BJP; 100 ದಿನದಲ್ಲಿ 10 ಸಾವಿರ ಕೋಟಿ ಅನುದಾನ ತರುತ್ತೇನೆ:ವಿ.ಸೋಮಣ್ಣ ಭರವಸೆ
ಕೊರಟಗೆರೆಯಲ್ಲಿ ಭರ್ಜರಿ ಪ್ರಚಾರ ನಡೆಸಿದ ಬಿಜೆಪಿ -ಜೆಡಿಎಸ್
Team Udayavani, Mar 30, 2024, 7:28 PM IST
ಕೊರಟಗೆರೆ: ನಾನು ಲೋಕಸಭಾ ಚುನಾವಣೆಯಲ್ಲಿ ಗೆದ್ದ 100 ದಿನದೂಳಗೇ ಕೇಂದ್ರದಿಂದ ಕಲ್ಪತರು ನಾಡಿಗೆ 10ಸಾವಿರ ಕೋಟಿ ಅನುದಾನ ತರುತ್ತೇನೆ. ರಾಯದುರ್ಗ ರೈಲ್ವೆ ಕಾಮಗಾರಿ ಮತ್ತು ಎತ್ತಿನಹೊಳೆ ನೀರಾವರಿ ಯೋಜನೆಗೆ ಮರುಚಾಲನೆ ನೀಡುತ್ತೇನೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಭರವಸೆ ನೀಡಿದರು.
ಕೊರಟಗೆರೆ ಪಟ್ಟಣದ ಊರ್ಡಿಗೆರೆ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಶನಿವಾರ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಬೃಹತ್ ಸಮನ್ವಯ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರಕಾರದಿಂದ ಕೊರಟಗೆರೆ ಕ್ಷೇತ್ರಕ್ಕೆ ಹೈಟೆಕ್ ಆಸ್ಪತ್ರೆ ತಂದೇ ತರುತ್ತೇನೆ ಇದು ಕೇವಲ ಭರವಸೆ ಅಲ್ಲ ಬಡಜನರ ನೋವಿನ ಮನವಿ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿಗೆ ಪ್ರಥಮ ಆಧ್ಯತೆ. ಸಿದ್ದರಬೆಟ್ಟ ಮತ್ತು ಏಳುಸುತ್ತಿನ ಕೋಟೆಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ರೂಪುರೇಷು. ಕೊರಟಗೆರೆ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಕಾವಲುಗಾರನಾಗಿ ನಾನು ಹಗಲುರಾತ್ರಿ ಕೆಲಸ ಮಾಡುತ್ತೇನೆ ಎಂದರು.
ಮಾಜಿ ಸಚಿವ ಗೋಪಾಲಯ್ಯ ಮಾತನಾಡಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ರಾಜ್ಯಕ್ಕೆ ಬರಗಾಲವು ತಾನಾಗಿಯೇ ಬರುತ್ತದೆ. ಕುಡಿಯುವ ನೀರು ಮತ್ತು ಮೇವಿಗೆ ಹಾಹಾಕಾರ ಎದುರಾಗಿದೆ. ರಾಷ್ಟ್ರ ಮತ್ತು ರಾಜ್ಯದ ಅಭಿವೃದ್ದಿಗೆ ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ ಅಪಾರ. ವಿ.ಸೋಮಣ್ಣ ಅಭಿವೃದ್ದಿಯ ಪರವಾದ ಜನಸ್ನೇಹಿ ನಾಯಕ. ತುಮಕೂರು ಜಿಲ್ಲೆಯನ್ನ ಅಭಿವೃದ್ದಿಗೆ ಅವರ ಕೊಡುಗೆ ನೀಡುತ್ತಾರೆ ಎಂದರು.
ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಮಾತನಾಡಿ ಕೊರಟಗೆರೆ ಕ್ಷೇತ್ರದ ಕಾರ್ಯಕರ್ತರು ಎಂಎಲ್‌ಎ ಸೋಲಿನ ಸೇಡು ಎಂಪಿ ಚುನಾವಣೆಯಲ್ಲಿ ತೀರಿಸಿ. ಸುಧಾಕರಲಾಲ್ ಮತ್ತು ಅನಿಲ್‌ಕುಮಾರ್ ಸೇರಿದರೆ ಕುರುಕ್ಷೇತ್ರವೇ ಮೀರಿಸುವ ಪ್ರಬಲ ಶಕ್ತಿಯೇ ಸೃಷ್ಟಿಯಾಗುತ್ತದೆ. ಕೋರಾ ಮತ್ತು ಕೋಳಾಲ ಕ್ಷೇತ್ರದಲ್ಲಿ ನಾನು ಕಾರ್ಯಕರ್ತರ ಜತೆಗಿರುತ್ತೇನೆ. ಪಾಕಿಸ್ಥಾನ ಜಿಂದಬಾದ್ ಎಂದೋರಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತದೆ ಎಂದು ಕಿಡಿ ಕಾರಿದರು.
