Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
Team Udayavani, Apr 19, 2024, 6:40 AM IST
ಬೆಂಗಳೂರು: ರಾಜ್ಯದಲ್ಲಿ ಈ ಹಿಂದಿನ 24 ಗಂಟೆಗಳಲ್ಲಿ ಚುನಾವಣ ನೀತಿ ಸಂಹಿತೆ ಜಾರಿ ತಂಡಗಳು 21.48 ಕೋಟಿ ರೂ. ಮೌಲ್ಯದ ಚುನಾವಣ ಅಕ್ರಮವನ್ನು ಪತ್ತೆ ಹಚ್ಚಿವೆ. ತನ್ಮೂಲಕ ನೀತಿ ಜಾರಿಯಾದಂದಿನಿಂದ ಈವರೆಗೆ ರಾಜ್ಯದಲ್ಲಿ 400.32 ಕೋ. ರೂ.ಗಳ ಅಕ್ರಮ ಪತ್ತೆಯಾಗಿದೆ.
18.45 ಕೋ. ರೂ. ನಗದು, 1.96 ಕೋಟಿ ರೂ. ಮೌಲ್ಯದ ಮದ್ಯ, 23 ಲಕ್ಷ ಮೌಲ್ಯದ ಮಾದಕ ವಸ್ತುಗಳು, 4.75 ಕೋ. ರೂ. ಮೌಲ್ಯದ ಚಿನ್ನಾಭರಣವನ್ನು ನೀತಿ ಸಂಹಿತೆ ಜಾರಿ ತಂಡಗಳು ಜಪ್ತಿ ಮಾಡಿವೆ.
ಈವರೆಗೆ 74.64 ಕೋ. ರೂ. ನಗದು, 175.88 ಕೋ. ರೂ. ಮೌಲ್ಯದ ಮದ್ಯ, 10.63 ಕೋ.ರೂ. ಮೌಲ್ಯದ ಮಾದಕ ವಸ್ತು, 57.56 ಕೋ.ರೂ. ಮೌಲ್ಯದ ಚಿನ್ನ, 1.17 ಕೋ.ರೂ. ಮೌಲ್ಯದ ಬೆಳ್ಳಿ, 8.13 ಕೋ.ರೂ. ಮೌಲ್ಯದ ಉಚಿತ ಉಡುಗೊರೆ, 72.21 ಕೋ.ರೂ. ಮೌಲ್ಯದ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಜಾರಿ ತಂಡಗಳು ಈವರೆಗೆ ನಗದು, ಮದ್ಯ, ಅಮೂಲ್ಯ ಲೋಹ, ಮಾದಕ ವಸ್ತು ಪತ್ತೆ ಸಂಬಂಧಿಸಿ 1,872 ಎಫ್ಐಆರ್ ದಾಖಲಿಸಿವೆ. ಅಬಕಾರಿ ಕಾಯ್ದೆಯ ಘೋರ ಪ್ರಕರಣದಡಿ 2,523 ಪ್ರಕರಣ ದಾಖಲಿಸಲಾಗಿದೆ. ಸಿ-ವಿಜಿಲ್ನಡಿ ದಾಖಲಾದ 24,869 ಪ್ರಕರಣಗಳಲ್ಲಿ 23,474 ಪ್ರಕರಣ ಸಾಬೀತಾಗಿರುವ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.