂದು ಅಟ್ಲಿ ದಳಪತಿ ವಿಜಯ್ ಅವರೊಂದಿಗೆ 4ನೇ ಬಾರಿ ಸಿನಿಮಾ ಮಾಡುವ ಬಗ್ಗೆ ಹೇಳಿದ್ದಾರೆ. “ದಳಪತಿ ವಿಜಯ್ ನನ್ನೊಂದಿಗೆ ಉತ್ತಮ ವೃತ್ತಿ ಸಂಬಂಧವನ್ನು ಹೊಂದಿದ್ದಾರೆ. ಪರಸ್ಪರರ ಸೃಜನಶೀಲ ಪ್ರವೃತ್ತಿಯನ್ನು ನಂಬುತ್ತಾರೆ. ಅವರೊಂದಿಗೆ ನಾನು ʼಜವಾನ್ʼ ಅನೌನ್ಸ್ ಆಗುವ ಮೊದಲೇ ಮಾತನಾಡಿದ್ದೆ. ಆ ಪಾತ್ರವನ್ನು ಬೇರೆ ಯಾರು ಮಾಡುವುದರ ಬಗ್ಗೆ ನಾನೆಂದಿಗೂ ಯೋಚಿಸಿಲ್ಲ. ಸಿನಿಮಾದ ಚಿತ್ರಕಥೆಯಿಂದ ದೃಶ್ಯಗಳವರೆಗಿನ ವಿಚಾರವನ್ನು ನಾನು ವಿಜಯ್ ಅವರೊಂದಿಗೆ ಚರ್ಚಿಸಿದ್ದೆ. ವಿಜಯ್ ನನಗೆ ಸಹೋದರನಂತಿದ್ದಾರೆ. ಅವರು ತಮ್ಮ ಚಿತ್ರದ ಬಗ್ಗೆ ಹಂಚಿಕೊಳ್ಳುತ್ತಾರೆ ಮತ್ತು ನಾನು ಅವರೊಂದಿಗೆ ʼಜವಾನ್ʼ ಬಗ್ಗೆ ಹಂಚಿಕೊಳ್ಳುತ್ತಿದ್ದೆ. ಅವರು ತುಂಬಾ ಸಲಹೆಗಾರರಾಗಿರುತ್ತಾರೆ. ಯಾವಾಗಲೂ ನನಗೆ ಬೆನ್ನೆಲುಬಾಗಿರುತ್ತಾರೆ. ನಾವು ಜವಾನ್ ಬಗ್ಗೆ ಬಹಳಷ್ಟು ಸಂಗತಿಗಳನ್ನು ಪರಸ್ಪರ ಹಂಚಿಕೊಂಡಿದ್ದೇವೆ. ಆದರೆ ಅದು ಸಂಪೂರ್ಣವಾಗಿ ಶಾರುಖ್ ಖಾನ್ ಸರ್ಗಾಗಿ ಮಾಡಲ್ಪಟ್ಟ ಸಿನಿಮಾ” ಎಂದು ಹೇಳಿದರು.
ADVERTISEMENT
Team Udayavani
ಅ
ಅ
Share
ADVERTISEMENT
ಕೊಡಗುJun 30, 2026, 10:42 AM ISTJun 30, 2026, 10:42 AM IST
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ನೋಂದಣಿಗೆ ಮನವಿ
ADVERTISEMENT
Team Udayavani
ಅ
ಅ
Share
ADVERTISEMENT
ಉಡುಪಿJun 28, 2026, 9:47 AM ISTJun 28, 2026, 9:47 AM IST
ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಹುಸಿ ಬಾಂಬ್ ಬೆದರಿಕೆ
ಮಡಿಕೇರಿ: ಪಿಎಂಶ್ರೀ ವಿದ್ಯಾಲಯ, ಕೋರ್ಟ್ಗೆ ಬಾಂಬ್ ಬೆದರಿಕೆ
ಸಾಂದರ್ಭಿಕ ಚಿತ್ರ
ADVERTISEMENT
Team Udayavani
ಅ
ಅ
Share
ADVERTISEMENT
ಇನ್ನಷ್ಟು ಸುದ್ದಿ ಈ ವಿಭಾಗದಿಂದ
25 days ago
ಕುಶಾಲನಗರ: ಅಮ್ಮ-ಮಗನ ಮತಾಂತರ; ಆರೋಪಿಗಳ ಬಂಧನ
25 days ago
ಬಸ್ನಲ್ಲಿ ಎಸಿ ವೈಫಲ್ಯ; ಪರಿಹಾರ ಪಾವತಿಸಲು ಕೆಎಸ್ಸಾರ್ಟಿಸಿಗೆ ಆದೇಶ
25 days ago
ನಕ್ಷತ್ರ ಆಮೆ ಮಾರಾಟ ಯತ್ನ:ಕಾಸರಗೋಡಿನ ಇಬ್ಬರ ಬಂಧನ
25 days ago
ಮಡಿಕೇರಿ: ಮೂವರ ವಿರುದ್ಧ ಕೋಕಾ ಅಡಿ ಪ್ರಕರಣ ದಾಖಲು
26 days ago
ಮಡಿಕೇರಿ: ನೀಟ್ ಯುಜಿ ಮರುಪರೀಕ್ಷೆ: ಜಿಲ್ಲಾಧಿಕಾರಿ ಸೂಚನೆ