![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Mar 17, 2024, 6:30 AM IST
ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿರುವಂತೆಯೇ, 2047ರ ಚುನಾವಣೆ ಗೆಲುವಿನ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಬರೀ 2029ರ ಸಾರ್ವತ್ರಿಕ ಚುನಾವಣೆ ಬಗ್ಗೆ ನಾನು ಚಿತ್ತ ನೆಟ್ಟಿಲ್ಲ. ಬದಲಾಗಿ 2047ರ ಗೆಲುವಿನ ಮೇಲೆಯೂ ಕಣ್ಣಿಟ್ಟಿದ್ದೇನೆ’ ಎಂದಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಶನಿವಾರ ಪ್ರಧಾನಿ ಭಾಗಿಯಾಗಿದ್ದರು.
ಈ ವೇಳೆ “400 ಪಾರ್’ (400ಕ್ಕೂ ಹೆಚ್ಚು) ಎಂಬ ಘೋಷಣೆಗಳ ಮೂಲಕ ಜನರು ಪ್ರಧಾನಿಯನ್ನು ಸ್ವಾಗತಿಸಿ ದ ರು. ಬಳಿಕ ಮಾತನಾಡಿದ ಅವ ರು, ಜನರ ಸೇವೆಯೇ ನನ್ನ ಗಮ್ಯ. ನಾನು ಹೆಡ್‌ಲೈನ್‌ನಲ್ಲಿ ಸುದ್ದಿಯಾಗುವು ದಕ್ಕಾಗಿ ಕೆಲಸ ಮಾಡಿಲ್ಲ. ಡೆಡ್‌ಲೈನ್‌ಗಳು ಮೀರ ದಂತೆ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಭ್ರಷ್ಟಾಚಾರಿಗಳನ್ನು ಸುಮ್ಮನೆ ಬಿಡುವುದಿಲ್ಲ
ಹೈದರಾಬಾದ್: “ಭ್ರಷ್ಟಾಚಾರ ಮಾಡಿದ ಯಾವೊಬ್ಬ ವ್ಯಕ್ತಿಯನ್ನೂ ಸುಮ್ಮನೆ ಬಿಡುವುದಿಲ್ಲ’. ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತೆಲಂಗಾಣ ಜನತೆಗೆ ವಾಗ್ಧಾನ ನೀಡಿದ್ದಾರೆ. ದಿಲ್ಲಿಯ ಮದ್ಯ ಹಗರಣದಲ್ಲಿ ಬಿಆರ್‌ಎಸ್ ನಾಯಕಿ ಕೆ.ಕವಿತಾ ಬಂಧನ ಬೆನ್ನಲ್ಲೇ ಮೋದಿ ಈ ಹೇಳಿಕೆ ನೀಡಿದ್ದಾರೆ.
ನಾಗರ್‌ಕರ್ನೂಲ್‌ನಲ್ಲಿ ಶನಿವಾರ ನಡೆದ ಬಿಜೆಪಿ ರ್ಯಾಲಿಯನ್ನು ಉದ್ದೇ ಶಿಸಿ ಪ್ರಧಾನಿ ಮಾತನಾಡಿದ್ದಾರೆ. ಈ ವೇಳೆ ಬಿಆರ್‌ಎಸ್ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿ, ಬಿಆರ್‌ಎಸ್ ರಾಜ್ಯದಿಂದ ಹೊರ ಹೋಗಿ ಕಟ್ಟ ರ್ ಭ್ರಷ್ಟ ಪಕ್ಷಗಳೊಂದಿಗೆ ಕೈ ಜೋಡಿಸಿದೆ. ತೆಲಂಗಾಣದ ಅಭಿವೃದ್ಧಿಯ ಕನಸನ್ನು ಬಿಆರ್‌ಎಸ್ ಮತ್ತು ಕಾಂಗ್ರೆಸ್ ಸೇರಿ ನಿರ್ನಾಮ ಮಾಡಿಬಿಟ್ಟಿವೆ. ಈ ಎರಡೂ ಪಕ್ಷಗಳು ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಲ್ಲಿ ಬಹುದೊಡ್ಡ ಪಾಲುದಾರರಾಗಿವೆ ಎಂದು ಆರೋಪಿಸಿದ್ದಾರೆ.
ಭ್ರಷ್ಟಾಚಾರ ನಿರ್ಮೂಲನೆಗೆ ಜನರ ಬೆಂಬಲ ಕೋರಿರುವ ಪ್ರಧಾನಿ ” ಮೋದಿಯನ್ನು 3ನೇ ಬಾರಿ ಅಧಿಕಾರಕ್ಕೆ ತರಲು ತೆಲಂಗಾಣ ಜನತೆ ನಿರ್ಧರಿಸಿರುವುದು ನನಗೆ ಕಾಣುತ್ತಿದೆ ಎಂದಿದ್ದಾರೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.