ನಮ್ಮೆಲ್ಲರ ಅಚ್ಚುಮೆಚ್ಚಿನ ವಿ.ಸೋಮಣ್ಣ ಲೋಕಸಭಾ ಸದಸ್ಯರಾಗಿ ಖಚಿತವಾಗಿ ಆಯ್ಕೆಯಾಗುತ್ತಾರೆ. ಸದಸ್ಯರಾಗಿ ಆಯ್ಕೆಯಾದ ನಂತರ ನಮ್ಮ ಕೊರಟಗೆರೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ನೇರಳಾಗಿ ನಿಲ್ಲಬೇಕಿದೆ. ವಿಶ್ವನಾಯಕ ನರೇಂದ್ರಮೋದಿ ಮತ್ತೆ ಪ್ರಧಾನಿಯಾಗಲು ಜನರಿಂದಲೇ ಒಗ್ಗಟ್ಟು ಪ್ರದರ್ಶನವಾಗಿದೆ. ನಾವು ಕೊರಟಗೆರೆ ಕ್ಷೇತ್ರದಲ್ಲಿ ಒಟ್ಟಾಗಿ ವಿ.ಸೋಮಣ್ಣ ಪರವಾಗಿ ನಿಲ್ಲಬೇಕಿದೆ ಎಂದು ಜೆಡಿಎಸ್ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಹೇಳಿದರು.
ಭಾರತದಲ್ಲಿ 400 ಕ್ಕೂ ಅಧಿಕ ಲೋಕಸಭಾ ಸೀಟ್ ಗೆಲ್ಲುವುದೇ ನಮ್ಮ ನರೇಂದ್ರ ಮೋದಿ ಗ್ಯಾರಂಟಿ. ಕರ್ನಾಟಕದ ೨೮ಕ್ಷೇತ್ರದಲ್ಲೂ ಮತ್ತೆ ಕಾಂಗ್ರೆಸ್ ಸೋಲುವುದೇ ಸಿದ್ದರಾಮಯ್ಯ ಗ್ಯಾರಂಟಿ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಒಂದಾಗಿ ಕೆಲಸ ಮಾಡ್ತೀವಿ. ಮೈತ್ರಿಕೂಟದ ವಿ.ಸೋಮಣ್ಣ ಗೆಲುವಿಗೆ ಮಧುಗಿರಿ ಮತ್ತು ಕೊರಟಗೆರೆ ಕ್ಷೇತ್ರದಿಂದ ಅತಿಹೆಚ್ಚು ಮತಗಳ ಲೀಡ್ ನೀಡುತ್ತೇವೆ ಎಂದು ಬಿಜೆಪಿ ಮುಖಂಡ ಅನಿಲ್‌ಕುಮಾರ್.ಬಿ.ಎಚ್. ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನರೇಂದ್ರಬಾಬು, ಕೊರಟಗೆರೆ ಬಿಜೆಪಿ ಮಂಡಲ ಅಧ್ಯಕ್ಷ ದರ್ಶನ್, ಜಿಲ್ಲಾಧ್ಯಕ್ಷ ಹನುಮಂತೇಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರಕ್ಯಾತರಾಯ, ಬಿಜೆಪಿ ಯುವಧ್ಯಕ್ಷ ಶಿವಕುಮಾರ್, ಮಾಜಿ ಜಿಪಂ ಸದಸ್ಯ ಶಿವರಾಮಯ್ಯ, ಪವನಕುಮಾರ್, ಡಾ.ಲಕ್ಷ್ಮೀಕಾಂತ, ಗುರುಧತ್, ಶ್ರೀನಿವಾಸ, ಮಾಜಿ ತಾಪಂ ಸದಸ್ಯ ಎಲ್.ವಿ.ಪ್ರಕಾಶ್, ಪಪಂ ಸದಸ್ಯ ಪುಟ್ಟನರಸಪ್ಪ, ರಮೇಶ್, ದಾಸಲುಕುಂಟೆ ರಘು, ವೆಂಕಟೇಶ್, ಸಿ.ಬಿ.ರಂಗಮ್ಮ ಸೇರಿದಂತೆ ಇತರರು ಇದ್ದರು.
ಮೈತ್ರಿ ಕಾರ್ಯಕರ್ತರ ಬೈಕ್ ರ್‍ಯಾಲಿ
ತುಮಕೂರು ಲೋಕಸಭಾ ಅಭ್ಯರ್ಥಿ ವಿ.ಸೋಮಣ್ಣ ಕೊರಟಗೆರೆ ಪಟ್ಟಣದ ಕಟ್ಟೆ ಗಣಪತಿಗೆ ಪ್ರಥಮಪೂಜೆ ಸಲ್ಲಿಸಿದ ನಂತರ ಪಂಚಜನ್ಯ ಕಚೇರಿಯಿಂದ ಶಾಸಕ ಸುರೇಶ್‌ಗೌಡ, ಮಾಜಿ ಪಿ.ಆರ್.ಸುಧಾಕರಲಾಲ್, ಬಿಜೆಪಿ ಮುಖಂಡ ಅನಿಲ್‌ಕುಮಾರ್ ಮತ್ತು ಮಂಡಲ ಅಧ್ಯಕ್ಷ ದರ್ಶನ್ ಸೇರಿದಂತೆ ಸಾವಿರಾರು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಜತೆಗೂಡಿ ಬೈಕ್ ರ್‍ಯಾಲಿ ಮೂಲಕ ಸಮಾವೇಶದ ವೇದಿಕೆಗೆ ಆಗಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
Kunigal: ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ; ಗುಜರಾತ್ ನಲ್ಲಿ ಬಂಧನ
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.